ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಪಡೆದ ಜನಪ್ರಿಯ ಮಾರುತಿ ಎಸ್-ಪ್ರೆಸ್ಸೊ ಕಾರು

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿಯ ಎಸ್-ಪ್ರೆಸ್ಸೊ ಕಾರಿನ ಕ್ರ್ಯಾಶ್ ಟೆಸ್ಟ್ ಫಲಿತಾಂಶ ಬಹಿರಂಗವಾಗಿದೆ. ಗ್ಲೋಬಲ್ ಎನ್‌ಸಿಎಪಿ ನಡೆಸಿದ ಟೆಸ್ಟ್‌ನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಕಾರುಗಳಲ್ಲಿ ಒಂದಾದ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಹಿನ್ನಡೆಯನ್ನು ಅನುಭವಿಸುತ್ತದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಶೋನ್ಯ ಸ್ಟಾರ್ ರೇಟಿಂಗ್ ಪಡೆದ ಜನಪ್ರಿಯ ಮಾರುತಿ ಎಸ್-ಪ್ರೆಸ್ಸೊ ಕಾರು

ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕಾರು ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ, ಈ ಮಿನಿ ಎಸ್‍ಯುವಿಯನ್ನು ಗಂಟೆಗೆ 64 ಕಿ.ಮೀ ವೇಗದಲ್ಲಿ ಮುಂಭಾಗದ ಆಫ್‌ಸೆಟ್ ಪರೀಕ್ಷೆಗೆ ಒಳಪಡಿಸಲಾಯಿತು. ಫಲಿತಾಂಶಗಳ ಪ್ರಕಾರ, ಎಸ್-ಪ್ರೆಸ್ಸೊ ವಯಸ್ಕರ ರಕ್ಷಣೆಗಾಗಿ 17 ಪಾಯಿಂಟ್‌ಗಳಲ್ಲಿ 0 ಅಂಕವನ್ನು ಪಡೆದರೆ, ಮಕ್ಕಳ ರಕ್ಷಣೆಗಾಗಿ 49 ಪಾಯಿಂಟ್‌ಗಳಲ್ಲಿ 13.84 ಅಂಕಗಳನ್ನು ಗಳಿಸಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಶೋನ್ಯ ಸ್ಟಾರ್ ರೇಟಿಂಗ್ ಪಡೆದ ಜನಪ್ರಿಯ ಮಾರುತಿ ಎಸ್-ಪ್ರೆಸ್ಸೊ ಕಾರು

ವರದಿಗಳ ಪ್ರಕಾರ, ಕ್ರ್ಯಾಶ್ ಟೆಸ್ಟ್ ಡಮ್ಮೀಸ್ ಚಾಲಕನ ಕುತ್ತಿಗೆ ಮತ್ತು ಎದೆಯ ಭಾಗದಲ್ಲೆ ಹೆಚ್ಚು ಪೆಟ್ಟು ಬಿದ್ದಿದೆ. ಫಲಿತಾಂಶದಲ್ಲಿ ಕಾರಿನ ರಚನೆ ಮತ್ತು ಬಾಡಿ ಶೆಲ್ ಅನ್ನು ಅಸ್ಥಿರವೆಂದು ರೇಟ್ ಮಾಡಲಾಗಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಕ್ರ್ಯಾಶ್ ಟೆಸ್ಟ್‌ನಲ್ಲಿ ಶೋನ್ಯ ಸ್ಟಾರ್ ರೇಟಿಂಗ್ ಪಡೆದ ಜನಪ್ರಿಯ ಮಾರುತಿ ಎಸ್-ಪ್ರೆಸ್ಸೊ ಕಾರು

ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಸಾಕಷ್ಟು ಸುರಕ್ಷತಾ ಫೀಚರ್ ಗಳನ್ನು ಹೊಂದಿವೆ. ಆದರೆ ಕೆಲವು ಪ್ರಮುಖವಾದ ಸುರಕ್ಷತಾ ಫೀಚರ್ ಗಳನ್ನು ಮಿಸ್ ಮಾಡಿಕೊಂಡಿದೆ. ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಮಿನಿ ಎಸ್‍ಯುವಿಯಲ್ಲಿ ಕೇವಲ ಒಂದೇ ಡ್ರೈವರ್ ಸೈಡ್ ಏರ್‌ಬ್ಯಾಗ್‌ನೊಂದಿಗೆ ಬರುತ್ತದೆ, ಇದು ಸೀಟ್‌ಬೆಲ್ಟ್ ಪ್ರಿಟೆನ್ಷನರ್‌ಗಳನ್ನು ಹೊಂದಿಲ್ಲ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಶೋನ್ಯ ಸ್ಟಾರ್ ರೇಟಿಂಗ್ ಪಡೆದ ಜನಪ್ರಿಯ ಮಾರುತಿ ಎಸ್-ಪ್ರೆಸ್ಸೊ ಕಾರು

ಮಕ್ಕಳ ಸುರಕ್ಷತಾ ವಿಷಯದಲ್ಲಿ, ಮಾರುತಿ ಎಸ್-ಪ್ರೆಸ್ಸೊ ಎರಡು-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ. ಐಎಸ್ಒಫಿಕ್ಸ್ ಚೈಲ್ಡ್ ಸೀಟ್ ಆಂಕರ್‌ಗಳ ರೂಪಾಂತರಗಳಲ್ಲಿ ಸ್ಟ್ಯಾಂಡರ್ಡ್‌ನಂತೆ ಇರುವುದು ಸ್ಕೋರ್ ಅನ್ನು ಸುಧಾರಿಸಲು ಮತ್ತಷ್ಟು ಸಹಾಯ ಮಾಡಬಹುದೆಂದು ಫಲಿತಾಂಶಗಳು ತಿಳಿಸಿವೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಕ್ರ್ಯಾಶ್ ಟೆಸ್ಟ್‌ನಲ್ಲಿ ಶೋನ್ಯ ಸ್ಟಾರ್ ರೇಟಿಂಗ್ ಪಡೆದ ಜನಪ್ರಿಯ ಮಾರುತಿ ಎಸ್-ಪ್ರೆಸ್ಸೊ ಕಾರು

ಗ್ಲೋಬಲ್ ಎನ್‌ಸಿಎಪಿ ಪ್ರಧಾನ ಕಾರ್ಯದರ್ಶಿ ಅಲೆಜಾಂಡ್ರೊ ಫುರಾಸ್ ಅವರು ಮಾತನಾಡಿ, ಭಾರತೀಯ ಮಾರುಕಟ್ಟೆಯ ಅತಿದೊಡ್ಡ ಪಾಲನ್ನು ಹೊಂದಿರುವ ತಯಾರಕ ಮಾರುತಿ ಸುಜುಕಿ ಭಾರತೀಯ ಗ್ರಾಹಕರಿಗೆ ಇಂತಹ ಕಡಿಮೆ ಸುರಕ್ಷತೆಯ ಕಾರ್ಯಕ್ಷಮತೆಯನ್ನು ನೀಡುತ್ತಿರುವುದು ಬಹಳ ವಿಷಾದನೀಯ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಶೋನ್ಯ ಸ್ಟಾರ್ ರೇಟಿಂಗ್ ಪಡೆದ ಜನಪ್ರಿಯ ಮಾರುತಿ ಎಸ್-ಪ್ರೆಸ್ಸೊ ಕಾರು

ದೇಶೀಯ ತಯಾರಕರಾದ ಮಹೀಂದ್ರಾ ಮತ್ತು ಟಾಟಾ ಉತ್ತಮ ಅಂಕವನ್ನು ಪಡೆದುಕೊಂಡಿದೆ. ತಮ್ಮ ಗ್ರಾಹಕರಿಗೆ ಸುರಕ್ಷತೆ ಮತ್ತು ರಕ್ಷಣೆ ಎರಡರಲ್ಲೂ ಇವರು ಐದು ಸ್ಟಾರ್ ಗಳನ್ನು ಗಳಿಸಿದೆ. ಖಂಡಿತವಾಗಿಯೂ ಮಾರುತಿ ಸುಜುಕಿ ತನ್ನ ಗ್ರಾಹಕರಿಗೆ ಸುರಕ್ಷತೆಗಾಗಿ ಈ ಬದ್ಧತೆಯನ್ನು ಪ್ರದರ್ಶಿಸುವ ಸಮಯವಿದೆಯೇ? ಎಂದು ಪ್ರಶ್ನಿಸಿದ್ದಾರೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಮಾರುತಿ ಸುಜುಕಿ ಕಂಪನಿಯು ಸಾಮಾನ್ಯ ಜನರಿಗಾಗಿ ಕೈಗೆಟಕುವ ದರದಲ್ಲಿ ಈ ಮಿನಿ ಎಸ್‍‍ಯುವಿಯನ್ನು ಬಿಡುಗಡೆಗೊಳಿಸಿತ್ತು. ಮಾರುತಿ ಎಸ್-ಪ್ರೆಸ್ಸೊ ಮಿನಿ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಶೋನ್ಯ ಸ್ಟಾರ್ ರೇಟಿಂಗ್ ಪಡೆದ ಜನಪ್ರಿಯ ಮಾರುತಿ ಎಸ್-ಪ್ರೆಸ್ಸೊ ಕಾರು

ಕ್ರ್ಯಾಶ್ ಟೆಸ್ಟ್‌ನಲ್ಲಿ ಮಾರುತಿ ಎಸ್-ಪ್ರೆಸ್ಸೊ ಮಿನಿ ಎಸ್‍ಯುವಿಯು ನಿರಾಶಾದಾಯಕ ಫಲಿತಾಂಶವನ್ನು ನೀಡಿದೆ. ಎಸ್-ಪ್ರೆಸ್ಸೊ ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ-ಸ್ಟಾರ್ ರೇಟಿಂಗ್‌ಗಳು ಖಂಡಿತವಾಗಿಯೂ ಭಾರತೀಯ ಮಾರುಕಟ್ಟೆಯಲ್ಲಿ ಕಾರಿನ ಮಾರಟದಲ್ಲಿ ಪರಿಣಾಮವನ್ನು ಬೀರುತ್ತದೆಯೆ ಎಂಬುದನ್ನು ಕಾದು ನೋಡಬೇಕು. ಒಟ್ಟಿನಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಕಾರುಗಳಲ್ಲಿ ಒಂದಾದ ಎಸ್-ಪ್ರೆಸ್ಸೊ ಸುರಕ್ಷತಾ ವಿಷಯದಲ್ಲಿ ವೈಫಲ್ಯ ಕಂಡಿರುವುದು ವಿಷಾದನೀಯ.

Most Read Articles

Kannada
English summary
Maruti S-Presso Secures Zero-Star Rating At Global NCAP Crash Tests. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X