ಹೆಚ್ಚು ಪವರ್ ಉತ್ಪಾದಿಸುತ್ತದೆ ಮಾಡಿಫೈಗೊಂಡ ಈ ಜಿಮ್ನಿ ಎಸ್‍ಯುವಿ

ಐಕಾನಿಕ್ ಆಫ್-ರೋಡ್ ಸ್ಪೇಷಲಿಸ್ಟ್ ಸುಜುಕಿ ಜಿಮ್ನಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಮಿನಿ ಎಸ್‍ಯುವಿಯಾಗಿದೆ. ಇಂತಹ ಜನಪ್ರಿಯ ಎಸ್‍ಯುವಿಯನ್ನು ಆಕರ್ಷಕವಾಗಿ ಮತ್ತು ಪವರ್‌ಫುಲ್ ಎಸ್‍ಯುವಿಯಾಗಿ ಮಾಡಿಫೈ ಮಾಡಲಾಗಿದೆ.

ಹೆಚ್ಚು ಪವರ್ ಉತ್ಪಾದಿಸುತ್ತದೆ ಮಾಡಿಫೈಗೊಂಡ ಈ ಜಿಮ್ನಿ ಎಸ್‍ಯುವಿ

ಸುಜುಕಿ ಜಿಮ್ನಿ ಮಿನಿ ಎಸ್‍ಯುವಿಯನ್ನು ಆಟೋಪ್ಲಸ್ ಕಸ್ಟಂ ಅವರು ಮಾರ್ಪಡಿಸಿದ್ದಾರೆ. ಈ ಮಿನಿ ಎಸ್‍ಯುವಿಯಲ್ಲಿ ಟರ್ಬೋ ಕಿಟ್ ಅನ್ನು ಅಳವಡಿಸಲಾಗಿದೆ. ಈ ಟರ್ಬೋ ಕಿಟ್ ಅನ್ನು ಯುಎಇ ಮೂಲದ ಎಫ್-ಪರ್ಫಾರ್ಮೆನ್ಸ್ ಅವರು ನಿರ್ಮಿಸಿದೆ. ಈ ಜಿಮ್ನಿ ಮಿನಿ ಎಸ್‍ಯುವಿಯಲ್ಲಿ ಫ್ಯೂಯಲ್ ಎಂಜೆಕ್ಷನ್ ಸಿಸ್ಟಂ ಮತ್ತು ಹೊಸ ಇಸಿಯು ಅನ್ನು ಸಹ ಅಳವಡಿಸಲಾಗಿದೆ. ಮಾರುಕಟ್ಟೆಯಲ್ಲಿರುವ ಸಾಮಾನ್ಯ ಜಿಮ್ನಿ ಎಸ್‍ಯುವಿಗೆ ಮಾಡಿಫೈ ಮಾದರಿಯನ್ನು ಹೋಲಿಸಿದರೆ ಸಾಕಷ್ಟು ಭಿನ್ನವಾಗಿದೆ.

ಹೆಚ್ಚು ಪವರ್ ಉತ್ಪಾದಿಸುತ್ತದೆ ಮಾಡಿಫೈಗೊಂಡ ಈ ಜಿಮ್ನಿ ಎಸ್‍ಯುವಿ

ಈ ಮಾಡಿಫೈ ಮಾಡಲಾದ ಜಿಮ್ನಿ ಎಸ್‍ಯುವಿಯು 200 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಕಸ್ಟಂ ಅವರು ಜಿಮ್ನಿ ಎಸ್‍ಯುವಿಯಲ್ಲಿ ವೇಸ್ಟ್ ಗೇಟ್ ಬ್ಲೋ-ಆಫ್ ವಾಲ್ವ್ ಮತ್ತು ಆಟೊಪ್ಲಸ್ ಸೈಡ್ ಎಕ್ಸಾಸ್ಟ್ ಸಿಸ್ಟಂ ಅನ್ನು ಅಳವಡಿಸಿದ್ದಾರೆ.

MOST READ: ಹೊಸ ಹ್ಯುಂಡೈ ವೆನ್ಯೂ ಡೀಸೆಲ್ ಆವೃತ್ತಿಯ ಮೈಲೇಜ್ ಮಾಹಿತಿ ಬಹಿರಂಗ

ಹೆಚ್ಚು ಪವರ್ ಉತ್ಪಾದಿಸುತ್ತದೆ ಮಾಡಿಫೈಗೊಂಡ ಈ ಜಿಮ್ನಿ ಎಸ್‍ಯುವಿ

ಇದರೊಂದಿಗೆ ಆಟೊಪ್ಲಸ್ ಬ್ರೇಕ್ ರೋಟಾರ್ಗಳು ಮತ್ತು ಪ್ಯಾಡ್ಗಳು, 18 ಇಂಚಿನ ವೋಲ್ಕ್ ರೇಸಿಂಗ್ ಕಾನ್ಕೇವ್ ಅಲಾಯ್ ವ್ಹೀಲ್ ಮತ್ತು ರೆಕಾರೊ ರೇಸಿಂಗ್ ಸೀಟುಗಳನ್ನು ಅಳವಡಿಸಿದ್ದಾರೆ. ಮಾಡಿಫೈ ಮಾಡಿ ಶೇ.100 ಈ ಮಿನಿ ಎಸ್‍ಯುವಿಯ ಪವರ್ ಅನ್ನು ಹೆಚ್ಚಿಸಿದೆ. ಸುಜುಕಿ ಜಿಮ್ನಿ ರೇಸ್-ಗ್ರೇಡ್ ಮೋಟುಲ್ 300ವಿ ಎಂಜಿನ್ ಅನ್ನು ಅಳವಡಿಸಲಾಗಿದೆ.

ಹೆಚ್ಚು ಪವರ್ ಉತ್ಪಾದಿಸುತ್ತದೆ ಮಾಡಿಫೈಗೊಂಡ ಈ ಜಿಮ್ನಿ ಎಸ್‍ಯುವಿ

ಈ ಜಿಮ್ನಿ ಎಸ್‍ಯುವಿಯು 50 ವರ್ಷವನ್ನು ಪೂರೈಸಿದೆ. ಇಂದಿಗೂ ಈ ಮಿನಿ ಎಸ್‍ಯುವಿಯ ಜನಪ್ರಿಯತೆ ಕಡಿಮೆಯಾಗಿಲ್ಲ. ಈ ಎಸ್‍ಯುವಿಯ ವಿಶೇಷವೆಂದರೆ 50 ವರ್ಷವನ್ನು ಪೂರೈಸಿದರು ಮೂಲ ಮಾದರಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

MOST READ: ಹೊಸ ಫೋಕ್ಸ್‌ವ್ಯಾಗನ್ ಪೊಲೊ ಕಾರಿನ ಮೈಲೇಜ್ ಮಾಹಿತಿ ಬಹಿರಂಗ

ಹೆಚ್ಚು ಪವರ್ ಉತ್ಪಾದಿಸುತ್ತದೆ ಮಾಡಿಫೈಗೊಂಡ ಈ ಜಿಮ್ನಿ ಎಸ್‍ಯುವಿ

ಭಾರತದಲ್ಲಿ 1980ರಲ್ಲಿ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಮಾರುತಿ ಜಿಪ್ಸಿ ರೂಪಾಂತರದಲ್ಲಿ ಎರಡನೇ ಜನರೇಷನ್ ಮಾದರಿಯನ್ನು ಬಿಡುಗಡೆಗೊಳಿಸಿದರು. ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ಮಾರುತಿ ಸುಜುಕಿ ಜಿಪ್ಸಿ ಯಶ್ವಸಿಯಾಗಿದೆ. ಬಿಎಸ್-6 ಮಾಲಿನ್ಯ ಜಾರಿಯಾಗುವುದರಿಂದ ಈ ಜನಪ್ರಿಯ ಎಸ್‍ಯುವಿಯನ್ನು ಸ್ಥಗಿತಗೊಳಿಸಲಾಗಿತ್ತು.

ಹೆಚ್ಚು ಪವರ್ ಉತ್ಪಾದಿಸುತ್ತದೆ ಮಾಡಿಫೈಗೊಂಡ ಈ ಜಿಮ್ನಿ ಎಸ್‍ಯುವಿ

ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಜಿಮ್ನಿ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.ಈ ಜಿಮ್ನಿ ಎಸ್‍‍ಯುವಿ 33 ವರ್ಷಗಳ ಕಾಲ ದೇಶದಲ್ಲಿ ಮಾರಾಟವಾಗಿದ್ದ ಜನಪ್ರಿಯ ಜಿಪ್ಸಿ ಎಸ್‍‍ಯುವಿಯ ಉತ್ತರಾಧಿಕಾರಿಯಾಗಲಿದೆ.

MOST READ: ಬೆಂಗಳೂರಿನಲ್ಲಿ ತುರ್ತು ಸೇವೆ ಆರಂಭಿಸಿದ ಓಲಾ, ಉಬರ್

ಹೆಚ್ಚು ಪವರ್ ಉತ್ಪಾದಿಸುತ್ತದೆ ಮಾಡಿಫೈಗೊಂಡ ಈ ಜಿಮ್ನಿ ಎಸ್‍ಯುವಿ

ಈ ಹೊಸ ಜಿಮ್ನಿ ಮಿನಿ ಎಸ್‍ಯುವಿಯಲ್ಲಿ 3 ಲಿಂಕ್ ಆಕ್ಸಲ್ ಸಸ್ಪೆಂಷನ್ ಅನ್ನು ಹೊಂದಿದೆ. ಇದು ಕಠಿಣ ಭೂಪ್ರದೇಶಗಳಲ್ಲಿ ಸುಗಮವಾಗಿ ಸಾಗಲು ನೆರವಾಗುತ್ತದೆ. ಈ ಮಿನಿ ಎಸ್‍ಯುವಿಯಲ್ಲಿ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಹೆಚ್ಚು ಪವರ್ ಉತ್ಪಾದಿಸುತ್ತದೆ ಮಾಡಿಫೈಗೊಂಡ ಈ ಜಿಮ್ನಿ ಎಸ್‍ಯುವಿ

ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಎಸ್‍‍ಯುವಿಗಳಲ್ಲಿ ಮಾರುತಿ ಸುಜುಕಿ ಜಿಮ್ನಿ ಒಂದಾಗಿದೆ. ಅಂತರರಾಷ್ಟೀಯ ಮಾರುಕಟ್ಟೆಯಲ್ಲಿ ಮೆಚ್ಚುಗೆಯನ್ನು ಪಡೆದುಕೊಂಡ ಮಾರುತಿ ಸುಜುಕಿ ಸಂಸ್ಥೆಯ ಜಿಮ್ನಿ ಮಿನಿ-ಎಸ್‌ಯುವಿಯನ್ನು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ.

Most Read Articles

Kannada
English summary
Suzuki Jimny Modified By Autoplus Produces 200 Horses Of Power. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X