ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೋಂಡಾ ಸಿಟಿ ಆರ್‍ಎಸ್ ಐ-ಎಂಎಂಡಿ ಹೈಬ್ರಿಡ್ ಆವೃತ್ತಿ

ಹೋಂಡಾ ಇಂಡಿಯಾ ಕಂಪನಿಯು ತನ್ನ ಹೊಸ ಸಿಟಿ ಕಾರನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಹೋಂಡಾ ಸಿಟಿ ಕಾರು ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಎಂಬ ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೋಂಡಾ ಸಿಟಿ ಆರ್‍ಎಸ್ ಐ-ಎಂಎಂಡಿ ಹೈಬ್ರಿಡ್ ಆವೃತ್ತಿ

ಇನ್ನು ಹೋಂಡಾ ಕಂಪನಿಯು ಸಿಟಿ ಕಾರನ್ನು ಭಾರತದಲ್ಲಿ ಹೈಬ್ರಿಡ್ ಆವೃತ್ತಿಯಲ್ಲಿಯು ಬಿಡುಗಡೆಗೊಳಿಸಲಿದೆ. ಆದರೆ ಹೋಂಡಾ ಸಿಟಿ ಆವೃತ್ತಿಯು ಮೊದಲು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಹೋಂಡಾ ಕಂಪನಿಯು ಸಿಟಿ ಆರ್‍ಎಸ್ ಇಂಟೆಲಿಜೆಂಟ್ ಮಲ್ಟಿ-ಮೋಡ್ ಡ್ರೈವ್ (ಐ-ಎಂಎಂಡಿ) ಹೈಬ್ರಿಡ್ ಆವೃತ್ತಿಯನ್ನು ಮಲೇಷ್ಯಾದಲ್ಲಿ ಅನಾವರಣಗೊಳಿಸಿದೆ. ಈ ಹೈಬ್ರಿಡ್ ಆವೃತ್ತಿಯು 1.5 ಎಲ್ ಪೆಟ್ರೋಲ್ ಎಂಜಿನ್‌ನೊಂದಿಗೆ ಲಭ್ಯವಿರಲಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೋಂಡಾ ಸಿಟಿ ಆರ್‍ಎಸ್ ಐ-ಎಂಎಂಡಿ ಹೈಬ್ರಿಡ್ ಆವೃತ್ತಿ

ಹೊಸ ಹೋಂಡಾ ಸಿಟಿ ಆರ್‍ಎಸ್ ಐ-ಎಂಎಂಡಿ ಆವೃತ್ತಿಯನ್ನು ಈ ವರ್ಷದ ಕೊನೆಯಲ್ಲಿ ಮಲೇಷ್ಯಾದಲ್ಲಿ ಬಿಡುಗಡೆಗೊಳಿಸಲಿದೆ. ಈ ಹೋಂಡಾ ಸಿಟಿ ಹೈಬ್ರಿಡ್ ಆವೃತ್ತಿಯು ಇತರ ಯಾವುದೇ ಮಾರುಕಟ್ಟೆಯಿಲ್ಲದ ಕಾರಣ ಇದು ಜಾಗತಿಕವಾಗಿ ಮೊದಲ ಬಾರಿಗೆ ಮಲೇಷ್ಯಾದಲ್ಲಿ ಬಿಡುಗಡೆಯಾಗಲಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೋಂಡಾ ಸಿಟಿ ಆರ್‍ಎಸ್ ಐ-ಎಂಎಂಡಿ ಹೈಬ್ರಿಡ್ ಆವೃತ್ತಿ

ಇನ್ನು ಹೋಂಡಾ ಹೊಸ ಐ-ಎಂಎಂಡಿ ಹೈಬ್ರಿಡ್ ಎಂಜಿನ್ ಈಗಗಾಲೇ ಜಾಝ್ ಕಾರಿನಲ್ಲಿ. ಹೊಸ ಸಿಟಿ ಆರ್‍ಎಸ್ ಐ-ಎಂಎಂಡಿ ಹೈಬ್ರಿಡ್ ಆವೃತ್ತಿಯಲ್ಲಿ ಆವೃತ್ತಿಯಲ್ಲಿ 2.5-ಲೀಟರ್ ಎಲೆಕ್ಟ್ರಿಕ್ ಮೋಟಾರ್ ಅನ್ನು ಹೊಂದಿರಲಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೋಂಡಾ ಸಿಟಿ ಆರ್‍ಎಸ್ ಐ-ಎಂಎಂಡಿ ಹೈಬ್ರಿಡ್ ಆವೃತ್ತಿ

ಈ ಮೋಟಾರ್ 109 ಬಿಹೆಚ್‍ಪಿ ಪವರ್ ಮತ್ತು 253 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ 1.5 ಎಲ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ. ಇನ್ನು ಜಾಝ್ ಹೈಬ್ರಿಡ್ ಆವೃತ್ತಿಯು 175 ಟಾಪ್ ಸ್ಪೀಡ್ ಅನ್ನು ಹೊಂದಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೋಂಡಾ ಸಿಟಿ ಆರ್‍ಎಸ್ ಐ-ಎಂಎಂಡಿ ಹೈಬ್ರಿಡ್ ಆವೃತ್ತಿ

ಹೋಂಡಾ ಜಾಝ್ ಹೈಬ್ರಿಡ್ ಆವೃತ್ತಿಯು ಕೇವಲ 9.4 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ಕ್ರಮಿಸುಸುತ್ತದೆ. ಈ ಹೋಂಡಾ ಜಾಝ್ ಕಾರು ಇವಿ, ಹೈಬ್ರಿಡ್ ಮತ್ತು ಎಂಜಿನ್ ಎಂಬ ಮೂರು ಡ್ರೈವಿಂಗ್ ಮೋಡ್ ಗಳನ್ನು ಹೊಂದಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೋಂಡಾ ಸಿಟಿ ಆರ್‍ಎಸ್ ಐ-ಎಂಎಂಡಿ ಹೈಬ್ರಿಡ್ ಆವೃತ್ತಿ

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಂಡ ಐದನೇ ತಲೆಮಾರಿನ ಹೋಂಡಾ ಸಿಟಿ ಕಾರಿನ ಪ್ರಾರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.10.90 ಲಕ್ಷಗಳಾಗಿದೆ. ಹೊಸ ತಲೆಮಾರಿನ ಸಿಟಿ ಕಾರು ವಿ, ವಿಎಕ್ಸ್, ಝೆಡ್ಎಕ್ಸ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ.

MOST READ: ಸ್ಥಗಿತಗೊಂಡಿಲ್ಲ ಫೋಕ್ಸ್‌ವ್ಯಾಗನ್ ಕಾರಿನ ಈ ಮಾದರಿಗಳು

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೋಂಡಾ ಸಿಟಿ ಆರ್‍ಎಸ್ ಐ-ಎಂಎಂಡಿ ಹೈಬ್ರಿಡ್ ಆವೃತ್ತಿ

2020ರ ಸಿಟಿ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಯಲ್ಲೂ ಲಭ್ಯವಿದೆ. ಇದರಲ್ಲಿ 1.5-ಲೀಟರ್ ಐ-ವಿಟಿಇಸಿ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಐ-ಡಿಟಿಇಸಿ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. 1.5-ಲೀಟರ್ ಐ-ವಿಟಿಇಸಿ ಪೆಟ್ರೋಲ್ ಎಂಜಿನ್ 120 ಬಿಹೆಚ್‍ಪಿ ಪವರ್ ಮತ್ತು 145 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನು 1.5-ಲೀಟರ್ ಐ-ಡಿಟಿಇಸಿ ಡೀಸೆಲ್ ಎಂಜಿನ್ 100 ಬಿಹೆಚ್‍ಪಿ ಪವರ್ ಮತ್ತು 200 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೋಂಡಾ ಸಿಟಿ ಆರ್‍ಎಸ್ ಐ-ಎಂಎಂಡಿ ಹೈಬ್ರಿಡ್ ಆವೃತ್ತಿ

ಹೋಂಡಾ ಸಿಟಿ ಯಾವಾಗಲೂ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಸೆಡಾನ್ ಮಾದರಿಯಾಗಿದೆ. ಹೋಂಡಾ ಸಿಟಿ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ಯಶ್ವಸಿಯಾಗಿದೆ. ಇದರಿಂದ ಸಿಟಿ ಕಾರನ್ನು ಹೈಬ್ರಿಡ್ ಆವೃತ್ತಿಯಲ್ಲಿ ಬಿಡುಗಡೆಗೊಳಿಸಲು ಹೋಂಡಾ ಕಂಪನಿಯು ಮುಂದಾಗಿದೆ. ಆದರೆ ಈ ಹೊಂಡಾ ಸಿಟಿ ಹೈಬ್ರಿಡ್ ಆವೃತ್ತಿಯು ಮೊದಲು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

Most Read Articles

Kannada
Read more on ಹೋಂಡಾ honda
English summary
2020 Honda City RS i-MMD Hybrid Global Debut This Year. Read In Kannada.
Story first published: Tuesday, August 18, 2020, 20:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X