ದೀಪಾವಳಿ ಸಂಭ್ರಮಕ್ಕಾಗಿ ಹೊಸ ಹೋಂಡಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ
ಜನಪ್ರಿಯ ಕಾರು ತಯಾರಕ ಕಂಪನಿಯಾದ ಹೋಂಡಾ ಕಾರ್ಸ್ ಇಂಡಿಯಾ ದೀಪಾವಳಿ ವಿಶೇಷತೆಗಾಗಿ ತನ್ನ ಆಯ್ದ ಮಾದರಿಗಳಿಗೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಹೋಂಡಾ ಕಂಪನಿಯು ತನ್ನ ಆಯ್ದ ಕಾರು ಮಾದರಿಗಳಿಗೆ ನಗದು ರಿಯಾಯಿತಿ, ಎಕ್ಸ್‌ಚೆಂಜ್ ಬೋನಸ್ ಮತ್ತು ವಿಶೇಷ ಪ್ಯಾಕೇಜ್‌ಗಳನ್ನು ಘೋಷಿಸಿದೆ.

ಗ್ರಾಹಕರು ಆನ್‌ಲೈನ್‌ನಲ್ಲಿ ಅಥವಾ ಭಾರತದಾದ್ಯಂತದ ಯಾವುದೇ ಅಧಿಕೃತ ಡೀಲರುಗಳ ಬಳಿಯಿಂದ ಖರೀದಿಸುವಾಗ ಈ ರಿಯಾಯಿತಿಗಳು ಲಭ್ಯವಿರುತ್ತದೆ. ಈ ತಿಂಗಳು ಅಂತ್ಯದವರೆಗೆ ಈ ರಿಯಾಯಿತಿಗಳು ಲಭ್ಯವಿರಲಿದೆ. ಮಾದರಿ ಮತ್ತು ರೂಪಾಂತರವನ್ನು ಅವಲಂಬಿಸಿ ರೂ.2.5 ಲಕ್ಷಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ. ಹೋಂಡಾ ಕಾರುಗಳ ಮೇಲೆ ನೀಡಿರುವ ಭರ್ಜರಿ ರಿಯಾಯಿತಿಗಳ ಬಗ್ಗೆ ಮಾಹಿತಿ ಇಲ್ಲಿವೆ.

ಹೋಂಡಾ ಅಮೇಜ್
ಹೋಂಡಾ ಕಂಪನಿಯ ತನ್ನ ಕಾಂಪ್ಯಾಕ್ಟ್-ಸೆಡಾನ್ ಹೋಂಡಾ ಅಮೇಜ್ ಮೇಲೆ ಭರ್ಜರಿ ರಿಯಾಯಿತಿಯನ್ನು ಘೊಷಿಸಿದೆ. ಹೋಂಡಾ ಅಮೇಜ್ ಪೆಟ್ರೋಲ್ ಕಾರಿನ ಮೇಲೆ ರೂ.47,000 ಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ.
MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಇನ್ನು ಹೋಂಡಾ ಅಮೇಜ್ ಡೀಸೆಲ್ ಮಾದರಿಯ ಮೇಲೆ ರೂ.37,000 ಗಳವರೆಗೆ ರಿಯಾಯಿತಿಯನ್ನು ಘೋಷಿಸಲಾಗಿದೆ. ಇನ್ನು ಅಮೇಜ್ ಕಾರಿಗಾಗಿ ಹಳೆಯ ಕಾರನ್ನು ವಿನಿಮಯ ಮಾಡಿಕೊಳ್ಳಲು ಬಯಸುವ ಗ್ರಾಹಕರಿಗೆ ರೂ.15 ಸಾವಿರ ಗಳವರೆಗೆ ಎಕ್ಸ್‌ಚೆಂಜ್ ಬೋನಸ್ ನೀಡಲಾಗುತ್ತದೆ.

ಹೆಚ್ಚುವರಿಯಾಗಿ ನಾಲ್ಕನೇ ಮತ್ತು ಐದನೇ ವರ್ಷಕ್ಕೆ ರೂ.12,000 ಮೌಲ್ಯದ ವಾರಂಟಿ ಪ್ಯಾಕೇಜ್ ಅನ್ನು ಸಹ ಗ್ರಾಹಕರು ಪಡೆಯುತ್ತಾರೆ. ಡೀಸೆಲ್ ಮತ್ತು ಪೆಟ್ರೋಲ್ ಮಾದರಿಗಳಿಗೆ ಗ್ರಾಹಕರಿಗೆ ಕ್ರಮವಾಗಿ ರೂ.10,000 ಮತ್ತು ರೂ.20,000 ನಗದು ರಿಯಾಯಿತಿ ನೀಡಲಾಗುತ್ತದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಹೋಂಡಾ ಜಾಝ್
ಹೋಂಡಾ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಜಾಝ್ ಕಾರಿನ ಮೇಲೆ ಒಟ್ಟು ರೂ.40,000 ಗಳವರೆಗೆ ರಿಯಾಯಿತಿಯನ್ನು ನೀಡಲಾಗಿದೆ. ಇದರಲ್ಲಿ ರೂ.25 ಸಾವಿರ ಗಳವರೆಗೆ ನಗದು ಬೋನಸ್ ಮತ್ತು ರೂ.15,000 ಎಕ್ಸ್‌ಚೆಂಜ್ ಬೋನಸ್ ಅನ್ನು ನೀಡಲಾಗಿದೆ, ಹೊಸ ಜಾಝ್ ಕಾರಿನ ಬೆಲೆ ರೂ.7.49 ಲಕ್ಷಗಳಾಗಿದೆ.

ಹೋಂಡಾ ಸಿಟಿ
ಐದನೇ ತಲೆಮಾರಿನ ಹೋಂಡಾ ಸಿಟಿಯನ್ನು ಹಳೆಯ ಕಾರಿಗೆ ವಿನಿಮಯ ಮಾಡಿದ ನಂತರ ರೂ.30,000 ಗಳವರೆಗೆ ಎಕ್ಸ್‌ಚೆಂಜ್ ಬೋನಸ್ ಅನ್ನು ನೀಡಲಾಗುತ್ತದೆ. ಹೊಸ ಸಿಟಿ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.10.89 ಲಕ್ಷಗಳಿಂದ 12.39 ಲಕ್ಷಗಳಾಗಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೋಂಡಾ ಡಬ್ಲ್ಯುಆರ್-ವಿ
ಹೋಂಡಾ ತನ್ನ ಡಬ್ಲ್ಯುಆರ್-ವಿ ಕಾಂಪ್ಯಾಕ್ಟ್-ಎಸ್‌ಯುವಿಗಯನ್ನು ಬಿಎಸ್ 6 ಮಾಲಿನ್ಯ ನಿಯಮಕ್ಕಾಗಿ ಅನುಗುಣವಾಗಿ ನವೀಕರಿಸಸಲಾಗಿ ಬಿಡುಗಡೆಗೊಳಿಸಿತ್ತು. ಡಬ್ಲ್ಯುಆರ್-ವಿ ಕಾಂಪ್ಯಾಕ್ಟ್-ಎಸ್‌ಯುವಿಯು ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳಲ್ಲಿ ಲಭ್ಯವಿದೆ.

ಡಬ್ಲ್ಯುಆರ್-ವಿ ಕಾಂಪ್ಯಾಕ್ಟ್-ಎಸ್‌ಯುವಿಯ ಎಲ್ಲಾ ರೂಪಾಂತರಗಳಿಗೆ ರೂ.25 ಸಾವಿರಗಳವರೆಗೆ ನಗದು ರಿಯಾಯಿತಿಯನ್ನು ನೀಡಲಾಗುತ್ತದೆ. ಈ ಕಾಂಪ್ಯಾಕ್ಟ್-ಎಸ್‌ಯುವಿಯ ಮೇಲೆ ರೂ.15 ಸಾವಿರಗಳವರೆಗೆ ಎಕ್ಸ್‌ಚೆಂಜ್ ಬೋನಸ್ ಅನ್ನು ನೀಡಲಾಗುತ್ತದೆ.

ಹೋಂಡಾ ಸಿವಿಕ್
ಹೋಂಡಾ ಡೀಸೆಲ್ ಮಾದರಿಯ ಮೇಲೆ ರೂ.2.5 ಲಕ್ಷಗಳವರೆಗೆ ನಗದು ರಿಯಾಯಿತಿಯನ್ನು ಘೋಷಿಸಿದೆ. ಇನ್ನು ಹೋಂಡಾ ಪೆಟ್ರೋಲ್ ಮಾದರಿಯ ಮೇಲೆ ರೂ.1 ಲಕ್ಷಗಳವರೆಗೆ ರಿಯಾಯಿತಿಯೊಂದಿಗೆ ನೀಡಲಾಗುತ್ತದೆ.

ಹೋಂಡಾ ಕಂಪನಿಯು ತನ್ನ ಜನಪ್ರಿಯ ಮಾದರಿಗಳಿಗೆ ಅತ್ಯಾಕರ್ಷಕ ರಿಯಾಯಿತಿಗಳನ್ನು ನೀಡಲಾಗಿದೆ. ಹಬ್ಬದ ಸೀಸನ್ ನಲ್ಲಿ ಈ ರಿಯಾಯಿತಿಗಳು ಮಾರಾಟವನ್ನು ಹೆಚ್ಚಿಸಲು ಸಹಾಯವಾಗುತ್ತದೆ.


Click it and Unblock the Notifications








