ಬಿಡುಗಡೆಗೆ ಸಿದ್ದಗೊಂಡ ಬಿಎಸ್-6 ವೈಶಿಷ್ಟ್ಯತೆಯ ಟಾಟಾ ವಿಂಗರ್ ಮಿನಿ ವ್ಯಾನ್

ಟಾಟಾ ಮೋಟಾರ್ಸ್ ಕಂಪನಿಯು ಕಳೆದ ಫೆಬ್ರುವರಿಯಲ್ಲಿ ನಡೆದಿದ್ದ 2020ರ ದೆಹಲಿ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳಿಸಲಾಗಿದ್ದ ಹೊಸ ವಿಂಗರ್ ಮಿನಿ ವ್ಯಾನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಬಿಡುಗಡೆಗೆ ಸಿದ್ದಗೊಂಡ ಬಿಎಸ್-6 ವೈಶಿಷ್ಟ್ಯತೆಯ ಟಾಟಾ ವಿಂಗರ್

ಟಾಟಾ ಮೋಟಾರ್ಸ್ ಕಂಪನಿಯು ಹೊಸ ವಿಂಗರ್ ಮಿನಿ ವ್ಯಾನ್ ಅನ್ನು ಭಾರತದಲ್ಲಿ ಬಿಡುಗಡೆಗೂ ಮುನ್ನ ಹಲವು ಸುತ್ತಿನ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದು, ಪ್ರಯಾಣಿಕ ಬಳಕೆಯ ವಾಹನಗಳಲ್ಲಿ ಮತ್ತೆ ಮುಂಚೂಣಿ ಸಾಧಿಸಲಿದೆ. 2007ರಲ್ಲಿ ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿದ್ದ ವಿಂಗರ್ ಮಿನಿ ವ್ಯಾನ್ ಕಾಲಕ್ಕೆ ತಕ್ಕಂತೆ ಕೆಲವು ಸಣ್ಣಪುಟ್ಟ ಬದಲಾವಣೆಗಳನ್ನು ಹೊಂದಿತ್ತು.

ಬಿಡುಗಡೆಗೆ ಸಿದ್ದಗೊಂಡ ಬಿಎಸ್-6 ವೈಶಿಷ್ಟ್ಯತೆಯ ಟಾಟಾ ವಿಂಗರ್

ಆದರೆ ಬಿಎಸ್-6 ಎಂಜಿನ್ ಪ್ರೇರಿತ ವಿಂಗರ್ ಮಿನಿ ವ್ಯಾನ್‌ನಲ್ಲಿ ಸಾಕಷ್ಟು ಹೊಸತನವನ್ನು ಪರಿಚಯಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಮರುಬದಲಾವಣೆಗೊಳಿಸಲಾದ ಹೊರ ವಿನ್ಯಾಸದೊಂದಿಗೆ ಪ್ರಯಾಣಿಕರ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಿದೆ.

ಬಿಡುಗಡೆಗೆ ಸಿದ್ದಗೊಂಡ ಬಿಎಸ್-6 ವೈಶಿಷ್ಟ್ಯತೆಯ ಟಾಟಾ ವಿಂಗರ್

ವಿಂಗರ್ ಮಿನಿ ವ್ಯಾನ್ ನಲ್ಲಿ ಹ್ಯಾರಿಯರ್‌ನಲ್ಲಿರುವಂತೆ ಹೆಡ್‌ಲ್ಯಾಂಪ್ ಕ್ಲಸ್ಟರ್‌ಗಳನ್ನು ಮುಂಭಾಗದ ಬಂಪರ್‌ನಲ್ಲಿ ಜೋಡಿಸಲಾಗಿದ್ದು, ಹ್ಯಾಲೊಜೆನ್ ಹೆಡ್‌ಲ್ಯಾಂಪ್‌ಗಳನ್ನು ಹೊಂದಿರುವುದು ರೋಡ್ ಟೆಸ್ಟಿಂಗ್ ವೇಳೆ ಬಹಿರಂಗವಾಗಿದೆ.

ಬಿಡುಗಡೆಗೆ ಸಿದ್ದಗೊಂಡ ಬಿಎಸ್-6 ವೈಶಿಷ್ಟ್ಯತೆಯ ಟಾಟಾ ವಿಂಗರ್

ವಿಂಗರ್ ಮಿನಿ ವ್ಯಾನ್ ಮಾದರಿಯು 15 + 1 ಸೀಟ್ ಹೊಂದಿರುವ ವಾಹನ ಮಾದರಿಯಾಗಿದ್ದು, ಟಾಟಾ ಮೋಟಾರ್ಸ್‍ ಕಂಪನಿಯು ಈ ವಾಹನವನ್ನು ಇಂಪ್ಯಾಕ್ಟ್ 2.0 ವಿನ್ಯಾಸದಲ್ಲಿ ಅಭಿವೃದ್ಧಿಪಡಿಸಿದೆ. ಟಾಟಾ ಕಂಪನಿಯ ಲೊಗೊ, ಹಾರಿಜೆಂಟಲ್ ಕ್ರೋಮ್ ಸ್ಟ್ರಿಪ್, ರಿವ್ಯಾಂಪ್ ಗ್ರಿಲ್ ಹಾಗೂ ಬಂಪರ್‍‍ಗಳು ವಿಂಗರ್ ವಾಹನವನ್ನು ಮತ್ತಷ್ಟು ಆಕರ್ಷಕವಾಗಿಸುತ್ತವೆ.

ಬಿಡುಗಡೆಗೆ ಸಿದ್ದಗೊಂಡ ಬಿಎಸ್-6 ವೈಶಿಷ್ಟ್ಯತೆಯ ಟಾಟಾ ವಿಂಗರ್

ಹೊಸ ಬದಲಾವಣೆ ಮೂಲಕ ಕಮರ್ಷಿಯಲ್ ವ್ಯಾನ್ ಅನ್ನು ಪ್ಯಾಸೆಂಜರ್ ಎಸ್‍‍ಯುವಿ ಮಾದರಿಯೆಂತೆ ಬದಲಾವಣೆ ಮಾಡಿರುವ ಟಾಟಾ ಕಂಪನಿಯು ಮುಂಭಾಗದ ಪ್ರಯಾಣಿಕರಿಗೆ ಹಾಗೂ ಚಾಲಕನಿಗೆ ಹೆಚ್ಚು ಸುರಕ್ಷತೆಯನ್ನು ನೀಡುತ್ತವೆ. ಈ ಬದಲಾವಣೆಗಳಿಂದಾಗಿ ಫ್ಯಾಮಿಲಿಗಳೂ ಸಹ ಈ ವ್ಯಾನ್ ಅನ್ನು ತಮ್ಮ ಸ್ವಂತ ಬಳಕೆಗಾಗಿ ಖರೀದಿಸಲಿ ಎಂಬುವುದು ಟಾಟಾ ಮೋಟಾರ್ಸ್ ಅಭಿಪ್ರಾಯ.

ಬಿಡುಗಡೆಗೆ ಸಿದ್ದಗೊಂಡ ಬಿಎಸ್-6 ವೈಶಿಷ್ಟ್ಯತೆಯ ಟಾಟಾ ವಿಂಗರ್

5 ಸ್ಪೋಕ್‍‍ಗಳ ಅಲಾಯ್ ವ್ಹೀಲ್, ಅಪ್‍‍ಡೇಟ್ ಮಾಡಲಾಗಿರುವ ಹಿಂಭಾಗದ ಡೋರ್‍‍ಗಳು ವ್ಯಾನ್ ಅನ್ನು ಆಕರ್ಷಕವಾಗಿ ಕಾಣುವಂತೆ ಮಾಡಿದ್ದು, ಈ ವ್ಯಾನ್‍‍ನ ಇಂಟಿರಿಯರ್‍‍ನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದೆ. ವ್ಯಾನ್‍‍ನ ಕಾಕ್‍‍ಪಿಟ್‍‍ನಿಂದ ರೂಫ್‍‍ವರೆಗೆ ಹಲವಾರು ಅಪ್‍‍ಡೇಟ್‍‍ಗಳನ್ನು ಪಡೆದುಕೊಂಡಿದ್ದು, ಟಚ್ ಸ್ಕ್ರೀನ್ ಇನ್ಫೋಟೆನ್‍‍ಮೆಂಟ್ ಸಿಸ್ಟಂ, ಫ್ರಾಬ್ರಿಕ್ ಸೀಟ್, ಸಿಲ್ವರ್/ಪಿಯಾನೊ ಬ್ಲಾಕ್ ಎಸಿ ಕಂಟ್ರೋಲ್ ಕ್ನಾಪ್, ಪ್ರತಿ ಸೀಟುಗಳಲ್ಲಿ ವಿಭಿನ್ನವಾದ ಯು‍ಎಸ್‍‍ಬಿ ಚಾರ್ಜಿಂಗ್ ಪೋರ್ಟ್, ಪುಶ್ ಬ್ಯಾಕ್ ಸೀಟ್, ಆಂಪಲ್ ರೂಫ್‍‍ಗಳಿವೆ.

ಬಿಡುಗಡೆಗೆ ಸಿದ್ದಗೊಂಡ ಬಿಎಸ್-6 ವೈಶಿಷ್ಟ್ಯತೆಯ ಟಾಟಾ ವಿಂಗರ್

ಹೊಸ ವ್ಯಾನ್‍‍ನಲ್ಲಿರುವ ವೈಬ್ರೆಷನ್‍ ಅನ್ನು ಕಡಿಮೆ ಮಾಡಲಾಗಿದ್ದು, ಆರಾಮದಾಯಕವಾದ ಸಂಚಾರವನ್ನು ನೀಡುವಂತೆ ಅಭಿವೃದ್ಧಿಪಡಿಸಲಾಗಿದೆ. ಈ ವ್ಯಾನ್ ಅನ್ನು ಬಿ‍ಎಸ್ 6 ಎಂಜಿನ್‍‍ನೊಂದಿಗೆ ಅಪ್‍‍ಗ್ರೇಡ್‍‍ಗೊಳಿಸಲಾಗಿದ್ದು, ಹೊಸದಾಗಿ ನೀಡಿರುವ 2.0 ಲೀಟರಿನ ಡೀಸೆಲ್ ಎಂಜಿನ್ 89 ಬಿ‍‍ಹೆಚ್‍‍ಪಿ ಪವರ್ ಹಾಗೂ 190 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಬಿಡುಗಡೆಗೆ ಸಿದ್ದಗೊಂಡ ಬಿಎಸ್-6 ವೈಶಿಷ್ಟ್ಯತೆಯ ಟಾಟಾ ವಿಂಗರ್

ಹೊಸ ಎಂಜಿನ್‌ನಲ್ಲಿ 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅಳವಡಿಸಲಾಗಿದ್ದು, ಈ ವ್ಯಾನ್‍‍ನ ಬೆಲೆಯು ರೂ.11 ಲಕ್ಷದಿಂದ ರೂ.13 ಲಕ್ಷಗಳಾಗಿರಲಿದೆ. ಈ ಮೂಲಕ ಫೋರ್ಸ್ ಮೋಟಾರ್ಸ್ ವಾಹನಗಳಿಗೆ ಮತ್ತಷ್ಟು ಪೈಪೋಟಿ ನೀಡಲಿದೆ.

More from DriveSpark

Article Published On: Friday, September 11, 2020, 18:50 [IST]
English summary
BS6 Tata Winger Launching Soon in India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+