ಮೂಲ ರೂಪದಲ್ಲಿ ಕಾಣಿಸಿಕೊಂಡ ಜನಪ್ರಿಯ ಕಾಂಟೆಸ್ಸಾ ಕಾರು

ಹಿಂದೂಸ್ತಾನ್ ಮೋಟಾರ್ಸ್ ದೇಶಿಯ ಮಾರುಕಟ್ಟೆಯಲ್ಲಿ ಸುದೀರ್ಘ ಇತಿಹಾಸವನ್ನು ಹೊಂದಿದೆ. ಈ ಕಂಪನಿಯು ಹಲವಾರು ದಶಕಗಳ ಹಿಂದೆ ಅಂಬಾಸಿಡರ್ ಹಾಗೂ ಕಾಂಟೆಸ್ಸಾದಂತಹ ಜನಪ್ರಿಯ ಕಾರುಗಳನ್ನು ಬಿಡುಗಡೆಗೊಳಿಸಿತ್ತು. ಅಂಬಾಸಿಡರ್ ಕಾರಿನ ನಂತರ ಕಾಂಟೆಸ್ಸಾ ಕಾರು ಹಿಂದೂಸ್ತಾನ್ ಮೋಟಾರ್ಸ್‌ನ ಜನಪ್ರಿಯ ಕಾರ್ ಆಗಿದೆ.

ಮೂಲ ರೂಪದಲ್ಲಿ ಕಾಣಿಸಿಕೊಂಡ ಜನಪ್ರಿಯ ಕಾಂಟೆಸ್ಸಾ ಕಾರು

ಈ ಕಾರನ್ನು ಕಂಪನಿಯು 1984ರಿಂದ 2002ರವರೆಗೆ ಉತ್ಪಾದಿಸುತ್ತಿತ್ತು. ಆ ವೇಳೆ ಈ ಕಾರಿಗೆ ಸ್ಟ್ಯಾಂಡರ್ಡ್ 2000 ಹಾಗೂ ಪ್ರೀಮಿಯರ್ 118 ಎನ್ಇ ಕಾರುಗಳು ಪೈಪೋಟಿ ನೀಡುತ್ತಿದ್ದವು. ಈ ಎಲ್ಲಾ ಕಾರುಗಳು ಈಗ ಇತಿಹಾಸದ ಪುಟ ಸೇರಿವೆ. ಅಂಬಾಸಿಡರ್ ಕಾರು ಜನಪ್ರಿಯವಾದ ನಂತರ ಹಿಂದೂಸ್ತಾನ್ ಮೋಟಾರ್ಸ್ ಐಷಾರಾಮಿ ಕಾರು ಸೆಗ್‌ಮೆಂಟಿನಲ್ಲಿ ಕಾರುಗಳನ್ನು ಬಿಡುಗಡೆಗೊಳಿಸಲು ಮುಂದಾಯಿತು.

ಮೂಲ ರೂಪದಲ್ಲಿ ಕಾಣಿಸಿಕೊಂಡ ಜನಪ್ರಿಯ ಕಾಂಟೆಸ್ಸಾ ಕಾರು

ಈ ಕಾರಣಕ್ಕೆ ಕಂಪನಿಯು ಕೋಲ್ಕತ್ತಾದ ಉತ್ತರಪಾಡ ಘಟಕದಲ್ಲಿ ಕಾಂಟೆಸ್ಸಾ ಕಾರಿನ ಉತ್ಪಾದನೆಯನ್ನು ಆರಂಭಿಸಿತು. ಆದರೆ ಈ ಕಾರಿನ ಎಂಜಿನ್ ಅಷ್ಟು ಬಲಶಾಲಿಯಾಗಿರಲಿಲ್ಲ. ಈ ಎಂಜಿನ್ ಕೇವಲ 50 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತಿತ್ತು. ಆದರೆ ಆಕರ್ಷಕ ವಿನ್ಯಾಸದಿಂದ ಈ ಕಾರು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಯಿತು.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಮೂಲ ರೂಪದಲ್ಲಿ ಕಾಣಿಸಿಕೊಂಡ ಜನಪ್ರಿಯ ಕಾಂಟೆಸ್ಸಾ ಕಾರು

ಈ ಕಾರಿನಲ್ಲಿ 1.5 ಲೀಟರ್ ಬಿಎಂಸಿ ಎಂಜಿನ್ ಅಳವಡಿಸಲಾಗಿತ್ತು. ಆದರೆ ಕಡಿಮೆ ಪವರ್ ಕಾರಣಕ್ಕೆ ಹೆಚ್ಚಿನ ಜನಕ್ಕೆ ಈ ಕಾರು ಇಷ್ಟವಾಗಲಿಲ್ಲ. ನಂತರ ಕಂಪನಿಯು ಜಪಾನ್‌ನ ಇಸುಝು ಮೋಟಾರ್ಸ್‌ ಸಹಭಾಗಿತ್ವದಲ್ಲಿ ಕಾರಿನ ಎಂಜಿನ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿತು.

ಮೂಲ ರೂಪದಲ್ಲಿ ಕಾಣಿಸಿಕೊಂಡ ಜನಪ್ರಿಯ ಕಾಂಟೆಸ್ಸಾ ಕಾರು

ಇಸುಝು ಜೊತೆಗಿನ ಪಾಲುದಾರಿಕೆಯ ನಂತರ ಕಾರಿನ ಹೆಸರನ್ನು ಕಾಂಟೆಸ್ಸಾ ಕ್ಲಾಸಿಕ್ ಎಂದು ಬದಲಾಯಿಸಲಾಯಿತು. ಈ ಕಾರಿನಲ್ಲಿ ಅಳವಡಿಸಲಾದ ಹೊಸ 1.8 ಲೀಟರ್ ಪೆಟ್ರೋಲ್ ಎಂಜಿನ್, 88 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತಿತ್ತು.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಮೂಲ ರೂಪದಲ್ಲಿ ಕಾಣಿಸಿಕೊಂಡ ಜನಪ್ರಿಯ ಕಾಂಟೆಸ್ಸಾ ಕಾರು

ಹೊಸ ಎಂಜಿನ್‌ನೊಂದಿಗೆ ಕಾರಿನ ವೇಗವನ್ನೂ ಸಹ ಹೆಚ್ಚಿಸಲಾಯಿತು. ಕ್ರಾಫ್ಟ್ ಡಿಸೈನ್, ಹಿಂದೂಸ್ತಾನ್ ಕಾಂಟೆಸ್ಸಾ ಕಾರ್ ಅನ್ನು ಅದು ಇದ್ದ ಮೂಲ ರೂಪದಲ್ಲಿಯೇ ಮರುಸ್ಥಾಪಿಸಿದೆ. ಈ ಕಾರು ಗ್ಲಾಸಿ ಡಾರ್ಕ್ ಬ್ಲೂ ಬಣ್ಣವನ್ನು ಹೊಂದಿದೆ. ಈ ಬಣ್ಣವು ಕಾರಿಗೆ ವಿಂಟೇಜ್ ಲುಕ್ ನೀಡುತ್ತದೆ. ಕಾರಿನಲ್ಲಿ ಡ್ಯುಯಲ್ ಹೆಡ್‌ಲ್ಯಾಂಪ್‌ ಹಾಗೂ ನಾಲ್ಕು ಬದಿಗಳಲ್ಲಿ ಸಿಲ್ವರ್ ಹೌಸಿಂಗ್ ಅಳವಡಿಸಲಾಗಿದೆ.

ಮೂಲ ರೂಪದಲ್ಲಿ ಕಾಣಿಸಿಕೊಂಡ ಜನಪ್ರಿಯ ಕಾಂಟೆಸ್ಸಾ ಕಾರು

ದೊಡ್ಡ ಫ್ರಂಟ್ ಗ್ರಿಲ್ ಜೊತೆಗಿರುವ ಕ್ರೋಮ್ ಬಂಪರ್‌ನಿಂದಾಗಿ ಈ ಕಾರು ಮಸ್ಕ್ಯುಲರ್ ಆಗಿ ಕಾಣುತ್ತದೆ. ಕಾರಿನಲ್ಲಿರುವ ದೊಡ್ಡ ಗಾತ್ರದ ವಿಂಟೇಜ್ ಟಯರ್‌ಗಳು ಕಾರಿಗೆ ಹೆಚ್ಚು ಆಕರ್ಷಣೆಯನ್ನು ನೀಡುತ್ತವೆ. ಈ ಕಾರಿನಲ್ಲಿ ಅಳವಡಿಸಿರುವ ಸ್ಟೀಲ್ ವ್ಹೀಲ್‌ಗಳು ಹೆಚ್ಚು ಹೊಳಪನ್ನು ಹೊಂದಿವೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಮೂಲ ರೂಪದಲ್ಲಿ ಕಾಣಿಸಿಕೊಂಡ ಜನಪ್ರಿಯ ಕಾಂಟೆಸ್ಸಾ ಕಾರು

ಈ ಕಾರಿನಲ್ಲಿ ಯಾವುದೇ ಬಿಡಿಭಾಗಗಳನ್ನು ಹೆಚ್ಚುವರಿಯಾಗಿ ಅಳವಡಿಸಿಲ್ಲ. ಈ ಕಾರು ಅದರ ಮೂಲ ರೂಪದಲ್ಲಿರುವಂತೆ ಕಾಣುತ್ತದೆ. ರೇರ್ ಸ್ಲೋಪಿಂಗ್ ವಿಂಡ್ ಷೀಲ್ಡ್ ಹೊಂದಿರುವ ಈ ಕಾರಿನಲ್ಲಿರುವ ಹಿಂಭಾಗದ ಬೂಟ್ ಸ್ಪೇಸ್ ಸಾಕಷ್ಟು ಸ್ಲಿಮ್ ಆಗಿದೆ.

Most Read Articles

Kannada
English summary
Hindustan Contessa Classic restored in Original form. Read in Kannada.
Story first published: Thursday, May 14, 2020, 15:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X