ವಿಶ್ವದ ಅತಿ ದೊಡ್ಡ ಮಾಲ್ ಮಾಲೀಕನ ಬಳಿಯಿರುವ ಕಾರುಗಳಿವು..!
ವಿಶ್ವದ ಅತಿದೊಡ್ಡ ಮಾಲ್ ಭಾರತದಲ್ಲಿದೆ. ಅದು ಕೇರಳದ ಕೊಚ್ಚಿಯಲ್ಲಿದೆ. ಈ ಮಾಲ್ 6.2 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿದೆ. ಈ ಮಾಲ್ ಲುಲು ಗ್ರೂಪ್‌ನ ಯೂಸುಫ್ ಅಲಿ ಅವರ ಒಡೆತನದಲ್ಲಿದೆ. ಯೂಸುಫ್ ಅಲಿ ಭಾರತದ ಅತ್ಯಂತ ಶ್ರೀಮಂತರಲ್ಲಿ ಒಬ್ಬರು.

ಲುಲು ಗ್ರೂಪ್ ದುಬೈ ಸೇರಿದಂತೆ ವಿಶ್ವದಾದ್ಯಂತ ಜನಪ್ರಿಯವಾಗಿದೆ. ಈಗ ಭಾರತಕ್ಕೆ ಕಾಲಿಡುತ್ತಿದೆ. ಲುಲು ಗ್ರೂಪ್ ಮಾಲೀಕರಾದ ಯೂಸುಫ್ ಅಲಿ ಕಾರುಗಳ ಬಗ್ಗೆ ವಿಪರೀತ ಕ್ರೇಜ್ ಹೊಂದಿದ್ದು, ಹಲವಾರು ಕಾರುಗಳನ್ನು ಹೊಂದಿದ್ದಾರೆ. ಅವರ ಬಳಿ ಬಿಎಂಡಬ್ಲ್ಯು, ಮರ್ಸಿಡಿಸ್ ಬೆಂಝ್, ಲೆಕ್ಸಸ್, ರೋಲ್ಸ್ ರಾಯ್ಸ್, ಲ್ಯಾಂಡ್ ರೋವರ್ ಸೇರಿದಂತೆ ಹಲವಾರು ಕಾರುಗಳಿವೆ. ಅವರ ಬಳಿಯಿರುವ ಕಾರುಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ.

ರೋಲ್ಸ್ ರಾಯ್ಸ್ ಘೋಸ್ಟ್
ಯೂಸುಫ್ ಅಲಿ ರೋಲ್ಸ್ ರಾಯ್ಸ್ ಘೋಸ್ಟ್ ಕಾರ್ ಅನ್ನು ಹೊಂದಿದ್ದಾರೆ. ಈ ಕಾರಿನಲ್ಲಿ ವಿಶೇಷ ನಂಬರ್ ಅನ್ನು ಹೊಂದಿದ್ದಾರೆ. ಈ ಕಾರಿನ ನಂಬರ್ ಪ್ಲೇಟ್‌ನಲ್ಲಿ ಕೇರಳ ಸರ್ಕಾರದ ಅಂಚೆ ಚೀಟಿ ಕೂಡ ಅಳವಡಿಸಲಾಗಿದೆ. ಅವರು ಭಾರತಕ್ಕೆ ಬಂದಾಗಲೆಲ್ಲಾ ಈ ಕಾರಿನಲ್ಲಿ ಪ್ರಯಾಣಿಸುತ್ತಾರೆ.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಲ್ಯಾಂಡ್ ರೋವರ್ ರೇಂಜ್ ರೋವರ್ ವಾಗ್
ಯೂಸುಫ್ ಅಲಿ ಮತ್ತೊಂದು ಐಷಾರಾಮಿ ಎಸ್‌ಯುವಿಯಾದ ಲ್ಯಾಂಡ್ ರೋವರ್ ರೇಂಜ್ ರೋವರ್ ವಾಗ್ ಅನ್ನು ಸಹ ಹೊಂದಿದ್ದಾರೆ. ಈ ಕಾರು ಬಿಳಿ ಬಣ್ಣವನ್ನು ಹೊಂದಿದೆ. ಈ ಕಾರ್ ಅನ್ನು ಅಲಿ ಹಾಗೂ ಅವರ ಕುಟುಂಬದವರು ಬಳಸುತ್ತಾರೆ.

ಲ್ಯಾಂಡ್ ರೋವರ್ ರೇಂಜ್ ರೋವರ್ ವಾಗ್
ಲ್ಯಾಂಡ್ ರೋವರ್ ರೇಂಜ್ ರೋವರ್ ವಾಗ್‌ನ ಹಳೆಯ ಮಾದರಿಯಾಗಿದ್ದು ಇದನ್ನು ನಿರಂತರವಾಗಿ ಬಳಸುತ್ತಿದ್ದಾರೆ. ಈ ಕಾರು ಬುಲೆಟ್ ಪ್ರೂಫ್ ಆಗಿದೆ. ಈ ಕಾರಣಕ್ಕೆ ಯಾವುದಾದರೂ ಕಾರ್ಯಕ್ರಮದಲ್ಲಿ ಭಾಗವಹಿಸಲು ಈ ಕಾರಿನಲ್ಲಿ ಹೋಗುತ್ತಾರೆ. ಕಪ್ಪು ಬಣ್ಣದ ಈ ಕಾರು, 1 ಎಂಬ ನಂಬರ್ ಪ್ಲೇಟ್ ಹೊಂದಿದೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಬೆಂಟ್ಲಿ ಬೆಂಟಾಯ್ಗ
ಬೆಂಟ್ಲಿ ಬೆಂಟಾಯ್ಗ ಭಾರತದ ಅತ್ಯಂತ ದುಬಾರಿ ಎಸ್‌ಯುವಿಗಳಲ್ಲಿ ಒಂದಾಗಿದೆ. ಯೂಸುಫ್ ಅಲಿರವರು ಈ ಕಾರನ್ನು ಸಹ ಹೊಂದಿದ್ದಾರೆ. ಅಲಿರವರು ಈ ಎಸ್‌ಯುವಿಯ ಡಬ್ಲ್ಯು 12 ಮಾದರಿಯನ್ನು ಮೂರು ವರ್ಷಗಳ ಹಿಂದೆ ಖರೀದಿಸಿದ್ದರು. ಅಲಿರವರು ಭಾರತದಲ್ಲಿ ಈ ಎಸ್‌ಯುವಿ ಖರೀದಿಸಿದ ಮೊದಲಿಗರು.

ರೋಲ್ಸ್ ರಾಯ್ಸ್ ಕಲಿನನ್
ಕಲಿನನ್, ರೋಲ್ಸ್ ರಾಯ್ಸ್ ಕಂಪನಿಯ ಮೊದಲ ಹಾಗೂ ಏಕೈಕ ಎಸ್‌ಯುವಿಯಾಗಿದ್ದು, ವಿಶ್ವದಾದ್ಯಂತ ಜನಪ್ರಿಯವಾಗಿದೆ. ಅಲಿರವರು ಈ ರೋಲ್ಸ್ ರಾಯ್ಸ್ ಕಲಿನನ್ ಕಾರ್ ಅನ್ನು ದುಬೈನಲ್ಲಿ ಹೊಂದಿದ್ದಾರೆ. ಈ ಕಾರನ್ನು ಅಲಿರವರೇ ಸ್ವತಃ ಚಾಲನೆ ಮಾಡುತ್ತಾರೆ. ರೋಲ್ಸ್ ರಾಯ್ಸ್ ಕಲಿನನ್ ಕಾರ್ ಅನ್ನು ಭಾರತದಲ್ಲಿ ಕಡಿಮೆ ಸಂಖ್ಯೆಯ ಜನರು ಹೊಂದಿದ್ದಾರೆ.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಮರ್ಸಿಡಿಸ್ ಬೆಂಝ್ ಜಿಎಲ್ಎಸ್
ಯೂಸುಫ್ ಅಲಿರವರು ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಅನ್ನು ಸಹ ಹೊಂದಿದ್ದಾರೆ. ಮರ್ಸಿಡಿಸ್ ಬೆಂಜ್ ಜಿಎಲ್ಎಸ್ ಕಾರಿನಲ್ಲಿ ಅಲಿಯವರು ಹಲವು ಬಾರಿ ಕಾಣಿಸಿಕೊಂಡಿದ್ದಾರೆ. ಅನೇಕ ಬಾರಿ ಅವರು ಹೆಲಿಕಾಪ್ಟರ್‌ನಿಂದ ಇಳಿದ ನಂತರ ಈ ಕಾರಿನಲ್ಲಿಯೇ ಹೋಗುತ್ತಾರೆ.

ಲೆಕ್ಸಸ್ ಎಲ್ಎಕ್ಸ್ 750
ಅವರ ಬಳಿಯಿರುವ ಇತರ ಕಾರುಗಳಂತೆ, ಈ ಐಷಾರಾಮಿ ಕಾರಿನ ಸಂಖ್ಯೆಯೂ ಸಹ 1 ಆಗಿದೆ. ಅವರು ಬಿಳಿ ಬಣ್ಣದ ಲೆಕ್ಸಸ್ ಎಲ್ಎಕ್ಸ್ 750 ಕಾರ್ ಅನ್ನು ಹೊಂದಿದ್ದಾರೆ. ಲೆಕ್ಸಸ್ ಎಲ್ಎಕ್ಸ್ 750 ವಿಶ್ವದ ದುಬಾರಿ ಎಸ್‌ಯುವಿಗಳಲ್ಲಿ ಒಂದಾಗಿದೆ. ಅಮಿತಾಬ್ ಬಚ್ಚನ್‌ರವರು ಸಹ ಈ ಕಾರ್ ಅನ್ನು ಹೊಂದಿದ್ದಾರೆ.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಮರ್ಸಿಡಿಸ್ ಮೇಬ್ಯಾಕ್ ಎಸ್ 600
ಮೇಬ್ಯಾಕ್ ಕಾರುಗಳು ಐಷಾರಾಮಿತನಕ್ಕೆ ಹೆಸರುವಾಸಿಯಾಗಿವೆ. ಮರ್ಸಿಡಿಸ್ ಕಂಪನಿಯು ಕೆಲವು ದಿನಗಳ ಹಿಂದೆ ಈ ಕಾರ್ ಅನ್ನು ಅಪ್‌ಡೇಟ್ ಮಾಡಿತ್ತು. ಈ ಕಾರು ವಿಶ್ವದ ಅತ್ಯಂತ ದುಬಾರಿ ಸೆಡಾನ್‌ಗಳಲ್ಲಿ ಒಂದಾಗಿದೆ. ಮರ್ಸಿಡಿಸ್ ಮೇಬ್ಯಾಕ್ ಎಸ್ 600 ಕಾರಿನಲ್ಲಿ ಸೀಟ್ ಮಸಾಜರ್‌ನಂತಹ ಹಲವಾರು ಫೀಚರ್‌ಗಳಿವೆ.


Click it and Unblock the Notifications








