ಭಾರತದಲ್ಲಿ ಹೋಂಡಾ ಹೆಚ್ಆರ್-ವಿ ಎಸ್‌ಯುವಿ ಬಿಡುಗಡೆಯಾಗುವುದು ಪಕ್ಕಾ..

ಭಾರತದಲ್ಲಿ ಕೆಲವು ಕಾರಣಾಂತರಗಳಿಂದ ಹೊಸ ಮಾದರಿಯ ಹೆಚ್‌ಆರ್-ವಿ ಎಸ್‌ಯುವಿ ಬಿಡುಗಡೆಯಿಂದ ಹಿಂದೆ ಸರಿದ್ದ ಹೋಂಡಾ ಇಂಡಿಯಾ ಕಂಪನಿಯು ಇದೀಗ ಮತ್ತೆ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಮುಂಬರುವ ದಿನಗಳಲ್ಲಿ ಹೆಚ್ಆರ್-ವಿ ಕಾರನ್ನು ಬಿಡುಗಡೆಗೊಳಿಸುವ ಸುಳಿವು ನೀಡಿದೆ.

ಭಾರತದಲ್ಲಿ ಹೋಂಡಾ ಹೆಚ್ಆರ್-ವಿ ಎಸ್‌ಯುವಿ ಬಿಡುಗಡೆಯಾಗುವುದು ಪಕ್ಕಾ..

ಪ್ರತಿಸ್ಪರ್ಧಿ ಕಾರುಗಳ ಮಾದರಿಗಳ ಬೆಲೆ ಸಮರದಿಂದಾಗಿ ಕಳೆದ ವರ್ಷ ಹೆಚ್‌ಆರ್-ವಿ ಕಾರು ಬಿಡುಗಡೆಯ ಯೋಜನೆಯಿಂದ ಹಿಂದೆ ಸರಿದ್ದ ಹೋಂಡಾ ಸಂಸ್ಥೆಯು ಇದೀಗ ಮತ್ತೆ ಹೊಸ ಕಾರು ಬಿಡುಗಡೆಗಾಗಿ ಸಿದ್ದತೆ ನಡೆಸುತ್ತಿದ್ದು, ಪ್ರೀಮಿಯಂ ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಹೊಸ ಕಾರು ಮಾರುಕಟ್ಟೆ ಪ್ರವೇಶಿಸಲಿದೆ. ಸಿಟಿ ಸೆಡಾನ್ ಮತ್ತು ಸಿವಿಕ್ ಸೆಡಾನ್ ಕಾರುಗಳ ಮಧ್ಯದ ಸ್ಥಾನದಲ್ಲಿರುವ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರು ಪ್ರೀಮಿಯಂ ಫೀಚರ್ಸ್‌ಗಳಿಂದಾಗಿ ತುಸು ದುಬಾರಿ ಎನ್ನಿಸಲಿದೆ.

ಭಾರತದಲ್ಲಿ ಹೋಂಡಾ ಹೆಚ್ಆರ್-ವಿ ಎಸ್‌ಯುವಿ ಬಿಡುಗಡೆಯಾಗುವುದು ಪಕ್ಕಾ..

ಹೆಚ್ಆರ್-ವಿ ಬಿಡುಗಡೆಗಾಗಿ ಈಗಾಗಲೇ ಹಲವು ಸುತ್ತಿನ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದ್ದು, ಸಿವಿಕ್ ಕಾರಿನಲ್ಲಿ ಬಳಕೆ ಮಾಡಲು ನಿರ್ಧರಿಸಿರುವ ಬಿಎಸ್-6 ಎಂಜಿನ್‌ನೊಂದಿಗೆ ಹೊಸ ಕಾರು ಮಾರುಕಟ್ಟೆ ಪ್ರವೇಶಿಸಲಿದೆ.

ಭಾರತದಲ್ಲಿ ಹೋಂಡಾ ಹೆಚ್ಆರ್-ವಿ ಎಸ್‌ಯುವಿ ಬಿಡುಗಡೆಯಾಗುವುದು ಪಕ್ಕಾ..

ಪ್ರೀಮಿಯಂ ವೈಶಿಷ್ಟ್ಯತೆಗಳಿಂದಾಗಿ ಹೆಚ್‍ಆರ್-ವಿ ಕಾರು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್, ರೆನಾಲ್ಟ್ ಕ್ಯಾಪ್ಚರ್ ಮತ್ತು ಜೀಪ್ ಕಂಪಾಸ್ ಕಾರುಗಳಿಗೆ ತೀವ್ರ ಪೈಪೋಟಿ ನೀಡುವ ಗುಣಲಕ್ಷಣಗಳನ್ನು ಹೊಂದಿದ್ದು, ಯುರೋಪ್ ಮಾರುಕಟ್ಟೆಗಳಲ್ಲಿ 2014ರಲ್ಲೇ ಬಿಡುಗಡೆಗೊಂಡಿರುವ ಹೆಚ್ಆರ್-ವಿ ಕಾರು ಸಾಕಷ್ಟು ಬದಲಾವಣೆಗಳೊಂದಿಗೆ ಉತ್ತಮ ಮಾರಾಟ ಹೊಂದಿದೆ.

ಭಾರತದಲ್ಲಿ ಹೋಂಡಾ ಹೆಚ್ಆರ್-ವಿ ಎಸ್‌ಯುವಿ ಬಿಡುಗಡೆಯಾಗುವುದು ಪಕ್ಕಾ..

ಸದ್ಯ ಈ ಕಾರು ಜಪಾನ್ ಮಾರುಕಟ್ಟೆಯಲ್ಲಿ ವೆಝೆಲ್ ಎನ್ನುವ ಹೆಸರಿನಲ್ಲಿ ಮಾರಾಟಗೊಳ್ಳುತ್ತಿದ್ದು, ಭಾರತೀಯ ಮಾರುಕಟ್ಟೆಗಾಗಿ ಹೆಸರು ಬದಲಾಯಿಸಿರುವ ಹೋಂಡಾ ಸಂಸ್ಥೆಯು ಜಾಝ್ ಕಾರಿನ ಪ್ಲಾಟ್‍‍‍ಫಾರ್ಮ್‍‍ನಲ್ಲೇ ಹೊಸ ಕಾರುನ್ನು ಅಭಿವೃದ್ದಿಗೊಳಿಸಿ ಹೆಚ್‌ಆರ್-ವಿ ಹೆಸರಿನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ. ಇದಕ್ಕಾಗಿಯೇ ಸಿಟಿ ಸೆಡಾನ್ ಮತ್ತು ಡಬ್ಲ್ಯುಆರ್‍-ವಿ ಕಾರಿನ ಕೆಲವು ವಿನ್ಯಾಸಗಳನ್ನು ಸಹ ಎರವಲು ಪಡೆಯಲಾಗಿದ್ದು, ಕಾರಿನ ಬೆಲೆ ತಗ್ಗಿಸಲು ಕೆಲವು ಸುಧಾರಿತ ತಾಂತ್ರಿಕ ಸೌಲಭ್ಯಗಳನ್ನು ಕೈಬಿಡಲಾಗಿದೆ.

ಭಾರತದಲ್ಲಿ ಹೋಂಡಾ ಹೆಚ್ಆರ್-ವಿ ಎಸ್‌ಯುವಿ ಬಿಡುಗಡೆಯಾಗುವುದು ಪಕ್ಕಾ..

ಹಾಗೆಯೇ ಹೋಂಡಾ ಸಂಸ್ಥೆಯು ತನ್ನ ಹೊಸ ಮಾದರಿಯ 1.6-ಲೀಟರ್ ಐ-ಡಿಟಿಇಸಿ ಡೀಸೆಲ್ ಎಂಜಿನ್ ಅನ್ನು ಕಳೆದ ವರ್ಷದ ಬಿಡುಗಡೆಯಾಗಿದ್ದ ಹೊಸ ಸಿವಿಕ್ ಕಾರಿನಲ್ಲಿ ಜೋಡಣೆ ಮಾಡಿ ಯಶಸ್ವಿಯಾಗಿದ್ದು, ಅದೇ ಎಂಜಿನ್ ಅನ್ನು ಇದೀಗ ಬಿಎಸ್-6 ವೈಶಿಷ್ಟ್ಯತೆಯೊಂದಿಗೆ ಉನ್ನತೀಕರಿಸಿ ಹೆಚ್‌ಆರ್-ವಿ ಆವೃತ್ತಿಯಲ್ಲೂ ಜೋಡಣೆಮಾಡುವ ಸಾಧ್ಯತೆಗಳಿವೆ.

ಭಾರತದಲ್ಲಿ ಹೋಂಡಾ ಹೆಚ್ಆರ್-ವಿ ಎಸ್‌ಯುವಿ ಬಿಡುಗಡೆಯಾಗುವುದು ಪಕ್ಕಾ..

2013ರ ಡೆಟ್ರಾಯ್ಟ್ ಮೋಟಾರ್ ಶೋನಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿದ್ದ ಈ ಕಾರು ಗ್ರಾಹಕರ ಬೇಡಿಕೆಯೆಂತೆ ಹಲವು ಬದಲಾವಣೆಗಳೊಂದಿಗೆ ಆಕ್ರಮಣಕಾರಿ ವಿನ್ಯಾಸವನ್ನು ಪಡೆದುಕೊಂಡಿದ್ದು, ಅಗಲವಾದ ಗ್ರಿಲ್, ಹೊಸ ಎಲ್ಇಡಿ ಹೆಡ್‍‍ಲ್ಯಾಂಪ್‍‍ಗಳು, ಟ್ವಿಕ್ಡ್ ಫಾಗ್ ಲ್ಯಾಂಪ್, ಡೇ ಟೈಮ್ ರನ್ನಿಂಗ್ ಲೈಟ್ಸ್ ಹಾಗೂ ಹೊಸ ಫ್ರಂಟ್ ಬಂಪರ್ ಅನ್ನು ಅಳವಡಿಸಲಾಗಿದೆ.

ಭಾರತದಲ್ಲಿ ಹೋಂಡಾ ಹೆಚ್ಆರ್-ವಿ ಎಸ್‌ಯುವಿ ಬಿಡುಗಡೆಯಾಗುವುದು ಪಕ್ಕಾ..

ಹಾಗೆಯೇ ಕಾರಿನ ಒಳಭಾಗದಲ್ಲಿ ಹೋಂಡಾ ಸಂಸ್ಥೆಯ ಸ್ಯಾಟ್‌ಲೈಟ್ ನ್ಯಾವಿಗೆಷನ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಆಯ್ಕೆಗಳನ್ನು ಒಳಗೊಂಡ 11-ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ.

ಭಾರತದಲ್ಲಿ ಹೋಂಡಾ ಹೆಚ್ಆರ್-ವಿ ಎಸ್‌ಯುವಿ ಬಿಡುಗಡೆಯಾಗುವುದು ಪಕ್ಕಾ..

ಇದಲ್ಲದೆ ಪ್ರಯಾಣಿಕರ ಸುರಕ್ಷತೆಗಾಗಿ ಈ ಕಾರಿನಲ್ಲಿ ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್, ರಿಯರ್ ಪಾರ್ಕಿಂಗ್ ಸೆನ್ಸಾರ್ಸ್, ಕೀ ಲೆಸ್ ಎಂಟ್ರಿ, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್ಸ್ ಹಾಗೂ ಸೈಡ್ ಏರ್‌ಬ್ಯಾಗ್ಸ್, ಎಬಿಎಸ್, ಇಬಿಡಿ, ವೆಹಿಕಲ್ ಸ್ಟ್ಯಾಬಿಲಿಟಿ ಅಸ್ಸಿಸ್ಟ್, ಟ್ರಾಕ್ಷನ್ ಕಂಟ್ರೋಲ್ ಮತ್ತು ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ನಂತಹ ಹಲವು ಹೊಸ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

ಭಾರತದಲ್ಲಿ ಹೋಂಡಾ ಹೆಚ್ಆರ್-ವಿ ಎಸ್‌ಯುವಿ ಬಿಡುಗಡೆಯಾಗುವುದು ಪಕ್ಕಾ..

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಹೆಚ್‍ಆರ್‍-ವಿ ಫೇಸ್‍‍ಲಿಫ್ಟ್ ಕಾರುಗಳು 4,295-ಎಂಎಂ ಉದ್ದ, 1,770-ಎಂಎಂ ಅಗಲ ಮತ್ತು 1,605-ಎಂಎಂ ಎತ್ತರವನ್ನು ಪಡೆದಿದ್ದು, 2,610ಎಂಎಂ ವ್ಹೀಲ್‍‍ಬೇಸ್ ಹಾಗು 470-ಲೀಟರ್‍ ಸಾಮರ್ಥ್ಯದ ಬೂಟ್ ಸ್ಪೇಸ್ ಅನ್ನು ಹೊಂದಿದೆ.

ಭಾರತದಲ್ಲಿ ಹೋಂಡಾ ಹೆಚ್ಆರ್-ವಿ ಎಸ್‌ಯುವಿ ಬಿಡುಗಡೆಯಾಗುವುದು ಪಕ್ಕಾ..

ಎಂಜಿನ್ ಸಾಮರ್ಥ್ಯ

ಹೊಸ ಹೆಚ್ಆರ್-ವಿ ಕಾರುಗಳು 1.5 ಲೀಟರ್ ಐ-ವಿಟೆಕ್ ಪೆಟ್ರೋಲ್ ಮತ್ತು 1.6 ಲೀಟರ್ ಐ-ವಿಟೆಕ್ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಬರಲಿದ್ದು, ಪೆಟ್ರೋಲ್ ಮಾದರಿಯು 175-ಬಿಹೆಚ್‍‍ಪಿ ಮತ್ತು 220-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡಿದಿದೆ.

ಭಾರತದಲ್ಲಿ ಹೋಂಡಾ ಹೆಚ್ಆರ್-ವಿ ಎಸ್‌ಯುವಿ ಬಿಡುಗಡೆಯಾಗುವುದು ಪಕ್ಕಾ..

ಇದರಿಂದಾಗಿ ಹೆಚ್ಆರ್-ವಿ ಹೊಸ ಕಾರಿನ ಬೆಲೆಯಲ್ಲಿ ತುಸು ದುಬಾರಿಯಾಗಿರುವ ಸಾಧ್ಯತೆಗಳಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರಂ ಪ್ರಕಾರ ಆರಂಭಿಕವಾಗಿ ರೂ.15 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.19 ಲಕ್ಷ ಬೆಲೆ ಪಡೆದುಕೊಳ್ಳಬಹುದೆಂದು ಅಂದಾಜಿಸಲಾಗಿದ್ದು, ಇದೇ ವರ್ಷಾಂತ್ಯಕ್ಕೆ ಖರೀದಿಗೆ ಲಭ್ಯವಾಗುವ ಸಾಧ್ಯತೆಗಳಿವೆ.

Source: Gaadiwaadi

Article Published On: Thursday, March 19, 2020, 15:12 [IST]
English summary
The all new Honda HR-V, crossover model have been spotted at Honda India's Tapukara car plant in Rajasthan. Read in Kannada.
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+