ಬಿಡುಗಡೆಗೂ ಮುನ್ನ ಕಂಪನಿಯ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡ ಹೊಸ ಐ20
ಹೊಸ ಹ್ಯುಂಡೈ ಐ 20 ಕಾರು ನವೆಂಬರ್ 5ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಬಿಡುಗಡೆಗೂ ಮುನ್ನ ಹ್ಯುಂಡೈ ಕಂಪನಿಯು ಹೊಸ ಹ್ಯುಂಡೈ ಐ 20 ಕಾರನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಿದೆ.

ಹೊಸ ಹ್ಯುಂಡೈ ಐ 20 ಕಾರನ್ನು ಮ್ಯಾಗ್ನಾ, ಸ್ಪೋರ್ಟ್, ಅಸ್ತಾ, ಅಸ್ತಾ (ಒ) ಎಂಬ ನಾಲ್ಕು ಮಾದರಿಗಳಲ್ಲಿ ಬಿಡುಗಡೆಗೊಳಿಸಲಾಗುವುದು. ಹಳೆ ತಲೆಮಾರಿನ ಐ 20 ಕಾರಿನ ಮಾರಾಟವನ್ನು ಭಾರತದಲ್ಲಿ ಸ್ಥಗಿತಗೊಳಿಸಲಾಗಿದೆ. ಹಳೆಯ ಮಾದರಿಗೆ ಹೋಲಿಸಿದರೆ 2020ರ ಹೊಸ ಐ 20 ಕಾರಿನ ಎಕ್ಸ್ ಟಿರಿಯರ್ ಹಾಗೂ ಇಂಟಿರಿಯರ್ ನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ.

ಈ ಕಾರು ಹೊಸದಾಗಿ ವಿನ್ಯಾಸಗೊಳಿಸಿದ ಗ್ರಿಲ್, ಹೆಡ್‌ಲೈಟ್, ಟೇಲ್‌ಲೈಟ್, ಎಲ್‌ಇಡಿ ಡಿಆರ್‌ಎಲ್, ಫ್ರಂಟ್ ಬಂಪರ್, ರೇರ್ ಬಂಪರ್, ಫಾಗ್ ಲೈಟ್ ಗಳನ್ನು ಹೊಂದಿದೆ. ಇದರ ಜೊತೆಗೆ ಈ ಕಾರಿನಲ್ಲಿ ಹೊಸ ಅಲಾಯ್ ವ್ಹೀಲ್, ಶಾರ್ಕ್ ಫಿನ್ ಆಂಟೆನಾ, ಯುವಿ ಕಟ್ ಗ್ಲಾಸ್ ಗಳನ್ನು ಕೂಡ ನೀಡಲಾಗಿದೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಇಂಟಿರಿಯರ್ ಬಗ್ಗೆ ಹೇಳುವುದಾದರೆ ಡ್ಯಾಶ್‌ಬೋರ್ಡ್ ಹಾಗೂ ಕ್ಯಾಬಿನ್ ಅನ್ನು ಪೂರ್ತಿಯಾಗಿ ಅಪ್ ಡೇಟ್ ಮಾಡಲಾಗಿದ್ದು, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಹೊಸ ಸ್ಟೀಯರಿಂಗ್ ವ್ಹೀಲ್, 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ, ರೇರ್ ಎಸಿ ವೆಂಟ್, ವೈರ್‌ಲೆಸ್ ಚಾರ್ಜಿಂಗ್, ಕೂಲ್ಡ್ ಗ್ಲೋವ್ ಬಾಕ್ಸ್ ಸೇರಿದಂತೆ ಹಲವಾರು ಫೀಚರ್ ಗಳನ್ನು ನೀಡಲಾಗಿದೆ.

ಹೊಸ ಐ 20 ಕಾರಿನಲ್ಲಿ ವೆನ್ಯೂ ಕಾರಿನಲ್ಲಿರುವಂತಹ ಎಂಜಿನ್ ಅಳವಡಿಸಲಾಗಿದೆ. ಈ ಕಾರಣಕ್ಕೆ ಈ ಎಂಜಿನ್ ಸಹ ವೆನ್ಯೂವಿನಲ್ಲಿರುವ ಎಂಜಿನ್ ರೀತಿಯಲ್ಲಿಯೇ ಪವರ್ ಹಾಗೂ ಟಾರ್ಕ್ ಉತ್ಪಾದಿಸುವ ಸಾಧ್ಯತೆಗಳಿವೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಈ ಕಾರು ವೆನ್ಯೂವಿನಲ್ಲಿರುವಂತಹ 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 82 ಬಿಹೆಚ್‌ಪಿ ಪವರ್ ಹಾಗೂ 114 ಎನ್ಎಂ ಟಾರ್ಕ್ ಉತ್ಪಾದಿಸಲಿದೆ. ಈ ಕಾರನ್ನು ಡೀಸೆಲ್ ಮಾದರಿಯಲ್ಲಿಯೂ ಮಾರಾಟ ಮಾಡಲಾಗುವುದು.

ಡೀಸೆಲ್ ಮಾದರಿಯಲ್ಲಿ 1.5-ಲೀಟರಿನ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 99 ಬಿಹೆಚ್‌ಪಿ ಪವರ್ ಹಾಗೂ 240 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎರಡೂ ಎಂಜಿನ್‌ಗಳೊಂದಿಗೆ 5 ಮತ್ತು 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಜೋಡಿಸಲಾಗುವುದು.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಹೊಸ ಐ 20 ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.5.5 ಲಕ್ಷದಿಂದ ರೂ.10 ಲಕ್ಷಗಳಾಗುವ ಸಾಧ್ಯತೆಗಳಿವೆ. ಹೊಸ ಹ್ಯುಂಡೈ ಐ 20 ಕಾರು ಹಳೆಯ ಮಾದರಿಗಿಂತ 12% - 13%ನಷ್ಟು ಬಲಿಷ್ಟವಾಗಿರುತ್ತದೆ ಎಂದು ಹ್ಯುಂಡೈ ಕಂಪನಿ ಹೇಳಿಕೊಂಡಿದೆ.

ಹೊಸ ಐ 20 ಕಾರಿನಲ್ಲಿ ಹೆಚ್ಚು ಟೆನ್ಸಿಲ್ ಸ್ಟೀಲ್ ಬಳಸಲಾಗಿದೆ. ಈ ಸ್ಟೀಲ್ ಸಾಮಾನ್ಯ ಸ್ಟೀಲ್ ಗಿಂತ 12%ನಷ್ಟು ಬಲಿಷ್ಟವಾಗಿರುತ್ತದೆ. ಹೊಸ ಹ್ಯುಂಡೈ ಐ 20 ಕಾರಿನಲ್ಲಿ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗಿದ್ದು, 6 ಏರ್‌ಬ್ಯಾಗ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಸೇರಿದಂತೆ ಹಲವಾರು ಫೀಚರ್ ಗಳನ್ನು ನೀಡಲಾಗಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಸ್ಟ್ಯಾಂಡರ್ಡ್ ಮಾದರಿಗಳು ಡ್ಯುಯಲ್ ಏರ್‌ಬ್ಯಾಗ್, ಆಂಟಿಲಾಕ್ ಬ್ರೇಕಿಂಗ್ ಸಿಸ್ಟಂ, ರೇರ್ ಪಾರ್ಕಿಂಗ್ ಸೆನ್ಸಾರ್, ಚೈಲ್ಡ್ ಸೆಫ್ಟಿಯಂತಹ ಫೀಚರ್ ಗಳನ್ನು ಹೊಂದಿವೆ. ಈ ಕಾರು ಇತರ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ಗಳಿಗಿಂತ ಭಿನ್ನವಾಗಿ ಹಿಂದಿನ ಸೀಟುಗಳಲ್ಲಿ ಲ್ಯಾಪ್ ಬೆಲ್ಟ್ ಅನ್ನು ಹೊಂದಿದೆ.


Click it and Unblock the Notifications