ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಜೀಪ್ ಎಸ್‍ಯುವಿಗಳು
ಜೀಪ್ ಕಂಪನಿಯು ತನ್ನ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಮುಂದಿನ ವರ್ಷ ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯೊಂದಿಗೆ ಇತರ ಜೀಪ್ ಎಸ್‍ಯುವಿಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಜೀಪ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಹೊಡಿಕೆಯನ್ನು ಮಾಡಲು ಚಿಂತಿಸುತ್ತಿದೆ. ಅಲ್ಲದೇ ಜೀಪ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಜನಪ್ರಿಯ ಎಸ್‍ಯುವಿಗಳನ್ನು ಬಿಡುಗಡೆಗೊಳಿಸಲಿದೆ ಎಂದು ಆಟೋ ಕಾರ್ ಇಂಡಿಯಾ ವರದಿ ಪ್ರಕಟಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ ಪೂರ್ಣ ಪ್ರಮಾಣದ ಎಸ್‍ಯುವಿ ಮತ್ತು ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಡಿಸಲಿದೆ ಎಂದು ಜೀಪ್ ಕಂಪನಿಯು ಖಚಿತಪಡಿಸಿದೆ.

ಜೀಪ್ ಕಂಪನಿಯು ತಮ್ಮ ಐಕಾನಿಕ್ ಎಸ್‍ಯುವಿಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಮುಂಬರುವ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಬಹುದು ಎಂದು ನಿರೀಕ್ಷಿಸುತ್ತೇವೆ.
MOST READ: ಸ್ಥಳೀಯವಾಗಿ ತಯಾರಾಗಲಿದೆ ಫೋಕ್ಸ್‌ವ್ಯಾಗನ್ ಹೊಸ ಎಸ್ಯುವಿ

ಇದರೊಂದಿಗೆ ಜೀಪ್ ಕಂಪನಿಯು ಹೊಸ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲಿದೆ. ಇದರಲ್ಲಿ ಫೋರ್ ವ್ಹೀಲ್ ಡ್ರೈವ್ ಸಿಸ್ಟಂ ಮತ್ತು ಆಫ್ ರೋಡ್ ಭೂಪ್ರದೇಶದಲ್ಲಿ ಚಲಿಸಲು ಲಾಕಿಂಗ್ ಡಿಫರನ್ಷಿಯಲ್ ಫೀಚರ್ಸ್‍ಗಳನ್ನು ಒಳಗೊಂಡಿರುತ್ತದೆ. ಮುಂದಿನ ಕಾಂಪ್ಯಾಕ್ಟ್ ಎಸ್‍ಯುವಿಯು ಜೀಪ್ ಬ್ರ್ಯಾಂಡ್‍ನ ಆಫ್ ರೋಂಡಿಂಗ್ ವಾಹನಗಳ ಸರಣಿಗೆ ಸೇರುತ್ತದೆ.

ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಜೀಪ್ ಕಾಂಪ್ಯಾಕ್ಟ್ ಎಸ್‍ಯುವಿಯು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿರುತ್ತದೆ. ಕೇವಲ ಆಫ್ ರೋಡ್ ಗೆ ಅಲ್ಲದೇ ದಿನನಿತ್ಯ ಓಡಾಡಕ್ಕೆ ಈ ಎಸ್‍ಯುವಿಯನ್ನು ಬಳಸಬಹುದಾಗಿದೆ.
MOST READ: ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ಕರೋಕ್ ಎಸ್ಯುವಿ

ಭಾರತೀಯ ಮಾರುಕಟ್ಟೆಯಲ್ಲಿ ಪ್ರಸ್ತುತ ಆಲ್ ವ್ಹೀಲ್ ಡ್ರೈವ್ ಅಥವಾ ಫೋರ್ ವ್ಹೀಲ್ ಡ್ರೈವ್ ಸಿಸ್ಟಂ ಹೊಂದಿರುವ ಯಾವುದೇ ಕಾಂಪ್ಯಾಕ್ಟ್ ಎಸ್‍ಯುವಿಗಳು ಇಲ್ಲ. ಜೀಪ್ ಕಾಂಪ್ಯಾಕ್ಟ್ ಎಸ್‍ಯುವಿಯು ಭಾರತದಲ್ಲಿ ಬಿಡುಗಡೆಯಾದ ಬಳಿಕ ಇದು ದೇಶದ ಆಫ್ ರೋಡ್ ವಾಹನ ಪ್ರಿಯರಿಗೆ ಉತ್ತಮ ಆಯ್ಕೆಯಾಗಬಹುದು.

ಮುಂದಿನ ದಿನಗಳಲ್ಲಿ ಮೂರು ಸಾಲಿನ ಪೂರ್ಣ ಪ್ರಮಾಣದ ಎಸ್‍ಯುವಿಯು ಬಿಡುಗಡೆಯಾಗಲಿದೆ. ಈ ಎಸ್‍ಯುವಿಯು ಆಫ್-ರೋಡರ್ ಆಗಿರಬಹುದು ಎಂದು ನಿರೀಕ್ಷಿಸುತ್ತೇವೆ. ಈ ಎಸ್‍ಯುವಿಯು ಬಿಡುಗಡೆಯಾದ ಬಳಿಕ ಟೊಯೊಟಾ ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.
MOST READ: ಇತಿಹಾಸದ ಪುಟ ಸೇರಿದ ಫೋಕ್ಸ್‌ವ್ಯಾಗನ್ ಎಮಿಯೊ ಕಾರು

ಹೊಸ ತಲೆಮಾರಿನ ಜೀಪ್ ಗ್ರ್ಯಾಂಡ್ ಚರೋಕೀ ಎಸ್‍ಯುವಿಯು ಮುಂದಿನ ವರ್ಷ ಬಿಡುಗಡೆಯಾಗಲಿದೆ. ಗ್ರ್ಯಾಂಡ್ ಚರೋಕೀ ಎಸ್‍ಯುವಿಯು ಪೆಟ್ರೋಲ್, ಡೀಸೆಲ್ ಮತ್ತು ಹೈಬ್ರಿಡ್ ಎಂಜಿನ್ ಗಳ ಆಯ್ಕೆಯಲ್ಲಿ ಬಿಡುಗಡೆಯಾಗಲಿದೆ.

ಜೀಪ್ ಕಂಪನಿಯು ಭಾರತದಲ್ಲಿ ಎಲೆಕ್ಟ್ರಿಕ್ ಆವೃತ್ತಿಯಲ್ಲಿಯು ಎಸ್‍ಯುವಿಗಳನ್ನು ಬಿಡುಗಡೆಗೊಳಿಸಲಿದೆ. ಜೀಪ್ ಕಂಪಾಸ್ ಬ್ರ್ಯಾಂಡ್‍ನ ಹೆಚ್ಚು ಮಾರಾಟವಾಗುವ ಎಸ್‍ಯುವಿಯಾಗಿದೆ. ಮುಂದಿನ ದಿನಗಳಲ್ಲಿ ಹೊಸ ಎಸ್‍ಯುವಿಗಳನ್ನು ಬಿಡುಗಡೆಗೊಳಿಸಿ ಭಾರತೀಯ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ.


Click it and Unblock the Notifications