ಸರಳವಾಗಿ ಮಾಡಿಫೈಗೊಂಡು ಮಿಂಚಿದ ಸುಂದರಿ ಪ್ರೀಮಿಯಂ ಪದ್ಮಿನಿ
ದಶಕಗಳ ಕಾಲ ರಸ್ತೆಯಲ್ಲಿ ರಾಣಿಯಂತೆ ಓಡಾಡುತ್ತಿದ್ದ ಪ್ರೀಮಿಯಂ ಪದ್ಮಿನಿ ಕಾರು ಇತಿಹಾಸದ ಪುಟ ಸೇರಿ ಕೆಲವು ವರ್ಷಗಳು ಕಳೆದಿದೆ. ಆದರೂ ಈ ಪ್ರೀಮಿಯಂ ಪದ್ಮಿನಿ ಕಾರಿನ ಹೆಸರಿನ ಜನಪ್ರಿಯತೆ ಕಡಿಮೆಯಾಗಿಲ್ಲ. ಈ ಕಾರಿನ ಹೆಸರಿನಲ್ಲಿ ಕನ್ನಡ ಸಿನಿಮಾ ಕೂಡ ಬಂದಿದೆ.

ಪ್ರೀಮಿಯರ್ ಪದ್ಮಿನಿ, ಭಾರತದಲ್ಲಿ ಇದುವರೆಗೆ ಮಾರಾಟವಾದ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಈ ಕಾರನ್ನು 1970ರ ದಶಕದಿಂದ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ಈ ಕಾರಿನ ಉತ್ಪಾದನೆಯನ್ನು 2000ರದ ವೇಳೆಗೆ ಸ್ಥಗಿತಗೊಳಿಸಲಾಯಿತು. ಭಾರತದಲ್ಲಿ ಈ ಕಾರನ್ನು ಮೊದಲಿಗೆ ಫಿಯೆಟ್ 1100 ಡಿಲೈಟ್ ಎಂಬ ಹೆಸರಿನಲ್ಲಿ ಮಾರಾಟ ಮಾಡಲಾಯಿತು. 1970ರ ದಶಕದ ಆರಂಭದಲ್ಲಿ ಪ್ರೀಮಿಯರ್ ಪದ್ಮಿನಿ ಎಂದು ಮರುನಾಮಕರಣ ಮಾಡಲಾಯಿತು.

ಪ್ರೀಮಿಯರ್ ಪದ್ಮಿನಿ ಕಾರನ್ನು ಭಾರತದಲ್ಲಿ ಪ್ರೀಮಿಯರ್ ಆಟೋಮೊಬೈಲ್ಸ್ ಲಿಮಿಟೆಡ್, ಫಿಯೆಟ್ ಕಂಪನಿಯ ಪರವಾನಗಿ ಅಡಿಯಲ್ಲಿ ಮಾರಾಟ ಮಾಡುತಿತ್ತು. ಕಾರಿನ ಉತ್ಪಾದನೆಯನ್ನು ನಿಲ್ಲಿಸಿದ ನಂತರ, ಕಾರ್ಖಾನೆಯೂ ಮುಚ್ಚಲ್ಪಟ್ಟಿತು.
MOST READ: ಇತಿಹಾಸದ ಪುಟ ಸೇರಿದ ಫೋಕ್ಸ್‌ವ್ಯಾಗನ್ ಎಮಿಯೊ ಕಾರು

ಇಂದಿಗೂ ಅನೇಕ ಕಾರು ಪ್ರಿಯರು ಪದ್ಮಿನಿ ಕಾರುಗಳ ಕಡೆಗೆ ಒಲವನ್ನು ಹೊಂದಿದ್ದಾರೆ. ಪ್ರೀಮಿಯರ್ ಪದ್ಮಿನಿ ಕಾರು ಫಿಯೆಟ್ 1200 ಗ್ರ್ಯಾನ್‌ಲೂಸ್ ಬರ್ಲಿನಾವನ್ನು ಆಧರಿಸಿದೆ. ಪ್ರೀಮಿಯಂ ಪದ್ಮಿನಿ ಎಂಬ ಹೆಸರಿನಲ್ಲಿ ಭಾರತದಲ್ಲಿ ಇನ್ನು ಮುಂದೆ ಕಾರುಗಳು ಬಿಡುಗಡೆಯಾಗುವ ಸಾಧ್ಯತೆಗಳು ಕಡಿಮೆಯಾಗಿದೆ.

ಮುಂಬೈ ಮೂಲದ ಕಂಪನಿಯು ಪುಣೆಯಲ್ಲಿ 26.5 ಎಕರೆ ಭೂ ಪ್ರದೇಶವನ್ನು ರೂ.217.5 ಕೋಟಿಗೆ ಖರೀದಿಸಿದ್ದರು. ಇಲ್ಲಿ ಪ್ರೀಮಿಯಂ ಪದ್ಮಿನಿ ಕಾರಿನ ಮರು ಉತ್ಪಾದನೆಗೆ ಪ್ರಯತ್ನ ಪಟ್ಟರು ಅದು ಯಶ್ವಸಿ ಕಂಡಿಲ್ಲ.
MOST READ: ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಮಾರುತಿ ಸುಜುಕಿ ಎಕ್ಸ್‌ಎಲ್6

ಪ್ರೀಮಿಯಂ ಪದ್ಮಿನಿ ಕಾರಿನ ಉತ್ಪಾದನೆಯನು ಸ್ಥಗಿತಗೊಳಿಸಿ ಹಲವಾರು ವರ್ಷಗಳು ಕಳೆದಿದೆ. ಆದರು ಈ ಕಾರನ್ನು ಮಾಡಿಫೈ ಮಾಡುತ್ತಾರೆ. ಇದೇ ರೀತಿಯ ಒಂದು ಉದಾಹರಣೆ ಇಲ್ಲಿದೆ.

ಮುಂಬೈ ಮೂಲದ ಎಂಕೆರಾಫ್ಟ್ ಕಸ್ಟಂ ಅವರು ಪ್ರೀಮಿಯಂ ಪದ್ಮಿನಿ ಕಾರನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಿದ್ದಾರೆ. ಮಾಡಿಫೈಗೊಂಡ ಪ್ರೀಮಿಯಂ ಪದ್ಮಿನಿ ಕಾರಿನ ಬಾಡಿಗೆ ಡ್ಯುಯಲ್-ಟೋನ್ ಬಣ್ಣವನ್ನು ಸಿಂಪಡಿಸಿದ್ದಾರೆ.ಈ ಕಾರಿನ ಮುಂಭಾಗ ಗ್ರಿಲ್, ವೃತ್ತ ಆಕಾರದ ಹೆಡ್‌ಲ್ಯಾಂಪ್ ಹೊಂದಿದ್ದು, ಮುಂಭಾಗದ ಬಂಪರ್ ಗಾರ್ಡ್, ಎರಡೂ ಬದಿಯಲ್ಲಿ ವಿಶಿಷ್ಟವಾದ ಲೈನ್, ಪಿಲ್ಲರ್ ಮತ್ತು ಇಂಡೀಕೆಟರ್ ಹೊಂದಿದೆ. ಹೆಡ್‌ಲ್ಯಾಂಪ್ ಸುತ್ತಲೂ ಬ್ಲ್ಯಾಕ್ ಫೀನಿಶಿಂಗ ಅನ್ನು ಹೊಂದಿದೆ.
MOST READ: ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್

ಪ್ರೀಮಿಯರ್ ಪದ್ಮಿನಿ ಕಾರು ಫಿಯೆಟ್ 1100 ಕಾರಿಗಿಂತ ತೀಕ್ಷ್ಣವಾದ ಹಾಗೂ ಎಡ್ಜಿಯರ್ ಆದ ವಿನ್ಯಾಸವನ್ನು ಹೊಂದಿರುವ ಕಾರಣ ವಿಶಿಷ್ಟವಾದ ನಿಲುವನ್ನು ಪಡೆದಿದೆ. ಈ ಕಾರಿನಲ್ಲಿರುವ 1.1-ಲೀಟರ್ ಎಂಜಿನ್ 40 ಬಿಹೆಚ್‌ಪಿ ಹಾಗೂ 71 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರು ಕಾಲಮ್-ಮೌಂಟೆಡ್ ಗೇರ್ ಶಿಫ್ಟ್ ಹೊಂದಿದೆ.

ಈ ಕಾರಿನ ಇಂಟಿರಿಯರ್ ನಲ್ಲಿ ಸಣ್ಣ ಮಟ್ಟದ ಮಾರ್ಪಾಡು ಮಾಡಲಾಗಿದ್ದರೂ, ಯಾವುದೇ ಆಧುನಿಕ ಬಿಡಿಭಾಗಗಳನ್ನು ಅಳವಡಿಸಲಾಗಿಲ್ಲ. ಸೀಟುಗಳಲ್ಲಿ ಹಾಗೂ ಡ್ಯಾಶ್‌ಬೋರ್ಡ್‍ಗಳಲ್ಲಿ ಮೂಲ ಫಿಟ್‌ಮೆಂಟ್‌ಗಳನ್ನೆ ಉಳಿಸಿಕೊಳ್ಳಲಾಗಿದೆ. ಕಾರಿನ ಮೂಲ ಪ್ರೊಫೈಲ್ ಅನ್ನು ಹಾಗೆಯೇ ಉಳಿಸಿಕೊಂಡಿರುವುದರಿಂದ, ಪದ್ಮನಿ ಕಾರು ಇನ್ನೂ ಅಂದವಾಗಿ ಕಾಣುತ್ತಿದೆ.


Click it and Unblock the Notifications








