ಹ್ಯುಂಡೈ ಒರಾ ಕಾರಿನ ಖರೀದಿಗೆ ಅಧಿಕೃತ ಬುಕ್ಕಿಂಗ್ ಆರಂಭ

ಹ್ಯುಂಡೈ ಇಂಡಿಯಾ ಕಂಪನಿಯು ಅಧಿಕೃತವಾಗಿ ಲೈಟ್ ಅಪ್ ಎಂಬ ಹೊಸ ಟೆಲಿವಿಷನ್ ಜಾಹೀರಾತಿನ ಮೂಲಕ ಹ್ಯುಂಡೈ ಒರಾ ಕಾರಿನ ಬುಕ್ಕಿಂಗ್ ಪ್ರಾರಂಭಿಸುವುದಾಗಿ ಅಧಿಕೃತವಾಗಿ ಘೋಷಿಸಿದೆ. ಹ್ಯುಂಡೈ ಒರಾ ಕಾರ್ ಅನ್ನು ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿದೆ.

ಹ್ಯುಂಡೈ ಒರಾ ಕಾರಿನ ಖರೀದಿಗೆ ಅಧಿಕೃತ ಬುಕ್ಕಿಂಗ್ ಆರಂಭ

ಹ್ಯುಂಡೈ ಮೋಟಾರ್ ಇಂಡಿಯಾದ ಸೇಲ್ಸ್, ,ಮಾರ್ಕೆಟಿಂಗ್ ಅಂಡ್ ಸರ್ವೀಸ್ ಡೈರಕ್ಟರ್ ಆಗಿರುವ ತರುಣ್ ಗರ್ಗ್ ಅವರು ಮಾತನಾಡಿ, ನಾವು ಹ್ಯುಂಡೈ ಒರಾ ಕಾರಿನ ಬುಕ್ಕಿಂಗ್ ಅನ್ನು ಹೊಸ ವರ್ಷವದಿಂದಲೇ ಪ್ರಾರಂಭಿಸಿದ್ದೇವೆ. ಆಕರ್ಷಕ ವಿನ್ಯಾಸವನ್ನು ಹೊಂದಿರುವ ಹ್ಯುಂಡೈ ಒರಾ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಛಾಪನ್ನು ಮೂಡಿಸುತ್ತದೆ ಎಂದು ನಾವು ನಂಬುತ್ತೇವೆ ಎಂದು ಅವರು ಹೇಳಿದರು.

ಹ್ಯುಂಡೈ ಒರಾ ಕಾರಿನ ಖರೀದಿಗೆ ಅಧಿಕೃತ ಬುಕ್ಕಿಂಗ್ ಆರಂಭ

ಗ್ರಾಹಕರು ಕಂಪನಿಯ ವೈಬ್‍‍ಸೈಟ್ ಮೂಲಕ ಅಥವಾ ದೇಶಾದ್ಯಂತ ಯಾವುದೇ ಹ್ಯುಂಡೈ ಅಧಿಕೃತ ಡೀಲರ್‍‍ಗಳ ಬಳಿ ತೆರಳಿ ಹ್ಯುಂಡೈ ಒರಾ ಕಾರ ಅನ್ನು ಬುಕ್ ಮಾಡಿಕೊಳ್ಳಬಹುದು. ಒರಾ ಕಾರ್ ಅನ್ನು ಜನವರಿ 21ರಂದು ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ. ಹ್ಯುಂಡೈ ಡೀಲರ್‍‍ಗಳ ಬಳಿ ಗ್ರಾಹಕರು ರೂ.10 ಸಾವಿರ ಪಾವತಿಸಿ ಹ್ಯುಂಡೈ ಒರಾ ಕಾರ್ ಅನ್ನು ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಹ್ಯುಂಡೈ ಒರಾ ಕಾರಿನ ಖರೀದಿಗೆ ಅಧಿಕೃತ ಬುಕ್ಕಿಂಗ್ ಆರಂಭ

ಹ್ಯುಂಡೈ ಒರಾ ಕಾರಿನ ಇಂಟಿರಿಯರ್ ಬಗ್ಗೆ ಅಧಿಕೃತವಾಗಿ ಕಂಪನಿಯು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಹ್ಯುಂಡೈ ಒರಾ ಕಾರಿನ ಮುಂಭಾಗದಲ್ಲಿ ಅಲ್-ಬ್ಲ್ಯಾಕ್ ಹನಿಕ್ಯೂಬ್ ಗ್ರಿಲ್, ಟ್ವಿನ್ ಬೂಮರಾಂಗ್ ಆಕಾರದ ಡಿಆರ್‍ಎಲ್, ಫಾಗಲ್ಯಾಂಪ್ ಮತ್ತು ಪೇರ್ ಪ್ರೊಜೇಕ್ಟರ್ ಹೆಡ್‍‍ಲ್ಯಾಂಪ್‍ಗಳನ್ನು ಒಳಗೊಂಡಿದೆ.

ಹ್ಯುಂಡೈ ಒರಾ ಕಾರಿನ ಖರೀದಿಗೆ ಅಧಿಕೃತ ಬುಕ್ಕಿಂಗ್ ಆರಂಭ

ಹ್ಯುಂಡೈ ಒರಾ ಕಾರಿನಲ್ಲಿ ಒಂದು ಸೆಟ್ ಆರ್ 15 ಡೈಮೆಂಡ್ ಕಟ್ ಅಲಾಯ್ ವ್ಹೀಲ್, ಸ್ಪೋರ್ಟಿ ರೇರ್ ಬಂಪರ್, 3ಡಿ ಔಟರ್ ಲೆನ್ಸ್ ಜೊತೆಯಲ್ಲಿ ಎಲ್‍ಇಡಿ ಟೇಲ್‍ ಲೈಟ್‍ಗಳನ್ನು ಅಳವಡಿಸಲಾಗಿದೆ. ಹ್ಯುಂಡೈ ಕಂಪನಿಯು ಇತ್ತೀಚಿಗೆ ಬಿಡುಗಡೆಗೊಳಿಸಿದ ಕಾರುಗಳಲ್ಲಿ ಇರುವ ಮಾದರಿಯ ಶಾರ್ಕ್ ಫಿನ್ ಅಂಟೆನಾ ಕೂಡ ಒಳಗೊಂಡಿದೆ.

ಹ್ಯುಂಡೈ ಒರಾ ಕಾರಿನ ಖರೀದಿಗೆ ಅಧಿಕೃತ ಬುಕ್ಕಿಂಗ್ ಆರಂಭ

ಹ್ಯುಂಡೈ ಕಂಪನಿಯ ಪ್ರಕಾರ ಒರಾ ಮೂರು ಮಾದರಿಯ ಎಂಜಿನ್ ಆಯ್ಕೆಗಳನ್ನು ಹೊಂದಿರಲಿದೆ. ಇದರಲ್ಲಿ ಎಲೈಟ್ ಐ20ನಲ್ಲಿರುವ 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ವೆನ್ಯೂ ಕಾರಿನಲ್ಲಿರುವ 1.0 ಲೀಟರ್ ಟರ್ಬೊ ಪೆಟ್ರೋಲ್ ಮತ್ತು ಕ್ರೇಟಾ ಕಾರಿನಲ್ಲಿರುವ 1.2 ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಎಲ್ಲಾ ಮೂರು ಎಂಜಿನ್‍ಗಳು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಸಾರವಾಗಿರಲಿವೆ.

ಹ್ಯುಂಡೈ ಒರಾ ಕಾರಿನ ಖರೀದಿಗೆ ಅಧಿಕೃತ ಬುಕ್ಕಿಂಗ್ ಆರಂಭ

ಇದರಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ 83 ಬಿ‍‍ಹೆಚ್‍‍ಪಿ ಪವರ್ ಮತ್ತು 113 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನೂ 1.2 ಲೀಟರ್ ಡೀಸೆಲ್ ಎಂಜಿನ್ 75 ಬಿ‍‍ಹೆಚ್‍‍ಪಿ ಪವರ್ ಮತ್ತು 190 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನೂ 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 100 ಬಿ‍‍ಹೆಚ್‍‍ಪಿ ಪವರ್ ಮತ್ತು 172 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹ್ಯುಂಡೈ ಒರಾ ಕಾರಿನ ಖರೀದಿಗೆ ಅಧಿಕೃತ ಬುಕ್ಕಿಂಗ್ ಆರಂಭ

ಈ ಎಲ್ಲಾ ಮೂರು ಎಂಜಿನ್‍ಗಳೊಂದಿಗೆ ಸ್ಟ್ಯಾಂಡರ್ಡ್ 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ. ಹ್ಯುಂಡೈ ವೆನ್ಯೂ ರೀತಿಯಲ್ಲಿ ಒರಾ ಕಾರಿನಲ್ಲಿ 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ನೀಡಲಾಗಿಲ್ಲ.

ಹ್ಯುಂಡೈ ಒರಾ ಕಾರಿನಲ್ಲಿ ಹೊಸ ಎಂಜಿನ್ ಕಡಿಮೆ ವೈಬ್ರೇಷನ್ ಮತ್ತು ಹೆಚ್ಚಿನ ಇಂಧನ ದಕ್ಷತೆಯೊಂದಿಗೆ ಸುಧಾರಿತ ಪರ್ಫಾಮೆನ್ಸ್ ನೀಡುತ್ತದೆ ಎನ್ನಲಾಗಿದೆ. ಒರಾ ಹ್ಯುಂಡೈ 'ಅಡ್ವಾನ್ಸ್ಡ್ ಆಫ್ಟರ್ ಟ್ರೀಟ್ಮೆಂಟ್ ಸಿಸ್ಟಮ್' ಎಂದು ಕರೆಯಲಾಗಿದೆ.

ಹ್ಯುಂಡೈ ಒರಾ ಕಾರಿನ ಖರೀದಿಗೆ ಅಧಿಕೃತ ಬುಕ್ಕಿಂಗ್ ಆರಂಭ

ಹ್ಯುಂಡೈ ಒರಾ ಹೊಸ ಟೆಲಿವಿಷನ್ ಜಾಹೀರಾತಿನ ಮೂಲಕ ಹ್ಯುಂಡೈ ಒರಾ ಕಾರಿನ ಬುಕ್ಕಿಂಗ್ ಅನ್ನು ಆರಂಭಿಸಿದೆ. ದೇಶಿಯ ಮಾರುಕಟ್ಟೆಯಲ್ಲಿ ಹ್ಯುಂಡೈ ಒರಾ ಬಿಡುಗಡೆಯಾದ ಬಳಿಕ ಹೋಂಡಾ ಅಮೇಜ್, ಫೋರ್ಡ್ ಆಸ್ಪೈರ್ ಮತ್ತು ಟಾಟಾ ಟೀಗೊರ್ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ.

Article Published On: Tuesday, January 7, 2020, 11:42 [IST]
English summary
Hyundai Aura Bookings Open At Rs 10,000: Company Releases New TVC - Read in Kananda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+