ಚೀನಾ ಕಂಪನಿಯ ಈ ಬ್ಯಾಟರಿಯ ಹೆಸರೇ ಬ್ಲೇಡ್..!
ಚೀನಾ ಮೂಲದ ಬಿವೈಡಿ ಜನಪ್ರಿಯ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾಗಿದೆ. ಈ ಕಂಪನಿಯು ಭಾರತದಲ್ಲಿಯೂ ಸಹ, ಎಲೆಕ್ಟ್ರಿಕ್ ಬಸ್ ಗಳನ್ನು ಮಾರಾಟ ಮಾಡುತ್ತದೆ. ಈಗ ಈ ಕಂಪನಿಯು ಎಲೆಕ್ಟ್ರಿಕ್ ವಾಹನಗಳಿಗಾಗಿ ಬ್ಯಾಟರಿಯನ್ನು ತಯಾರಿಸಿದೆ.

ಬ್ಲೇಡ್ ಬ್ಯಾಟರಿ ಎಂಬ ಹೆಸರಿನ ಈ ಎಲೆಕ್ಟ್ರಿಕ್ ವೆಹಿಕಲ್ ಬ್ಯಾಟರಿ ಪ್ಯಾಕ್, ವಿನೂತನ ಸಂರಚನೆ ಹಾಗೂ ತಂತ್ರಜ್ಞಾನಗಳನ್ನು ಒಳಗೊಂಡಿದೆ. ಇದರಿಂದಾಗಿ ಈ ಬ್ಯಾಟರಿ ಸಾಮಾನ್ಯ ಲಿಥಿಯಂ-ಐಯಾನ್ ಬ್ಯಾಟರಿಗಳಿಗಿಂತ ಹೆಚ್ಚು ದೂರ ಹಾಗೂ ಹೆಚ್ಚು ಸುರಕ್ಷತೆಯನ್ನು ಒದಗಿಸುತ್ತದೆ.

ಈ ಆರ್ಕಿಟೆಕ್ಚರ್ ನಿಂದಾಗಿ ಹೆಚ್ಚಿನ ಬ್ಯಾಟರಿ ಕೋಶಗಳನ್ನು ಸ್ಟೋರ್ ಮಾಡಬಹುದು. ಈ ಬ್ಯಾಟರಿಯಿಂದಾಗಿ ಹೆಚ್ಚು ದೂರವನ್ನು ಕ್ರಮಿಸಬಹುದು. ಈ ಬ್ಯಾಟರಿ ಚಿಕ್ಕ ಗಾತ್ರವನ್ನು ಹೊಂದಿದೆ.

ಎಲೆಕ್ಟ್ರಿಕ್ ವಾಹನಗಳು ಅಪಘಾತಕ್ಕೀಡಾದಾಗ ಬ್ಯಾಟರಿಗಳಿಗೆ ಹಾನಿಯಾಗಿ ಬೆಂಕಿ ಬೀಳುವ ಸಾಧ್ಯತೆಗಳಿರುತ್ತವೆ. ಈ ಕಾರಣಕ್ಕೆ ಬ್ಯಾಟರಿಯ ರಚನೆಯನ್ನು ಸುಲಭವಾಗಿ ಸುಡುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಬಿವೈಡಿ ಕಂಪನಿ ಹೇಳಿದೆ.

ಅಪಘಾತದ ಸಂದರ್ಭದಲ್ಲಿ ಬ್ಯಾಟರಿ ಪುಡಿಯಾಗುವ ಸಾಧ್ಯತೆಗಳಿರುತ್ತವೆ. ಜೊತೆಗೆ ಇತರ ವಸ್ತುಗಳೊಂದಿಗೂ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆಗಳಿರುತ್ತವೆ. ಆದರೆ ಬ್ಯಾಟರಿಯನ್ನು ಪುಡಿಮಾಡಿ, ಬಾಗಿಸಿದರೆ ಅದು ಉರಿಯುತ್ತದೆ ಎಂದು ಹೇಳಲಾಗಿದೆ.

ಈ ಬ್ಯಾಟರಿಯನ್ನು 300 ಡಿಗ್ರಿ ಶಾಖದಲ್ಲಿ ಉರಿಯುವಂತೆ ತಯಾರಿಸಲಾಗಿದೆ. ಈ ಬ್ಯಾಟರಿಗಳನ್ನು ಟೆಸ್ಟ್ ಮಾಡುವಾಗ 260%ಗಳವರೆಗೆ ಚಾರ್ಜ್ ಆಗುತ್ತವೆ. ಆದರೂ ಸ್ಫೋಟಗೊಳ್ಳುವುದಿಲ್ಲ ಎಂದು ಬಿವೈಡಿ ಹೇಳಿದೆ.
ಸಾಮಾನ್ಯ ಲಿಥಿಯಂ-ಐಯಾನ್ ಫಾಸ್ಫೇಟ್ ಬ್ಯಾಟರಿಯನ್ನು ಅತ್ಯುತ್ತಮ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಬ್ಲೇಡ್ ಬ್ಯಾಟರಿ ಹೆಚ್ಚಿನ ರಕ್ಷಣೆ ನೀಡಲಿದೆ ಎಂದು ಹೇಳಲಾಗಿದೆ. ಹೊಸ ಬ್ಲೇಡ್ ಬ್ಯಾಟರಿಯನ್ನು ಬಿವೈಡಿ ಕಂಪನಿಯ ದಿ ಹನ್ ಎಲೆಕ್ಟ್ರಿಕ್ ಸೆಡಾನ್ ಕಾರಿನಲ್ಲಿ ಅಳವಡಿಸಲಾಗಿದೆ.

ಬ್ಲೇಡ್ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದ ನಂತರ 605 ಕಿ.ಮೀ.ಗಳವರೆಗೆ ಚಲಿಸಬಹುದು. ಈ ಬ್ಯಾಟರಿಯಿಂದಾಗಿ 3.9 ಸೆಕೆಂಡುಗಳಲ್ಲಿ ಪ್ರತಿ ಗಂಟೆಗೆ 0 - 100 ಕಿ.ಮೀ ವೇಗವನ್ನು ಅಕ್ಸೆಲರೇಟ್ ಮಾಡಬಹುದು ಎಂದು ಹೇಳಲಾಗಿದೆ.


Click it and Unblock the Notifications