ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಹ್ಯುಂಡೈ ಎಲಾಂಟ್ರಾ ಡೀಸೆಲ್ ಆವೃತ್ತಿ
ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಹೊಸ ಕ್ರೆಟಾ ಮತ್ತು ವೆರ್ನಾ ಫೇಸ್‍ಲಿಫ್ಟ್ ಕಾರುಗಳನ್ನು ಭಾರತೀಯ ಮಾರುಕಟ್ಟಿಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದೀಗ ಹ್ಯುಂಡೈ ಕಂಪನಿಯು ಹೊಸ ಹ್ಯುಂಡೈ ಎಲಾಂಟ್ರಾ ಕಾರಿನ ಕಾರಿನ ಡೀಸೆಲ್ ಆವೃತ್ತಿಯನ್ನು ಕೂಡ ಮುಂದಿನ ತಿಂಗಳು ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ.

ಹಿಂದಿನ ಎಲಾಂಟ್ರಾ ಮಾದರಿಗೆ ಹೋಲಿಸಿದರೆ ಹೊಸ ಎಲಾಂಟ್ರಾ ಕಾರು ಆಗ್ರೇಸಿವ್ ಲುಕ್ ಅನ್ನು ಹೊಂದಿದೆ. ಹೊಸ ಹ್ಯುಂಡೈ ಎಲಾಂಟ್ರಾ ಕಾರು ಸ್ಪೋರ್ಟಿನೆಸ್ ಥೀಮ್ ಅನ್ನು ಆಧರಿಸಿದೆ.ಹೊಸ ಹ್ಯುಂಡೈ ಎಲಾಂಟ್ರಾ ಮುಂಭಾಗ ಪಾಲಿಹೆಡ್ರಲ್ ಲುಕ್ ಅನ್ನು ಹೊಂದಿದೆ. ಹೊಸ ಹ್ಯುಂಡೈ ಎಲಾಂಟ್ರಾ ಡೀಸೆಲ್ ಆವೃತ್ತಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.16 ಲಕ್ಷದಿಂದ 17 ಲಕ್ಷಗಳವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ.

ಹೊಸ ಎಲಾಂಟ್ರಾ ಕಾರು ಸ್ಪೋರ್ಟಿ ಸಿಲೂಯೆಟ್, ಬೆಲ್ಪ್ಲೈನ್, ಹೊಸದಾಗಿ ವಿನ್ಯಾಸಗೊಳಿಸಿದ ವ್ಹೀಲ್‍ಗಳು, ಶಾರ್ಪರ್ ಎಲ್‍ಇಡಿ ಹೆಡ್‍ಲ್ಯಾಂಪ್‍ಗಳು ಮತ್ತು ಬ್ಲ್ಯಾಕ್ ಬಿ-ಪಿಲ್ಲರ್‍ನೊಂದಿಗೆ ಸೈಡ್ ಪ್ರೊಫೈಲ್ ಅನ್ನು ಹೊಂದಿದೆ.

ಹೊಸ ಹ್ಯುಂಡೈ ಎಲಾಂಟ್ರಾ ಕಾರಿನ ಮುಂಭಾಗ ಸೊನಾಟ ಮಾದರಿಯಂತೆ ನವೀಕರಿಸಲಾದ ಗ್ರಿಲ್ ಮತ್ತು ಬಂಪರ್ ಸೇರಿದಂತೆ ಇತರ ಸ್ಟೈಲಿಂಗ್ ಅಂಶಗಳನ್ನು ಅಳವಡಿಸಲಾಗಿದೆ.

ಇನ್ನು ಈ ಕಾರಿನ ಇಂಟಿರಿಯರ್‍ನಲ್ಲಿ 4 ಸ್ಪೋಕ್ ವ್ಹೀಲ್ ಮತ್ತು ಹ್ಯುಂಡೈ ಐ20 ಮಾದರಿಯಂತೆ ದೊಡ್ಡ ಟಚ್‍ಸ್ಕ್ರೀನ್ ಇನ್ಫೋಟೇನ್‍ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಇದನ್ನು ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಜೊತೆಯಲ್ಲಿ ವಿಲೀನಗೊಳಿಸಲಾಗಿದೆ. ಹೊಸ ಎಲಾಂಟ್ರಾ ಕಾರಿನಲ್ಲಿ 4 ಎಸಿ ವೆಂಟ್ಸ್ ಮತ್ತು ಡ್ಯಾಶ್ ಬೋರ್ಡ್‍ನಲ್ಲಿರುವ ಎಲ್‍ಇಡಿ ಲೈಟ್ ಎದ್ದು ಕಾಣುವಂತಿದೆ.

ಹೊಸ ಹ್ಯುಂಡೈ ಎಲಾಂಟ್ರಾ ಡೀಸೆಲ್ ಆವೃತ್ತಿಯ ಮಾಹಿತಿಯನ್ನು ಗಾಡಿವಾಡಿ ಬಹಿರಂಗಪಡಿಸಿದೆ. ಹೊಸ ಹ್ಯುಂಡೈ ಎಲಾಂಟ್ರಾ ಕಾರಿನಲ್ಲಿ ಕಿಯಾ ಸೆಲ್ಟೋಸ್ ಎಸ್‍ಯುವಿಯ ಮಾದರಿಯ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಿದೆ. ಇದು 1.5 ಲೀಟರ್ ಸಿಆರ್‍ಡಿಐ ವಿಜಿಟಿ ಟರ್ಬೊಜಾರ್ಜ್ಡ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಿದೆ.

ಈ ಎಂಜಿನ್ 4,000 ಆರ್‍ಪಿಎಂನಲ್ಲಿ 115 ಬಿಹೆಚ್‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 6 ಸ್ಫೀಡ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗುತ್ತದೆ.

ಹೊಸ ಹ್ಯುಂಡೈ ಎಲಾಂಟ್ರಾ ಕಾರಿನಲ್ಲಿ ಸುರಕ್ಷತೆಗಾಗಿ ಹೆಚ್ಚಿನ ಪ್ರಾಮುಖತೆಯನ್ನು ನೀಡಬಹುದು. ಈ ಕಾರಿನಲ್ಲಿ ಸುರಕ್ಷತೆಗಾಗಿ ರಿವರ್ಸ್ ಕ್ಯಾಮೆರಾ, ಕ್ಲ್ಯಾಮೇಟ್ ಕಂಟ್ರೋಲರ್,ಟಯರ್ ಫ್ರೆಶ್ರರ್ ಮಾನಿಟರಿಂಗ್ ಸಿಸ್ಟಮ್, ಸೆಪ್ಟಿ ಕಿಟ್, 6 ಏರ್‍ಬ್ಯಾಗ್, ಎಬಿಎಸ್, ಇಬಿಡಿ ವಾಹನ ನಿಯಂತ್ರಣ ಮುಂತಾದ ಫೀಚರ್‍ಗಳನ್ನು ಹೊಂದಿರಲಿದೆ.

ಹ್ಯುಂಡೈ ಕಂಪನಿಯು ಶೀಘ್ರದಲ್ಲೇ ಭಾರತದಲ್ಲಿ ಎಲಾಂಟ್ರಾ ಡೀಸೆಲ್ ಆವೃತ್ತಿಯನ್ನು ಪರಿಚಯಿಸಲಿದೆ. ಹೊಸ ಹ್ಯುಂಡೈ ಎಲಾಂಟ್ರಾ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡಗಡೆಯಾದ ಬಳಿಕ ಹೊಂಡಾ ಸಿವಿಕ್, ಟೊಯೊಟಾ ಕೊರೊಲಾ ಹಾಗೂ ಅಟ್ಲೆಸ್ ಕಾರುಗಳಿಗೆ ಪೈಪೋಟಿ ನೀಡಲಿದೆ.


Click it and Unblock the Notifications