ಭಾರತದ ಬಹುನೀರಿಕ್ಷಿತ ಎಂಜಿ ಜಿ10 ಹೊಸ ಆವೃತ್ತಿ ಚೀನಾದಲ್ಲಿ ಬಿಡುಗಡೆ
ಚೀನಾ ಜನಪ್ರಿಯ ಕಾರು ಉತ್ಪಾದನಾ ಕಂಪನಿಯಾದ ಸೈಕ್ ಅಂಗಸಂಸ್ಥೆಯಾದ ಎಂಜಿ ಮೋಟಾರ್ ಕಂಪನಿಯು ತನ್ನ ಬಹುನೀರಿಕ್ಷಿತ ಜಿ10 ಎಂಪಿವಿ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದ್ದು, ಹೊಸ ಕಾರು ಭಾರತದಲ್ಲಿ ಬಿಡುಗಡೆಗೂ ಮುನ್ನ ಚೀನಿ ಮಾರುಕಟ್ಟೆಯಲ್ಲಿ ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಗೊಂಡಿದೆ.

ಚೀನಿ ಮಾರುಕಟ್ಟೆಯಲ್ಲಿ ಸೈಕ್ ಕಂಪನಿಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮ್ಯಾಕ್ಸಸ್ ಕಂಪನಿಯು ಜಿ10 ಎಂಪಿವಿ ಕಾರನ್ನು ಉತ್ಪಾದನೆ ಮಾಡುತ್ತಿದ್ದು, ಸೈಕ್ ಕಂಪನಿಯು ಮ್ಯಾಕ್ಸಸ್ ಕಾರುಗಳನ್ನೇ ಇದೀಗ ಭಾರತದಲ್ಲಿ ಮತ್ತೊಂದು ಅಧೀನ ಕಂಪನಿಯಾಗಿರುವ ಎಂಜಿ ಹೆಸರಿನಲ್ಲಿ ಬಿಡುಗಡೆ ಮಾಡುತ್ತಿದೆ. ಜಿ10 ಎಂಪಿವಿ ಕಾರು ಚೀನಿ, ಮಲೇಷಿಯಾ, ಆಸ್ಟ್ರೇಲಿಯಾ ಮಾರುಕಟ್ಟೆಗಳಲ್ಲಿ ಈಗಾಗಲೇ ಜನಪ್ರಿಯ ಕಾರು ಮಾದರಿಯಾಗಿದ್ದು, ಭಾರತದಲ್ಲಿ ಟೊಯೊಟಾ ಇನೋವಾ ಕ್ರಿಸ್ಟಾ ಮತ್ತು ಕಿಯಾ ಕಾರ್ನಿವಾಲ್ ಎಂಪಿವಿ ನಡುವಿನ ಸ್ಥಾನದಲ್ಲಿ ಮಾರಾಟಗೊಳ್ಳಲಿದೆ.

ಗ್ರಾಹಕರ ಬೇಡಿಕೆಯೆಂತೆ ಜಿ10 ಕಾರು 7 ಸೀಟರ್, 8 ಸೀಟರ್ ಮತ್ತು 10 ಸೀಟರ್ ಮಾದರಿಯಲ್ಲಿ ಮಾರಾಟವಾಗುತ್ತಿದ್ದು, ಭಾರತದಲ್ಲಿ ಹೊಸ ಕಾರು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 7 ಸೀಟರ್, 8 ಸೀಟರ್ ಮತ್ತು 9 ಸೀಟರ್ ಮಾದರಿಯೊಂದಿಗೆ ಮಾತ್ರವೇ ಮಾರಾಟವಾಗುವ ನೀರಿಕ್ಷೆಯಲ್ಲಿದೆ.

ಇದರಲ್ಲಿ ಹೈ ಎಂಡ್ ಆವೃತ್ತಿಯು 2+2+3 ಮಾದರಿಯಲ್ಲಿ 7 ಸೀಟರ್ ಸೌಲಭ್ಯವನ್ನು ಹೊಂದಿದ್ದು, ಮಧ್ಯದಲ್ಲಿರುವ ಕ್ಯಾಪ್ಟನ್ ಸೀಟು ಹಲವು ವಿಶೇಷತೆಗಳೊಂದಿಗೆ ಬರಲಿದೆ. ಹೊಸ ಕಾರಿನಲ್ಲಿ ಕಿಯಾ ಕಾರ್ನಿವಾಲ್ ಮಾದರಿಯಲ್ಲೇ ವಿಶೇಷ ತಂತ್ರಜ್ಞಾನ ಪ್ರೇರಿತ ಆಸನ ಸೌಲಭ್ಯ ಪಡೆದುಕೊಳ್ಳಲಿದೆ.

ಹೊಸ ಕಾರಿನಲ್ಲಿ ಅರಾಮದಾಯಕವಾಗಿ ಕುಳಿತುಕೊಳ್ಳಬಹುದಲ್ಲದೇ ಕಾಲುಗಳನ್ನು ಚಾಚಿಕೊಳ್ಳುವಂತೆ ವಿನ್ಯಾಸಗೊಳಿಸಿದ್ದು, ಕ್ಯಾಪ್ಟನ್ ಸೀಟ್ ಮುಂಭಾಗದಲ್ಲಿ ಎಂಟರ್‌ಟೈನ್‌ಮೆಂಟ್ ಡಿಸ್‌ಪ್ಲೇ, ವೆಂಟಿಲೆಟೆಡ್ ಲೆದರ್ ಹೊದಿಕೆ ಜೊತೆಗೆ ಹಿಂಭಾಗದ ಪ್ರಯಾಣಿಕರಿಗೂ ಸಾಕಷ್ಟು ಸ್ಥಳಾವಕಾಶ ನೀಡಲಾಗಿದೆ.

ಇನ್ನು 8 ಸೀಟರ್ ಆವೃತ್ತಿಯು 2+3+3 ಮಾದರಿಯಲ್ಲಿ ಆಸನ ಸೌಲಭ್ಯ ಹೊಂದಿದ್ದು, ಮಧ್ಯದಲ್ಲಿರುವ ಆಸನಗಳು ಪ್ರತ್ಯೇಕ ನಿಯಂತ್ರಣ ಹೊಂದಿವೆ. ಮುಂಭಾದಲ್ಲಿರುವ ಆಸನ ಮಾದರಿಯಲ್ಲೇ ಹಿಂಭಾಗದ ಪ್ರಯಾಣಿಕರಿಗೂ ಸಾಕಷ್ಟು ಸ್ಥಳಾವಕಾಶ ನೀಡಲಾಗಿದ್ದು, 8 ಜನ ಪ್ರಯಾಣಿಕರು ಯಾವುದೇ ಕಿರಿಕಿರಿಯಲ್ಲದೇ ಅರಾಮವಾಗಿ ಪ್ರಯಾಣಿಸಬಹುದಾಗಿದೆ.
MOST READ: ಲಾಕ್‌ಡೌನ್ ಸಂಕಷ್ಟ: ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಉದ್ಯಮ ಆರಂಭಿಸಿದ ಫೋಕ್ಸ್‌ವ್ಯಾಗನ್

ಹಾಗೆಯೇ 9 ಸೀಟರ್ ಮಾದರಿಯು 2+2+2+3 ಆಸನ ಸೌಲಭ್ಯವನ್ನು ಹೊಂದಿರಲಿದ್ದು, ನಾಲ್ಕು ಸಾಲುಗಳ ಆಸನ ಮಾದರಿಯಾಗಿದೆ. ಇದರಲ್ಲಿ ಮಧ್ಯದಲ್ಲಿರುವ ಎರಡು ಆಸನ ಸಾಲುಗಳು ಪ್ರತ್ಯೇಕವಾಗಿರಲಿದ್ದು, ಹಿಂಭಾಗದಲ್ಲಿ ಕೂರುವ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಾಗಿದೆ.

ಹೊಸ ಜಿ10 ಉದ್ದಳತೆ
ಜಿ10 ಕಾರು ಸದ್ಯ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಕಿಯಾ ಕಾರ್ನಿವಾಲ್ ಕಾರಿಗಿಂತಲೂ ಹೆಚ್ಚು ಉದ್ದಳತೆ ಹೊಂದಿದ್ದು, 5,168-ಎಂಎಂ ಉದ್ದ, 1,980-ಎಂಎಂ ಅಗಲ ಮತ್ತು 1,928-ಎಂಎಂ ಎತ್ತರದೊಂದಿಗೆ ಎಂಪಿವಿ ಕಾರಗಳಲ್ಲೇ ವಿಶೇಷ ಎನ್ನಿಸಲಿದೆ.
MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಎಂಜಿನ್ ಸಾಮರ್ಥ್ಯ
ಜಿ10 ಕಾರು ಸದ್ಯ ಹೊಸ ಆವೃತ್ತಿಯೊಂದಿಗೆ ಎಂಜಿನ್ ಆಯ್ಕೆಯಲ್ಲೂ ಬದಲಾವಣೆ ಪಡೆದುಕೊಂಡಿದ್ದು, ಹೊಸದಾಗಿ ಅಭಿವೃದ್ದಿಗೊಳಿಸಲಾದ 2.0-ಲೀಟರ್ ಟರ್ಬೋ ಡೀಸೆಲ್ ಮತ್ತು 2.0-ಲೀಟರ್ ಪೆಟ್ರೋಲ್ ಟರ್ಬೋ ಎಂಜಿನ್ ಪಡೆದುಕೊಂಡಿದೆ. ಆದರೆ ಭಾರತದಲ್ಲಿ ಬಿಡುಗಡೆಯಾಗಲಿರುವ ಜಿ10 ಕಾರು ಕೇವಲ 2.0-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಮಾತ್ರವೇ ಬಿಡುಗಡೆಯಾಗಬಹುದು ಎನ್ನಲಾಗಿದೆ.

ಸದ್ಯ ಚೀನಿ ಮಾರುಕಟ್ಟೆಯಲ್ಲಿ ಹೊಸ ವಿನ್ಯಾಸದೊಂದಿಗೆ ಬಿಡುಗಡೆಯಾಗಿರುವ ಜಿ10 ಕಾರು ಭಾರತದಲ್ಲಿ 2021ರ ಆರಂಭದಲ್ಲಿ ಬಿಡುಗಡೆಯಾಗುವ ನೀರಿಕ್ಷೆಯಿದ್ದು, ಹೊಸ ಕಾರಿನ ಬೆಲೆಯು ಇನೋವಾ ಕ್ರಿಸ್ಟಾ ಮತ್ತು ಕಾರ್ನಿವಾಲ್ ಕಾರಿಗೆ ಪೈಪೋಟಿಯಾಗಲಿರಲಿವೆ.
MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಹೊಸ ಕಾರಿನ ಬೆಲೆಯು ಚೀನಿ ಮಾರುಕಟ್ಟೆಯಲ್ಲಿ ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಆರಂಭಿಕವಾಗಿ ರೂ.15 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 25 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗುತ್ತಿದ್ದು, ಭಾರತದಲ್ಲಿ ಆಮದು ಮಾದರಿಯಾಗಿ ಮಾರಾಟಗೊಳ್ಳಲಿರುವ ಹೊಸ ಕಾರು ಮತ್ತಷ್ಟು ದುಬಾರಿ ಬೆಲೆ ಪಡೆದುಕೊಳ್ಳಲಿದೆ.


Click it and Unblock the Notifications








