ದುಬಾರಿಯಾಯ್ತು ಬಿಎಸ್-6 ಟೊಯೊಟಾ ಕ್ಯಾಮ್ರಿ ಕಾರು
ಟೊಯೊಟಾ ಇಂಡಿಯಾ ಕಂಪನಿಯು ತನ್ನ ಹೊಸ ಕ್ಯಾಮ್ರಿ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷದ ಮೇ ತಿಂಗಳಲ್ಲಿ ಬಿಡುಗಡೆಗೊಳಿಸಿತ್ತು. ಇದೀಗ ಟೊಯೊಟಾ ಕಂಪನಿಯು ಬಿಎಸ್-6 ಕ್ಯಾಮ್ರಿ ಕಾರಿನ ಬೆಲೆಯನ್ನು ಹೆಚ್ಚಿಸಿದೆ.

ಈ ಹೂಸ ಟೊಯೊಟಾ ಕ್ಯಾಮ್ರಿ ಕಾರಿನ ಬೆಲೆಯನ್ನು ಸುಮಾರು ರೂ.1.14 ಲಕ್ಷದಷ್ಟು ಹೆಚ್ಚಿಸಲಾಗಿದೆ. ಇದೀಗ ಬಿಎಸ್-6 ಟೊಯೊಟಾ ಕ್ರಾಮ್ರಿ ಟೊಯೊಟಾ ಕ್ಯಾಮ್ರಿ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.39.02 ಲಕ್ಷಗಳಾಗಿದೆ, ಈ ಹೊಸ ಟೊಯೊಟಾ ಕ್ಯಾಮ್ರಿ ಕಾರಿನಲ್ಲಿ ದೊಡ್ಡ ಟಚ್ ಸ್ಕ್ರೀನ್ ಇನ್ಫೋಟೇನೆಮೆಂಟ್ ಸಿಸ್ಟಂ, ಜೆಬಿಎಲ್ ಆಡಿಯೊ ಸಿಸ್ಟಂ, ಆಟೋಮ್ಯಾಟಿಕ್ ಕ್ಲೈಮೇಂಟ್ ಕಂಟ್ರೋಲ್ ಮತ್ತು ಎಲೆಕ್ಟ್ರಿಕ್ ಆಗಿ ಹೋಂದಾಣಿಕೆ ಮಾಡಬಹುದಾದ ಫ್ರಂಟ್ ಪ್ಯಾಸೆಂಜರ್ ಸೀಟ್ ಮತ್ತು ಡ್ರೈವರ್ ಸೀಟ್ ಮತ್ತು ಹೆಡ್-ಅಪ್ ಡಿಸ್ ಪ್ಲೇಯನ್ನು ಹೊಂದಿದೆ.

ಹೊಸ ಟೊಯೊಟಾ ಕ್ಯಾಮ್ರಿ ಕಾರಿನಲ್ಲಿ ಕ್ರೂಸ್ ಕಂಟ್ರೋಲ್, ಪವರ್-ಹೊಂದಾಣಿಕೆ ಮಾಡಬಹುದಾದ ಸ್ಟೀರಿಂಗ್ ಕಾಲಂ, ಹಿಂಭಾಗದ ಸನ್-ಬ್ಲೈಂಡ್ಸ್ ಮತ್ತು ಪ್ಯಾನರೊಮಿಕ್ ಸನ್‌ರೂಫ್ ಅನ್ನು ಸಹ ಒಳಗೊಂಡಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಹೊಸ ಟೊಯೊಟಾ ಕ್ಯಾಮ್ರಿ ಕಾರಿನಲ್ಲಿ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದಾರೆ ಎಂದು ಹೇಳಬಹುದು. ಈ ಹೊಸ ಕಾರಿನಲ್ಲಿ ಸುರಕ್ಷತೆಗಾಗಿ ಒಂಬತ್ತು ಏರ್‌ಬ್ಯಾಗ್‌ಗಳು, ಎಬಿಎಸ್ ವಿಥ್ ಇಬಿಡಿ, ಪಾರ್ಕಿಂಗ್ ಸೆನ್ಸರ್‌ಗಳು, ರಿಯರ್‌ವ್ಯೂ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್ ಫಂಕ್ಷನ್ ಅನ್ನು ಅಳವಡಿಸಿದೆ.

ಹೊಸ ಟೊಯೊಟಾ ಕ್ಯಾಮ್ರಿ ಕಾರಿನಲ್ಲಿ ಅದೇ 2.5-ಲೀಟರ್ ಹೈಬ್ರಿಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಇದು ಸೆಟಪ್ ಪೆಟ್ರೋಲ್ ಎಂಜಿನ್ ಮತ್ತು ಎಲೆಕ್ಟ್ರಿಕ್ ಮೋಟಾರ್ ಅನ್ನು ಒಳಗೊಂಡಿದೆ.
MOST READ: ದೋಷ ಪೂರಿತ 22 ಲಕ್ಷ ಕಾರುಗಳನ್ನು ರಿಕಾಲ್ ಮಾಡಲು ಮುಂದಾದ ವೊಲ್ವೊ

ಇದರಲ್ಲಿ ಪೆಟ್ರೋಲ್ ಎಂಜಿನ್ 176 ಬಿಹೆಚ್‍ಪಿ ಪವರ್ ಮತ್ತು 221 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ, ಇನ್ನು ಎಲೆಕ್ಟ್ರಿಕ್ ಮೋಟಾರ್ 118 ಬಿಹೆಚ್‍ಪಿ ಪವರ್ ಮತ್ತು 202 ಎನ್ಎಂ ಉತ್ಪಾದಿಸುತ್ತದೆ.

ಬಿಎಸ್-6 ಟೊಯೊಟಾ ಕ್ಯಾಮ್ರಿ ಕಾರು ವೈಟ್, ಸ್ವಿಲರ್, ರೆಡ್, ಬ್ರೌನ್, ಗ್ರಾಫೈಟ್ ಮತ್ತು ಶೇಡ್ ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಈ ಹೊಸ ಟೊಯೊಟಾ ಕ್ಯಾಮ್ರಿ ದೇಶಿಯ ಮಾರುಕಟ್ಟೆಯಲ್ಲಿ ಸ್ಕೋಡಾ ಸೂಪರ್ಬ್ ಟಿಎಸ್‌ಐ ಕಾರಿಗೆ ಪೈಫೋಟಿ ನೀಡುತ್ತದೆ.
MOST READ: ಇತಿಹಾಸದ ಪುಟ ಸೇರಿದ ಫೋಕ್ಸ್‌ವ್ಯಾಗನ್ ಎಮಿಯೊ ಕಾರು

ಇದರೊಂದಿಗೆ ಟೊಯೊಟಾ ಕಂಪನಿಯು ಫಾರ್ಚೂನರ್ ಫೇಸ್‌ಲಿಫ್ಟ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಹೊಸ ಫಾರ್ಚೂನರ್ ಫೇಸ್‌ಲಿಫ್ಟ್ ಕಾರನ್ನು ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಬಿಎಸ್-6 ಟೊಯೊಟಾ ಕ್ಯಾಮ್ರಿ ಕಾರಿನಲ್ಲಿ ಎಂಜಿನ್ ನವೀಕರಣದೊಂದಿಗೆ ಕೆಲವು ಹೊಸ ಫೀಚರ್ ಗಳನ್ನು ಅಳವಡಿಸಲಾಗಿದೆ. ಟೊಯೊಟಾ ಕಂಪನಿಯು ಬಿಎಸ್-6 ಕ್ಯಾಮ್ರಿಯ ಬೆಲೆಯನ್ನು ಹೆಚ್ಚಿಸಿರುವುದರಿಂದ ಮಾರಾಟದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿದೆ.


Click it and Unblock the Notifications








