ಬಿಎಸ್-6 ಮಹೀಂದ್ರಾ ಸ್ಕಾರ್ಪಿಯೋ ಎಸ್‍‍‍ಯುವಿಯ ಬೆಲೆ ಮಾಹಿತಿ ಬಹಿರಂಗ

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ತನ್ನ ಹೊಸ ತಲೆಮಾರಿನ ಸ್ಕಾರ್ಪಿಯೋ ಎಸ್‍ಯುವಿಯನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಗೊಳಿಸದೆ. ಈ ಬಹುನಿರೀಕ್ಷಿತ ಬಿಎಸ್-6 ಸ್ಕಾರ್ಪಿಯೋ ಎಸ್‍ಯುವಿಯ ಬೆಲೆಯು ಬಹಿರಂಗವಾಗಿದೆ.

ಬಿಎಸ್-6 ಮಹೀಂದ್ರಾ ಸ್ಕಾರ್ಪಿಯೋ ಎಸ್‍‍‍ಯುವಿಯ ಬೆಲೆ ಮಾಹಿತಿ ಬಹಿರಂಗ

ಹೊಸ ಮಹೀಂಪ್ರಾ ಸ್ಕಾರ್ಪಿಯೋ ಎಸ್‍ಯುವಿಯ ಪ್ರಾರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.12.40 ಲಕ್ಷಗಳಾಗಿದೆ. ಬಿಎಸ್-6 ಸ್ಕಾರ್ಪಿಯೋ ಎಸ್‍ಯುವಿಗಾಗಿ ಆನ್‌ಲೈನ್ ನಲ್ಲಿ ಬುಕ್ಕಿಂಗ್ ಸ್ವೀಕರಿಸಲು ಪ್ರಾರಂಭಿಸಿದೆ. ಬಿಎಸ್-6 ಸ್ಕಾರ್ಪಿಯೋ ಎಸ್‍ಯುವಿಗಾಗಿ ಟೋಕನ್ ಮೊತ್ತ ಮೊತ್ತ ರೂ.5 ಸಾವಿರ ಪಾವತಿಸಿ ಬುಕ್ಕಿಂಗ್ ಮಾಡಬಹುದಾಗಿದೆ.

ಬಿಎಸ್-6 ಮಹೀಂದ್ರಾ ಸ್ಕಾರ್ಪಿಯೋ ಎಸ್‍‍‍ಯುವಿಯ ಬೆಲೆ ಮಾಹಿತಿ ಬಹಿರಂಗ

ಗ್ರಾಹಕರು ಈ ಎಸ್‍ಯುವಿಯ ಬಾಡಿ ಹಗ್ಗಿಂಗ್ ಬಂಪರ್, ಫಾಗ್ ಲ್ಯಾಂಪ್ ಅಲಂಕರಿಸುವ ಸೆಟ್, ಡೆಕಲ್ಸ್, ಪಾರ್ಕಿಂಗ್ ಕವರ್, ಅಲಾಯ್ ವ್ಹೀಲ್, ಹೆಡ್‌ರೆಸ್ಟ್ ಮೌಂಟೆಡ್ ಡಿವಿಡಿ ಟಚ್‌ಸ್ಕ್ರೀನ್, ಸ್ಕಫ್ ಪ್ಲೇಟ್‌ಗಳು, ಕಾರ್ಪೆಟ್ ಮ್ಯಾಟ್ ಸೆಟ್ ಮತ್ತು ಇತರ ಉಪಕರಣಗಳನ್ನು ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

MOST READ: ಹೆಚ್ಚು ಪವರ್ ಉತ್ಪಾದಿಸುತ್ತದೆ ಮಾಡಿಫೈಗೊಂಡ ಈ ಜಿಮ್ನಿ ಎಸ್‍ಯುವಿ

ಬಿಎಸ್-6 ಮಹೀಂದ್ರಾ ಸ್ಕಾರ್ಪಿಯೋ ಎಸ್‍‍‍ಯುವಿಯ ಬೆಲೆ ಮಾಹಿತಿ ಬಹಿರಂಗ

ಮಹೀಂದ್ರಾ ಕಾರು ಉತ್ಪಾದನಾ ಕಂಪನಿಯು ಸದ್ಯ ಎಸ್‌ಯುವಿ ಸೆಗ್‍‍ಮೆಂಟಿನ ಮಾರಾಟದಲ್ಲಿ ಅಧಿಪತ್ಯ ಸಾಧಿಸುತ್ತಿದ್ದು, ಸ್ಕಾರ್ಪಿಯೋ, ಎಕ್ಸ್‌ಯುವಿ500 ಮತ್ತು ಥಾರ್ ಕಾರುಗಳ ಮೂಲಕ ಭಾರೀ ಜನಪ್ರಿಯತೆ ಗಳಿಸುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ತನ್ನ ಜನಪ್ರಿಯ ಎಸ್‍‍ಯುವಿಗಳಾದ ಸ್ಕಾರ್ಪಿಯೋ, ಎಕ್ಸ್‌ಯುವಿ500 ಮತ್ತು ಥಾರ್ ನ್ಯೂ ಜನರೇಷನ್ ಆವೃತ್ತಿಗಳನ್ನು ಮಹೀಂದ್ರಾ ಕಂಪನಿಯು ಮುಂಬರುವ ದಿನಗಳಲ್ಲಿ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಅಪ್‍‍ಗ್ರೇಡ್ ಮಾಡಿ ಬಿಡುಗಡೆಗೊಳಿಸಲಿದೆ.

ಬಿಎಸ್-6 ಮಹೀಂದ್ರಾ ಸ್ಕಾರ್ಪಿಯೋ ಎಸ್‍‍‍ಯುವಿಯ ಬೆಲೆ ಮಾಹಿತಿ ಬಹಿರಂಗ

ಮಹೀಂದ್ರಾ ಕಂಪನಿಯ ಸರಣಿಯ ಕಾರು ಮಾರಾಟದಲ್ಲಿ ಸ್ಕಾರ್ಪಿಯೋ ಎಸ್‍‍ಯುವಿಯ ಕೊಡುಗೆಯು ದೊಡ್ಡದು. 2002ರಲ್ಲಿ ಮಹೀಂದ್ರಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಸ್ಕಾರ್ಪಿಯೋ ಬಿಡುಗಡೆಗೊಳಿಸಿದ ನಂತರ ಎರಡು ಬಾರಿ ನವೀಕರಣಗೊಳಿಸಿದೆ. ಕಂಪನಿಯು ಸ್ಕಾರ್ಪಿಯೋ ಎಸ್‍‍ಯುವಿಯನ್ನು 2006ರಲ್ಲಿ ಮತ್ತು 2014ರಲ್ಲಿ ನವೀಕರಣಗೊಳಿಸಿತ್ತು.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಬಿಎಸ್-6 ಮಹೀಂದ್ರಾ ಸ್ಕಾರ್ಪಿಯೋ ಎಸ್‍‍‍ಯುವಿಯ ಬೆಲೆ ಮಾಹಿತಿ ಬಹಿರಂಗ

ಬಿಎಸ್-6 ಸ್ಕಾರ್ಪಿಯೋ ಎಸ್‍ಯುವಿಯು ಎಸ್5, ಎಸ್7, ಎಸ್9 ಮತ್ತು ಎಸ್11 ಎಂಬ ನಾಲ್ಕು ರೂಪಾಂತರಗಳಲ್ಲಿ ಬಿಡುಗಡೆಯಾಗಲಿದೆ.ಇದರಲ್ಲಿ ಎಸ್3 ರೂಪಾಂತರವು ಎಂಟ್ರಿ-ಲೆವೆಲ್ ಆದರೆ ಎಸ್11 ಟಾಪ್-ಎಂಡ್ ಎಡಬ್ಲ್ಯೂಡಿ ರೂಪಾಂತರವಾಗಿದೆ.

ಬಿಎಸ್-6 ಮಹೀಂದ್ರಾ ಸ್ಕಾರ್ಪಿಯೋ ಎಸ್‍‍‍ಯುವಿಯ ಬೆಲೆ ಮಾಹಿತಿ ಬಹಿರಂಗ

ಹೊಸ ಸ್ಕಾರ್ಪಿಯೋ ಎಸ್5 ರೂಪಾಂತರದ ಬೆಲೆಯು ರೂ.12.40 ಲಕ್ಷ, ಸ್ಕಾರ್ಪಿಯೋ ಎಸ್7 ರೂಪಾಂತರದ ಬೆಲೆಯು ರೂ.14.21 ಲಕ್ಷ, ಸ್ಕಾರ್ಪಿಯೋ ಎಸ್9 ರೂಪಾಂತರದ ಬೆಲೆಯು ರೂ.14.84 ಲಕ್ಷಗಳಾಗಿದ್ದರೆ ಟಾಪ್ ಸ್ಪೆಕ್ ಎಸ್11 ರೂಪಾಂತರದ ಬೆಲೆಯು ರೂ.16.00 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ಭಾರತದ ಎಕ್ಸ್ ಶೋರೂಂ ಪ್ರಕಾರವಾಗಿದೆ.

MOST READ: ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಮಾರುತಿ ಸುಜುಕಿ ಎಕ್ಸ್‌ಎಲ್6

ಬಿಎಸ್-6 ಮಹೀಂದ್ರಾ ಸ್ಕಾರ್ಪಿಯೋ ಎಸ್‍‍‍ಯುವಿಯ ಬೆಲೆ ಮಾಹಿತಿ ಬಹಿರಂಗ

ಹೊಸ ಸ್ಕಾರ್ಪಿಯೋ 2.2 ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಹೊಂದಿರಲಿದೆ. ಹೊಸ ಸ್ಕಾರ್ಪಿಯೋದಲ್ಲಿ ಬಿಎಸ್-6 ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್‍‍ನೊಂದಿಗೆ ಆಟೋಮ್ಯಾಟಿಕ್ ಅಥವಾ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಬಹುದು.

ಬಿಎಸ್-6 ಮಹೀಂದ್ರಾ ಸ್ಕಾರ್ಪಿಯೋ ಎಸ್‍‍‍ಯುವಿಯ ಬೆಲೆ ಮಾಹಿತಿ ಬಹಿರಂಗ

ಬಿಎಸ್-6 ಮಹೀಂದ್ರಾ ಸ್ಕಾರ್ಪಿಯೋ ಎಸ್‍‍ಯುವಿಯು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ. ಹೊಸ ಸ್ಕಾರ್ಪಿಯೋದ ಇಂಟಿರಿಯರ್‍‍ನಲ್ಲಿ ಹೆಚ್ಚಿನ ಸ್ಪೇಸ್ ಅನ್ನು ನೀಡಲಾಗಿದೆ. ಇದರಿಂದಾಗಿ ಪ್ರಯಾಣಿಕರಿಕೆ ಆರಾಮದಾಯಕವಾಗಿ ಪ್ರಯಾಣಿಸಬಹುದು.

More from DriveSpark

Article Published On: Tuesday, April 28, 2020, 12:58 [IST]
English summary
Mahindra Scorpio BS6 Prices Revealed Ahead Of Launch. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+