ಬಿಡುಗಡೆಯಾಗಲಿದೆ ಹೋಂಡಾ ಸಿಟಿ ಹೈಬ್ರಿಡ್ ಆವೃತ್ತಿ

ಹೋಂಡಾ ಇಂಡಿಯಾ ಕಂಪನಿಯು ತನ್ನ ಐದನೇ ತಲೆಮಾರಿನ ಸಿಟಿ ಕಾರನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಹೋಂಡಾ ಸಿಟಿ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಬ ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ.

ಬಿಡುಗಡೆಯಾಗಲಿದೆ ಹೋಂಡಾ ಸಿಟಿ ಹೈಬ್ರಿಡ್ ಆವೃತ್ತಿ

ಇದೀಗ ಹೋಂಡಾ ಕಂಪನಿಯು ಸಿಟಿ ಕಾರನ್ನು ಹೈಬ್ರಿಡ್ ಮಾದರಿಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ಹೋಂಡಾ ಸಿಟಿ ಹೈಬ್ರಿಡ್ ಆವೃತ್ತಿಯು ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಲಿದೆ ಎಂದು ವರದಿ ಪ್ರಕಟವಾಗಿದೆ. ಹೊಸ ಹೈಬ್ರಿಡ್ ಮಾದರಿಗಳನ್ನು ಅಭಿವೃದ್ದಿ ಪಡಿಸುವ ಕಾರ್ಯಗಳು ಹೋಂಡಾ ಕಂಪನಿಯು 3-4 ವರ್ಷಗಳ ಹಿಂದೆ ಆರಂಭಿಸಿದೆ.

ಬಿಡುಗಡೆಯಾಗಲಿದೆ ಹೋಂಡಾ ಸಿಟಿ ಹೈಬ್ರಿಡ್ ಆವೃತ್ತಿ

ಸಿಯಾಜ್ ಮಧ್ಯಮ ಗಾತ್ರದ ಸೆಡಾನ್‌ನಲ್ಲಿ ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನಗಳನ್ನು ಪರಿಚಯಿಸುವ ಮಾರುತಿ ಸುಜುಕಿಯ ತಂತ್ರವನ್ನು ಹೋಂಡಾ ಅಳವಡಿಸಿಕೊಳ್ಳಬಹುದು. ಕಂಪನಿಯು ಎರಡು ಮೋಟಾರು ಹೈಬ್ರಿಡ್ ಸಿಸ್ಟಂನೊಂದಿಗೆ ಸಿಟಿ ಸೆಡಾನ್ ಅನ್ನು ಪರಿಚಯಿಸಬಹುದು ಎಂದು ಕೆಲವು ವರದಿಗಳು ಪ್ರಕಟವಾಗಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ

ಬಿಡುಗಡೆಯಾಗಲಿದೆ ಹೋಂಡಾ ಸಿಟಿ ಹೈಬ್ರಿಡ್ ಆವೃತ್ತಿ

ಹೋಂಡಾ ಜಾಝ್ ಇದೇ ರೀತಿಯ ಹೈಬ್ರಿಡ್ ಸಿಸ್ಟಂನೊಂದಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೋಂಡಾ ಜಾಝ್ 1.5-ಲೀಟರ್ ಅಟ್ಕಿನ್ಸನ್ ಸೈಕಲ್ ಪೆಟ್ರೋಲ್ ಎಂಜಿನ್ ಅನ್ನು ಎರಡು ಎಲೆಕ್ಟ್ರಿಕ್ ಮೋಟರ್‌ಗಳನ್ನು ಹೊಂದಿದೆ.

ಬಿಡುಗಡೆಯಾಗಲಿದೆ ಹೋಂಡಾ ಸಿಟಿ ಹೈಬ್ರಿಡ್ ಆವೃತ್ತಿ

ಹೊಸ ಹೋಂಡಾ ಸಿಟಿ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಪಡೆದುಕೊಂಡಿದೆ. ಈ ವರ್ಷದ ಜುಲೈ ತಿಂಗಳಲ್ಲಿ ಮಾರಾಟದಲ್ಲಿ ಮಾರಾಟದಲ್ಲಿ ಹೋಂಡಾ ಸಿಟಿ ತನ್ನ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಬಿಡುಗಡೆಯಾಗಲಿದೆ ಹೋಂಡಾ ಸಿಟಿ ಹೈಬ್ರಿಡ್ ಆವೃತ್ತಿ

ಐದನೇ ತಲೆಮಾರಿನ ಹೋಂಡಾ ಸಿಟಿ ಕಾರಿನ ಪ್ರಾರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.10.90 ಲಕ್ಷಗಳಾಗಿದೆ. ಹೊಸ ತಲೆಮಾರಿನ ಸಿಟಿ ಕಾರು ವಿ, ವಿಎಕ್ಸ್, ಝೆಡ್ಎಕ್ಸ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ.

ಬಿಡುಗಡೆಯಾಗಲಿದೆ ಹೋಂಡಾ ಸಿಟಿ ಹೈಬ್ರಿಡ್ ಆವೃತ್ತಿ

2020ರ ಸಿಟಿ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಯಲ್ಲೂ ಲಭ್ಯವಿದೆ. ಇದರಲ್ಲಿ 1.5-ಲೀಟರ್ ಐ-ವಿಟಿಇಸಿ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಐ-ಡಿಟಿಇಸಿ ಡೀಸೆಲ್ ಎಂಜಿನ್ ಅನ್ನು ಹೊಂದಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಬಿಡುಗಡೆಯಾಗಲಿದೆ ಹೋಂಡಾ ಸಿಟಿ ಹೈಬ್ರಿಡ್ ಆವೃತ್ತಿ

1.5-ಲೀಟರ್ ಐ-ವಿಟಿಇಸಿ ಪೆಟ್ರೋಲ್ ಎಂಜಿನ್ 120 ಬಿಹೆಚ್‍ಪಿ ಪವರ್ ಮತ್ತು 145 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನು 1.5-ಲೀಟರ್ ಐ-ಡಿಟಿಇಸಿ ಡೀಸೆಲ್ ಎಂಜಿನ್ 100 ಬಿಹೆಚ್‍ಪಿ ಪವರ್ ಮತ್ತು 200 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಿಡುಗಡೆಯಾಗಲಿದೆ ಹೋಂಡಾ ಸಿಟಿ ಹೈಬ್ರಿಡ್ ಆವೃತ್ತಿ

ಹೋಂಡಾ ಸಿಟಿ ಯಾವಾಗಲೂ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಸೆಡಾನ್ ಮಾದರಿಯಾಗಿದೆ. ಹೋಂಡಾ ಸಿಟಿ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ಯಶ್ವಸಿಯಾಗಿದೆ. ಇದರಿಂದ ಸಿಟಿ ಕಾರನ್ನು ಹೈಬ್ರಿಡ್ ಆವೃತ್ತಿಯಲ್ಲಿ ಬಿಡುಗಡೆಗೊಳಿಸಲು ಹೋಂಡಾ ಕಂಪನಿಯು ಮುಂದಾಗಿದೆ.

Article Published On: Tuesday, August 11, 2020, 20:34 [IST]
English summary
Honda City Hybrid Version Launch Likely In 2021. Read In Kannada.
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+