ಬಿಎಸ್-6 ಡೀಸೆಲ್ ಎಂಜಿನ್‌ನೊಂದಿಗೆ ಬಿಡುಗಡೆಯಾದ ಹ್ಯುಂಡೈ ಎಲಾಂಟ್ರಾ
ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಪ್ರೀಮಿಯಂ ಸೆಡಾನ್ ಆವೃತ್ತಿಯಾದ ಎಲಾಂಟ್ರಾ ಕಾರು ಮಾದರಿಯ ಡೀಸೆಲ್ ಆವೃತ್ತಿಯನ್ನು ಬಿಎಸ್-6 ಎಂಜಿನ್‌ನೊಂದಿಗೆ ಬಿಡುಗಡೆ ಮಾಡಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.18.70 ಲಕ್ಷ ಬೆಲೆ ಹೊಂದಿದೆ.

ಎಲಾಂಟ್ರಾ ಬಿಎಸ್-6 ಡೀಸೆಲ್ ಕಾರು ಮಾದರಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಮುಖ ಎರಡು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಆರಂಭಿಕ ಆವೃತ್ತಿಯಾದ ಎಸ್ಎಕ್ಸ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 18.70 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯಾದ ಎಸ್ಎಕ್ಸ್(ಓ) ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ.20.65 ಲಕ್ಷ ಬೆಲೆ ಹೊಂದಿದೆ.

ಹೊಸ ಡೀಸೆಲ್ ಕಾರು ಈ ಹಿಂದಿನ ಮಾದರಿಯೆಂತೆ 1.5-ಲೀಟರ್ ಸಿಆರ್‌ಡಿಐ ಎಂಜಿನ್ ಹೊಂದಿದ್ದು, ಹೊಸ ಎಮಿಷನ್‌ನೊಂದಿಗೆ 114-ಬಿಎಚ್‌ಪಿ ಮತ್ತು 250-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಎಸ್ಎಕ್ಸ್ ಬೆಸ್ ವೆರಿಯೆಂಟ್‌ನಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಹೈ ಎಂಡ್ ಮಾದರಿಯಾದ ಎಸ್ಎಕ್ಸ್(ಓ) ಮಾದರಿಯಲ್ಲಿ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದು, ಹೊಸ ಕಾರಿನಲ್ಲಿ ಈ ಹಿಂದಿನಂತೆಯೇ ಹಲವಾರು ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಮುಂದುವರಿಸಲಾಗಿದೆ.

ಎಲಾಂಟ್ರಾ ಕಾರಿನಲ್ಲಿ ಪೆಟ್ರೋಲ್ ಆವೃತ್ತಿಯು ಸಹ ಈಗಾಗಲೇ ಬಿಎಸ್-6 ಎಂಜಿನ್‌ನೊಂದಿಗೆ ಮಾರಾಟಕ್ಕೆ ಲಭ್ಯವಿದ್ದು, ಪೆಟ್ರೋಲ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 18.49 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ.20.39 ಲಕ್ಷ ಬೆಲೆ ಹೊಂದಿದೆ.
MOST READ: ಹೊಸ ಪೊಲೊ ಕಾರು ವಿತರಣೆ ಮಾಡಿದ ಎರಡೇ ನಿಮಿಷದಲ್ಲಿ ನಡೆಯಿತು ಅಪಘಾತ..!

ಪೆಟ್ರೋಲ್ ಕಾರು ಮಾದರಿಯು ಸಹ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸೌಲಭ್ಯ ಹೊಂದಿದ್ದು, 152-ಬಿಎಚ್‌ಪಿ ಮತ್ತು 192-ಎನ್ಎಂ ಟಾರ್ಕ್ ಉತ್ಪಾದಿಸುವ ಮೂಲಕ ಪ್ರತಿಸ್ಪರ್ಧಿ ಕಾರು ಮಾದರಿಗಳಾದ ಹೋಂಡಾ ಸಿವಿಕ್, ಸ್ಕೋಡಾ ಒಕ್ಟಿವಿಯಾ ಮತ್ತು ಟೊಯೊಟಾ ಕರೊಲ್ಲಾ ಕಾರುಗಳಿಗೆ ಮತ್ತಷ್ಟು ಪೈಪೋಟಿ ನೀಡುತ್ತಿದೆ.

ಫೇಸ್‌ಲಿಫ್ಟ್ ಆವೃತ್ತಿಯ ಮೂಲಕ ಎಲಾಂಟ್ರಾ ಕಾರಿನಲ್ಲಿ ಹಲವು ಹೊಸ ಬದಲಾವಣೆಗಳನ್ನು ಪರಿಚಯಿಸಲಾಗಿದ್ದು, ಸಾಮಾನ್ಯ ಎಲಾಂಟ್ರಾ ಕಾರಿಗಿಂತಲೂ ಹೊಸ ಕಾರಿನ ವಿನ್ಯಾಸ ಮತ್ತು ಎಂಜಿನ್ ವಿಭಾಗದಲ್ಲಿ ಮಹತ್ವದ ಬದಲಾವಣೆ ಪರಿಚಯಿಸಲಾಗಿದೆ. ಮರುವಿನ್ಯಾಸಗೊಳಿಸಲಾದ ಫ್ರಂಟ್ ಕಾಸ್‌ಕ್ಲಾಡಿಂಗ್ ಗ್ರಿಲ್, ನವೀಕೃತ ಹೆಡ್‌ಲ್ಯಾಂಪ್ ಕ್ಲಸ್ಟರ್, ಹೊಸ ಎಲ್ಇಡಿ ಡಿಆರ್‌ಎಲ್ಎಸ್, ತ್ರಿಕೋನಾಕಾರದ ಫಾಗ್ ಲ್ಯಾಂಪ್ ನೀಡಲಾಗಿದೆ.
MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಹಾಗೆಯೇ ಹೊಸ ಕಾರಿನ ಒಳಭಾಗದ ವಿನ್ಯಾಸ ಮತ್ತು ತಾಂತ್ರಿಕ ಸೌಲಭ್ಯಗಳಲ್ಲೂ ಕೆಲವು ಬದಲಾವಣೆಗಳನ್ನು ಪರಿಚಯಿಸಿರುವ ಹ್ಯುಂಡೈ ಸಂಸ್ಥೆಯು ಹೊಸದಾದ 0.8-ಇಂಚಿನ ಟಚ್‌ಸ್ಕೀನ್ ಇನ್ಪೋಟೈನ್‌ಮೆಂಟ್, ಆ್ಯಪಲ್ ಕಾರ್ ಪ್ಲೇ ಮತ್ತು ಆಂಡ್ರಾಯಿಡ್ ಆಟೋ, ಇನ್ಫಿನಿಟಿ ಸೌಂಡ್ ಸಿಸ್ಟಂ, ಟೈರ್ ಪ್ರೆಸರ್ ಮಾನಿಟರ್ ಸಿಸ್ಟಂ, ವೈರ್‌ಲೆಸ್ ಚಾರ್ಜರ್ ನೀಡಲಾಗಿದೆ.

ಇದರೊಂದಿಗೆ ಪ್ರೀಮಿಯಂ ಫೀಚರ್ಸ್‌ಗಳಾದ ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೊಲ್ ಸಿಸ್ಟಂ, ವೆಂಟಿಲೆಟೆಡ್ ಫ್ರಂಟ್ ಸೀಟ್, 10 ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೀಟ್, ಎಲೆಕ್ಟ್ರಿಕ್ ಸನ್‌ರೂಫ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ಹ್ಯಾಂಡ್ ಫ್ರೀ ಟೈಲ್‌ಗೆಟ್, ಕ್ರೂಸ್ ಕಂಟ್ರೊಲ್ ಸೇರಿದಂತೆ ಹಲವು ಹೊಸ ಸೌಲಭ್ಯಗಳನ್ನು ನೀಡಲಾಗಿದೆ.
MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಸುರಕ್ಷತೆಗೂ ಹೊಸ ಕಾರಿನಲ್ಲಿ ಹೆಚ್ಚಿನ ಒತ್ತು ನೀಡಲಾಗಿದ್ದು, 33 ಸೆಫ್ಟಿ ಫೀಚರ್ಸ್ ಒಳಗೊಂಡ ಬ್ಲೂ ಲಿಂಕ್, ಸ್ಟ್ಯಾಂಡರ್ಡ್ ಸೆಫ್ಟಿ ಫೀಚರ್ಸ್‌ಗಳಾದ 6 ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಹೈ ಸ್ಟೀಡ್ ವಾರ್ನಿಂಗ್, ಸೀಟ್ ಬೆಲ್ಟ್ ರಿಮೆಂಡರ್, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ವೆಹಿಕಲ್ ಸ್ಟ್ಯಾಬಿಲಿಟಿ ಕಂಟ್ರೊಲ್ ಸೌಲಭ್ಯಗಳನ್ನು ನೀಡಲಾಗಿದೆ.


Click it and Unblock the Notifications