ರಾಷ್ಟ್ರೀಯ ಹೆದ್ದಾರಿ, ಎಕ್ಸ್‌ಪ್ರೆಸ್‌ವೇಗಳ ನಂತರ ನೈಸ್ ರಸ್ತೆಗೂ ಕಾಲಿಡಲಿದೆ ಫಾಸ್ಟ್‌ಟ್ಯಾಗ್

ಕಳೆದ ವರ್ಷದವರೆಗೂ ಹೆದ್ದಾರಿಗಳಲ್ಲಿರುವ ಟೋಲ್ ಪ್ಲಾಜಾಗಳಲ್ಲಿ ಟೋಲ್ ಶುಲ್ಕ ಪಾವತಿಸಲು ವಾಹನಗಳು ಗಂಟೆ ಗಟ್ಟಲೇ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದವು. ಇದರಿಂದ ವಾಯು ಮಾಲಿನ್ಯ ಉಂಟಾಗುವುದರ ಜೊತೆಗೆ ವಾಹನ ಸವಾರರ ಸಮಯ, ಇಂಧನ ಅನಗತ್ಯವಾಗಿ ವ್ಯರ್ಥವಾಗುತ್ತಿತ್ತು. ಇದನ್ನು ತಪ್ಪಿಸುವ ಸಲುವಾಗಿ ಕೇಂದ್ರ ಸರ್ಕಾರವು ಫಾಸ್ಟ್‌ಟ್ಯಾಗ್ ಮೂಲಕ ಟೋಲ್ ಶುಲ್ಕ ಪಾವತಿಸುವ ವ್ಯವಸ್ಥೆ ಕಲ್ಪಿಸಿತು.

ರಾಷ್ಟ್ರೀಯ ಹೆದ್ದಾರಿ, ಎಕ್ಸ್‌ಪ್ರೆಸ್‌ವೇಗಳ ನಂತರ ನೈಸ್ ರಸ್ತೆಗೂ ಕಾಲಿಡಲಿದೆ ಫಾಸ್ಟ್‌ಟ್ಯಾಗ್

ವಾಹನಗಳ ವಿಂಡ್ ಶೀಲ್ಡ್ ಮೇಲೆ ಫಾಸ್ಟ್‌ಟ್ಯಾಗ್ ಸ್ಟಿಕ್ಕರ್ ಗಳನ್ನು ಅಂಟಿಸಲಾಗುತ್ತದೆ. ಈ ಫಾಸ್ಟ್‌ಟ್ಯಾಗ್ ಸ್ಟಿಕ್ಕರ್ ಗಳು ಬಳಕೆದಾರರ ಬ್ಯಾಂಕ್ ಖಾತೆ ಅಥವಾ ಡಿಜಿಟಲ್ ವ್ಯಾಲೆಟ್‌ಗೆ ಲಿಂಕ್ ಮಾಡಲಾದ ಚಿಪ್ ಅನ್ನು ಒಳಗೊಂಡಿರುತ್ತವೆ. ವಾಹನಗಳು ಟೋಲ್ ಪ್ಲಾಜಾ ಮೂಲಕ ಹಾದುಹೋದಾಗ, ಅಲ್ಲಿರುವ ಸಿಸ್ಟಂ ರೇಡಿಯೊ ಸಿಗ್ನಲ್ ಮೂಲಕ ಚಿಪ್ ಅನ್ನು ಪತ್ತೆ ಮಾಡಿ, ನಿಗದಿತ ಟೋಲ್ ಶುಲ್ಕವನ್ನು ನೇರವಾಗಿ ಬಳಕೆದಾರರ ಬ್ಯಾಂಕ್ ಖಾತೆ ಅಥವಾ ಡಿಜಿಟಲ್ ವ್ಯಾಲೆಟ್‌ನಿಂದ ಕಡಿತಗೊಳಿಸುತ್ತದೆ.

ರಾಷ್ಟ್ರೀಯ ಹೆದ್ದಾರಿ, ಎಕ್ಸ್‌ಪ್ರೆಸ್‌ವೇಗಳ ನಂತರ ನೈಸ್ ರಸ್ತೆಗೂ ಕಾಲಿಡಲಿದೆ ಫಾಸ್ಟ್‌ಟ್ಯಾಗ್

ಫಾಸ್ಟ್‌ಟ್ಯಾಗ್‌ಗಳನ್ನು ವಿವಿಧ ಬ್ಯಾಂಕ್‌ಗಳು ಹಾಗೂ ಡಿಜಿಟಲ್ ವ್ಯಾಲೆಟ್ ಕಂಪನಿಗಳು ನೀಡುತ್ತವೆ. ಫಾಸ್ಟ್‌ಟ್ಯಾಗ್ ಖರೀದಿಸಲು ವಾಹನದ ನೋಂದಣಿ ದಾಖಲೆ ಹಾಗೂ ಗ್ರಾಹಕರ ಐಡಿ ಅಗತ್ಯವಿರುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹೆಚ್‌ಡಿಎಫ್‌ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೊಟಕ್ ಬ್ಯಾಂಕ್, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಸೇರಿದಂತೆ 22 ಬ್ಯಾಂಕ್‌ಗಳ ಮೂಲಕ ಫಾಸ್ಟ್‌ಟ್ಯಾಗ್ ಖರೀದಿಸಬಹುದು.

ರಾಷ್ಟ್ರೀಯ ಹೆದ್ದಾರಿ, ಎಕ್ಸ್‌ಪ್ರೆಸ್‌ವೇಗಳ ನಂತರ ನೈಸ್ ರಸ್ತೆಗೂ ಕಾಲಿಡಲಿದೆ ಫಾಸ್ಟ್‌ಟ್ಯಾಗ್

ಪೇಟಿಎಂ, ಅಮೇಜಾನ್ ಹಾಗೂ ಫ್ಲಿಪ್ ಕಾರ್ಟ್ ನಂತಹ ಕೆಲವು ಇ ಕಾಮರ್ಸ್ ಪ್ಲಾಟ್‌ಫಾರಂಗಳು ತಮ್ಮ ಅಪ್ಲಿಕೇಶನ್‌ಗಳ ಮೂಲಕ ಫಾಸ್ಟ್‌ಟ್ಯಾಗ್ ಮಾರಾಟ ಮಾಡುತ್ತವೆ. ಎಲ್ಲಾ ಪ್ರಯಾಣಿಕರ ನಾಲ್ಕು ಚಕ್ರದ ವಾಹನಗಳು, ಬಸ್ಸುಗಳು, ಟ್ರಕ್'ಗಳು, ಲಾರಿಗಳು, ನಿರ್ಮಾಣದಲ್ಲಿ ಬಳಸಲಾಗುವ ವಾಣಿಜ್ಯ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಅಳವಡಿಕೆಯನ್ನು ಕಡ್ಡಾಯ ಗೊಳಿಸಲಾಗಿದೆ. ದ್ವಿಚಕ್ರ ವಾಹನಗಳಲ್ಲಿ ಫಾಸ್ಟ್‌ಟ್ಯಾಗ್ ಅಳವಡಿಸುವ ಅಗತ್ಯವಿಲ್ಲ.

ರಾಷ್ಟ್ರೀಯ ಹೆದ್ದಾರಿ, ಎಕ್ಸ್‌ಪ್ರೆಸ್‌ವೇಗಳ ನಂತರ ನೈಸ್ ರಸ್ತೆಗೂ ಕಾಲಿಡಲಿದೆ ಫಾಸ್ಟ್‌ಟ್ಯಾಗ್

ಈ ವರ್ಷದ ಫೆಬ್ರವರಿ 15 ರಿಂದ ಭಾರತದಾದ್ಯಂತ ದ್ವಿಚಕ್ರ ವಾಹನಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ವಾಹನಗಳಿಗೂ ಫಾಸ್ಟ್‌ಟ್ಯಾಗ್ ಕಡ್ಡಾಯಗೊಳಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳು ಹಾಗೂ ರಾಜ್ಯ ಹೆದ್ದಾರಿಗಳಲ್ಲಿರುವ ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್ ಮೂಲಕ ಮಾತ್ರ ಟೋಲ್ ಶುಲ್ಕ ಸಂಗ್ರಹಿಸಲಾಗುತ್ತದೆ. ಫಾಸ್ಟ್‌ಟ್ಯಾಗ್ ಹೊಂದಿಲ್ಲದ ವಾಹನಗಳು ದುಪ್ಪಟ್ಟು ಟೋಲ್ ಶುಲ್ಕ ವಿಧಿಸಲಾಗುತ್ತದೆ.

ರಾಷ್ಟ್ರೀಯ ಹೆದ್ದಾರಿ, ಎಕ್ಸ್‌ಪ್ರೆಸ್‌ವೇಗಳ ನಂತರ ನೈಸ್ ರಸ್ತೆಗೂ ಕಾಲಿಡಲಿದೆ ಫಾಸ್ಟ್‌ಟ್ಯಾಗ್

ಫಾಸ್ಟ್‌ಟ್ಯಾಗ್ ಅಳವಡಿಕೆಯಿಂದಾಗಿ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ವಾಹನಗಳು ಕಾಯುವ ಸಮಯವು ಗಣನೀಯವಾಗಿ ಕಡಿಮೆಯಾಗಿದ್ದು, ಪಾರದರ್ಶಕತೆ ಹೆಚ್ಚಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಸುಮಾರು 722 ಟೋಲ್ ಪ್ಲಾಜಾಗಳು ಹಾಗೂ ರಾಜ್ಯ ಹೆದ್ದಾರಿಗಳಲ್ಲಿರುವ 196 ಟೋಲ್ ಪ್ಲಾಜಾಗಳು ಫಾಸ್ಟ್‌ಟ್ಯಾಗ್ ಮೂಲಕ ಟೋಲ್ ಶುಲ್ಕ ವಿಧಿಸುತ್ತವೆ.

ರಾಷ್ಟ್ರೀಯ ಹೆದ್ದಾರಿ, ಎಕ್ಸ್‌ಪ್ರೆಸ್‌ವೇಗಳ ನಂತರ ನೈಸ್ ರಸ್ತೆಗೂ ಕಾಲಿಡಲಿದೆ ಫಾಸ್ಟ್‌ಟ್ಯಾಗ್

ಒಟ್ಟು ಟೋಲ್ ಶುಲ್ಕದಲ್ಲಿ 82% ನಷ್ಟು ಶುಲ್ಕವು ಕಮರ್ಷಿಯಲ್ ವಾಹನಗಳಿಂದ ಬರುತ್ತಿದೆ. ಒಟ್ಟು ಟೋಲ್ ಶುಲ್ಕ ಸಂಗ್ರಹದಲ್ಲಿ ಕಾರುಗಳು 18% ನಷ್ಟು ಕೊಡುಗೆ ನೀಡುತ್ತವೆ. ಫಾಸ್ಟ್‌ಟ್ಯಾಗ್ ಅಳವಡಿಕೆ ಕಡ್ಡಾಯಗೊಳಿಸಿದ ನಂತರ ಟೋಲ್ ಶುಲ್ಕ ಪಾವತಿಸಲು ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚು ಸಮಯ ಕಾಯುವುದು ತಪ್ಪಿದೆ.

ರಾಷ್ಟ್ರೀಯ ಹೆದ್ದಾರಿ, ಎಕ್ಸ್‌ಪ್ರೆಸ್‌ವೇಗಳ ನಂತರ ನೈಸ್ ರಸ್ತೆಗೂ ಕಾಲಿಡಲಿದೆ ಫಾಸ್ಟ್‌ಟ್ಯಾಗ್

ಆದರೆ ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ (ನೈಸ್) ರಸ್ತೆಯಲ್ಲಿ ಸಾಗುವ ವಾಹನ ಸವಾರರು ಈಗಲೂ ಟೋಲ್ ಶುಲ್ಕ ಪಾವತಿಸಲು ಹೆಚ್ಚು ಸಮಯ ಕಾಯುವ ಪರಿಸ್ಥಿತಿ ಇದೆ. ಇದನ್ನು ತಪ್ಪಿಸಲು ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್, ನೈಸ್ ರಸ್ತೆಯಲ್ಲಿ ಸಾಗುವ ವಾಹನಗಳು ಸಹ ಫಾಸ್ಟ್‌ಟ್ಯಾಗ್ ಮೂಲಕ ಟೋಲ್ ಶುಲ್ಕ ಪಾವತಿಸುವ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ.

ರಾಷ್ಟ್ರೀಯ ಹೆದ್ದಾರಿ, ಎಕ್ಸ್‌ಪ್ರೆಸ್‌ವೇಗಳ ನಂತರ ನೈಸ್ ರಸ್ತೆಗೂ ಕಾಲಿಡಲಿದೆ ಫಾಸ್ಟ್‌ಟ್ಯಾಗ್

ಅಂದ ಹಾಗೆ ನೈಸ್ ರಸ್ತೆ ಅತ್ಯಂತ ಜನನಿಬಿಡ ರಸ್ತೆಗಳಲ್ಲಿ ಒಂದಾಗಿದೆ. ನವೆಂಬರ್ ಎರಡನೇ ವಾರದಿಂದ ನೈಸ್ ರಸ್ತೆಯಲ್ಲಿ ಸಾಗುವ ವಾಹನ ಸವಾರರು ಫಾಸ್ಟ್‌ಟ್ಯಾಗ್ ಮೂಲಕವೇ ಟೋಲ್ ಶುಲ್ಕ ಪಾವತಿಸಬಹುದು. ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ ಅಧಿಕಾರಿಗಳು ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿರುವಂತೆ ನೈಸ್ ರಸ್ತೆ ಮೂಲಕ ಎಲ್ಲಾ ವಾಹನಗಳಿಗೆ ಅಧಿಕೃತವಾಗಿ ಫಾಸ್ಟ್‌ಟ್ಯಾಗ್ ಪರಿಚಯಿಸುವ ಮೊದಲು ಅದರ ಸಾಧಕ ಬಾಧಕಗಳನ್ನು ಅಂತಿಮಗೊಳಿಸುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿ, ಎಕ್ಸ್‌ಪ್ರೆಸ್‌ವೇಗಳ ನಂತರ ನೈಸ್ ರಸ್ತೆಗೂ ಕಾಲಿಡಲಿದೆ ಫಾಸ್ಟ್‌ಟ್ಯಾಗ್

ಫಾಸ್ಟ್‌ಟ್ಯಾಗ್‌ ಇಲ್ಲದಿದ್ದರೇ ಟೋಲ್ ಪ್ಲಾಜಾಗಳಲ್ಲಿ ಟೋಲ್ ಶುಲ್ಕ ಪಾವತಿಸಲು ಉದ್ದನೆಯ ಸರತಿ ಸಾಲುಗಳಲ್ಲಿ ಕಾಯಬೇಕಾಗುತ್ತದೆ. ನೈಸ್ ಸಂಸ್ಥೆಯ ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿರುವ ಮಾಹಿತಿಯ ಪ್ರಕಾರ, ಟೋಲ್ ದರಗಳು ಈಗ ಇರುವಂತೆಯೇ ಇರಲಿವೆ. ಆದರೆ ಟೋಲ್ ಶುಲ್ಕ ಪಾವತಿ ವಿಧಾನವು ನಗದು ಅಥವಾ ಫಾಸ್ಟ್‌ಟ್ಯಾಗ್ ಸ್ಮಾರ್ಟ್ ಕಾರ್ಡ್‌ಗಳ ಮೂಲಕ ಇರಲಿದೆ ಎಂದು ತಿಳಿಸಿವೆ.

ರಾಷ್ಟ್ರೀಯ ಹೆದ್ದಾರಿ, ಎಕ್ಸ್‌ಪ್ರೆಸ್‌ವೇಗಳ ನಂತರ ನೈಸ್ ರಸ್ತೆಗೂ ಕಾಲಿಡಲಿದೆ ಫಾಸ್ಟ್‌ಟ್ಯಾಗ್

ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ರಾಜ್ಯ ಸರ್ಕಾರ ಹಾಗೂ ಸಾರಿಗೆ ಅಧಿಕಾರಿಗಳೊಂದಿಗೆ ವಿಸ್ತೃತ ಸಭೆ ನಡೆಸಲಾಗಿದೆ. ನೈಸ್ ರಸ್ತೆಗಳಲ್ಲಿ ಫಾಸ್ಟ್‌ಟ್ಯಾಗ್ ಪರಿಚಯಿಸಲು ಸೆಪ್ಟೆಂಬರ್ 30 ರಂದು ಎಂಒಯುಗೆ ಸಹಿ ಹಾಕಲಾಗಿದೆ. ಭಾರತೀಯ ಹೆದ್ದಾರಿ ನಿರ್ವಹಣಾ ಕಂಪನಿ ಲಿಮಿಟೆಡ್ (IHMCL) ನೊಂದಿಗೆ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ರಾಷ್ಟ್ರೀಯ ಹೆದ್ದಾರಿ, ಎಕ್ಸ್‌ಪ್ರೆಸ್‌ವೇಗಳ ನಂತರ ನೈಸ್ ರಸ್ತೆಗೂ ಕಾಲಿಡಲಿದೆ ಫಾಸ್ಟ್‌ಟ್ಯಾಗ್

ಮಾರ್ಚ್‌ ತಿಂಗಳಿನಲ್ಲಿಯೇ ನೈಸ್ ರಸ್ತೆಯಲ್ಲಿ ಫಾಸ್ಟ್‌ಟ್ಯಾಗ್ ಅನ್ನು ಪರಿಚಯಿಸಬೇಕಾಗಿತ್ತು. ಆದರೆ ಲೋಕೋಪಯೋಗಿ ಇಲಾಖೆ ಪ್ರಕಾರ, ಕಂಪನಿಯು ಒಪ್ಪಂದದ ನಿಯಮಗಳು ಹಾಗೂ ಷರತ್ತುಗಳನ್ನು ಉಲ್ಲಂಘಿಸಿದ್ದರಿಂದ ಅದನ್ನು ಕಾರ್ಯಗತಗೊಳಿಸಲಾಗಿಲ್ಲ. ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳ ನಡುವಿನ ಸಮನ್ವಯದ ಕೊರತೆಯಿಂದಾಗಿಯೂ ಸಮಸ್ಯೆ ಉಂಟಾಗಿತ್ತು ಎಂದು ನೈಸ್ ಕಂಪನಿ ಸಿಬ್ಬಂದಿ ಹೇಳಿದ್ದಾರೆ.

ರಾಷ್ಟ್ರೀಯ ಹೆದ್ದಾರಿ, ಎಕ್ಸ್‌ಪ್ರೆಸ್‌ವೇಗಳ ನಂತರ ನೈಸ್ ರಸ್ತೆಗೂ ಕಾಲಿಡಲಿದೆ ಫಾಸ್ಟ್‌ಟ್ಯಾಗ್

ನೈಸ್ ಯೋಜನೆಯು ರಾಜ್ಯ ಸರ್ಕಾರದ ಯೋಜನೆಯಾಗಿರುವುದರಿಂದ, ಹಲವು ವಿವರಗಳನ್ನು ಪರಿಶೀಲಿಸ ಬೇಕಾಗಿದೆ. ಫಾಸ್ಟ್‌ಟ್ಯಾಗ್ ಮೂಲಕ ಪಾವತಿಸಿದ ಹಣವನ್ನು ರಾಷ್ಟ್ರೀಯ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ (ಎನ್‌ಇಟಿಸಿ) ವ್ಯವಸ್ಥೆಯ ಮೂಲಕ ಕಂಪನಿಗೆ ನೀಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಗಮನಿಸಿ: ಈ ಲೇಖನದಲ್ಲಿರುವ ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Nice road soon to get fastag based toll plazas details
Story first published: Tuesday, November 9, 2021, 12:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X