ಫಾಸ್ಟ್‌ಟ್ಯಾಗ್ ಕಡ್ಡಾಯವಾದರೂ ದುಪ್ಪಟ್ಟು ಶುಲ್ಕ ಪಾವತಿಸುವವರೇ ಹೆಚ್ಚು..!

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಗಮ ಸಂಚಾರದ ಅನುಕೂಲಕ್ಕಾಗಿ ಫಾಸ್ಟ್‌ಟ್ಯಾಗ್ ಕಡ್ಡಾಯಗೊಳಿಸಲಾಗಿದ್ದರೂ ದಪ್ಪಟ್ಟು ಹಣ ಪಾವತಿಸುವ ವಾಹನ ಮಾಲೀಕರ ಸಂಖ್ಯೆ ಹೆಚ್ಚಿದ್ದು, ಟೋಲ್ ಬೂತ್‌ಗಳಲ್ಲಿ ವಾಹನ ದಟ್ಟಣೆಯು ಹೊಸ ಸಮಸ್ಯೆಗೆ ಕಾರಣವಾಗಿದೆ.

ಫಾಸ್ಟ್‌ಟ್ಯಾಗ್ ಕಡ್ಡಾಯವಾದರೂ ದುಪ್ಪಟ್ಟು ಶುಲ್ಕ ಪಾವತಿಸುವವರೇ ಹೆಚ್ಚು..!

ಫಾಸ್ಟ್‌ಟ್ಯಾಗ್ ಕಡ್ಡಾಯವನ್ನು ಈ ಹಿಂದಿ ಎರಡು ಬಾರಿ ಮುಂದೂಡಿಕೆ ಮಾಡಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅಂತಿಮವಾಗಿ ಜನವರಿ 15ರಿಂದ ಕಡ್ಡಾಯಗೊಳಿಸಿದ್ದು, ಇದುವರೆಗೆ ಸುಮಾರು ಶೇ.45ರಷ್ಟು ವಾಹನ ಮಾಲೀಕರು ಮಾತ್ರವೇ ಫಾಸ್ಟ್‌ಟ್ಯಾಗ್ ಬಳಕೆ ಮಾಡುತ್ತಿದ್ದಾರೆ. ಇದರಿಂದ ಟೋಲ್ ಬೂತ್‌ಗಳಲ್ಲಿ ವಾಹನ ನಿಲುಗಡೆಯನ್ನು ತಪ್ಪಿಸಬೇಕೆಂಬ ಯೋಜನೆಗೆ ಹಿನ್ನಡೆಯಾಗುತ್ತಿದ್ದು, ಅತಿ ಸರಳ ಶುಲ್ಕ ಪಾವತಿ ವಿಧಾನವನ್ನು ಬಿಟ್ಟು ಸರದಿಯಲ್ಲೇ ನಿಂತು ಹಣ ಪಾವತಿಸುವ ವಾಹನ ಮಾಲೀಕರೇ ಹೆಚ್ಚಿದ್ದಾರೆ.

ಫಾಸ್ಟ್‌ಟ್ಯಾಗ್ ಕಡ್ಡಾಯವಾದರೂ ದುಪ್ಪಟ್ಟು ಶುಲ್ಕ ಪಾವತಿಸುವವರೇ ಹೆಚ್ಚು..!

ಫಾಸ್ಟ್‌ಟ್ಯಾಗ್ ಕಡ್ಡಾಯ ನಂತರ ಟೋಲ್ ಬೂತ್‌ಗಳಲ್ಲಿ ಹಣ ಪಾವತಿ ಮಾಡುವ ಲೈನ್‌ಗಳು ಕಡಿಮೆಯಾಗಿದ್ದು, ಇದರಿಂದ ಬಹುತೇಕ ಟೋಲ್ ಬೂತ್‌ಗಳಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿರುವುದು ಟೋಲ್ ಬೂತ್ ಸಿಬ್ಬಂದಿಗೆ ಭಾರೀ ತಲೆನೋವಾಗಿ ಪರಿಣಮಿಸಿದೆ.

ಫಾಸ್ಟ್‌ಟ್ಯಾಗ್ ಕಡ್ಡಾಯವಾದರೂ ದುಪ್ಪಟ್ಟು ಶುಲ್ಕ ಪಾವತಿಸುವವರೇ ಹೆಚ್ಚು..!

ಜೊತೆಗೆ ಕೆಲವು ಕಡೆಗಳಲ್ಲಿ ಫಾಸ್ಟ್‌ಟ್ಯಾಗ್ ಸೌಲಭ್ಯವು ಸರಿಯಾಗಿ ಕಾರ್ಯನಿರ್ವಹಣೆಯಿಲ್ಲದೆಯೂ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದ್ದು, ಇದು ಟೋಲ್ ಬೂತ್ ಸಿಬ್ಬಂದಿ ಮತ್ತು ವಾಹನ ಮಾಲೀಕರ ನಡುವೆ ವಾಗ್ವಾದಕ್ಕೂ ಕಾರಣವಾಗಿದೆ.

ಫಾಸ್ಟ್‌ಟ್ಯಾಗ್ ಕಡ್ಡಾಯವಾದರೂ ದುಪ್ಪಟ್ಟು ಶುಲ್ಕ ಪಾವತಿಸುವವರೇ ಹೆಚ್ಚು..!

ಒಟ್ಟಿನಲ್ಲಿ ಫಾಸ್ಟ್‌ಟ್ಯಾಗ್ ಬಳಕೆ ಮಾಡದ ವಾಹನ ಮಾಲೀಕರಿಗೆ ದುಪ್ಪಟ್ಟ ಶುಲ್ಕ ವಿಧಿಸುತ್ತಿದ್ದರೂ ಲೈನ್‌ನಲ್ಲೇ ಹಣ ಪಾವತಿ ಮಾಡುವ ಸಂಖ್ಯೆ ಹೆಚ್ಚಿದ್ದು, ಮತ್ತೊಂದು ಕಡೆಗೆ ಫಾಸ್ಟ್‌ಟ್ಯಾಗ್ ಹೊಂದಿದ್ದರೂ ಸೂಕ್ತ ಕಾರ್ಯನಿರ್ವಹಣೆ ಮಾಡದಿರುವುದು ಟೋಲ್‌ಗಳಲ್ಲಿ ಭಾರೀ ವಾಹನ ದಟ್ಟಣೆ ಕಾರಣವಾಗಿದೆ ಎನ್ನಬಹುದು. ಇದರಿಂದ ಫಾಸ್ಟ್‌ಟ್ಯಾಗ್ ಲೈನ್‌ಗಳ ಸಂಖ್ಯೆಯನ್ನು ತಗ್ಗಿಸಲು ಮುಂದಾಗಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮುಂದಿನ ಕೆಲ ದಿನಗಳ ಮಟ್ಟಿಗೆ 50:50 ಅನುಪಾತದಲ್ಲಿ ಫಾಸ್ಟ್‌ಟ್ಯಾಗ್ ಮತ್ತು ಹಣ ಪಾವತಿ ಲೈನ್‌ಗಳನ್ನಾಗಿ ಪರಿವರ್ತಿಸಲು ಮುಂದಾಗಿದ್ದಾರೆ.

ಫಾಸ್ಟ್‌ಟ್ಯಾಗ್ ಕಡ್ಡಾಯವಾದರೂ ದುಪ್ಪಟ್ಟು ಶುಲ್ಕ ಪಾವತಿಸುವವರೇ ಹೆಚ್ಚು..!

ಸದ್ಯ ಪರಿಸ್ಥಿತಿಯಲ್ಲಿ ಪ್ರತಿ ಬೂತ್‌ಗಳಲ್ಲೂ ಕೇವಲ ಒಂದು ಲೈನ್ ಮಾತ್ರವೇ ಹಣ ಪಾವತಿ ಮಾಡಬಹುದಾದ ಲೈನ್ ನೀಡಲಾಗುತ್ತಿದ್ದು, ಇದು ಮುಂದಿನ ಕೆಲ ದಿನಗಳ ತನಕ ಎರಡು ಅಥವಾ ಮೂರು ಲೈನ್‌ಗಳಲ್ಲಿ ಹಣ ಪಾವತಿಗೆ ಮತ್ತು ಇನ್ನೇರಡು ಲೈನ್‌ಗಳನ್ನು ಫಾಸ್ಟ್‌ಟ್ಯಾಗ್ ಸೌಲಭ್ಯ ಬಳಸುವ ವಾಹನ ಮಾಲೀಕರಿಗೆ ಮೀಸಲಿಡಲು ಕ್ರಮ ಕೈಗೊಳ್ಳಲಾಗುತ್ತಿದೆ.

ಫಾಸ್ಟ್‌ಟ್ಯಾಗ್ ಕಡ್ಡಾಯವಾದರೂ ದುಪ್ಪಟ್ಟು ಶುಲ್ಕ ಪಾವತಿಸುವವರೇ ಹೆಚ್ಚು..!

ಫಾಸ್ಟ್‌ಟ್ಯಾಗ್ ಸೌಲಭ್ಯದಿಂದ ಭರ್ಜರಿ ಆದಾಯ

ಫಾಸ್ಟ್‌ಟ್ಯಾಗ್ ಅಳವಡಿಕೆಗೂ ಮುನ್ನ ಪ್ರತಿದಿನ ರೂ.68 ಕೋಟಿ ಸರಾಸರಿ ಆದಾಯ ಗಳಿಸುತ್ತಿದ್ದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರವು ಇದೀಗ ಪ್ರತಿದಿನ ಸರಾಸರಿಯಾಗಿ ರೂ.82 ಕೋಟಿಯಷ್ಟು ಆದಾಯ ಗಳಿಕೆ ಮಾಡುತ್ತಿರುವುದಾಗಿ ಅಧಿಕೃತ ಹೇಳಿಕೆ ನೀಡಿದೆ.

ಫಾಸ್ಟ್‌ಟ್ಯಾಗ್ ಕಡ್ಡಾಯವಾದರೂ ದುಪ್ಪಟ್ಟು ಶುಲ್ಕ ಪಾವತಿಸುವವರೇ ಹೆಚ್ಚು..!

ಫಾಸ್ಟ್‌ಟ್ಯಾಗ್ ಪರಿಚಯಿಸುವುದಕ್ಕೂ ಮುನ್ನ ವಾಹನ ಸವಾರರು ಟೋಲ್ ಪ್ಲಾಜಾಗಳಲ್ಲಿ ಶುಲ್ಕ ಪಾವತಿಗಾಗಿ ಸರಾಸರಿಯಾಗಿ 12 ನಿಮಿಷ ಕಾಯಬೇಕಿತ್ತು. ಇದೀಗ ಅದು ಸರಾಸರಿ 6 ನಿಮಿಷಕ್ಕೆ ಇಳಿಕೆಯಾಗಿದ್ದು, ಫಾಸ್ಟ್‌ಟ್ಯಾಗ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾದಲ್ಲಿ ಇದು ಇನ್ನು ಕಡಿಮೆಯಾಗಲಿದೆ ಎನ್ನಬಹುದು.

ಫಾಸ್ಟ್‌ಟ್ಯಾಗ್ ಕಡ್ಡಾಯವಾದರೂ ದುಪ್ಪಟ್ಟು ಶುಲ್ಕ ಪಾವತಿಸುವವರೇ ಹೆಚ್ಚು..!

ಫಾಸ್ಟ್‌ಟ್ಯಾಗ್ ಎಂದರೇನು?

ಫಾಸ್ಟ್‌ಟ್ಯಾಗ್ ಸೌಲಭ್ಯವು ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯಾಗಿದ್ದು, ಟೋಲ್ ಪ್ಲಾಜಾ ಮೂಲಕ ಹಾದುಹೋಗುವ ವಾಹನಗಳ ಟೋಲ್ ಆಟೋಮ್ಯಾಟಿಕ್ ಆಗಿ ಕಡಿತಗೊಳ್ಳುತ್ತದೆ.

ಫಾಸ್ಟ್‌ಟ್ಯಾಗ್ ಕಡ್ಡಾಯವಾದರೂ ದುಪ್ಪಟ್ಟು ಶುಲ್ಕ ಪಾವತಿಸುವವರೇ ಹೆಚ್ಚು..!

ಈ ವ್ಯವಸ್ಥೆಯನ್ನು ಭಾರತದಲ್ಲಿ ಮೊದಲ ಬಾರಿಗೆ 2014ರಲ್ಲಿ ಪರಿಚಯಿಸಲಾಯಿತು. ಈ ಸೌಲಭ್ಯ ಹೊಂದಿರುವ ವಾಹನಗಳು ಯಾವುದೇ ಟೋಲ್ ಪ್ಲಾಜಾ ಮೂಲಕ ಹಾದುಹೋಗುವಾಗ ಗಂಟೆಗಟ್ಟಲೇ ಟೋಲ್‍‍ಗಳಲ್ಲಿ ನಿಲ್ಲುವ ಅಗತ್ಯವಿಲ್ಲ. ದೇಶದಲ್ಲಿರುವ ಅನೇಕ ಬ್ಯಾಂಕುಗಳು ಆನ್‌ಲೈನ್‌ನಲ್ಲಿ ಫಾಸ್ಟ್‌ಟ್ಯಾಗ್‍ ಖರೀದಿಸುವ ಸೌಲಭ್ಯವನ್ನು ಒದಗಿಸುತ್ತಿವೆ.

ಫಾಸ್ಟ್‌ಟ್ಯಾಗ್ ಕಡ್ಡಾಯವಾದರೂ ದುಪ್ಪಟ್ಟು ಶುಲ್ಕ ಪಾವತಿಸುವವರೇ ಹೆಚ್ಚು..!

ಇದಕ್ಕಾಗಿಯೇ ಪ್ರತ್ಯೇಕ ಫಾಸ್ಟ್‌ಟ್ಯಾಗ್ ಆ್ಯಪ್ ಕೂಡಾ ಅಭಿವೃದ್ದಿಗೊಳಿಸಲಾಗಿದ್ದು, ಆ್ಯಪ್ ಮೂಲಕವೇ ನೀವು ಫಾಸ್ಟ್‌ಟ್ಯಾಗ್ ರೀಚಾರ್ಜ್ ಮತ್ತು ಫಾಸ್ಟ್‌ಟ್ಯಾಗ್‌ಗೆ ಸಂಬಂಧಿಸಿದ ಇತರೆ ಮಾಹಿತಿಗಳನ್ನು ಒಂದೇ ಸೂರಿನಡಿ ಪಡೆಯಬಹುದು.

ಫಾಸ್ಟ್‌ಟ್ಯಾಗ್ ಕಡ್ಡಾಯವಾದರೂ ದುಪ್ಪಟ್ಟು ಶುಲ್ಕ ಪಾವತಿಸುವವರೇ ಹೆಚ್ಚು..!

ಗ್ರಾಹಕರು ರೂ.100ನಿಂದ ರೂ.1 ಲಕ್ಷದವರೆಗೆ ರೀಚಾರ್ಜ್ ಮಾಡಬಹುದಾಗಿದ್ದು, ಸುಲಭವಾಗಿ ರೀಚಾರ್ಜ್ ಮಾಡಲು ಬೇರೆ ಬೇರೆ ಏಜೆನ್ಸಿಗಳು ಬೇರೆ ಬೇರೆ ವಿಧಾನಗಳನ್ನು ಹಾಗೂ ಆಯ್ಕೆಗಳನ್ನು ನೀಡಲಾಗಿದೆ. ಹೀಗಾಗಿ ಇದೊಂದು ಅತಿ ಸುಲಭವಾಗಿ ಉಪಯೋಗಿಸಬಹುದಾದ ಸೌಲಭ್ಯವಾಗಿದ್ದು, ಒಂದು ಫಾಸ್ಟ್‌ಟ್ಯಾಗ್ ಅನ್ನು ಮತ್ತೊಂದು ವಾಹನಕ್ಕೆ ಬಳಕೆ ಮಾಡುವಂತಿಲ್ಲ. ಇದರಿಂದ ವಾಹನ ಮಾಲೀಕರು ಹೊಸ ಸೌಲಭ್ಯ ಬೇಡವಾದಲ್ಲಿ ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಡಿಆಕ್ಟಿವೆಟ್ ಮಾಡಬೇಕಾಗುತ್ತದೆ.

More from DriveSpark

Article Published On: Monday, January 20, 2020, 11:39 [IST]
English summary
Highway toll plazas to have more cash lanes than fastag. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+