Just In
- 1 hr ago ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- 2 hrs ago Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- 3 hrs ago Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- 4 hrs ago ಮಿಂಚಿನ ವೇಗಕ್ಕೆ ಸರಿಸಾಟಿಯಾಗಿ ಬೆಂಗಳೂರಿನ ಹೊಸ ಅಲ್ಟ್ರಾವೈಲೆಟ್ ಬೈಕ್ ಬಿಡುಗಡೆ: 323KM ರೇಂಜ್
Don't Miss!
- News ಎಸ್ಸಿ, ಎಸ್ಟಿ ಮೀಸಲಾತಿ ಮುಸ್ಲಿಮರಿಗೆ ಹಂಚಿಕೆ: ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Movies Swathi Royal; ಒಂಬತ್ತನೇ ಕ್ಲಾಸ್ ನಲ್ಲೇ ಲವ್ವಲ್ಲಿ ಬಿದ್ದ ಅಮೃತಧಾರೆ ಅಪರ್ಣಾ..!
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹ್ಯುಂಡೈ ಕಾರುಗಳ ಮೇಲೆ ರೂ.1 ಲಕ್ಷದವರೆಗೆ ಭರ್ಜರಿ ರಿಯಾಯಿತಿ
ಹ್ಯುಂಡೈ ಇಂಡಿಯಾ ಕಂಪನಿಯು ಈ ಜೂನ್ ತಿಂಗಳಲ್ಲಿ ತಮ್ಮ ಆಯ್ದ ಮಾದರಿಗಳಿಗೆ ಭರ್ಜರಿ ರಿಯಾಯಿತಿ ಮತ್ತು ವಿಶೇಷ ಆಫರ್ ಗಳನ್ನು ಘೋಷಿಸಿದೆ. ಹ್ಯುಂಡೈ ಕಂಪನಿಯು ತಮ್ಮ ಆಯ್ದ ಕಾರುಗಳಿಗೆ ರೂ.1 ಲಕ್ಷಗಳವರೆಗೆ ಭರ್ಜರಿ ರಿಯಾಯಿತಿಯನ್ನು ಘೊಷಿಸಿದೆ.
ಹ್ಯುಂಡೈ ಕಂಪನಿಯು ಸ್ಯಾಂಟ್ರೊ, ಗ್ರ್ಯಾಂಡ್ ಐ10, ಗ್ರ್ಯಾಂಡ್ ಐ10 ನಿಯೊಸ್, ಎಲೈಟ್ ಐ20 ಮತ್ತು ಎಲಾಂಟ್ರಾ ಕಾರುಗಳಿಗೆ ರಿಯಾಯಿತಿ ಮತ್ತು ವಿಶೇಷ ಆಫರ್ ಅನ್ನು ಘೋಷಿಸಿದೆ. ಈ ಕಾರುಗಳಿಗೆ ಸೀಮಿತ ಅವಧಿಗೆ ಮಾತ್ರ ರಿಯಾಯಿತಿಗಳನ್ನು ಘೋಷಿಸಲಾಗಿದೆ. ಈ ರಿಯಾಯಿತಿಗಳು ಮತ್ತು ವಿಶೇಷ ಆಫರ್ ಗಳು ಡೀಲರ್ ಗಳ ನಡುವೆ ಕೆಲವು ಬದಲಾವಣೆಗಳಿರುತ್ತದೆ.
ಹ್ಯುಂಡೈ ಗ್ರ್ಯಾಂಡ್ ಐ10 ನಿಯೊಸ್ ಕಾರಿಗೆ ಈ ತಿಂಗಳಲ್ಲಿ ರೂ.25. ಸಾವಿರಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ. ಇದರಲ್ಲಿ ನಗದು ರಿಯಾಯಿತಿ, ವಿನಮಯ ಬೋನಸ್ ಮತ್ತು ಇತರ ಕಾರ್ಪೊರೇಟ್ ಆಫರ್ ಗಳು ಕೂಡ ಸೇರಿವೆ.
MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್ವ್ಯಾಗನ್ ಟಿ-ರಾಕ್ ಎಸ್ಯುವಿ
ಹ್ಯುಂಡೈ ಸ್ಯಾಂಟ್ರೊ ಕಾರಿಗೆ ಒಟ್ಟು ರೂ.30,000 ಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ. ಅದೇ ರೀತಿ ಎಲೈಟ್ ಐ20 ಮತ್ತು ಗ್ರ್ಯಾಂಡ್ ಐ10 ಕಾರುಗಳಿಗೆಕ್ರಮವಾಗಿ ರೂ.35,000 ಮತ್ತು ರೂ.60,000 ಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ.
ಇನ್ನು ಹ್ಯುಂಡೈ ಎಲಾಂಟ್ರಾ ಕಾರಿಗೆ ರೂ.1 ಲಕ್ಷಗಳವರೆಗೆ ರಿಯಾಯಿತಿಯನ್ನು ಘೋಷಿಸಲಾಗಿದೆ. ಮೊದಲೇ ಹೇಳಿದಂತೆ ಇದರಲ್ಲಿ ನಗದು ರಿಯಾಯಿತಿ, ಕಾರ್ಪೋರೇಟ್ ಆಫರ್ ಗಳು ಮತ್ತು ವಿನಿಮಯ ಬೋನಸ್ ಗಳು ಸೇರಿಕೊಂಡಿದೆ. ಇದರೊಂದಿಗೆ ವೈದ್ಯಕೀಯ ವೃತ್ತಿಪರರು, ಶಿಕ್ಷಕರು, ಎಸ್ಎಂಇಗಳು, ಆಯ್ದ ಕಾರ್ಪೊರೇಟ್ಗಳು ಮತ್ತು ಸಿಎಗಳಿಗೆ ವಿಶೇಷ ಕೊಡುಗೆಗಳನ್ನು ನೀಡಲಿದೆ ಎಂದು ಹ್ಯುಂಡೈ ಹೇಳಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ
ನಗದು ರಿಯಾಯಿತಿ ಮತ್ತು ಇತರ ಎಲ್ಲಾ ಆಫರ್ ಗಳ ಹೊರತಾಗಿಯು ಹ್ಯುಂಡೈ ತಮ್ಮ ಇಎಂಎ ಅಶ್ಯೂರೆನ್ಸ್ ಕಾರ್ಯಕ್ರಮವನ್ನು ಮೇಲಿನ ಯಾವುದೇ ಮಾದರಿಗಳನ್ನು ಈ ತಿಂಗಳಲ್ಲಿ ಖರೀದಿಸುವ ಎಲ್ಲ ಗ್ರಾಹಕರಿಗೆ ನೀಡಲಿದೆ
ಹ್ಯುಂಡೈ ಕಂಪನಿಯು ತನ್ನ ಪ್ರಸ್ತುತ ತಲೆಮಾರಿನ ಕೊನೆ ಮಾದರಿಯಾಗಿ ಬಿಎಸ್-6 ಐ20 ಕಾರನ್ನು ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಐ20 ಹ್ಯುಂಡೈ ಕಂಪನಿಯ ಸರಣಿಯಲ್ಲಿರುವ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ.
MOST READ: ಕರೋನಾ ಭೀತಿಯಿಂದ ಪಾತಾಳಕ್ಕೆ ಕುಸಿತ ಮಾರುತಿ ಸುಜುಕಿ ಕಾರುಗಳ ಮಾರಾಟ
ಬಿಎಸ್-6 ಐ20 ಕಾರಿನಲ್ಲಿ 1.2-ಲೀಟರ್ ಪೆಟ್ರೋಲ್ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 6000 ಆರ್ಪಿಎಂನಲ್ಲಿ 82 ಬಿಹೆಚ್ಪಿ ಮತ್ತು 4000 ಆರ್ಪಿಎಂನಲ್ಲಿ 114 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ ಅನ್ನು ಅಳವಡಿಸಲಾಗಿದೆ.
ಹ್ಯುಂಡೈ ಕಂಪನಿಯು ತನ್ನ ಜನಪ್ರಿಯ ಮಾದರಿಗಳಿಗೆ ಭರ್ಜರಿ ರಿಯಾಯಿತಿ ಮತ್ತು ಆಫರ್ ಗಳನ್ನು ನೀಡಿ ಹೆಚ್ಚಿನ ಗ್ರಾಹಕರನ್ನು ತಮ್ಮೆಡೆಗೆ ಸೆಳೆಯುವ ತಂತ್ರವಾಗಿದೆ. ಈ ವಿಶೇಷ ಆಫರ್ ಗಳಿಂದ ಹ್ಯುಂಡೈ ಕಾರುಗಳ ಮೇಲೆ ಬೇಡಿಕೆ ಹೆಚ್ಚಾಗಲು ಸಹಾಯವಾಗಬಹುದು.