ಕರೋನಾ ವೈರಸ್ ಎಫೆಕ್ಟ್: 95%ನಷ್ಟು ಕುಸಿದ ಫೋಕ್ಸ್‌ವ್ಯಾಗನ್ ಮಾರಾಟ

ಕೋವಿಡ್-19 ಇಡೀ ಜಗತ್ತನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಚೀನಾ, ಇಟಲಿ, ಅಮೆರಿಕಾ, ಸ್ಪೇನ್, ಫ್ರಾನ್ಸ್, ಇಂಗ್ಲೆಂಡ್ ಹಾಗೂ ಇರಾನ್ ದೇಶಗಳಲ್ಲಿ ಸಾವಿರಾರು ಜನರು ಪ್ರಾಣಕಳೆದುಕೊಂಡಿದ್ದಾರೆ. ಈ ಮಾರಣಾಂತಿಕ ವೈರಸ್ ಜಗತ್ತಿನ ಎಲ್ಲಾ ದೇಶಗಳಲ್ಲೂ ಹಬ್ಬಿದೆ.

ಕರೋನಾ ವೈರಸ್ ಎಫೆಕ್ಟ್: 95%ನಷ್ಟು ಕುಸಿದ ಫೋಕ್ಸ್‌ವ್ಯಾಗನ್ ಮಾರಾಟ

ಭಾರತದಲ್ಲಿಯೂ ವೇಗವಾಗಿ ಹರಡುತ್ತಿದ್ದು, ಇದನ್ನು ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರವು ದೇಶದಲ್ಲಿ 21 ದಿನಗಳ ಕಾಲ ಲಾಕ್ ಡೌನ್ ಘೋಷಿಸಿದೆ. ಇದರಿಂದ ವೈರಸ್ ಹರಡುವುದನ್ನು ಕೆಲ ಮಟ್ಟಿಗೆ ನಿಯಂತ್ರಿಸಬಹುದಾದರೂ, ಲಾಕ್ ಡೌನ್ ನಿಂದಾಗಿ ಆರ್ಥಿಕತೆಯ ಮೇಲೆ ಪರಿಣಾಮ ಉಂಟಾಗಿರುವುದು ಸುಳ್ಳಲ್ಲ.

ಕರೋನಾ ವೈರಸ್ ಎಫೆಕ್ಟ್: 95%ನಷ್ಟು ಕುಸಿದ ಫೋಕ್ಸ್‌ವ್ಯಾಗನ್ ಮಾರಾಟ

ಭಾರತದಲ್ಲಿ ಕಾರುಗಳ ಮಾರಾಟವು ತೀವ್ರವಾಗಿ ಕುಸಿದಿದೆ. ಇದರಿಂದಾಗಿ ಅನೇಕ ಪ್ರಮುಖ ಕಾರು ತಯಾರಕ ಕಂಪನಿಗಳು ನಷ್ಟವನ್ನು ಅನುಭವಿಸುತ್ತಿವೆ. ಅವುಗಳಲ್ಲಿ ಫೋಕ್ಸ್‌ವ್ಯಾಗನ್ ಸಹ ಒಂದು. ಮಾರ್ಚ್‌ ತಿಂಗಳಿನಲ್ಲಿ ಫೋಕ್ಸ್‌ವ್ಯಾಗನ್ ಇಂಡಿಯಾ ಕಂಪನಿಯ ಮಾರಾಟವು 95%ನಷ್ಟು ಕುಸಿತ ಕಂಡಿದೆ. ಫೋಕ್ಸ್‌ವ್ಯಾಗನ್ ಕಳೆದ ಮಾರ್ಚ್‌ ತಿಂಗಳಿನಲ್ಲಿ ಕೇವಲ 131 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಕರೋನಾ ವೈರಸ್ ಎಫೆಕ್ಟ್: 95%ನಷ್ಟು ಕುಸಿದ ಫೋಕ್ಸ್‌ವ್ಯಾಗನ್ ಮಾರಾಟ

2019ರ ಮಾರ್ಚ್ ತಿಂಗಳಲ್ಲಿ ಕಂಪನಿಯು 2,751 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಈ ಮೂಲಕ ಫೋಕ್ಸ್‌ವ್ಯಾಗನ್ 95%ನಷ್ಟು ಕುಸಿತ ದಾಖಲಿಸಿದೆ. ಫೋಕ್ಸ್‌ವ್ಯಾಗನ್ ಕಂಪನಿ ಮಾತ್ರವಲ್ಲದೇ ಮಾರುತಿ ಸುಜುಕಿ ಹಾಗೂ ಟಾಟಾ ಮೋಟಾರ್ಸ್ ಕೂಡ ಕುಸಿತವನ್ನು ದಾಖಲಿಸಿವೆ.

ಕರೋನಾ ವೈರಸ್ ಎಫೆಕ್ಟ್: 95%ನಷ್ಟು ಕುಸಿದ ಫೋಕ್ಸ್‌ವ್ಯಾಗನ್ ಮಾರಾಟ

ಭಾರತದ ನಂಬರ್ ಒನ್ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ 47%ನಷ್ಟು ಕುಸಿತ ಕಂಡಿದೆ. ಇದರಿಂದಾಗಿ ಮಾರುತಿ ಸುಜುಕಿ ಕಂಪನಿಯ ಕಾರುಗಳ ಮಾರಾಟದಲ್ಲಿ ಬಹುತೇಕ ಅರ್ಧದಷ್ಟು ಕುಸಿತ ಉಂಟಾಗಿದೆ. ಮಾರ್ಚ್ ತಿಂಗಳಿನಲ್ಲಿ ಮಾರುತಿ ಸುಜುಕಿ ಇಂಡಿಯಾ 76,240 ಕಾರುಗಳನ್ನು ಮಾರಾಟ ಮಾಡಿದೆ. 2019ರ ಮಾರ್ಚ್‌ನಲ್ಲಿ 1,45,031 ಕಾರುಗಳನ್ನು ಮಾರಾಟ ಮಾಡಲಾಗಿತ್ತು.

ಕರೋನಾ ವೈರಸ್ ಎಫೆಕ್ಟ್: 95%ನಷ್ಟು ಕುಸಿದ ಫೋಕ್ಸ್‌ವ್ಯಾಗನ್ ಮಾರಾಟ

ಭಾರತ ಮಾತ್ರವಲ್ಲ, ವಿಶ್ವದ ಬಹುತೇಕ ದೇಶಗಳು ಇದೇ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಕೋವಿಡ್-19 ವೈರಸ್ ಇದಕ್ಕೆ ಕಾರಣ. ಭಾರತದಂತೆಯೇ, ಇತರ ಹಲವು ದೇಶಗಳಲ್ಲಿಯೂ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಇದರಿಂದಾಗಿ ಕಾರು ತಯಾರಕ ಕಂಪನಿಗಳ ಉತ್ಪಾದನಾ ಘಟಕಗಳನ್ನು ಮುಚ್ಚಲಾಗಿದೆ.

ಕರೋನಾ ವೈರಸ್ ಎಫೆಕ್ಟ್: 95%ನಷ್ಟು ಕುಸಿದ ಫೋಕ್ಸ್‌ವ್ಯಾಗನ್ ಮಾರಾಟ

ಕೋವಿಡ್-19 ವೈರಸ್ ಹರಡದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದಾಗಿ ಕಾರು ಉತ್ಪಾದನೆಗೆ ತೀವ್ರ ಪೆಟ್ಟು ಬಿದ್ದಿದೆ. ಕಾರು ತಯಾರಕ ಕಂಪನಿಗಳು ಕಾರು ಉತ್ಪಾದನೆಯ ಬದಲಿಗೆ, ವೆಂಟಿಲೇಟರ್‌ ಹಾಗೂ ಇತರ ವೈದ್ಯಕೀಯ ಉಪಕರಣಗಳನ್ನು ತಯಾರಿಸಲು ಹಾಗೂ ಪೂರೈಸಲು ಮುಂದಾಗಿವೆ.

ಕರೋನಾ ವೈರಸ್ ಎಫೆಕ್ಟ್: 95%ನಷ್ಟು ಕುಸಿದ ಫೋಕ್ಸ್‌ವ್ಯಾಗನ್ ಮಾರಾಟ

ವೆಂಟಿಲೇಟರ್‌ಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಟೆಸ್ಲಾ, ಜನರಲ್ ಮೋಟಾರ್ಸ್, ಫೋರ್ಡ್ ಹಾಗೂ ಭಾರತದ ಮಹೀಂದ್ರಾ ಕಂಪನಿಗಳು ಈ ಪ್ರಯತ್ನಕ್ಕೆ ಮುಂದಾಗಿವೆ. ವಿಶ್ವದ ವಿವಿಧ ದೇಶಗಳ ಸರ್ಕಾರಗಳು ಸಹ ವೆಂಟಿಲೇಟರ್ ತಯಾರಿಸುವಂತೆ ಆಟೋಮೊಬೈಲ್ ಕಂಪನಿಗಳಿಗೆ ಮನವಿ ಮಾಡಿವೆ.

More from DriveSpark

Article Published On: Friday, April 3, 2020, 12:07 [IST]
English summary
Corona Virus effect Volkswagen India March 2020 sales down by 95 percent. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+