ದುಬಾರಿ ಬೆಲೆಯೊಂದಿಗೆ ಬಿಎಸ್-6 ಹೋಂಡಾ ಅಮೇಜ್ ಬಿಡುಗಡೆ

ಹೋಂಡಾ ಸಂಸ್ಥೆಯು ಬಿಎಸ್-6 ಎಂಜಿನ್ ಪ್ರೇರಿತ ಕಾರುಗಳ ಮಾರಾಟಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದು, ಮೊದಲ ಹಂತದಲ್ಲಿ ತನ್ನ ಜನಪ್ರಿಯ ಕಂಪ್ಯಾಕ್ಟ್ ಸೆಡಾನ್ ಆವೃತ್ತಿಯಾದ ಅಮೇಜ್ ಕಾರು ಮಾದರಿಯನ್ನು ಹೊಸ ಎಂಜಿನ್‌ನೊಂದಿಗೆ ಬಿಡುಗಡೆ ಮಾಡಿದೆ.

ದುಬಾರಿ ಬೆಲೆಯೊಂದಿಗೆ ಬಿಎಸ್-6 ಹೋಂಡಾ ಅಮೇಜ್ ಬಿಡುಗಡೆ

ಬಿಎಸ್-6 ಎಮಿಷನ್ ನಿಯಮವು ಕಡ್ಡಾಯವಾಗಿ ಜಾರಿಗೆ ಬರುತ್ತಿರುವ ಹಿನ್ನಲೆಯಲ್ಲಿ ಬಹುತೇಕ ಕಾರು ಉತ್ಪಾದನಾ ಸಂಸ್ಥೆಗಳು ಹೊಸ ವಾಹನ ಮಾದರಿಗಳನ್ನು ಮಾರ್ಚ್ 31ರ ಒಳಗಾಗಿ ಬಿಡುಗಡೆಗೊಳಿಸಬೇಕಿದ್ದು, ಇದೀಗ ಹೋಂಡಾ ಸಂಸ್ಥೆಯು ಸಹ ಉನ್ನತೀಕರಿಸಿದ ಅಮೇಜ್ ಕಾರು ಮಾದರಿಯನ್ನು ದುಬಾರಿ ಬೆಲೆಯೊಂದಿಗೆ ಬಿಡುಗಡೆಗೊಳಿಸಿದೆ. ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.10 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 9.96 ಲಕ್ಷ ಬೆಲೆ ಪಡೆದುಕೊಂಡಿದೆ.

ದುಬಾರಿ ಬೆಲೆಯೊಂದಿಗೆ ಬಿಎಸ್-6 ಹೋಂಡಾ ಅಮೇಜ್ ಬಿಡುಗಡೆ

ಬಿಎಸ್-4 ಆವೃತ್ತಿಗಿಂತ ಬಿಎಸ್-6 ಅಮೇಜ್ ಕಾರು ಪೆಟ್ರೋಲ್ ಆವೃತ್ತಿಯ ಬೆಲೆಯಲ್ಲಿ ರೂ. 9 ಸಾವಿರದಿಂದ 17 ಸಾವಿರ ಹೆಚ್ಚಳವಾದಲ್ಲಿ, ಡೀಸೆಲ್ ಆವೃತ್ತಿಯ ಬೆಲೆಯು ರೂ.27 ಸಾವಿರದಿಂದ ರೂ.51 ಸಾವಿರ ಹೆಚ್ಚಳವಾಗಿದೆ.

ದುಬಾರಿ ಬೆಲೆಯೊಂದಿಗೆ ಬಿಎಸ್-6 ಹೋಂಡಾ ಅಮೇಜ್ ಬಿಡುಗಡೆ

ಇದರೊಂದಿಗೆ ಹೊಸ ಕಾರಿನ ಮೈಲೇಜ್ ಪ್ರಮಾಣದಲ್ಲೂ ತುಸು ಇಳಿಕೆ ಮಾಡಲಾಗಿದ್ದು, ಹೊಸ ಎಮಿಷನ್ ನಿಯಮ ಅನುಸಾರ ಎಂಜಿನ್ ಉನ್ನತೀಕರಿಸಿರುವುದರಿಂದ ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಯಲ್ಲೂ ಮೈಲೇಜ್ ಕಡಿತಗೊಳಿಸಲಾಗಿದೆ.

ದುಬಾರಿ ಬೆಲೆಯೊಂದಿಗೆ ಬಿಎಸ್-6 ಹೋಂಡಾ ಅಮೇಜ್ ಬಿಡುಗಡೆ

ಹೋಂಡಾ ಅಮೇಜ್ ಪೆಟ್ರೋಲ್ ಆವೃತ್ತಿಯು 1.2-ಲೀಟರ್ ಫೋರ್ ಸಿಲಿಂಡರ್ ಆಸ್ಪೈಟೆಡ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ 5-ಸಿವಿಟಿ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 90 ಬಿಎಚ್‌ಪಿ, 110-ಎನ್ಎಂ ಟಾರ್ಕ್ ಉತ್ಪಾದನಾ ಮಾಡಬಲ್ಲದು. ಆದರೆ ಈ ಹಿಂದೆ ಪೆಟ್ರೋಲ್ ಆವೃತ್ತಿಯ ಮೈಲೇಜ್ ಪ್ರಮಾಣವನ್ನು ಪ್ರತಿ ಲೀಟರ್‌ಗೆ 19.5ಕಿ.ಮೀ ಯಿಂದ 18.6ಕ್ಕೆ ಇಳಿಕೆ ಮಾಡಲಾಗಿದೆ.

ದುಬಾರಿ ಬೆಲೆಯೊಂದಿಗೆ ಬಿಎಸ್-6 ಹೋಂಡಾ ಅಮೇಜ್ ಬಿಡುಗಡೆ

ಹಾಗೆಯೇ 1.5-ಲೀಟರ್ ಡೀಸೆಲ್ ಎಂಜಿನ್ ಮಾದರಿಯಲ್ಲಿ ಈ ಹಿಂದೆ ನೀಡಲಾಗುತ್ತಿದ್ದ 27.4ಕಿ.ಮೀ ಮೈಲೇಜ್ ಪ್ರಮಾಣವನ್ನು ಇದೀಗ ಮ್ಯಾನುವಲ್ ವೆರಿಯೆಂಟ್‌ನಲ್ಲಿ 2.7ಕಿ.ಮೀ ಮತ್ತು ಆಟೋಮ್ಯಾಟಿಕ್ ವೆರಿಯೆಂಟ್‌ನಲ್ಲಿ 2.8 ಕಿ.ಮೀ ಮೈಲೇಜ್ ಪ್ರಮಾಣವನ್ನು ಕಡಿತಗೊಳಿಸಲಾಗಿದೆ.

ದುಬಾರಿ ಬೆಲೆಯೊಂದಿಗೆ ಬಿಎಸ್-6 ಹೋಂಡಾ ಅಮೇಜ್ ಬಿಡುಗಡೆ

ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ತಗ್ಗಿಸುವ ಉದ್ದೇಶದೊಂದಿಗೆ ಎಂಜಿನ್ ಪರ್ಫಾಮೆನ್ಸ್ ಮತ್ತು ಇಂಧನ ದಕ್ಷತೆಯಲ್ಲಿ ಹೊಸ ಬದಲಾವಣೆ ತರಲಾಗುತ್ತಿದ್ದು, ಹೊಸ ನಿಯಮದಿಂದಾಗಿ ಇನ್ನು ಕೆಲವು ಡೀಸೆಲ್ ಮಾದರಿಗಳ ಮೈಲೇಜ್ ಪ್ರಮಾಣದಲ್ಲಿ ಹೆಚ್ಚಳ ಕೂಡಾ ಮಾಡಲಾಗಿದೆ.

ದುಬಾರಿ ಬೆಲೆಯೊಂದಿಗೆ ಬಿಎಸ್-6 ಹೋಂಡಾ ಅಮೇಜ್ ಬಿಡುಗಡೆ

ಎಂಜಿನ್ ಸಾಮಾರ್ಥ್ಯ ಮತ್ತು ಪರ್ಫಾಮೆನ್ಸ್ ಆಧಾರದ ಮೇಲೆ ಮೈಲೇಜ್ ಪ್ರಮಾಣವನ್ನು ನಿಗದಿಪಡಿಸಲಾಗುತ್ತಿದ್ದು, ಗ್ರಾಹಕರನ್ನು ಸೆಳೆಯಲು ಮೈಲೇಜ್ ಹೆಚ್ಚಳ ಮಾಡಿ ಎಮಿಷನ್ ನಿಯಮ ಉಲ್ಲಂಘಿಸುತ್ತಿದ್ದ ಕಾರು ಉತ್ಪಾದನಾ ಸಂಸ್ಥೆಗಳಿಗೆ ಬಿಎಸ್-6 ನಿಯಮವು ಹೊಡೆತ ನೀಡುತ್ತಿದೆ.

ದುಬಾರಿ ಬೆಲೆಯೊಂದಿಗೆ ಬಿಎಸ್-6 ಹೋಂಡಾ ಅಮೇಜ್ ಬಿಡುಗಡೆ

ಇದೀಗ ಹೋಂಡಾ ಅಮೇಜ್ ಆವೃತ್ತಿಗೂ ಸಹ ಬಿಎಸ್-6 ನಿಯಮದಿಂದಾಗಿ ಮೈಲೇಜ್ ವಿಚಾರದಲ್ಲಿ ತುಸು ಹಿನ್ನಡೆಯಾಗಿದ್ದರೂ ಕೂಡಾ ಮಾಲಿನ್ಯ ಹೊರಸೂಸುವಿಕೆಯ ಪ್ರಮಾಣದಲ್ಲಿ ಸಾಕಷ್ಟು ಸುಧಾರಣೆ ಕಂಡಿದ್ದು, ಹೊಸ ಎಂಜಿನ್ ಹೊರತಾಗಿ ಹೊಸ ಅಮೇಜ್ ಕಾರಿನಲ್ಲಿ ಈ ಹಿಂದಿನಂತೆಯೇ ಬಹುತೇಕ ತಾಂತ್ರಿಕ ಅಂಶಗಳನ್ನು ಮುಂದುವರಿಸಲಾಗಿದೆ.

ದುಬಾರಿ ಬೆಲೆಯೊಂದಿಗೆ ಬಿಎಸ್-6 ಹೋಂಡಾ ಅಮೇಜ್ ಬಿಡುಗಡೆ

ಈ ಮೂಲಕ ಹೊಸ ಕಾರು ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ಡಿಜೈರ್, ಹ್ಯುಂಡೈ ಔರಾ, ಫೋರ್ಡ್ ಆಸ್ಪೈರ್ ಮತ್ತು ಟಾಟಾ ಟಿಗೋರ್ ಕಾರುಗಳಿಗೆ ಮತ್ತಷ್ಟು ಪೈಪೋಟಿ ನೀಡಲಿದ್ದು, ಪ್ರೀಮಿಯಂ ಫೀಚರ್ಸ್ ಮೂಲಕ ಕಂಪ್ಯಾಕ್ಟ್ ಸೆಡಾನ್ ಕಾರುಗಳಲ್ಲೇ ಅಮೇಜ್ ವಿಶೇಷ ಎನ್ನಿಸಲಿದೆ.

Article Published On: Thursday, January 30, 2020, 13:42 [IST]
English summary
Honda Amaze BS6 Models Launched In India. Read in Kannada.
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+