ಹೋಂಡಾ ಬಿಎಸ್-6 ಡಬ್ಲ್ಯುಆರ್-ವಿ ಕಾರು ಖರೀದಿಗೆ ಆನ್‌ಲೈನ್ ಬುಕ್ಕಿಂಗ್ ಶುರು

ದೇಶಾದ್ಯಂತ ಸದ್ಯ ಕರೋನಾ ವೈರಸ್ ಹರಡುವಿಕೆಯನ್ನು ತಡೆಯುವುದಕ್ಕಾಗಿ ಲಾಕ್ ಡೌನ್ ಮುಂದುವರಿಸಲಾಗಿದ್ದು, ಆಟೋ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆ ಸಂಪೂರ್ಣ ಸ್ತಬ್ದಗೊಂಡಿವೆ. ಹೀಗಿದ್ದರೂ ಕೂಡಾ ಹೊಸ ಕಾರು ಮಾರಾಟ ಯೋಜನೆ ರೂಪಿಸುತ್ತಿರುವ ಆಟೋ ಕಂಪನಿಗಳು ಆನ್ ಲೈನ್ ವ್ಯವಹಾರಗಳ ಮೂಲಕ ಹೊಸ ವಾಹನಗಳ ಬುಕ್ಕಿಂಗ್ ಮತ್ತು ಹೋಂ ಡಿಲಿವರಿ ಸೇವೆಗಳನ್ನು ನೀಡಲು ಮುಂದಾಗಿವೆ.

ಹೋಂಡಾ ಬಿಎಸ್-6 ಡಬ್ಲ್ಯುಆರ್-ವಿ ಕಾರು ಖರೀದಿಗೆ ಆನ್‌ಲೈನ್ ಬುಕ್ಕಿಂಗ್ ಶುರು

ಹೋಂಡಾ ಇಂಡಿಯಾ ಕಂಪನಿಯು ಇದೇ ತಿಂಗಳಾಂತ್ಯಕ್ಕೆ ತನ್ನ ಪ್ರಮುಖ ಕಾರುಗಳ ಬಿಎಸ್-6 ಆವೃತ್ತಿಗಳನ್ನು ಬಿಡುಗಡೆಗೊಳಿಸಲು ಸಜ್ಜಾಗಿತ್ತು. ಆದರೆ ಲಾಕ್ ಡೌನ್ ಮುಂದುವರಿಸಿದ್ದರಿಂದ ಹೊಸ ಕಾರುಗಳ ಬಿಡುಗಡೆಯನ್ನು ಮುಂದಿನ ಮೇ ಮಧ್ಯಂತರದಲ್ಲಿ ಬಿಡುಗಡೆ ಮಾಡಲು ಯೋಜನೆ ರೂಪಿಸಿದ್ದು, ಹೊಸ ಡಬ್ಲ್ಯುಆರ್-ವಿ ಫೇಸ್‌ಲಿಫ್ಟ್ ಕಾರು ಸೇರಿದಂತೆ ವಿವಿಧ ಕಾರು ಮಾದರಿಗಳ ಖರೀದಿಗಾಗಿ ಇಂದಿನಿಂದಲೇ ಆನ್‌ಲೈನ್ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಿದೆ.

ಹೋಂಡಾ ಬಿಎಸ್-6 ಡಬ್ಲ್ಯುಆರ್-ವಿ ಕಾರು ಖರೀದಿಗೆ ಆನ್‌ಲೈನ್ ಬುಕ್ಕಿಂಗ್ ಶುರು

ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳಲ್ಲಿ ಅತ್ಯುತ್ತಮ ತಾಂತ್ರಿಕ ಅಂಶಗಳನ್ನು ಹೊಂದಿರುವ ಡಬ್ಲ್ಯುಆರ್-ವಿ ಕಾರು ಮಾದರಿಯು ಈ ಬಾರಿ ಬಿಎಸ್-6 ಎಂಜಿನ್ ಸೇರಿದಂತೆ ಹಲವು ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೆ ಸಜ್ಜಾಗುತ್ತಿದ್ದು, ಹೊಸ ಕಾರು ಖರೀದಿಗಾಗಿ ರೂ.21 ಸಾವಿರ ಮುಂಗಡದೊಂದಿಗೆ ಬುಕ್ಕಿಂಗ್ ದಾಖಲಿಸಬಹುದಾಗಿದೆ.

ಹೋಂಡಾ ಬಿಎಸ್-6 ಡಬ್ಲ್ಯುಆರ್-ವಿ ಕಾರು ಖರೀದಿಗೆ ಆನ್‌ಲೈನ್ ಬುಕ್ಕಿಂಗ್ ಶುರು

ಸಿಟಿ ಸೆಡಾನ್ ಬಿಡುಗಡೆಯ ನಂತರವಷ್ಟೇ ಡಬ್ಲ್ಯುಆರ್-ವಿ ಫೇಸ್‌ಲಿಫ್ಟ್ ಬಿಡುಗಡೆ ಮಾಡಲಿದ್ದು, ಹೊಸ ಕಾರಿನಲ್ಲಿ ಈ ಬಾರಿ ಹಲವಾರು ಬದಲಾವಣೆಗಳನ್ನು ಪರಿಚಯಿಸಲಾಗಿದೆ.

MOST READ: ಬಿಡುಗಡೆಗೆ ಸಿದ್ದವಾಗಿರುವ ಟಾಪ್ 5 ಎಲೆಕ್ಟ್ರಿಕ್ ಕಾರುಗಳಿವು

ಹೋಂಡಾ ಬಿಎಸ್-6 ಡಬ್ಲ್ಯುಆರ್-ವಿ ಕಾರು ಖರೀದಿಗೆ ಆನ್‌ಲೈನ್ ಬುಕ್ಕಿಂಗ್ ಶುರು

ಹೋಂಡಾ ಸಂಸ್ಥೆಯು ತನ್ನ ಹೊಸ ತಲೆಮಾರಿನ ಕಾರು ಮಾದರಿಗಳ ಜೊತೆ ಫೇಸ್‌ಲಿಫ್ಟ್ ಆವೃತ್ತಿಗಳ ವಿನ್ಯಾಸದಲ್ಲೂ ಕೆಲವು ಬದಲಾವಣೆಗಳನ್ನು ಪರಿಚಯಿಸಿದ್ದು, ಡಬ್ಲ್ಯುಆರ್-ವಿ ಫೇಸ್‌ಲಿಫ್ಟ್‌ನಲ್ಲೂ ಹಲವಾರು ಗುರುತರವಾದ ಪ್ರೀಮಿಯಂ ಫೀಚರ್ಸ್‌ಗಳನ್ನು ನೀಡಲಾಗಿದೆ.

ಹೋಂಡಾ ಬಿಎಸ್-6 ಡಬ್ಲ್ಯುಆರ್-ವಿ ಕಾರು ಖರೀದಿಗೆ ಆನ್‌ಲೈನ್ ಬುಕ್ಕಿಂಗ್ ಶುರು

ಹೊಸದಾಗಿ ವಿನ್ಯಾಸಗೊಳಿಸಲಾಗಿರುವ ರೆಡಿಯೇಟರ್ ಗ್ರಿಲ್, ಬಲಿಷ್ಠವಾದ ವಿಂಗ್ ಕ್ರೋಮ್‌ನಲ್ಲಿ ಎಲ್ಇಡಿ ಪ್ರೋಜೆಕ್ಟರ್, ಹಳೆಯ-ಶೈಲಿಯ ಹ್ಯಾಲೊಜೆನ್ ಹೆಡ್‌ಲ್ಯಾಂಪ್, ಸಂಯೋಜಿತ ಡಿಆರ್‌ಎ, ಪೊಸಿಷನ್ ಲ್ಯಾಂಪ್‌ ಮತ್ತು ಹಿಂಭಾಗದ ವಿನ್ಯಾಸದಲ್ಲಿ ಸಿ-ಆಕಾರದ ಹೊಸ ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಕಾಣಬಹುದಾಗಿದೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕೆ ಭಾರೀ ಪ್ರಮಾಣದ ದೇಣಿಗೆ ನೀಡಿದ ಟಿವಿಎಸ್ ಮೋಟಾರ್

ಹೋಂಡಾ ಬಿಎಸ್-6 ಡಬ್ಲ್ಯುಆರ್-ವಿ ಕಾರು ಖರೀದಿಗೆ ಆನ್‌ಲೈನ್ ಬುಕ್ಕಿಂಗ್ ಶುರು

ಇದರೊಂದಿಗೆ ಹೊಸ ಡಬ್ಲ್ಯುಆರ್-ವಿ ಕಾರನ್ನು ಮತ್ತಷ್ಟು ಆಕರ್ಷಕವಾಗಿಸಲು ಕ್ರೂಸ್ ಕಂಟ್ರೋಲ್ ಮತ್ತು ಎಲೆಕ್ಟ್ರಿಕ್ ಸನ್‌ರೂಫ್ ಅನ್ನು ಜೋಡಿಸಲಾಗಿದ್ದು, ಹೊಸ ಕಾರಿನಲ್ಲಿ ಒಳಾಂಗಣದಲ್ಲಿ ಬದಲಾವಣೆ ಮಾಡಿರುವ ತಾಂತ್ರಿಕ ಅಂಶಗಳ ಕುರಿತಾಗಿ ಯಾವುದೇ ನಿಖರ ಮಾಹಿತಿ ಲಭ್ಯವಾಗಿಲ್ಲ.

ಹೋಂಡಾ ಬಿಎಸ್-6 ಡಬ್ಲ್ಯುಆರ್-ವಿ ಕಾರು ಖರೀದಿಗೆ ಆನ್‌ಲೈನ್ ಬುಕ್ಕಿಂಗ್ ಶುರು

ಆದರೆ ಹೊಸ ಕಾರಿನ ಒಳಭಾಗದಲ್ಲಿ ಅಷ್ಟಾಗಿ ಸುಧಾರಿತ ತಂತ್ರಜ್ಞಾನ ಪ್ರೇರಿತ ಫೀಚರ್ಸ್‌ಗಳನ್ನು ನೀರಿಕ್ಷೆ ಮಾಡಲು ಸಾಧ್ಯವಿಲ್ಲದಿದ್ದರೂ ಪ್ರಯಾಣಿಕ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಹೋಂಡಾ ಬಿಎಸ್-6 ಡಬ್ಲ್ಯುಆರ್-ವಿ ಕಾರು ಖರೀದಿಗೆ ಆನ್‌ಲೈನ್ ಬುಕ್ಕಿಂಗ್ ಶುರು

ಹೊಸ ಕಾರಿನಲ್ಲಿ ಈ ಹಿಂದಿನ ಫೀಚರ್ಸ್‌ಗಳ ಜೊತೆಗೆ ಸ್ಮಾರ್ಟ್ ಕನೆಕ್ವಿಟಿಗಾಗಿ ಆ್ಯಂಡ್ರಾಯಿಡ್ ಆಟೋ ಆ್ಯಪಲ್ ಕಾರ್‌ಪ್ಲೇ ಜೋಡಿಸಲಾಗಿದ್ದು, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್ಸ್, ಪುಶ್-ಬಟನ್ ಸ್ಟಾರ್ಟ್ ಮತ್ತು 7.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಸೌಲಭ್ಯವು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಹೋಂಡಾ ಬಿಎಸ್-6 ಡಬ್ಲ್ಯುಆರ್-ವಿ ಕಾರು ಖರೀದಿಗೆ ಆನ್‌ಲೈನ್ ಬುಕ್ಕಿಂಗ್ ಶುರು

ಹಾಗೆಯೇ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಹೊಸ ಡಬ್ಲ್ಯುಆರ್-ವಿ ಕಾರಿನಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ರಿಯರ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಎಬಿಎಸ್ ಜೊತೆಗೆ ಇಬಿಡಿ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಲಾಗಿದೆ.

ಹೋಂಡಾ ಬಿಎಸ್-6 ಡಬ್ಲ್ಯುಆರ್-ವಿ ಕಾರು ಖರೀದಿಗೆ ಆನ್‌ಲೈನ್ ಬುಕ್ಕಿಂಗ್ ಶುರು

ಎಂಜಿನ್ ಸಾಮರ್ಥ್ಯ

2020ರ ಹೋಂಡಾ ಡಬ್ಲ್ಯುಆರ್-ವಿ ಕಾರು ಮಾದರಿಯು ಎಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬರುತ್ತಿರುವ ಬಿಎಸ್-6 ಎಂಜಿನ್ ಆಯ್ಕೆಯನ್ನು ಪಡೆದುಕೊಂಡಿದ್ದು, ಪೆಟ್ರೋಲ್ ಮಾದರಿಯು 1.2-ಲೀಟರ್ ಐ-ವಿಟಿಇಸಿ ಎಂಜಿನ್ ಮತ್ತು ಡೀಸೆಲ್ ಮಾದರಿಯು 1.5-ಲೀಟರ್ ಐ-ಡಿಟಿಇಸಿ ನಾಲ್ಕು ಸಿಲಿಂಡರ್ ಎಂಜಿನ್ ಹೊಂದಿದೆ.

ಹೋಂಡಾ ಬಿಎಸ್-6 ಡಬ್ಲ್ಯುಆರ್-ವಿ ಕಾರು ಖರೀದಿಗೆ ಆನ್‌ಲೈನ್ ಬುಕ್ಕಿಂಗ್ ಶುರು

ಪೆಟ್ರೋಲ್ ಮತ್ತು ಡೀಸೆಲ್ ಎರಡು ಆವೃತ್ತಿಗಳಲ್ಲೂ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದ್ದು, ಪೆಟ್ರೋಲ್ ಮಾದರಿಯು 89-ಬಿಎಚ್‌ಪಿ, 110-ಎನ್‌ಎಂ ಟಾರ್ಕ್ ಉತ್ಪಾದಿಸಿದ್ದಲ್ಲಿ, ಡೀಸೆಲ್ ಮಾದರಿಯು 99-ಬಿಎಚ್‌ಪಿ, 200-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಉತ್ತಮ ಇಂಧನ ದಕ್ಷತೆ ಹೊಂದಿದೆ.

ಹೋಂಡಾ ಬಿಎಸ್-6 ಡಬ್ಲ್ಯುಆರ್-ವಿ ಕಾರು ಖರೀದಿಗೆ ಆನ್‌ಲೈನ್ ಬುಕ್ಕಿಂಗ್ ಶುರು

ಈ ಮೂಲಕ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಿಗೆ ಉತ್ತಮ ಪೈಪೋಟಿ ನೀಡಬಲ್ಲ ನೀರಿಕ್ಷೆಯಲ್ಲಿರುವ ಡಬ್ಲ್ಯುಆರ್-ವಿ ಫೇಸ್‌ಲಿಫ್ಟ್ ಆವೃತ್ತಿಯು ಹೊಸ ಎಂಜಿನ್ ಆಯ್ಕೆಯೊಂದಿಗೆ ಬೆಲೆಯಲ್ಲೂ ದುಬಾರಿಯಾಗಲಿದ್ದು, ಹೊಸ ಕಾರಿನ ಬೆಲೆಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೆಲೆಗಿಂತ ಪೆಟ್ರೋಲ್ ಆವೃತ್ತಿಯು ರೂ.20 ಸಾವಿರದಿಂದ ರೂ.40 ಸಾವಿರ ಮತ್ತು ಡೀಸೆಲ್ ಮಾದರಿಯು ರೂ. 50 ಸಾವಿರದಿಂದ ರೂ.70 ಸಾವಿರದಷ್ಟು ಹೆಚ್ಚುವರಿ ಬೆಲೆ ಪಡೆದುಕೊಳ್ಳಲಿದೆ.

Article Published On: Tuesday, April 14, 2020, 16:23 [IST]
English summary
Honda WR-V BS6 Bookings start; Launch Expected Soon. Read in Kannada.
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+