ಲಾಕ್‌ಡೌನ್ ಸಂಕಷ್ಟ: ಶೇ. 97ರಷ್ಟು ಕುಸಿತ ಕಂಡ ಹೋಂಡಾ ಕಾರುಗಳ ಮಾರಾಟ
ಕರೋನಾ ವೈರಸ್ ತಡೆಯಲು ವಿಧಿಸಲಾಗಿದ್ದ ಲಾಕ್‌ಡೌನ್‌ನಿಂದಾಗಿ ಹೊಸ ವಾಹನಗಳ ಮಾರಾಟ ಪ್ರಮಾಣವು ಭಾರೀ ಕುಸಿತ ಕಂಡಿದ್ದು, ಕೆಲವು ಕೆಲವು ವಾಹನಗಳನ್ನು ಹೊರತುಪಡಿಸಿ ಬಹುತೇಕ ವಾಹನ ಮಾದರಿಗಳು ಗ್ರಾಹಕರ ಬೇಡಿಕೆಯಲ್ಲಿ ತೀವ್ರ ಹಿನ್ನಡೆ ಅನುಭವಿಸಿವೆ.

ಹೋಂಡಾ ಇಂಡಿಯಾ ಕೂಡಾ ಕಾರು ಮಾರಾಟ ಭಾರೀ ಹಿನ್ನಡೆ ಅನುಭವಿಸಿದ್ದು, 2019ರ ಮೇ ಅವಧಿಯಲ್ಲಿನ ಮಾರಾಟಕ್ಕಿಂತ 2020ರ ಅವಧಿಯ ಕಾರು ಮಾರಾಟ ಪ್ರಮಾಣವು ಶೇ.96.72ರಷ್ಟು ಕುಸಿತ ಕಂಡಿದೆ. 2019ರ ಮೇ ಅವಧಿಯಲ್ಲಿ 11,442 ಯುನಿಟ್ ಮಾರಾಟ ಮಾಡಿದ್ದ ಹೋಂಡಾ ಕಂಪನಿಯು 2020ರ ಮೇ 4ರಿಂದ 31ರ ಅವಧಿಯಲ್ಲಿ ಕೇವಲ 375 ಯುನಿಟ್ ಮಾತ್ರ ಮಾರಾಟ ಮಾಡಿದೆ.

ಲಾಕ್‌ಡೌನ್ ಸಂಕಷ್ಟದಿಂದಾಗಿ ಬಹುತೇಕ ಕಾರು ಮಾರಾಟ ಕಂಪನಿಗಳು ಭಾರೀ ಪ್ರಮಾಣದ ನಷ್ಟ ಅನುಭವಿಸುತ್ತಿದ್ದು, ಲಾಕ್‌ಡೌನ್ ವಿನಾಯ್ತಿ ನಂತರವು ಹೊಸ ವಾಹನ ಮಾರಾಟವು ಮಂದಗತಿ ಸಾಗುತ್ತಿದೆ.

ಆಟೋ ಉದ್ಯಮ ಸೇರಿದಂತೆ ಎಲ್ಲಾ ವಲಯದಲ್ಲೂ ಕರೋನಾ ಮಹಾಮಾರಿಯಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದ್ದು, ವ್ಯಾಪಾರ ಅಭಿವೃದ್ದಿಯು ಇದೀಗ ಹೊಸ ಸವಾಲಾಗಿ ಪರಿಣಮಿಸಿದೆ. ಸದ್ಯಕ್ಕೆ ಆಟೋ ಉದ್ಯಮಕ್ಕೆ ಕೆಲವು ವಿನಾಯ್ತಿಗಳನ್ನು ನೀಡಲಾಗಿದ್ದರೂ ಕೂಡಾ ವಾಹನ ಖರೀದಿದಾರರು ಇಲ್ಲದೆ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.

ಲಾಕ್‌ಡೌನ್‌ನಿಂದ ಬಹುತೇಕ ವಾಣಿಜ್ಯ ಚಟುವಟಿಕೆಗಳು ನೆಲಕಚ್ಚಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಉದ್ಯೋಗದ ಅಭದ್ರತೆ ಇದೀಗ ಅತಿ ದೊಡ್ಡ ಸಮಸ್ಯೆಯಾಗಿ ಕಾಡತೋಡಗಿದೆ. ಹೀಗಿರುವಾಗ ಹೊಸ ವಾಹನಗಳ ಮಾರಾಟವನ್ನು ಸರಿದಾರಿಗೆ ತರಲು ಯತ್ನಿಸುತ್ತಿರುವ ಆಟೋ ಕಂಪನಿಯು ಕೆಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸುತ್ತಿವೆ.
MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಹೊಸ ವಾಹನ ಖರೀದಿದಾರರಿಗೆ ಇಎಂಐ ತಗ್ಗಿಸಿ ಅತಿ ಸುಲಭವಾದ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದ್ದರೂ ವಾಹನ ಮಾರಾಟವು ಮಂದಗತಿಯಲ್ಲಿ ಸಾಗಿದ್ದು, ಲಾಕ್‌ಡೌನ್‌ಗೂ ಮೊದಲು ಬುಕ್ಕಿಂಗ್ ಮಾಡಿ ವಾಹನ ಖರೀದಿಯ ಸಂಭ್ರಮದಲ್ಲಿದ್ದ ಗ್ರಾಹಕರು ಇದೀಗ ಖರೀದಿ ಪ್ರಕ್ರಿಯೆಯಿಂದ ಹಿಂದೆ ಸರಿಯುತ್ತಿರುವುದು ಆಟೋ ಕಂಪನಿಗಳನ್ನು ಚಿಂತೆಗೀಡು ಮಾಡಿದೆ.

ಮಾರ್ಚ್ 15ರ ಮುನ್ನ ದೇಶಾದ್ಯಂತ ಹೊಸ ವಾಹನಗಳಿಗೆ ಬುಕ್ಕಿಂಗ್ ಮಾಡಿದ್ದ ಗ್ರಾಹಕರಲ್ಲಿ ಸುಮಾರು ಶೇ.60ರಿಂದ ಶೇ.70ರಷ್ಟು ಜನ ಹೊಸ ವಾಹನ ಖರೀದಿಯಿಂದ ಹಿಂದೆ ಸರಿದಿದ್ದು, ಉದ್ಯೋಗದ ಅಭದ್ರತೆ ಮತ್ತು ಆದಾಯಕ್ಕಿಂತ ಖರ್ಚು ಹೆಚ್ಚುತ್ತಿರುವುದರಿಂದ ಹೊಸ ವಾಹನಗಳ ಖರೀದಿಯ ಸಂಖ್ಯೆಯಲ್ಲಿ ಭಾರೀ ಪ್ರಮಾಣದ ಇಳಿಕೆಯಾಗಿದೆ.
MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಇದರಿಂದ ಗ್ರಾಹಕರನ್ನು ಸೆಳೆಯಲು ಆಟೋ ಕಂಪನಿಗಳು ಅತಿ ಸುಲಭವಾದ ಸಾಲಸೌಲಭ್ಯಗಳನ್ನು ನೀಡುತ್ತಿದ್ದು, ಹೋಂಡಾ ಕೂಡಾ ತನ್ನ ಜನಪ್ರಿಯ ಕಾರುಗಳ ಮೇಲೆ ವಿಶೇಷ ಆಫರ್‌ಗಳನ್ನು ಘೋಷಣೆ ಮಾಡಿ ಗ್ರಾಹಕರ ಸೆಳೆಯುವ ಯತ್ನಯಲ್ಲಿದೆ.


Click it and Unblock the Notifications