ಎಲೆಕ್ಟ್ರಿಕ್ ವಾಹನಗಳ ಬೆಲೆ ಕಡಿತ ಮಾಡುವಂತೆ ಆಟೋ ಕಂಪನಿಗಳಿಗೆ ಮನವಿ ಮಾಡಿದ ಸಚಿವ ನಿತಿನ್ ಗಡ್ಕರಿ

2025ರ ವೇಳೆಗೆ ಭಾರತದಲ್ಲಿ ಶೇ.25ರಷ್ಟು ಎಲೆಕ್ಟ್ರಿಕ್ ವಾಹನ ಬಳಕೆಯ ಗುರಿಸಾಧಿಸಲು ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರೂ ನಿಗದಿತ ಮಟ್ಟದಲ್ಲಿ ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಬೆಳವಣಿಗೆ ಸಾಧಿಸಲು ಸಾಧ್ಯವಾಗುತ್ತಿಲ್ಲ.

ಎಲೆಕ್ಟ್ರಿಕ್ ವಾಹನ ಮಾರಾಟ ಹೆಚ್ಚಿಸಲು ಆಟೋ ಕಂಪನಿಗಳಿಗೆ ಮನವಿ

ಸಬ್ಸಡಿ, ನೋಂದಣಿ ಶುಲ್ಕ ವಿನಾಯ್ತಿ ಮತ್ತು ರಸ್ತೆ ತೆರಿಗೆ ವಿನಾಯ್ತಿ ಹೊರತಾಗಿಯೂ ಎಲೆಕ್ಟ್ರಿಕ್ ವಾಹನಗಳ ಬೆಲೆಯು ಸಾಮಾನ್ಯ ವಾಹನಗಳ ಬೆಲೆಗಿಂತಲೂ ಹೆಚ್ಚಿದ್ದು, ಇದೇ ಕಾರಣಕ್ಕೆ ಎಲೆಕ್ಟ್ರಿಕ್ ವಾಹನ ಮಾರಾಟವು ನಿಗದಿತ ಮಟ್ಟದ ತಲುಪಲು ಸಾಧ್ಯವಾಗುತ್ತಿಲ್ಲ. ಕಳೆದ ವರ್ಷಕ್ಕೆ ಹೊಲಿಕೆ ಮಾಡಿದರೆ ಈ ವರ್ಷದ ಎಲೆಕ್ಟ್ರಿಕ್ ವಾಹನ ಮಾರಾಟ ತುಸು ಸುಧಾರಣೆ ಕಂಡಿದ್ದರೂ ಪೆಟ್ರೋಲ್-ಡೀಸೆಲ್ ವಾಹನಗಳ ಮಾರಾಟ ಪ್ರಮಾಣಕ್ಕೆ ಹೋಲಿಕೆ ಮಾಡಿದರೆ ಸಾಕಷ್ಟು ಹಿನ್ನಡೆ ಅನುಭವಿಸುತ್ತಿದೆ.

ಎಲೆಕ್ಟ್ರಿಕ್ ವಾಹನ ಮಾರಾಟ ಹೆಚ್ಚಿಸಲು ಆಟೋ ಕಂಪನಿಗಳಿಗೆ ಮನವಿ

ಇದಕ್ಕಾಗಿ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಕಂಪನಿಗಳಿಗೆ ಮನವಿ ಮಾಡಿರುವ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಇವಿ ವಾಹನಗಳ ಬೆಲೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡುವಂತೆ ಮನವಿ ಮಾಡಿದ್ದು, ಭವಿಷ್ಯ ದಿನಗಳಿಗಾಗಿ ಇವಿ ವಾಹನಗಳ ಬಳಕೆಯನ್ನು ಉತ್ತೇಜಿಸಲು ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಎಲೆಕ್ಟ್ರಿಕ್ ವಾಹನ ಮಾರಾಟ ಹೆಚ್ಚಿಸಲು ಆಟೋ ಕಂಪನಿಗಳಿಗೆ ಮನವಿ

ಪೆಟ್ರೋಲ್ ಮತ್ತು ಡೀಸೆಲ್ ವಾಹನ ಖರೀದಿದಾರರು ಎಲೆಕ್ಟ್ರಿಕ್ ವಾಹನಗಳ ಖರೀದಿಯತ್ತ ಸೆಳೆಯಲು ಆಟೋ ಕಂಪನಿಗಳು ಇವಿ ವಾಹನಗಳ ಬೆಲೆ ಕಡಿತ ಮಾಡಬೇಕಿರುವುದು ಅನಿವಾರ್ಯ ಎಂದಿರುವ ಕೇಂದ್ರ ಸಚಿವರು ಸಾಧ್ಯವಾದಷ್ಟು ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳೊಂದಿಗೆ ವಾಹನಗಳ ಅಭಿವೃದ್ದಿ ಒತ್ತು ನೀಡಿ ಎಂದಿದ್ದಾರೆ.

ಎಲೆಕ್ಟ್ರಿಕ್ ವಾಹನ ಮಾರಾಟ ಹೆಚ್ಚಿಸಲು ಆಟೋ ಕಂಪನಿಗಳಿಗೆ ಮನವಿ

ಆಮದು ಬಿಡಿಭಾಗಗಳ ಬಳಕೆಗಿಂತ ಸ್ಥಳೀಯವಾಗಿ ಲಭ್ಯವಾಗುವ ಬಿಡಿಭಾಗಗಳ ಬಳಕೆಯಿಂದ ವಾಹನ ಉತ್ಪಾದನಾ ವೆಚ್ಚವನ್ನು ಪರಿಣಾಮಕಾರಿ ತಗ್ಗಿಸಬಹುದು ಎಂದಿರುವ ನಿತಿನ್ ಗಡ್ಕರಿ ಅವರು ಎಲೆಕ್ಟ್ರಿಕ್ ವಾಹನಗಳ ಸೆಳೆಯಲು ಸರ್ಕಾರದ ನೀತಿಗಳಿಂತ ವಾಹನ ಉತ್ಪಾದನಾ ಕಂಪನಿಗಳ ಮಾಡುವ ನಿರ್ಧಾರಗಳ ಮೇಲೆ ಅವಲಂಬಿತವಾಗಿದೆ ಎಂದಿದ್ದಾರೆ.

ಎಲೆಕ್ಟ್ರಿಕ್ ವಾಹನ ಮಾರಾಟ ಹೆಚ್ಚಿಸಲು ಆಟೋ ಕಂಪನಿಗಳಿಗೆ ಮನವಿ

ಇನ್ನು ದೇಶಾದ್ಯಂತ ಡೀಸೆಲ್ ಮತ್ತು ಪೆಟ್ರೋಲ್ ವಾಹನ ಬಳಕೆಯನ್ನು ತಗ್ಗಿಸಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ರಾಜಧಾನಿ ದೆಹಲಿಯಲ್ಲಿ ಜಾರಿಗೆ ತರಲಾಗಿರುವ ರಾಜ್ಯ ಇವಿ ವಾಹನ ನೀತಿಯು ಮಹತ್ವದ ಬದಲಾವಣೆಗೆ ಕಾರಣವಾಗಿದೆ.

ಎಲೆಕ್ಟ್ರಿಕ್ ವಾಹನ ಮಾರಾಟ ಹೆಚ್ಚಿಸಲು ಆಟೋ ಕಂಪನಿಗಳಿಗೆ ಮನವಿ

ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಫೇಮ್ 2 ಯೋಜನೆಯನ್ನು ಜಾರಿಗೆ ತಂದಿದ್ದು, ಫೇಮ್ 2 ಯೋಜನೆಯ ಜೊತೆಗೆ ದೆಹಲಿ ಸರ್ಕಾರವು ಪ್ರತ್ಯೇಕವಾಗಿ ಇವಿ ವಾಹನ ನೀತಿಯನ್ನು ಅಳವಡಿಸಿಕೊಂಡಿದೆ. ದೆಹಲಿಯಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿಸುವ ಗ್ರಾಹಕರಿಗೆ ಕೇಂದ್ರ ಸರ್ಕಾರದ ಫೇಮ್ 2 ಯೋಜನೆ ಅಡಿಯಲ್ಲಿ ಪ್ರಯೋಜನಗಳ ಜೊತೆಗೆ ರಾಜ್ಯ ಸರ್ಕಾರ ಇವಿ ಪಾಲಿಸಿ ಅಡಿಯಲ್ಲೂ ಹೆಚ್ಚಿನ ಮಟ್ಟದ ಪ್ರಯೋಜನಗಳು ಅನ್ವಯವಾಗಲಿದ್ದು, ಹೊಸ ಇವಿ ಪಾಲಿಸಿ ನಂತರ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಉತ್ತಮ ಬೆಳವಣಿಗೆ ಕಂಡುಬಂದಿದೆ.

ಎಲೆಕ್ಟ್ರಿಕ್ ವಾಹನ ಮಾರಾಟ ಹೆಚ್ಚಿಸಲು ಆಟೋ ಕಂಪನಿಗಳಿಗೆ ಮನವಿ

ದೆಹಲಿ ಸರ್ಕಾರವು ಹೊಸ ಇವಿ ಪಾಲಿಸಿ ಅಡಿ ಎಲೆಕ್ಟ್ರಿಕ್ ವಾಹನ ಖರೀದಿಸುವ ಗ್ರಾಹಕರಿಗೆ ನೋಂದಣಿ ಶುಲ್ಕ ವಿನಾಯ್ತಿ, ರಸ್ತೆ ತೆರಿಗೆ ವಿನಾಯ್ತಿ ಸೇರಿದಂತೆ ಹಲವಾರು ಆಫರ್‌ಗಳನ್ನು ನೀಡುತ್ತಿದ್ದು, ಕೇಂದ್ರ ಸರ್ಕಾರ ಫೇಮ್ 2 ಯೋಜನೆ ಅಡಿಯಲ್ಲಿ ಜಿಎಸ್‌ಟಿ ವಿನಾಯ್ತಿ ಕೂಡಾ ಲಭ್ಯವಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಎಲೆಕ್ಟ್ರಿಕ್ ವಾಹನ ಮಾರಾಟ ಹೆಚ್ಚಿಸಲು ಆಟೋ ಕಂಪನಿಗಳಿಗೆ ಮನವಿ

ರೂ. 15 ಲಕ್ಷದೊಳಗಿನ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಮಟ್ಟದ ಸಬ್ಸಡಿ ಲಭ್ಯವಿದ್ದು, ರೂ. 15 ಲಕ್ಷ ಮೇಲ್ಪಟ್ಟ ಇವಿ ವಾಹನಗಳಿಗೆ ಸಬ್ಸಡಿಯಿಲ್ಲವಾದರೂ ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕದಲ್ಲಿ ವಿನಾಯ್ತಿ ನೀಡಲಾಗಿದೆ.

ಎಲೆಕ್ಟ್ರಿಕ್ ವಾಹನ ಮಾರಾಟ ಹೆಚ್ಚಿಸಲು ಆಟೋ ಕಂಪನಿಗಳಿಗೆ ಮನವಿ

ಹೊಸ ಇವಿ ನೀತಿ ಅಡಿ ಸಬ್ಸಡಿಗೆ ಅರ್ಹರಾಗಲು ಅಗಸ್ಟ್ 7ರಿಂದ ಈಚೆಗೆ ಖರೀದಿಸಿದ ವಾಹನಗಳಿಗೆ ಮಾತ್ರ ಸಬ್ಸಡಿ ಅನ್ವಯವಾಗಲಿದ್ದರೆ ಅಕ್ಟೋಬರ್ 15ರಿಂದ ಖರೀದಿ ಮಾಡಲಾದ ವಾಹನಗಳಿಗೆ ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕ ವಿನಾಯ್ತಿ ಅನ್ವಯವಾಗಲಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಎಲೆಕ್ಟ್ರಿಕ್ ವಾಹನ ಮಾರಾಟ ಹೆಚ್ಚಿಸಲು ಆಟೋ ಕಂಪನಿಗಳಿಗೆ ಮನವಿ

ಎಲೆಕ್ಟ್ರಿಕ್ ವಾಹನಗಳ ಖರೀದಿಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರದ ಫೇಮ್ 2 ಜೊತೆ ದೆಹಲಿ ಮಾದರಿಯ ಇವಿ ಪಾಲಿಸಿಯು ಇತರೆ ರಾಜ್ಯಗಳು ಅಳವಡಿಸಿಕೊಳ್ಳುವ ಅವಶ್ಯಕತೆಯಿದ್ದು, ಭವಿಷ್ಯ ದೃಷ್ಠಿಯಿಂದ ಎಲೆಕ್ಟ್ರಿಕ್ ವಾಹನಗಳ ಬಳಕೆಯು ಸಾಕಷ್ಟು ಪ್ರಯೋಜನಕಾರಿಯಾಗಲಿದೆ.

Most Read Articles

Kannada
English summary
Road Transport & Highways and the Minister Nitin Gadkari Asks Automakers To Reduce Electric Vehicle Cost. Read in Kannada.
Story first published: Saturday, November 7, 2020, 12:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X