ಹೊಸ ಸಿಟಿ ಕಾರು ಬಿಡುಗಡೆಯ ನಂತರವೂ ಹಳೆಯ ಮಾದರಿಯ ಮಾರಾಟ ಮುಂದುವರಿಸಿದ ಹೋಂಡಾ
ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ಕಳೆದ ವಾರವಷ್ಟೇ ತನ್ನ ಹೊಸ ತಲೆಮಾರಿನ ಸಿಟಿ ಸೆಡಾನ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರಿನ ಜೊತೆ-ಜೊತೆಗೆ ಹಳೆಯ ತಲೆಮಾರಿನ ಸಿಟಿ ಮಾರಾಟವನ್ನು ಸಹ ಹೋಂಡಾ ಕಂಪನಿಯು ಮುಂದುವರಿಸಿದೆ.

ಹೋಂಡಾ ಕಂಪನಿಯು ಸದ್ಯ ಐದನೇ ತಲೆಮಾರಿನ ವೈಶಿಷ್ಟ್ಯತೆಯೊಂದಿಗೆ ಸಿಟಿ ಸೆಡಾನ್ ಕಾರು ಮಾದರಿಯನ್ನು ಬಿಡುಗಡೆ ಮಾಡಿದ್ದು, ನಾಲ್ಕನೇ ತಲೆಮಾರಿನ ಸಿಟಿ ಕಾರಿನ ಸ್ಟಾಕ್ ಮುಕ್ತಾಯಗೊಳ್ಳುವ ತನಕ ಮಾರಾಟ ಹೊಸ ಕಾರಿನ ಜೊತೆ ಜೊತೆಗೆ ಹಳೆಯ ಮಾದರಿಯ ಮಾದರಿಯನ್ನು ಸಹ ಮಾರಾಟವನ್ನು ಸಹ ಮುಂದುವರಿಸಲಿದೆ. ನಾಲ್ಕನೇ ತಲೆಮಾರಿನ ಸಿಟಿ ಕಾರು ಕೇವಲ ಪೆಟ್ರೋಲ್ ಆವೃತ್ತಿಯಲ್ಲಿ ಮಾತ್ರವೇ ಮಾರಾಟಕ್ಕಿದ್ದು, ಬಿಎಸ್-6 ಎಂಜಿನ್ ಮಾದರಿಯೊಂದಿಗೆ ಮಾರಾಟವಾಗುತ್ತಿದೆ.

ಹೊಸ ತಲೆಮಾರಿನ ಸಿಟಿ ಸೆಡಾನ್ ಮಾದರಿಯಲ್ಲಿ ಮಾತ್ರವೇ ಪೆಟ್ರೋಲ್ ಮತ್ತು ಡೀಸೆಲ್ ಎರಡು ಆವೃತ್ತಿಗಳು ಖರೀದಿ ಲಭ್ಯವಿದ್ದು, ನಾಲ್ಕನೇ ತಲೆಮಾರಿನ ಸಿಟಿ ಪೆಟ್ರೋಲ್ ಮಾದರಿಯು ಕೇವಲ ಸ್ಟಾಕ್ ಮುಕ್ತಾಯದ ತನಕ ಮಾತ್ರವೇ ಖರೀದಿಗೆ ಲಭ್ಯವಿರಲಿದೆ.

ಬೆಲೆ ವಿಚಾರದಲ್ಲಿ ಎರಡು ತಲೆಮಾರಿನ ಕಾರು ಮಾದರಿಗಳಲ್ಲಿ ಅಷ್ಟಾಗಿ ದೊಡ್ಡ ವ್ಯತ್ಯಾಸವಿಲ್ಲವಾದರೂ ಹಳೆಯ ತಲೆಮಾರಿನ ಸಿಟಿ ಕಾರಿಗಿಂತ ಹೊಸ ತಲೆಮಾರಿನ ಸಿಟಿ ಕಾರು ರೂ. 44 ಸಾವಿರದಷ್ಟು ಮಾತ್ರ ಹೆಚ್ಚುವರಿ ಬೆಲೆ ಪಡೆದುಕೊಂಡಿದೆ.

ಹೀಗಾಗಿ ಹಳೆಯ ಮಾದರಿಯ ಸಿಟಿ ಸೆಡಾನ್ ಕಾರಿನ ಸ್ಟಾಕ್ ಮುಕ್ತಾಯಗೊಳಿಸಲು ರೂ. 1.60 ಲಕ್ಷದಷ್ಟು ಆಫರ್ ನೀಡುತ್ತಿರುವ ಹೋಂಡಾ ಕಂಪನಿಯು ಶೀಘ್ರದಲ್ಲೇ ಹಳೆಯ ತಲೆಮಾರಿನ ಸಿಟಿ ಸ್ಟಾಕ್ ಪ್ರಮಾಣವನ್ನು ಮುಕ್ತಾಯಗೊಳಿಸಲಿದ್ದು, ಹೊಸ ತಲೆಮಾರಿನ ಮೇಲೆ ಹೆಚ್ಚು ಗಮನಹರಿಸಲಿದೆ.

ಇನ್ನು 5ನೇ ತಲೆಮಾರಿನ ಸಿಟಿ ಕಾರು ವಿ, ವಿಎಕ್ಸ್, ಜೆಡ್ಎಕ್ಸ್ ಆವೃತ್ತಿಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದ್ದು, ಹೊಸ ಕಾರು ಸಿ ಸೆಗ್ಮೆಂಟ್ ಸೆಡಾನ್ ಕಾರುಗಳಲ್ಲೇ ಅತ್ಯುತ್ತಮ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರು ಆರಂಭಿಕವಾಗಿ ರೂ. 10.90 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 14.65 ಲಕ್ಷದೊಂದಿಗೆ ಸೆಡಾನ್ ಪ್ರಿಯರ ಆಕರ್ಷಣೆಗೆ ಕಾರಣವಾಗಿದ್ದು, ಕಾರಿನ ವಿನ್ಯಾಸದಲ್ಲಿ ಈ ಬಾರಿ ಸಾಕಷ್ಟು ಬದಲಾವಣೆಗೊಳಿಸಲಾಗಿದೆ.

ಹೊಸ ಸಿಟಿ ಕಾರಿನಲ್ಲಿ ಈ ಬಾರಿ ಡಬಲ್ ಓವರ್‌ಹೆಡ್ ಕ್ಯಾಮ್ ಸೆಟಪ್‌ನೊಂದಿಗೆ ಹೊಸದಾಗಿ 1.5-ಲೀಟರ್ ಪೆಟ್ರೋಲ್ ಎಂಜಿನ್(ಎಲ್15ಬಿ) ನೀಡಲಾಗುತ್ತಿದ್ದು, ಈ ಹೊಸ ಎಂಜಿನ್ 120-ಬಿಎಚ್‌ಪಿ ಮತ್ತು 145-ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.
MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಹಾಗೆಯೇ ಡೀಸೆಲ್ ಮಾದರಿಯು 1.5-ಲೀಟರ್ 100-ಬಿಎಚ್‌ಪಿ, 200-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, ಸ್ಟ್ಯಾಂಡರ್ಡ್ ಆಗಿ ಎರಡು ಮಾದರಿಯಲ್ಲೂ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಪೆಟ್ರೋಲ್ ಹೈ ಎಂಡ್ ಮಾದರಿಯಲ್ಲಿ ಮಾತ್ರ 7-ಸ್ಪೀಡ್ ಸಿವಿಟಿ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದ್ದು, ಪೆಟ್ರೋಲ್ ಮಾದರಿಯು ಪ್ರತಿ ಲೀಟರ್‌ಗೆ 17ರಿಂದ 18 ಕಿ.ಮೀ ಮತ್ತು ಡೀಸೆಲ್ ಮಾದರಿಯು ಪ್ರತಿ ಲೀಟರ್‌ಗೆ 22ರಿಂದ 23 ಕಿ.ಮೀ ಇಂಧನ ದಕ್ಷತೆಯನ್ನು ಹೊಂದಿರಲಿದೆ.
MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಸಿ-ಸೆಗ್ಮೆಂಟ್ ಸೆಡಾನ್ ಕಾರಿನಲ್ಲೇ ಅತಿಹೆಚ್ಚು ಸುರಕ್ಷಾ ಸೌಲಭ್ಯಗಳನ್ನು ಹೊಂದಿರುವ ಸಿಟಿ ಕಾರಿನಲ್ಲಿ ಈ ಬಾರಿ ಮತ್ತಷ್ಟು ಸುಧಾರಿತ ಸುರಕ್ಷಾ ಅಂಶಗಳನ್ನು ಹೊಂದಿದ್ದು, ಹೊಸ ಕಾರಿನಲ್ಲಿ ಹ್ಯಾಂಡ್‌ಲಿಂಗ್ ಅಸಿಸ್ಟ್, ಹಿಲ್ ಸ್ಟಾರ್ಟ್, 6-ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆಗೆ ಇಬಿಡಿ, ವೆಹಿಕಲ್ ಸ್ಟ್ಯಾಬಿಲಿಟಿ ಅಸಿಸ್ಟ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ರಿಯರ್ ವ್ಯೂ ಕ್ಯಾಮೆರಾ ಮತ್ತು 16-ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ಹ್ ಸೇರಿದಂತೆ ಹಲವಾರು ಹೊಸ ಸೌಲಭ್ಯಗಳಿವೆ.


Click it and Unblock the Notifications








