ಬೆಂಗಳೂರಿನಲ್ಲಿ ತುರ್ತು ಸೇವೆ ಆರಂಭಿಸಿದ ಓಲಾ, ಉಬರ್
ಚೀನಾದಿಂದ ಹರಡಲಾರಂಭಿಸಿದ ಕರೋನಾ ವೈರಸ್ ಇಂದು ಜಗತ್ತಿನಾದ್ಯಂತ ಆತಂಕವನ್ನು ಸೃಷ್ಟಿಸಿದೆ. ಈಗಾಗಲೇ ನಮ್ಮ ರಾಜ್ಯಕ್ಕೂ ಕಾಲಿಟ್ಟಿರುವ ಕರೋನಾ ವೈರಸ್ ಜನರಲ್ಲಿ ಆತಂಕವನ್ನು ಹುಟ್ಟಿಸಿದೆ.

ರಾಜ್ಯ ಸರ್ಕಾರವು ಕೂಡ ಕರೋನಾ ವೈರಸ್ ನಿಯಂತ್ರಣಕ್ಕೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ನಡುವೆ ಕರೋನ ವೈರಸ್ ವಿರುದ್ಧದ ರಾಜ್ಯ ಸರ್ಕಾರ ಹೋರಾಟಕ್ಕೆ ಓಲಾ ಮತ್ತು ಉಬರ್ ಸಂಸ್ಥೆಗಳುಸಹಾಯ ಹಸ್ತ ಚಾಚಿದೆ. ಇದೀಗ ಓಲಾ ಬೆಂಗಳೂರು ನಗರಕ್ಕಾಗಿ ಆರೋಗ್ಯ ಸಚಿವಾಲಯದ ಸಹಯೋಗದೊಂದಿಗೆ ‘ಓಲಾ ಎಮರ್ಜೆನ್ಸಿ' ಎಂಬ ಹೊಸ ಸೇವೆಯನ್ನು ಪ್ರಾರಂಭಿಸಿದೆ.100 ಓಲಾ ಕ್ಯಾಬ್ ಗಳ ಜೊತೆ 100 ಉಬರ್ ಕ್ಯಾಬ್ ಗಳು ಕೂಡ ಸಂಚರಿಸಲಿವೆ.

ಬೆಂಗಳೂರಿನಲ್ಲಿ ತುರ್ತು ವೈದ್ಯಕೀಯ ಸೇವೆಗಾಗಿ ಓಲಾ, ಉಬರ್ ಸಂಸ್ಥೆಗಳ 200 ವಾಹನಗಳಿಗೆ ಆರೋಗ್ಯ ಸಚಿವ ಬಿ ಶ್ರೀರಾಮುಲು ಚಾಲನೆ ನೀಡಿದರು.ಸಾಮಾನ್ಯ ರೋಗಿಗಳ ತುರ್ತು ಸೇವೆಗಾಗಿ ಈ ಕ್ಯಾಬ್‍ಗಳು ರಸ್ತೆಗೆ ಇಳಿದಿದೆ. ತುರ್ತು ಆರೋಗ್ಯ ಸೇವೆಗಾಗಿ ಮಾತ್ರ ಈ ಕ್ಯಾಬ್‍ಗಳನ್ನುಬಳಕೆ ಮಾಡಲು ಅವಕಾಶವಿದೆ.

108 ಆ್ಯಂಬುಲೆನ್ಸ್ಗಳು ಕೊರೋನಾ ವೈರಸ್ ರೋಗಿಗಳ ಸೇವೆಗೆ ಬಳಕೆಯಾಗುತ್ತಿದೆ. ಇದರಿಂದಾಗಿ ಸಾಮಾನ್ಯ ರೋಗಿಗಳಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಓಲಾ ಮತ್ತು ಉಬರ್ ಕ್ಯಾಬ್‍ಗಳನ್ನು ಬಳಸಿಕೊಳ್ಳುತ್ತಿದೆ.

ಸಾಮಾನ್ಯ ಜನರು ಈ ಸೇವೆಯನ್ನು ಪಡೆಯಲು ಓಲಾ ಮತ್ತು ಉಬರ್ ಆ್ಯಪ್ ಅನ್ನು ಡೌನ್ ಲೋಡ್ ಮಾಡಿ ಲಾಗಿನ್ ಆಗ ಬೇಕಾಗುತ್ತದೆ.ಈ ಆ್ಯಪ್ ನಲ್ಲಿ ಬೆಂಗಳೂರಿನ 200 ಕ್ಕೂ ಹೆಚ್ಚು ಆಸ್ಪತ್ರೆಗಳನ್ನು ಪಟ್ಟಿ ಮಾಡಿದೆ.

ಕ್ಯಾಬ್ ಗಳಲ್ಲಿ ಪ್ರಯಾಣಿಸುವವರಿಗೆ ಆರೋಗ್ಯ ಇಲಾಖೆ ಕೆಲವು ಸೂಚನೆಗಳನ್ನು ನೀಡಿದೆ. ಯಾವುದೇ ಕಾರಣಕ್ಕೂ ಎಸಿ ಆನ್ ಮಾಡಬಾರದು, ಕಾರಿನ ಚಾಲಕ ಮತ್ತು ರೋಗಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು,

ಇದರೊಂದಿಗೆ ರಾಜ್ಯದಲ್ಲಿ ವೈದರು ಸಂಚರಿಸಲು ಮತ್ತು ತುರ್ತು ಆರೋಗ್ಯ ಸೇವೆಗಳಿಗೆ ಓಲಾದ 500 ಕಾರುಗಳನ್ನು ನೀಡಿದೆ. ಓಲಾ ಕ್ಯಾಬ್ ವೈದರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ವೈದಕೀಯ ಉಪಕರಣಗಳನ್ನು ಸಾಗಿಸಲು ಬಳಸಲಾಗುತ್ತದೆ.

ಬೆಂಗಳೂರು, ಮಂಗಳೂರು, ಮೈಸೂರು, ಬೆಳಗಾವಿ ಹಾಗೂ ಹುಬ್ಬಳ್ಳಿ-ಧಾರವಾಡ ಜಿಲ್ಲೆಗಳಲ್ಲಿ ಈ ಓಲಾ ಕಾರುಗಳು ಸೇವೆಗೆ ಲಭ್ಯವಿರಲಿದೆ. ದೇಶಾದ್ಯಂತ ಲಾಕ್‌ಡೌನ್ ಆಗಿರುವುದರಿಂದ ಓಲಾ ಕ್ಯಾಬ್‍ಗಳು ತಮ್ಮ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.

ಆದರೆ ಇದೀಗ ಕರೋನಾ ಎಂಬ ಮಹಾಮಾರಿ ಸೋಂಕಿನ ವಿರುದ್ದ ಹೋರಾಟಕ್ಕೆ ರಾಜ್ಯ ಸರ್ಕಾರದ ಜೊತೆ ಓಲಾ ಸಂಸ್ಥೆಯು ಕೈ ಜೋಡಿಸಿದೆ. ಒಟ್ಟಿನಲ್ಲಿ ಕರೋನಾ ಎಂಬ ಮಹಾಮರಿಯ ವಿರುದ್ದ ಹೋರಾಡಲು ಹಲವಾರು ಖಾಸಗಿ ಸಂಸ್ಥೆಗಳು ಸರ್ಕಾರದ ಜೊತೆ ಕೈ ಜೋಡಿಸಿರುವುದು ಉತ್ತಮ ಬೆಳವಣಿಗೆಯಾಗಿದೆ.


Click it and Unblock the Notifications








