ಭಾರತದಲ್ಲಿ ಹೊಸ ಯೋಜನೆಗಾಗಿ ರೂ. 7 ಸಾವಿರ ಕೋಟಿ ಹೂಡಿಕೆ ಮಾಡಿದ ಗ್ರೇಟ್ ವಾಲ್ ಮೋಟಾರ್ಸ್

ಚೀನಿ ಜನಪ್ರಿಯ ಕಾರು ಉತ್ಪಾದನಾ ಕಂಪನಿ ಗ್ರೇಟ್ ವಾಲ್ ಮೋಟಾರ್ಸ್ ತನ್ನ ಅಂಗಸಂಸ್ಥೆಯಾದ ಹವಾಲ್ ಕಾರುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಅಂತಿಮ ಹಂತದ ಸಿದ್ದತೆಯಲ್ಲಿದ್ದು, ಹೊಸ ಯೋಜನೆಗಾಗಿ ಭಾರತದಲ್ಲಿ ಭಾರೀ ಪ್ರಮಾಣದ ಹೂಡಿಕೆಗೆ ಅಸ್ತು ಎಂದಿದೆ.

ಹೊಸ ಯೋಜನೆಗಾಗಿ ರೂ. 7 ಸಾವಿರ ಕೋಟಿ ಹೂಡಿಕೆ ಮಾಡಿದ ಜಿಡಬ್ಲ್ಯುಎಂ

ಗ್ರೇಟ್ ವಾಲ್ ಮೋಟಾರ್ಸ್ ಕಂಪನಿಯು ಮಧ್ಯಮ ಗಾತ್ರದ ಐಷಾರಾಮಿ ಎಸ್‌ಯುವಿ ಆವೃತ್ತಿಯಾಗಿರುವ ಹವಾಲ್ ಹೊಸ ಕಾರುಗಳೊಂದಿಗೆ ದೇಶಿಯ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಎಸ್‌ಯುವಿ, ಸೆಡಾನ್, ಎಂಪಿವಿ ಮತ್ತು ಎಲೆಕ್ಟ್ರಿಕ್ ಕಾರುಗಳನ್ನು ಅನಾವರಣಗೊಳಿಸಿ ಬಿಡುಗಡೆ ಮಾಡುತ್ತಿದೆ.

ಹೊಸ ಯೋಜನೆಗಾಗಿ ರೂ. 7 ಸಾವಿರ ಕೋಟಿ ಹೂಡಿಕೆ ಮಾಡಿದ ಜಿಡಬ್ಲ್ಯುಎಂ

ಇದಕ್ಕಾಗಿ ಅಂತಿಮ ಹಂತಮ ಸಿದ್ದತೆಯಲ್ಲಿರುವ ಗ್ರೇಟ್ ವಾಲ್ ಮೋಟಾರ್ಸ್ ಕಂಪನಿಯು ಮೊದಲ ಹಂತದಲ್ಲಿ 1 ಬಿಲಿಯನ್ ಯುಎಸ್‌ಡಿ(ರೂ. 7 ಸಾವಿರ ಕೋಟಿ) ಹೂಡಿಕೆಗೆ ಒಪ್ಪಿಗೆ ಸೂಚಿಸಿದ್ದು, ಮಹಾರಾಷ್ಟ್ರದ ತಲೆಗಾಂವ್‌ನಲ್ಲಿ ಕಾರು ಉತ್ಪಾದನಾ ಘಟಕವನ್ನು ಆರಂಭಿಸುತ್ತಿದೆ.

ಹೊಸ ಯೋಜನೆಗಾಗಿ ರೂ. 7 ಸಾವಿರ ಕೋಟಿ ಹೂಡಿಕೆ ಮಾಡಿದ ಜಿಡಬ್ಲ್ಯುಎಂ

ಇದರ ಜೊತಗೆ ನಮ್ಮ ಬೆಂಗಳೂರಿನಲ್ಲಿ ಆರ್‌ಡಿ(ಸಂಶೋಧನೆ ಮತ್ತು ಅಭಿವೃದ್ದಿ) ಕೇಂದ್ರವನ್ನು ತೆರೆಯಲು ಯೋಜನೆ ರೂಪಿಸಿದ್ದು, ಮೊದಲ ಹಂತದಲ್ಲಿ ಸುಮಾರು 3 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಹೊಸ ಯೋಜನೆಗಾಗಿ ರೂ. 7 ಸಾವಿರ ಕೋಟಿ ಹೂಡಿಕೆ ಮಾಡಿದ ಜಿಡಬ್ಲ್ಯುಎಂ

ಸದ್ಯ ಮೊದಲ ಹಂತದಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರುಗಳ ರೋಡ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ನಡೆಸುತ್ತಿರುವ ಗ್ರೇಟ್ ವಾಲ್ ಮೋಟಾರ್ಸ್ ಕಂಪನಿಯು ಈ ಹಿಂದಿನ ಜನರಲ್ ಮೋಟಾರ್ಸ್(ಜಿಎಂ) ಕಂಪನಿಯ ಹಳೆಯ ಕಾರು ಉತ್ಪಾದನಾ ಘಟಕವನ್ನೇ ಉನ್ನತೀಕರಿಸಿ ಕಾರು ಉತ್ಪಾದನೆ ಮಾಡುತ್ತಿದೆ.

ಹೊಸ ಯೋಜನೆಗಾಗಿ ರೂ. 7 ಸಾವಿರ ಕೋಟಿ ಹೂಡಿಕೆ ಮಾಡಿದ ಜಿಡಬ್ಲ್ಯುಎಂ

ಭಾರತದಿಂದ ಜನರಲ್ ಮೋಟಾರ್ಸ್ ಕಂಪನಿಯು ಹೊರ ಹೋದ ನಂತರ ಖಾಲಿ ಉಳಿದಿರುವ ಕಾರು ಉತ್ಪಾದನಾ ಘಟಕವನ್ನೇ ಸ್ವಾಧಿನಪಡಿಸಿಕೊಂಡಿರುವ ಗ್ರೇಟ್ ವಾಲ್ ಮೋಟಾರ್ಸ್ ಕಂಪನಿಯು ಮಹಾರಾಷ್ಟ್ರ ಸರ್ಕಾರದೊಂದಿಗೆ ಹಲವು ಒಪ್ಪಂದಗಳೊಂದಿಗೆ ಸಹಿ ಹಾಕಿದೆ.

MOST READ: ಭಾರತದ ಬಹುನೀರಿಕ್ಷಿತ ಎಂಜಿ ಜಿ10 ಹೊಸ ಆವೃತ್ತಿ ಚೀನಾದಲ್ಲಿ ಬಿಡುಗಡೆ

ಹೊಸ ಯೋಜನೆಗಾಗಿ ರೂ. 7 ಸಾವಿರ ಕೋಟಿ ಹೂಡಿಕೆ ಮಾಡಿದ ಜಿಡಬ್ಲ್ಯುಎಂ

ಹೊಸ ಒಪ್ಪಂದದ ಪ್ರಕಾರ, ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಅವಕಾಶ ಮತ್ತು ಸೂಕ್ತ ಮೂಲಭೂತ ಸೌಕರ್ಯಗಳಿಗಾಗಿ ಪರಸ್ಪರ ಒಪ್ಪಿಗೆ ಸೂಚಿಸಲಾಗಿದ್ದು, ಗ್ರೇಟ್ ವಾಲ್ ನಿರ್ಮಾಣದ ಹೊಸ ಕಾರುಗಳು 2021ರ ಮಧ್ಯಂತರದಲ್ಲಿ ಅಧಿಕೃತವಾಗಿ ರಸ್ತೆಗಿಳಿಯಲಿವೆ.

ಹೊಸ ಯೋಜನೆಗಾಗಿ ರೂ. 7 ಸಾವಿರ ಕೋಟಿ ಹೂಡಿಕೆ ಮಾಡಿದ ಜಿಡಬ್ಲ್ಯುಎಂ

2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಲಾದ ಎಫ್5, ಎಫ್7,ಎಫ್7 ಎಕ್ಸ್ ಮತ್ತು ಹೆಚ್9 ಎಸ್‌ಯುವಿ ಕಾರುಗಳಲ್ಲಿ ಎಫ್5 ಮತ್ತು ಎಫ್7 ಕಾರುಗಳು ಮೊದಲ ಹಂತದಲ್ಲಿ ಬಿಡುಗಡೆಯಾಗಲಿವೆಯೆಂತೆ.

MOST READ: ಲಾಕ್‌ಡೌನ್ ವಿನಾಯ್ತಿ ನಂತರ ಕರ್ನಾಟಕದಲ್ಲೇ ಅತಿ ಹೆಚ್ಚು ಕಾರು ಮಾರಾಟ ದಾಖಲು

ಹೊಸ ಯೋಜನೆಗಾಗಿ ರೂ. 7 ಸಾವಿರ ಕೋಟಿ ಹೂಡಿಕೆ ಮಾಡಿದ ಜಿಡಬ್ಲ್ಯುಎಂ

ಎಫ್5 ಮತ್ತು ಎಫ್7 ಮಾದರಿಯನ್ನು ಮಧ್ಯಮ ಶ್ರೇಣಿಯ ಎಸ್‌ಯುವಿ ಆವೃತ್ತಿಯಾಗಿ ಮತ್ತು ಎಫ್7 ಎಕ್ಸ್ ಕೂಪೆ ಆವೃತ್ತಿಯನ್ನು ಮಧ್ಯಮ ಕ್ರಮಾಂಕದ ಐಷಾರಾಮಿ ಕಾರು ಮಾದರಿಯಾಗಿ ಬಿಡುಗಡೆಗೊಳಿಸಲಿದೆ.

ಹೊಸ ಯೋಜನೆಗಾಗಿ ರೂ. 7 ಸಾವಿರ ಕೋಟಿ ಹೂಡಿಕೆ ಮಾಡಿದ ಜಿಡಬ್ಲ್ಯುಎಂ

ಎಫ್5 ಮಾದರಿಯು ಮಧ್ಯಮ ಕ್ರಮಾಂಕರ ಕಂಪ್ಯಾಕ್ಟ್ ಎಸ್‌ಯುವಿ ಆವೃತ್ತಿಗಳಾದ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್, ಟಾಟಾ ಹ್ಯಾರಿಯರ್, ಎಂಜಿ ಹೆಕ್ಟರ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದ್ದು, ಜೀಪ್ ಕಂಪಾಸ್ ಕಾರಿಗಿಂತಲೂ ಹೆಚ್ಚು ವೀಲ್ಹ್‌ಬೆಸ್ ಪಡೆದುಕೊಂಡಿದೆ.

MOST READ: ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ದೊರೆಯಲಿದೆ 5 ಲಕ್ಷ ಸಬ್ಸಿಡಿ

ಹೊಸ ಯೋಜನೆಗಾಗಿ ರೂ. 7 ಸಾವಿರ ಕೋಟಿ ಹೂಡಿಕೆ ಮಾಡಿದ ಜಿಡಬ್ಲ್ಯುಎಂ

ಇದರೊಂದಿಗೆ ಐಷಾರಾಮಿ ಫೀಚರ್ಸ್ ಹೊಂದಿರುವ ಕಾರು ಮಾದರಿಗಳನ್ನು ಸಹ ಬಿಡುಗಡೆ ಮಾಡಲಿರುವ ಗ್ರೇಟ್ ವಾಲ್ ಮೋಟಾರ್ಸ್ ಕಂಪನಿಯು ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಭಾರೀ ಬದಲಾವಣೆಯ ನೀರಿಕ್ಷೆಯಲ್ಲಿದ್ದು, ಮುಂಬರುವ ದಿನಗಳಲ್ಲಿ ಹೊಸ ಕಾರುಗಳ ಕುರಿತಾಗಿ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ.

More from DriveSpark

Article Published On: Tuesday, June 16, 2020, 21:14 [IST]
English summary
Great Wall Motors Confirms USD 1 Billion Investment Plan For India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+