ನವೆಂಬರ್ ತಿಂಗಳ ಮಾರಾಟದಲ್ಲಿ ದಾಖಲೆ ಮಟ್ಟದ ಏರಿಕೆ ಕಂಡ ಹ್ಯುಂಡೈ ಕ್ರೆಟಾ
ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ತನ್ನ ಬಿಎಸ್-6 ಕ್ರೆಟಾ ಎಸ್‍ಯುವಿಯನ್ನು ಈ ವರ್ಷದ ಮಾರ್ಚ್ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಿತ್ತು. ಹ್ಯುಂಡೈ ಕಂಪನಿಯು ಈ ನ್ಯೂ ಜನರೇಷನ್ ಕ್ರೆಟಾ ಎಸ್‍ಯುವಿಯನ್ನು 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಲಾಗಿತ್ತು.

ಭಾರತೀಯ ಮಾರುಕಟ್ಟೆಯಲ್ಲಿ 2020ರ ಹ್ಯುಂಡೈ ಕ್ರೆಟಾ ಎಸ್‍ಯುವಿಯು ಭರ್ಜರಿ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ. ನ್ಯೂ ಜನರೇಷನ್ ಕ್ರೆಟಾ ಎಸ್‍ಯುವಿಯು ತಿಂಗಳುಗಳಿಂದ ತಿಂಗಳಿಗೆ ಮಾರಾಟದ ಸಂಖ್ಯೆ ಏರುತ್ತಲೆ ಇದೆ. 2020ರ ನವೆಂಬರ್ ತಿಂಗಳಲ್ಲಿ ನ್ಯೂ ಜನರೇಷನ್ ಹ್ಯುಂಡೈ ಕ್ರೆಟಾ ಎಸ್‍ಯುವಿಯ 12,000 ಯುನಿಟ್‌ಗಳು ಮಾರಾಟವಾಗಿವೆ.

ಕೊರಿಯಾದ ಕಾರು ತಯಾರಕರಾದ ಹ್ಯುಂಡೈ ತನ್ನ ಕ್ರೆಟಾ ಎಸ್‍ಯುವಿಯನ್ನು ಭರ್ಜರಿಯಾಗಿ ಮಾರಟಗೊಳಿಸುತ್ತಿದೆ. ನ್ಯೂ ಜನರೇಷನ್ ಕ್ರೆಟಾ ಎಸ್‍ಯುವಿಯ 12,017 ಯುನಿಟ್‌ಗಳನ್ನು ಕಳೆದ ತಿಂಗಳು ಹ್ಯುಂಡೈ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟಗೊಳಿಸಿವೆ.
MOST READ: ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಪಡೆದ ಜನಪ್ರಿಯ ಮಾರುತಿ ಎಸ್-ಪ್ರೆಸ್ಸೊ ಕಾರು

ಕಳೆದ ತಿಂಗಳು ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾದ ಎಸ್‍ಯುವಿಗಳ ಪಟ್ಟೆಯಲ್ಲಿ ನ್ಯೂ ಜನರೇಷನ್ ಕ್ರೆಟಾ ಎಸ್‍ಯುವಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ನ್ಯೂ ಜನರೇಷನ್ ಹ್ಯುಂಡೈ ಕ್ರೆಟಾ ತನ್ನ ಪ್ರತಿಸ್ಪರ್ಧಿಗಳಿಗೆ ಟಕ್ಕರ್ ನೀಡಿ ಭರ್ಜರಿ ಮಾರಟವಾಗುತ್ತಿದೆ.

ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಹ್ಯುಂಡೈ ಎಸ್‍ಯುವಿಯ 6,684 ಯುನಿಟ್‌ಗಳು ಮಾರಾಟವಾಗಿತ್ತು. ಕಳೆದ ವರ್ಷದ ನವೆಂಬರ್ ತಿಂಗಳ ಮಾರಾಟವನ್ನು ಈ ವರ್ಷದ ಅದೇ ತಿಂಗಳಿಗೆ ಹೋಲಿಸಿದರೆ ಮಾರಾಟದಲ್ಲಿ ಶೇ.80 ರಷ್ಟು ಭಾರಿ ಬೆಳವಣಿಗೆಯನ್ನು ದಾಖಲಿಸಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೊಸ ಹ್ಯುಂಡೈ ಕ್ರೆಟಾ ಎಸ್‌ಯುವಿಯನ್ನು 1.5 ಲೀಟರಿನ ಪೆಟ್ರೋಲ್, 1.4 ಲೀಟರಿನ ಟರ್ಬೊ ಪೆಟ್ರೋಲ್ ಹಾಗೂ 1.5 ಲೀಟರಿನ ಡೀಸೆಲ್ ಎಂಜಿನ್ ಗಳಲ್ಲಿ ಮಾರಾಟ ಮಾಡಲಾಗುತ್ತದೆ. ಹ್ಯುಂಡೈ ಕಂಪನಿಯು ಈ ಎಸ್‌ಯುವಿಯನ್ನು 5 ಟ್ರಿಮ್ ಹಾಗೂ 14 ಮಾದರಿಗಳಲ್ಲಿ ಮಾರಾಟ ಮಾಡುತ್ತದೆ.

2020ರ ಹ್ಯುಂಡೈ ಕ್ರೆಟಾ ಎಸ್‍ಯುವಿಯ ಮುಂಭಾಗದಲ್ಲಿರುವ ಹ್ಯುಂಡೈನ ಕ್ಯಾಸ್ಕೇಡಿಂಗ್ ಗ್ರಿಲ್ ಹೆಚ್ಚು ಗಮನ ಸೆಳೆದರೂ, ಹೆಡ್‍ಲೈಟ್ ಮತ್ತಷ್ಟು ಗಮನ ಸೆಳೆಯುತ್ತದೆ. ಸ್ಪ್ಲಿಟ್ ಹೆಡ್‍ಲೈಟ್ ಸ್ಲಿಟ್ ರೀತಿಯ ಎಲ್ಇಡಿ ಡಿಆರ್‍ಎಲ್ ಅನ್ನು ಹೊಂದಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಈ ಎಸ್‍ಯುವಿಯ ಹೆಡ್‌ಲೈಟ್ ಕ್ಲಸ್ಟರ್ ಕೆಳಗೆ ಹೊಸ ಲುಕ್‍ನ ಫಾಗ್ ಲ್ಯಾಂಪ್‍ಗಳಿವೆ. ಇನ್ನು ಬಂಪರ್‍ನ ಕೆಳಗೆ ಸ್ಕಫ್ ಪ್ಲೇಟ್‍ಗಳಿವೆ. ಸ್ಕ್ವೇರ್ ಶೇಪಿನ ವ್ಹೀಲ್ ಆರ್ಕ್‍ಗಳು ಕ್ರೆಟಾಗೆ ಹೆಚ್ಚಿನ ಲುಕ್ ನೀಡುತ್ತವೆ. ಇದರೊಂದಿಗೆ ಹೊಸ ಕ್ರೆಟಾ ಎಸ್‍ಯುವಿಯು ಮೂರು ವಿಭಿನ್ನ ಟ್ರಾಕ್ಷನ್ ಕಂಟ್ರೋಲ್ ಮತ್ತು ಟರೇನ್ ಮೋಡ್‌ಗಳನ್ನು ಹೊಂದಿದೆ. ಈ ಹೊಸ ತಾಂತ್ರಕ ಸೌಲಭ್ಯದಿಂದಾಗಿ ಹೆಚ್ಚಿನ ಗ್ರಾಹಕರನ್ನು ಸೆಳೆದಿದೆ.

ಹೊಸ ತಲೆಮಾರಿನ ಹ್ಯುಂಡೈ ಕ್ರೆಟಾ ಎಸ್‍ಯುವಿಯಲ್ಲಿ ಹೊಸ ಇನ್ಫೋಟೇನ್‍ಮೆಂಟ್ ಸಿಸ್ಟಂ ಅಳವಡಿಸಲಾಗಿದೆ. ಈ ಸಿಸ್ಟಂನಲ್ಲಿ ವಾಯ್ಸ್ ಕಮಾಂಡ್ ಹಾಗೂ ಬ್ಲೂಲಿಂಕ್ ಕನೆಕ್ಟಿವಿಟಿ ಫೀಚರ್‍ಗಳಿವೆ. ಜನಪ್ರಿಯ ಬಿಎಸ್-6 ಹ್ಯುಂಡೈ ಕ್ರೆಟಾ ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೋಸ್, ರೆನಾಲ್ಟ್ ಡಸ್ಟರ್, ಎಂಜಿ ಹೆಕ್ಟರ್ ಹಾಗೂ ಟಾಟಾ ಹ್ಯಾರಿಯರ್ ಎಸ್‍ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ.


Click it and Unblock the Notifications








