ಉಚಿತವಾಗಿ ಫಾಸ್ಟ್‌ಟ್ಯಾಗ್ ಪಡೆದುಕೊಳ್ಳಲು ಇಲ್ಲಿದೆ ಮತ್ತೊಂದು ಸುವರ್ಣಾವಕಾಶ

ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಜನವರಿ 15ರಿಂದಲೇ ಕಡ್ಡಾಯವಾಗಿ ಜಾರಿಗೆ ತಂದಿದ್ದರೂ ಇದುವರೆಗೂ ಅದೆಷ್ಟೋ ವಾಹನ ಸವಾರರು ಹೊಸ ಟೋಲ್ ಪಾವತಿ ಸೌಲಭ್ಯವನ್ನು ಪಡೆದುಕೊಂಡಿಲ್ಲ. ಇದಕ್ಕಾಗಿ ಮತ್ತೊಂದು ಅವಕಾಶ ನೀಡುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಿಗದಿತ ಅವಧಿಯೊಳಗೆ ಉಚಿತವಾಗಿ ಫಾಸ್ಟ್‌ಟ್ಯಾಗ್ ವಿತರಣೆಗೆ ಮುಂದಾಗಿದೆ.

ಉಚಿತವಾಗಿ ಫಾಸ್ಟ್‌ಟ್ಯಾಗ್ ಪಡೆದುಕೊಳ್ಳಲು ಇಲ್ಲಿದೆ ಮತ್ತೊಂದು ಸುವರ್ಣಾವಕಾಶ

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶುಲ್ಕ ಪಾವತಿಯನ್ನು ಸುಲಭವಾಗಿಸಲು ಕಡ್ಡಾಯವಾಗಿ ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಜಾರಿಗೆ ತಂದರೂ ಕೂಡಾ ಇದುವರೆಗೂ ಕ್ಯೂ ನಿಲ್ಲುವುದು ಮಾತ್ರ ತಪ್ಪಿಲ್ಲ. ಫಾಸ್ಟ್‌ಟ್ಯಾಗ್ ಲೈನ್‌ಗಳಲ್ಲಿ ಕೆಲವೊಮ್ಮೆ ಫಾಸ್ಟ್‌ಟ್ಯಾಗ್ ಸೌಲಭ್ಯ ಇಲ್ಲದ ವಾಹನ ಸವಾರರೂ ಬರುತ್ತಿರುವುದು ಸಾಕಷ್ಟು ಕಿರಿಕಿರಿ ಉಂಟು ಮಾಡುತ್ತಿದ್ದು, ಇದರಿಂದ ಫಾಸ್ಟ್‌ಟ್ಯಾಗ್ ಹೊಂದಿದ ವಾಹನ ಸವಾರರು ಕೂಡಾ ಕ್ಯೂ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಉಚಿತವಾಗಿ ಫಾಸ್ಟ್‌ಟ್ಯಾಗ್ ಪಡೆದುಕೊಳ್ಳಲು ಇಲ್ಲಿದೆ ಮತ್ತೊಂದು ಸುವರ್ಣಾವಕಾಶ

ಫಾಸ್ಟ್‌ಟ್ಯಾಗ್‌ ಲೈನ್‌ಗಳಲ್ಲಿನ ಹೊಸ ಸಮಸ್ಯೆಗೆ ಪರಿಹಾರ ಕಂಡಕೊಳ್ಳಲು ಮುಂದಾಗಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮತ್ತೊಮ್ಮೆ ಉಚಿತವಾಗಿ ಫಾಸ್ಟ್‌ಟ್ಯಾಗ್‌ಗಳನ್ನು ವಿತರಿಸಲು ಮುಂದಾಗಿದ್ದು, ಫಾಸ್ಟ್‌ಟ್ಯಾಗ್ ಹೊಂದಿರದ ವಾಹನ ಮಾಲೀಕರು ಈಗಲಾದರೂ ಹೊಸ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕಾಗಿ ವಿನಂತಿ ಮಾಡಿದೆ.

ಉಚಿತವಾಗಿ ಫಾಸ್ಟ್‌ಟ್ಯಾಗ್ ಪಡೆದುಕೊಳ್ಳಲು ಇಲ್ಲಿದೆ ಮತ್ತೊಂದು ಸುವರ್ಣಾವಕಾಶ

ಇದೇ ತಿಂಗಳು ಫೆಬ್ರುವರಿ 15ರಿಂದ 29ರ ತನಕ ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಯಾವುದೇ ಶುಲ್ಕವಿಲ್ಲದೆ ವಿತರಣೆ ಮಾಡಲಾಗುತ್ತಿದ್ದು, ರೂ.500ರ ಬದಲಿಗೆ ರೂ.100ಕ್ಕೆ ನಿಮ್ಮ ಹೊಸ ಫಾಸ್ಟ್‌ಟ್ಯಾಗ್ ಖಾತೆಯನ್ನು ತೆರೆಯಬಹುದಾಗಿದೆ.

ಉಚಿತವಾಗಿ ಫಾಸ್ಟ್‌ಟ್ಯಾಗ್ ಪಡೆದುಕೊಳ್ಳಲು ಇಲ್ಲಿದೆ ಮತ್ತೊಂದು ಸುವರ್ಣಾವಕಾಶ

ರೂ.100 ಫಾಸ್ಟ್‌ಟ್ಯಾಗ್ ಖಾತೆಯಲ್ಲಿ ಇರಬೇಕಾದ ಕನಿಷ್ಠ ಮೊತ್ತವಾಗಿದ್ದು, ಹೊಸ ಖಾತೆಯನ್ನು ತೆರೆಯುವುದಕ್ಕಾಗಿ ಯಾವುದೇ ಹೆಚ್ಚುವರಿ ಮೊತ್ತವನ್ನು ನೀವು ನೀಡಬೇಕಾಗಿಲ್ಲ. ಹೀಗಾಗಿ ಇದುವರೆಗೂ ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಹೊಂದಿರದ ವಾಹನ ಸವಾರರಿಗೆ ಹೊಸ ಖಾತೆ ತೆರೆಯಲು ಸಾಕಷ್ಟು ಅನುಕೂಲಕರವಾಗಲಿದ್ದು, ಫೆಬ್ರುವರಿ 29ರ ನಂತರ ಮತ್ತೆ ಹೆಚ್ಚುವರಿ ಮೊತ್ತವನ್ನೇ ಪಾವತಿ ಮಾಡಬೇಕಾಗುತ್ತದೆ.

ಉಚಿತವಾಗಿ ಫಾಸ್ಟ್‌ಟ್ಯಾಗ್ ಪಡೆದುಕೊಳ್ಳಲು ಇಲ್ಲಿದೆ ಮತ್ತೊಂದು ಸುವರ್ಣಾವಕಾಶ

ಜೊತೆಗೆ ಫಾಸ್ಟ್‌ಟ್ಯಾಗ್ ಸೌಲಭ್ಯ ವಿತರಣೆಯ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಪೆಟ್ರೋಲ್ ಬಂಕ್, ಆರ್‌ಟಿಒ ಆಫೀಸ್ ಮತ್ತು ಟೋಲ್ ಪ್ಲಾಜಾಗಳಲ್ಲಿ ಹೆಚ್ಚುವರಿ ಸಿಬ್ಬಂದಿಯೊಂದಿಗೆ ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ತುರ್ತಾಗಿ ವಿತರಣೆ ಮಾಡುತ್ತಿದೆ.

ಉಚಿತವಾಗಿ ಫಾಸ್ಟ್‌ಟ್ಯಾಗ್ ಪಡೆದುಕೊಳ್ಳಲು ಇಲ್ಲಿದೆ ಮತ್ತೊಂದು ಸುವರ್ಣಾವಕಾಶ

ಇನ್ನು ಫಾಸ್ಟ್‌ಟ್ಯಾಗ್ ಪರಿಚಯಿಸುವುದಕ್ಕೂ ಮುನ್ನ ವಾಹನ ಸವಾರರು ಟೋಲ್ ಪ್ಲಾಜಾಗಳಲ್ಲಿ ಶುಲ್ಕ ಪಾವತಿಗಾಗಿ ಸರಾಸರಿಯಾಗಿ 12 ನಿಮಿಷ ಕಾಯಬೇಕಿತ್ತು. ಇದೀಗ ಅದು ಸರಾಸರಿ 6 ನಿಮಿಷಕ್ಕೆ ಇಳಿಕೆಯಾಗಿದ್ದರೂ ಕೂಡಾ ಫಾಸ್ಟ್‌ಟ್ಯಾಗ್‌ ಲೈನ್‌ಗಳ ಬಳಕೆಯಲ್ಲಿನ ಗೊಂದಲದಿಂದಾಗಿ ವಾಹನ ಸವಾರರು ಮತ್ತು ಟೋಲ್ ಸಿಬ್ಬಂದಿ ನಡುವೆ ಆಗಾಗ ವಾಗ್ವಾದಗಳು ನಡೆಯುತ್ತಿವೆ.

ಉಚಿತವಾಗಿ ಫಾಸ್ಟ್‌ಟ್ಯಾಗ್ ಪಡೆದುಕೊಳ್ಳಲು ಇಲ್ಲಿದೆ ಮತ್ತೊಂದು ಸುವರ್ಣಾವಕಾಶ

ಫಾಸ್ಟ್‌ಟ್ಯಾಗ್ ಸೌಲಭ್ಯದಿಂದ ಭರ್ಜರಿ ಆದಾಯ

ಫಾಸ್ಟ್‌ಟ್ಯಾಗ್ ಅಳವಡಿಕೆಗೂ ಮುನ್ನ ಪ್ರತಿದಿನ ರೂ.68 ಕೋಟಿ ಸರಾಸರಿ ಆದಾಯ ಗಳಿಸುತ್ತಿದ್ದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರವು ಇದೀಗ ಪ್ರತಿದಿನ ಸರಾಸರಿಯಾಗಿ ರೂ.82 ಕೋಟಿಯಷ್ಟು ಆದಾಯ ಗಳಿಕೆ ಮಾಡುತ್ತಿರುವುದಾಗಿ ಅಧಿಕೃತ ಹೇಳಿಕೆ ನೀಡಿದೆ.

ಉಚಿತವಾಗಿ ಫಾಸ್ಟ್‌ಟ್ಯಾಗ್ ಪಡೆದುಕೊಳ್ಳಲು ಇಲ್ಲಿದೆ ಮತ್ತೊಂದು ಸುವರ್ಣಾವಕಾಶ

ಫಾಸ್ಟ್‌ಟ್ಯಾಗ್ ಸೌಲಭ್ಯವು ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯಾಗಿದ್ದು, ಟೋಲ್ ಪ್ಲಾಜಾಗಳ ಮೂಲಕ ಹಾದುಹೋಗುವಾಗ ಟೋಲ್‌ಗಳಲ್ಲಿನ ಆರ್‌ಎಫ್‌ಐಡಿ ರಾಡರ್ ಮೂಲಕ ಆಟೋಮ್ಯಾಟಿಕ್ ಆಗಿ ಶುಲ್ಕ ಕಡಿತಗೊಳ್ಳುತ್ತದೆ.

ಉಚಿತವಾಗಿ ಫಾಸ್ಟ್‌ಟ್ಯಾಗ್ ಪಡೆದುಕೊಳ್ಳಲು ಇಲ್ಲಿದೆ ಮತ್ತೊಂದು ಸುವರ್ಣಾವಕಾಶ

ಈ ವ್ಯವಸ್ಥೆಯನ್ನು ಭಾರತದಲ್ಲಿ ಮೊದಲ ಬಾರಿಗೆ 2014ರಲ್ಲಿ ಪರಿಚಯಿಸಲಾಯಿತು. ಈ ಸೌಲಭ್ಯ ಹೊಂದಿರುವ ವಾಹನಗಳು ಯಾವುದೇ ಟೋಲ್ ಪ್ಲಾಜಾ ಮೂಲಕ ಹಾದುಹೋಗುವಾಗ ಗಂಟೆಗಟ್ಟಲೇ ಟೋಲ್‍‍ಗಳಲ್ಲಿ ನಿಲ್ಲುವ ಅಗತ್ಯವಿಲ್ಲ. ದೇಶದಲ್ಲಿರುವ ಅನೇಕ ಬ್ಯಾಂಕುಗಳು ಆನ್‌ಲೈನ್‌ನಲ್ಲಿ ಫಾಸ್ಟ್‌ಟ್ಯಾಗ್‍ ಖರೀದಿಸುವ ಸೌಲಭ್ಯವನ್ನು ಒದಗಿಸುತ್ತಿವೆ.

ಉಚಿತವಾಗಿ ಫಾಸ್ಟ್‌ಟ್ಯಾಗ್ ಪಡೆದುಕೊಳ್ಳಲು ಇಲ್ಲಿದೆ ಮತ್ತೊಂದು ಸುವರ್ಣಾವಕಾಶ

ಇದಕ್ಕಾಗಿಯೇ ಪ್ರತ್ಯೇಕ ಫಾಸ್ಟ್‌ಟ್ಯಾಗ್ ಆ್ಯಪ್ ಕೂಡಾ ಅಭಿವೃದ್ದಿಗೊಳಿಸಲಾಗಿದ್ದು, ಆ್ಯಪ್ ಮೂಲಕವೇ ನೀವು ಫಾಸ್ಟ್‌ಟ್ಯಾಗ್ ರೀಚಾರ್ಜ್ ಮತ್ತು ಫಾಸ್ಟ್‌ಟ್ಯಾಗ್‌ಗೆ ಸಂಬಂಧಿಸಿದ ಇತರೆ ಮಾಹಿತಿಗಳನ್ನು ಒಂದೇ ಸೂರಿನಡಿ ಪಡೆಯಬಹುದು.

ಉಚಿತವಾಗಿ ಫಾಸ್ಟ್‌ಟ್ಯಾಗ್ ಪಡೆದುಕೊಳ್ಳಲು ಇಲ್ಲಿದೆ ಮತ್ತೊಂದು ಸುವರ್ಣಾವಕಾಶ

ಗ್ರಾಹಕರು ರೂ.100ನಿಂದ ರೂ.1 ಲಕ್ಷದವರೆಗೆ ರೀಚಾರ್ಜ್ ಮಾಡಬಹುದಾಗಿದ್ದು, ಸುಲಭವಾಗಿ ರೀಚಾರ್ಜ್ ಮಾಡಲು ಬೇರೆ ಬೇರೆ ಏಜೆನ್ಸಿಗಳು ಬೇರೆ ಬೇರೆ ವಿಧಾನಗಳನ್ನು ಹಾಗೂ ಆಯ್ಕೆಗಳನ್ನು ನೀಡಲಾಗಿದೆ. ಹೀಗಾಗಿ ಇದೊಂದು ಅತಿ ಸುಲಭವಾಗಿ ಉಪಯೋಗಿಸಬಹುದಾದ ಸೌಲಭ್ಯವಾಗಿದ್ದು, ಒಂದು ಫಾಸ್ಟ್‌ಟ್ಯಾಗ್ ಖಾತೆಯನ್ನು ಮತ್ತೊಂದು ವಾಹನಕ್ಕೆ ಬಳಕೆ ಮಾಡುವಂತಿಲ್ಲ.

ಉಚಿತವಾಗಿ ಫಾಸ್ಟ್‌ಟ್ಯಾಗ್ ಪಡೆದುಕೊಳ್ಳಲು ಇಲ್ಲಿದೆ ಮತ್ತೊಂದು ಸುವರ್ಣಾವಕಾಶ

ಇದರಿಂದ ವಾಹನ ಮಾಲೀಕರು ಹೊಸ ಸೌಲಭ್ಯವನ್ನು ವಿವಿಧ ವಾಹನಗಳಿಗೆ ಪ್ರತ್ಯೇಕ ಖಾತೆ ಹೊಂದಿರಬೇಕಿದ್ದು, ಫಾಸ್ಟ್‌ಟ್ಯಾಗ್ ಬೇಡವಾದಲ್ಲಿ ಡಿಆಕ್ಟಿವೆಟ್ ಮಾಡಬೇಕಾಗುತ್ತದೆ.

More from DriveSpark

Article Published On: Thursday, February 13, 2020, 14:01 [IST]
English summary
FASTag available for free between 15-29 February. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+