ಕನಸಿನ ಕಾರಿನ ಬಗ್ಗೆ ಬಾಯ್ಬಿಟ್ಟ ಸನ್ನಿ ಲಿಯೋನ್
ಸನ್ನಿ ಲಿಯೋನ್ ಬಾಲಿವುಡ್‌ನ ಜನಪ್ರಿಯ ನಟಿಯರಲ್ಲಿ ಒಬ್ಬರು. ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಸನ್ನಿ ಲಿಯೋನ್ ಕಾರುಗಳ ಬಗ್ಗೆ ಕ್ರೇಜ್ ಹೊಂದಿದ್ದಾರೆ. ಇತ್ತೀಚೆಗೆ ತಮ್ಮ ಕನಸಿನ ಕಾರು ಯಾವುದೆಂದು ತಿಳಿಸಿರುವ ಅವರು ಶೀಘ್ರದಲ್ಲೇ ಅದನ್ನು ಖರೀದಿಸುವುದಾಗಿ ತಿಳಿಸಿದ್ದಾರೆ.

ಮಾಶೆಬಲ್ ಬಿಡುಗಡೆಗೊಳಿಸಿರುವ ವೀಡಿಯೊದಲ್ಲಿ, ಸನ್ನಿ ಲಿಯೋನ್ ಡ್ರೈವರ್ ಪಕ್ಕದ ಸೀಟಿನಲ್ಲಿ ಹಾಗೂ ಆಕೆಯ ಪತಿ ಹಿಂದಿನ ಸೀಟಿನಲ್ಲಿ ಕುಳಿತಿರುವುದನ್ನು ಕಾಣಬಹುದು. ಸನ್ನಿ ಲಿಯೋನ್ ಈ ವೀಡಿಯೊದಲ್ಲಿ ತಮ್ಮ ಕನಸಿನ ಕಾರು ಯಾವುದೆಂದು ಬಹಿರಂಗಪಡಿಸಿದ್ದಾರೆ. ಪಿಂಕ್ ಬಣ್ಣದ ಹಿಂದೂಸ್ತಾನ್ ಅಂಬಾಸಿಡರ್ ಅವರ ಕನಸಿನ ಕಾರ್ ಆಗಿದೆ.

ಮ್ಯಾನುವಲ್ ಗೇರ್‌ಬಾಕ್ಸ್ ಇರುವ ಕಾರಣಕ್ಕೆ ಪಿಂಕ್ ಹಿಂದೂಸ್ತಾನ್ ಅಂಬಾಸಿಡರ್ ಕಾರು ಚಾಲನೆ ಸಾಧ್ಯವಿಲ್ಲವೆಂದು ತಿಳಿಸಿರುವ ಸನ್ನಿ ಲಿಯೋನ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿರುವಅಂಬಾಸಿಡರ್ ಖರೀದಿಸಲು ಬಯಸಿದ್ದಾರೆ. ಇದಕ್ಕಾಗಿ ಅಂಬಾಸಿಡರ್ ಕಾರಿನಲ್ಲಿ ಹಲವಾರು ಮಾಡಿಫೈಗಳನ್ನು ಮಾಡಬೇಕಾಗುತ್ತದೆ.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಸನ್ನಿ ಲಿಯೋನ್ ತಮ್ಮ ಕನಸಿನ ಕಾರಿನ ಕ್ಯಾಬಿನ್ ಅನ್ನು ಸಂಪೂರ್ಣವಾಗಿ ಕಸ್ಟಮೈಸ್ ಮಾಡಲು ಬಯಸಿದ್ದಾರೆ. ಕಾರಿನ ಇಂಟಿರಿಯರ್ ಗುಲಾಬಿ ಹಾಗೂ ಬಿಳಿ ಬಣ್ಣದಲ್ಲಿರಬೇಕೆಂದು ಬಯಸಿದ್ದಾರೆ. ಪ್ರಾಣಿಗಳನ್ನು ಕೊಲ್ಲಲು ಬಯಸದ ಕಾರಣಕ್ಕೆ ಯಾವುದೇ ರೀತಿಯ ಲೆದರ್ ಹೊದಿಕೆ ಬೇಡವೆಂದು ಹೇಳಿದ್ದಾರೆ.

ಸನ್ನಿ ಲಿಯೋನ್ ಅವರ ಈ ಕನಸಿನ ಕಾರಿನಲ್ಲಿ ಹಲವಾರು ಮಾಡಿಫೈಗಳನ್ನು ಮಾಡಬೇಕಾಗುತ್ತದೆ. ಹೊರಭಾಗದಿಂದ ಒಳಾಂಗಣದವರೆಗೆ ಸಂಪೂರ್ಣವಾಗಿ ಎಲ್ಲವನ್ನೂ ಬದಲಾಯಿಸಬೇಕಾಗುತ್ತದೆ. ಈಗ ಅಂಬಾಸಿಡರ್ ಕಾರಿನ ಉತ್ಪಾದನೆಯನ್ನು ನಿಲ್ಲಿಸಲಾಗಿದೆ.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಸನ್ನಿ ಲಿಯೋನ್‌ರವರು ಕಳೆದ ವರ್ಷ ಅಮೆರಿಕಾದಲ್ಲಿ ಲಿಮಿಟೆಡ್ ಎಡಿಷನ್‌ನ ಮಾಸೆರೋಟಿ ಘಿಬ್ಲಿ ನೆರ್ರಿಸಿಮೊ ಕಾರನ್ನು ಖರೀದಿಸಿದರು. ಭಾರತದಲ್ಲಿ ಅವರು ಬಿಎಂಡಬ್ಲ್ಯು 730 ಎಲ್‌ಡಿ ಕಾರನ್ನು ಚಲಾಯಿಸುತ್ತಾರೆ. ಇದನ್ನು ಆಕೆಯ ಪತಿ ಡೇನಿಯಲ್ ವೆಬರ್ ಆಕೆಗೆ ಉಡುಗೊರೆಯಾಗಿ ನೀಡಿದ್ದಾರೆ.

ಹಿಂದೂಸ್ತಾನ್ ಅಂಬಾಸಿಡರ್ ಕಾರಿನ ಉತ್ಪಾದನೆಯನ್ನು ಹಲವಾರು ವರ್ಷಗಳ ಹಿಂದೆಯೇ ಸ್ಥಗಿತಗೊಳಿಸಲಾಗಿದೆ. ಅಂಬಾಸಿಡರ್ ಭಾರತದಲ್ಲಿ ಉತ್ಪಾದನೆಯನ್ನು ಆರಂಭಿಸಿದ ಮೊದಲ ಕಾರು.1980 ಹಾಗೂ 1990ರ ದಶಕದಲ್ಲಿ ಹಿಂದೂಸ್ತಾನ್ ಅಂಬಾಸಿಡರ್ ಕಾರು ಭಾರತದಲ್ಲಿ ಬಹಳಷ್ಟು ಜನಪ್ರಿಯವಾಗಿತ್ತು.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕಾರಿನ ವಿನ್ಯಾಸದಿಂದ ಹಿಡಿದು ಕ್ಯಾಬಿನ್, ಎಂಜಿನ್ ಗುಣಮಟ್ಟದವರೆಗೆ ಪ್ರತಿಯೊಂದಕ್ಕೂ ಆದ್ಯತೆ ನೀಡಲಾಗಿದ್ದ ಈ ಕಾರ್ ಅನ್ನು ಪ್ರತಿಯೊಬ್ಬ ನಟ ಹಾಗೂ ರಾಜಕಾರಣಿ ಖರೀದಿಸಲು ಬಯಸುತ್ತಿದ್ದರು. ಹಿಂದೂಸ್ತಾನ್ ಅಂಬಾಸಿಡರ್ ಇದುವರೆಗೂ ಭಾರತದಲ್ಲಿ ಮಾರಾಟವಾದ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ.

ಈ ಕಾರ್ ಅನ್ನು ಖರೀದಿಸಿದ್ದ ಕಾರು ಪ್ರೇಮಿಗಳು ಈ ಕಾರನ್ನು ಇನ್ನೂ ಹಾಗೆಯೇ ಉಳಿಸಿಕೊಂಡಿದ್ದಾರೆ. ಪಿಯೊಜಿಯೊ ಕಂಪನಿಯು ಈ ಕಾರಿನ ಹೆಸರನ್ನು ಬಳಸುವ ಹಕ್ಕನ್ನು ಖರೀದಿಸಿದೆ. ಮುಂಬರುವ ದಿನಗಳಲ್ಲಿ ಈ ಹೆಸರಿನಲ್ಲಿಯೇ ಹೊಸ ಕಾರನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.


Click it and Unblock the Notifications