ಬಿಡುಗಡೆಯಾಗಲಿರುವ ಹೊಸ ಜನಪ್ರಿಯ ಟಾಟಾ ಕಾರುಗಳಿವು

ಟಾಟಾ ಮೋಟಾರ್ಸ್ ಕಂಪನಿಯು ಮುಂದಿನ ತಿಂಗಳುಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ನಾಲ್ಕು ಮಾದರಿಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಟಾಟಾ ಮೋಟಾರ್ಸ್ ಕಂಪನಿ ತನ್ನ ಹೊಸ ಗ್ರಾವಿಟಾಸ್, ಆಲ್‌ಟ್ರೊಜ್ ಟರ್ಬೋ ಪೆಟ್ರೋಲ್, ಹ್ಯಾರಿಯರ್ ಪೆಟ್ರೋಲ್ ಮತ್ತು ಟಾಟಾ ಹೆಚ್‍ಬಿಎಕ್ಸ್ ಮಾದರಿಗಳನ್ನು ಬಿಡುಗಡೆಗೊಳಿಸಲಿದೆ.

ಬಿಡುಗಡೆಯಾಗಲಿರುವ ಹೊಸ ಜನಪ್ರಿಯ ಟಾಟಾ ಕಾರುಗಳಿವು

ಟಾಟಾ ಗ್ರಾವಿಟಾಸ್

ಟಾಟಾ ಕಂಪನಿಯು ಬಹುನಿರೀಕ್ಷಿತ ಗ್ರಾವಿಟಾಸ್ ಎಸ್‍ಯುವಿಯನ್ನು ಈ ವರ್ಷದ ಹಬ್ಬದ ಸೀಸನ್ ನಲ್ಲಿ ಬಿಡುಗಡೆಗೊಳಿಸಲಿದೆ. ಮುಂದಿನ ತಿಂಗಳಲ್ಲಿ ಬಿಡುಗಡೆಯಾಗಲಿರುವ ಎಂಜಿ ಹೆಕ್ಟರ್ ಪ್ಲಸ್ ಎಸ್‍ಯುವಿಗೆ ಈ ಗ್ರಾವಿಟಾಸ್ ಪೈಪೋಟಿ ನೀಡುತ್ತದೆ. ಟಾಟಾ ಗ್ರಾವಿಟಾಸ್ ಎಸ್‍ಯುವಿಯು ಆರು ಮತ್ತು ಏಳು ಸೀಟುಗಳ ಆಯ್ಕೆಗಳಲ್ಲಿ ಬಿಡುಗಡೆಯಾಗಲಿದೆ. ಹೊಸ ಟಾಟಾ ಗ್ರಾವಿಟಾಸ್ ಪ್ರೀಮಿಯಂ ಎಸ್‍ಯುವಿಯಾಗಿದೆ.

ಬಿಡುಗಡೆಯಾಗಲಿರುವ ಹೊಸ ಜನಪ್ರಿಯ ಟಾಟಾ ಕಾರುಗಳಿವು

ಹೊಸ ಟಾಟಾ ಗ್ರಾವಿಟಾಸ್ ಎಸ್‌ಯುವಿಯಲ್ಲಿ 2.0-ಲೀಟರ್ ಕ್ರೆಯೊಟೆಕ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಿದೆ. ಈ ಹೊಸ ಟಾಟಾ ಗ್ರಾವಿಟಾಸ್ ಎಸ್‍ಯುವಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಫೋರ್ಡ್ ಎಂಡೀವರ್, ಮಹೀಂದ್ರಾ ಅಲ್ಟುರಾಸ್ ಜಿ4 ಮತ್ತು ಟೊಯೊಟಾ ಫಾರ್ಚೂನರ್ ಎಸ್‍ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಬಿಡುಗಡೆಯಾಗಲಿರುವ ಹೊಸ ಜನಪ್ರಿಯ ಟಾಟಾ ಕಾರುಗಳಿವು

ಟಾಟಾ ಆಲ್‌ಟ್ರೊಜ್ ಟರ್ಬೋ-ಪ್ರೆಟ್ರೋಲ್

ಈ ವರ್ಷದ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಆಲ್‌ಟ್ರೊಜ್ ಕಾರನ್ನು ಬಿಡುಗಡೆಗೊಳಿಸಲಾಗಿತ್ತು. ಇದೀಗ ಟಾಟಾ ಆಲ್‌ಟ್ರೊಜ್ ಟರ್ಬೋ-ಪ್ರೆಟ್ರೋಲ್ ಆವೃತ್ತಿಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ಟಾಟಾ ಆಲ್‌ಟ್ರೊಜ್ ಟರ್ಬೋ-ಪ್ರೆಟ್ರೋಲ್ ಆವೃತ್ತಿಯ ಬಿಡುಗಡೆಯ ದಿನಾಂಕ ಇನ್ನು ಕೂಡ ಬಹಿರಂಗವಾಗಿಲ್ಲ.

ಬಿಡುಗಡೆಯಾಗಲಿರುವ ಹೊಸ ಜನಪ್ರಿಯ ಟಾಟಾ ಕಾರುಗಳಿವು

ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಟರ್ಬೊ-ಪೆಟ್ರೋಲ್ ಆವೃತ್ತಿಯು 1.2 ಎಲ್ ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 99 ಬಿಹೆಚ್‍ಪಿ ಪವರ್ ಮತ್ತು 141 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅಥವಾ ಡ್ಯುಯಲ್-ಕ್ಲಚ್ ಆಟೋಮಾಟಿಕ್ಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಬಿಡುಗಡೆಯಾಗಲಿರುವ ಹೊಸ ಜನಪ್ರಿಯ ಟಾಟಾ ಕಾರುಗಳಿವು

ಟಾಟಾ ಹ್ಯಾರಿಯರ್ ಪೆಟ್ರೋಲ್

ಟಾಟಾ ಕಂಪನಿಯು ಹೊಸ ಟರ್ಬೂ ಪೆಟ್ರೋಲ್ ಆವೃತ್ತಿಯ ಟಾಟಾ ಹ್ಯಾರಿಯರ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲಿದೆ. ಈ ಹೊಸ ಟಾಟಾ ಹ್ಯಾರಿಯರ್ ಎಸ್‍ಯುವಿಯಲ್ಲಿ 1.5 ಎಲ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಲಿದೆ.

ಬಿಡುಗಡೆಯಾಗಲಿರುವ ಹೊಸ ಜನಪ್ರಿಯ ಟಾಟಾ ಕಾರುಗಳಿವು

ಈ ಎಂಜಿನ್ 150 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ನೀಡುವ ಸಾಧ್ಯತೆಯಿದೆ. ಈ ಟಾಟಾ ಹ್ಯಾರಿಯರ್ ಪೆಟ್ರೋಲ್ ಆವೃತ್ತಿಯು ಈ ವರ್ಷದ ಹಬ್ಬದ ಸೀಸನ್ ನಲ್ಲಿ ಬಿಡುಗಡೆಗೊಳಿಸಲಾಗಿದೆ.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಬಿಡುಗಡೆಯಾಗಲಿರುವ ಹೊಸ ಜನಪ್ರಿಯ ಟಾಟಾ ಕಾರುಗಳಿವು

ಟಾಟಾ ಹೆಚ್‍ಬಿಎಕ್ಸ್ ಮಿನಿ ಎಸ್‍ಯುವಿ

ಈ ಟಾಟಾ ಹೆಚ್‍ಬಿಎಕ್ಸ್ ಮಿನಿ ಎಸ್‍ಯುವಿಯು ಈ ವರ್ಷದ ಅಂತ್ಯದಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಲಿದೆ. ಟಾಟಾ ಹೆಚ್‍‍ಬಿಎಕ್ಸ್ ಮಿನಿ ಎಸ್‍ಯುವಿಯು ಆಲ್‍‍ಟ್ರೊಜ್‍‍ನಂತೆಯೇ ಬ್ರ್ಯಾಂಡ್‍‍ನ ಆಲ್ಫಾ ಪ್ಲಾಟ್‍ಫಾರ್ಮ್ ಅನ್ನು ಆಧರಿಸಿದೆ.

ಬಿಡುಗಡೆಯಾಗಲಿರುವ ಹೊಸ ಜನಪ್ರಿಯ ಟಾಟಾ ಕಾರುಗಳಿವು

ಈ ಹೆಚ್‍ಬಿಎಕ್ಸ್ ಮಿನಿ ಎಸ್‍ಯುವಿಯಲ್ಲಿ 1.2 ಎಲ್, 3-ಸಿಲಿಂಡರ್ ರೆವೊಟ್ರಾನ್ ಪೆಟ್ರೋಲ್ ಎಂಜಿನ್‌ ಅನ್ನು ಅಳವಡಿಸಲಿದೆ. ಈ ಎಂಜಿನ್ 85 ಬಿಹೆಚ್‍ಪಿ ಪವರ್ ಮತ್ತು 110 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಮ್ಯಾನುಯಲ್ ಮತ್ತು ಎಎಂಟಿ ಗೇರ್ ಬಾಕ್ಸ್ ಆಯ್ಕೆಗಳನ್ನು ನೀಡಬಹುದು.

Article Published On: Tuesday, June 23, 2020, 12:53 [IST]
English summary
4 New Tata Cars Ready For Launch – All Details Here. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+