Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಟೊಯೊಟಾ ಹಿಲುಕ್ಸ್ ವಿನ್ಯಾಸದ ಮಾದರಿಯಲ್ಲಿ ಮಾಡಿಫೈಗೊಂಡ ಫಾರ್ಚೂನರ್ ಎಸ್‍ಯುವಿ
ಟೊಯೊಟಾ ಕಂಪನಿಯು ತನ್ನ ಬಹುನಿರೀಕ್ಷಿತ ಫಾರ್ಚೂನರ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಇತ್ತೀಚೆಗೆ ಥೈಲ್ಯಾಂಡ್‌ನಲ್ಲಿ ಪರಿಚಯಿಸಿತು. ಟೊಯೊಟಾ ಕಂಪನಿಯ ಎಸ್‍ಯುವಿಗಳ ಸರಣಿಯಲ್ಲಿ ಫಾರ್ಚೂನರ್ ಜನಪ್ರಿಯ ಮಾದರಿಯಾಗಿದೆ.

ಟೊಯೊಟಾ ಫಾರ್ಚೂನರ್ ಭಾರತೀಯ ಮಾರುಕಟ್ಟೆಯಲ್ಲಿ ಬಹು ದೀರ್ಘಕಾಲದಿಂದ ಮಾರಾಟವಾಗುತ್ತಿದೆ. ಆರಂಭದಿಂದಲೂ ಪೂರ್ಣ ಪ್ರಮಾಣದ ಎಸ್‍ಯುವಿ ವಿಭಾಗದಲ್ಲಿ ಫಾರ್ಚೂನರ್ ಪ್ರಾಬಲ್ಯವನ್ನು ಸಾಧಿಸಿದೆ. ಟೊಯೊಟಾ ಫಾರ್ಚೂನರ್ ಭಾರತದಲ್ಲಿ ಸರಿಸಾಟಿ ಇಲ್ಲದ ಎಸ್‍ಯುವಿಯಾಗಿದೆ. ಅಲ್ಲದೇ ಫಾರ್ಚೂನರ್ ಉತ್ತಮ ಆಫ್-ರೋಡ್ ಸಾಮರ್ಥ್ಯವನ್ನು ಹೊಂದಿದೆ.

ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಫಾರ್ಚೂನರ್ ಎಸ್‍ಯುವಿ ಮುಂಭಾಗವನ್ನು ಹಿಲುಕ್ಸ್ ಮಾದರಿಯಂತೆ ಮಾಡಿಫೈಗೊಳಿಸಿರುವ ಚಿತ್ರಗಳು ವೈರಲ್ ಆಗಿದೆ. ಈ ಮಾಡಿಫೈಗೊಂಡ ಫಾರ್ಚೂನರ್ ಎಸ್‍ಯುವಿಯಲ್ಲಿ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ ನೊಂದಿಗೆ ಸ್ಲೀಕ್ ಹೆಡ್ ಲ್ಯಾಂಪ್ ಅನ್ನು ಹೊಂದಿದೆ.
MOST READ: ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್

ಇನ್ನು ಫಾರ್ಚೂನರ್ ಎಸ್‍ಯುವಿಯ ಮುಂಭಾಗದಲ್ಲಿ ಫಾಗ್ ಲ್ಯಾಂಫ್ ಅನ್ನು ಹೊಂದಿರುವ ಬ್ರೋನಿ ಬ್ಲ್ಯಾಂಕ್ ಬಂಪರ್ ಅನ್ನು ಹೊಂದಿದೆ. ಇನ್ನು ಈ ಎಸ್‍ಯುವಿಯಲ್ಲಿ ರೇಡಿಯೇಟರ್ ಗ್ರಿಲ್‌ನಲ್ಲಿ ಟೊಯೋಟಾ ಬ್ಯಾಡ್ಜ್‌ನ ಮೇಲಿರುವ ದಪ್ಪ ಕ್ರೋಮ್ ಸ್ಟ್ರಿಪ್, ಮತ್ತು ಸ್ಕಿಡ್ ಪ್ಲೇಟ್‌ಗಳನ್ನು ರಕ್ಷಿಸುವ ಅಂಡರ್ ಬಾಡಿಯನ್ನು ಹೊಂದಿದೆ.

ಇನ್ನು ಈ ಮಾಡಿಫೈ ಫಾರ್ಚೂನರ್ ಎಸ್‍ಯುವಿಯ ಸೈಡ್ ಪ್ರೊಫೈಲ್ ನಲ್ಲಿ ವಿಶಿಷ್ಟವಾದ ಸ್ಪೋರ್ಟಿವೊ ಡೆಕಲ್ಸ್ ಮತ್ತು ಕಪ್ಪು ಸ್ಟಿಕ್ಕರ್‌ಗಳನ್ನು ಹೊಂದಿರುವುದು ಮತ್ತಷ್ಟು ಆಕರ್ಷಕವಾಗಿದೆ. ಇನ್ನು ವ್ಜೀಲ್ ಕಮಾನುಗಳ ಮೇಲೆ ದಪ್ಪ ಬ್ಲ್ಯಾಕ್ ಕ್ಲಾಡಿಂಗ್ ಮತ್ತು ವಿಂಡೋ ವಿಸರ್ ಹೊಂದಿರುವ ಬ್ಲ್ಯಾಕ್ ಪಿಲ್ಲಿರ್ ಇತರ ಗಮನಾರ್ಹ ಸೇರ್ಪಡೆಗಳಾಗಿವೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಹಿಂಭಾಗದಲ್ಲಿ ಬ್ಲ್ಯಾಕ್ ಸ್ಟ್ರೀಪ್ ಮತ್ತು ವಾರ್ಪಡ್ ಎಲ್ಇಡಿ ಟೈಲ್ ಲ್ಯಾಂಪ್‌ಗಳು ಮತ್ತು ಬ್ಲ್ಯಾಕ್ ಅಕ್ಸೆಸ್ಟ್ ಗಳನ್ನು ಹೊಂದಿದೆ. ಫಾರ್ಚೂನರ್ ಎಸ್‍ಯುವಿಯನ್ನು ಆಕರ್ಷಕವಾಗಿ ಮಾಡಿಫೈಗೊಳಿಸಲಾಗಿದೆ. ಉಳಿದಂತೆ ಇತರ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ ಎಸ್‍ಯುವಿಯಾಗಿದೆ. ಈ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್ ತನ್ನ ಉತ್ತಮ ಸಾಮರ್ಥ್ಯದಿಂದ ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಹೊಸ ಫಾರ್ಚೂನರ್ ಫೇಸ್‌ಲಿಫ್ಟ್ ಎಸ್‍ಯುವಿಯು ಈ ವರ್ಷದ ಹಬ್ಬದ ಸೀಸನ್ ನಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ .
MOST READ: ಮಿನಿ ಕ್ಲಬ್‍ಮ್ಯಾನ್ ಸ್ಪೆಷಲ್ ಎಡಿಷನ್ ಕಾರು ಖರೀದಿಸಿದ ಮಲಯಾಳಂ ಚಿತ್ರರಂಗದ ಖ್ಯಾತ ನಟ

ಈ ಫಾರ್ಚೂನರ್ ಫೇಸ್‌ಲಿಫ್ಟ್ ಎಸ್‍ಯುವಿಯು ಭಾರತದಲ್ಲಿ ಇತ್ತೀಚೆಗೆ ಸ್ಪಾಟ್ ಟೆಸ್ಟ್ ನಡೆಸಿದೆ. ಇನ್ನು ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್ ಎಸ್‍ಯುವಿಯು ಮುಂಭಾಗ ಹೊಸ ವಿನ್ಯಾಸವನ್ನು ಹೊಂದಿದೆ. ಡೇ ಟೈಮ್ ರನ್ನಿಂಗ್ ಲೈಟ್ ಹೊಂದಿರುವ ಮರುವಿನ್ಯಾಸಗೊಳಿಸಲಾದ ಎಲ್‌ಇಡಿ ಹೆಡ್‌ಲೈಟ್, ಮೆಶ್ ಮಾದರಿಯ ದೊಡ್ಡದಾದ ಗ್ರಿಲ್ 18 ಇಂಚಿನ ಅಲಾಯ್ ವ್ಹೀಲ್ ಗಳನ್ನು ಅಳವಡಿಸಲಾಗಿದೆ.

ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್ ಇಂಟಿರಿಯರ್ ಬಗ್ಗೆ ಹೇಳುದಾದರೆ, ಹಿಂದಿನ ಮಾದರಿಯ ವಿನ್ಯಾಸವನ್ನು ಬದಲಾಯಿಸಲಾಗಿದೆ. ಆದರೆ ಒಂದು ಪ್ರಮುಖ ವ್ಯತ್ಯಾಸವೆಂದರೆ ಆಪಲ್ ಕಾರ್ ಪ್ಲೇ ಹೊಂದಾಣಿಕೆಯೊಂದಿಗೆ ಬರುವ ದೊಡ್ಡದಾದ, 8.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಸದಾಗಿ ಅಳವಡಿಸಲಿದೆ.
MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಇದರೊಂದಿಗೆ ಸ್ವಲ್ಪ ನವೀಕರಿಸಿದ ಇನ್ಸ್ಟ್ರುಮೆಂಟ್ ಕ್ಲಸ್ಟರ್, 8-ವೇ ಪವರ್-ಹೊಂದಾಣಿಕೆ ಮಾಡುವ ಡ್ರೈವರ್ ಸೀಟ್, ಸಹ-ಚಾಲಕರ ಸೀಟುಗಳು ಮತ್ತು ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜಿಂಗ್ ಸಹ ಒಳಗೊಂಡಿದೆ.

ಇನ್ನು ಎಲ್ಇಡಿ ಆಂಬಿಯೆಂಟ್ ಲೈಟಿಂಗ್, 9-ಸ್ಪೀಕರ್ ಜೆಬಿಎಲ್ ಆಡಿಯೊ ಸಿಸ್ಟಂ ಮತ್ತು 360 ಡಿಗ್ರಿ ಕ್ಯಾಮೆರಾ. 7 ಏರ್‌ಬ್ಯಾಗ್‌ಗಳು ಮತ್ತು ಸಾಮಾನ್ಯ ಸುರಕ್ಷತಾ ಫೀಚರ್‌ಗಳ ಜೊತೆಗೆ 'ಟೊಯೋಟಾ ಸೇಫ್ಟಿ ಸೆನ್ಸ್' ಅನ್ನು ಸಹ ಹೊಂದಿದೆ.

ಈ ಎಸ್‍ಯುವಿಯಲ್ಲಿ 2.8-ಲೀಟರ್ ಡೀಸೆಲ್ ಎಂಜಿನ್ ಅಳವಡಿಸಬಹುದು. ಈ ಎಂಜಿನ್ 204 ಬಿಹೆಚ್‍ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಆಯ್ಕೆಯೊಂದಿಗೆ ನೀಡುತ್ತದೆ.