ಬಹಿರಂಗವಾಯ್ತು ಹೊಸ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಡೀಸೆಲ್ ಆವೃತ್ತಿಯ ಮಾಹಿತಿ
ಹ್ಯುಂಡೈ ಕಂಪನಿಯು ತನ್ನ ಬಿಎಸ್-6 ಗ್ರಾಂಡ್ ಐ10 ನಿಯೋಸ್ ಡೀಸೆಲ್ ಆವೃತಿಯ ವಿವರಗಳನ್ನು ಬಹಿರಂಗಪಡಿಸಿದೆ. ಈ ಹೊಸ ಗ್ರ್ಯಾಂಡ್ ಐ10 ನಿಯೊಸ್ ಡೀಸೆಲ್ ಆವೃತಿಯನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ.

ಹೊಸ ಗ್ರಾಂಡ್ ಐ10 ನಿಯೋಸ್ ಡೀಸೆಲ್ ಆವೃತಿಯನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸುವುದನ್ನು ಹೊರತುಪಡಿಸಿ ಹೆಚ್ಚಿನ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಗ್ರಾಂಡ್ ಐ10 ನಿಯೋಸ್ ಕಾರಿನಲ್ಲಿ 1.2 ಲೀಟರ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 74 ಬಿಹೆಚ್‍ಪಿ ಪವರ್ ಮತ್ತು 190 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಐದು-ಸ್ಪೀಡ್ ಮ್ಯಾನುವಲ್ ಅಥವಾ ಎಎಂಟಿ ಗೇರ್‌ಬಾಕ್ಸ್ ಅನ್ನು ಹೊಂದಿರಲಿದೆ.

ಬಿಎಸ್-6 ಗ್ರಾಂಡ್ ಐ10 ನಿಯೋಸ್ ಡೀಸೆಲ್ ಆವೃತಿಯು ಮೂರು ರೂಪಾಂತರಗಳಲ್ಲಿ ಲಭ್ಯವಿರಲಿದೆ. ಇದು ಮ್ಯಾಗ್ನಾ, ಸ್ಪೋರ್ಟ್ಜ್ ಮತ್ತು ಅಸ್ಟಾ ರೂಪಾಂತರವಾಗಿದೆ. ಇದರಲ್ಲಿ ಸ್ಪೋರ್ಟ್ಸ್ ರೂಪಾಂತರ ಮಾತ್ರ ಎಎಂಟಿ ಗೇರ್‌ಬಾಕ್ಸ್ ಹೊಂದಿರಲಿದೆ.
MOST READ: ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ಕರೋಕ್ ಎಸ್‍ಯುವಿ

ಬಿಎಸ್-6 ಗ್ರಾಂಡ್ ಐ10 ನಿಯೊಸ್ ಡೀಸೆಲ್ ಆವೃತಿಯ ಬೆಲೆಯನ್ನು ಇನ್ನು ಕೂಡ ಪ್ರಕಟಿಸಿಲ್ಲ.ದೇಶಾದ್ಯಂತ ವಿರುವ ಲಾಕ್‌ಡೌನ್ ಬಳಿಕ ಈ ಕಾರಿನ ಬೆಲೆಯನ್ನು ಘೋಷಿಸಬಹುದು.

ಗ್ರ್ಯಾಂಡ್ ಐ10 ಕಾರಿನ ಮುಂಭಾಗ ಸಿಗ್ನೇಚರ್ ಕ್ಯಾಸ್ಕೇಡಿಂಗ್ ಗ್ರಿಲ್ ಅನ್ನು ಹೊಂದಿದೆ. ಇನ್ನೂ ಇಂಟಿಗ್ರೇಟೆಡ್ ಟರ್ನ್ ಸಿಗ್ನಿಲ್‍ನೊಂದಿಗೆ ಸ್ಲಿಕ್ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ ಅನ್ನು ಹೊಂದಿದೆ. ಈ ಕಾರು ಎಲ್‍ಇಡಿ ಡಿಎಆರ್‍ಎಲ್‍ಗಳನ್ನುಹೊಂದಿದೆ. ಇದು ಈ ಹ್ಯಾಚ್‍ಬ್ಯಾಕ್‍ಗೆ ಸ್ಪೋರ್ಟಿ ಮತ್ತು ಪ್ರೀಮಿಯಂ ಲುಕ್ ಅನ್ನು ನೀಡಿದೆ.
MOST READ: ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಮಾರುತಿ ಸುಜುಕಿ ಎಕ್ಸ್‌ಎಲ್6

ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ 15 ಇಂಚಿನ ಅಲಾಯ್ ವ್ಹೀಲ್‍ಗಳನ್ನು ಹೊಂದಿದೆ. ಕಪ್ಪು ಬಣ್ಣ ರೂಫ್ ಮತ್ತು ಶಾರ್ಪರ್ ಲೈನ್ಸ್ ಗಳಿಂದ ಕೊಡಿದೆ. ಹಿಂಭಾಗದಲ್ಲಿ ಹೊಸ ಹ್ಯಾಚ್‍ಬ್ಯಾಕ್‍ಲ್ಲಿ ಬಂಪರ್‍ಗಳನ್ನು ಹೊಂದಿದೆ. ಇನ್ನೂ ಹಿಂಭಾಗದಲ್ಲಿ ಕೆಲವು ಸಿಲ್ವರ್ ಅಂಶಗಳನ್ನು ಹೊಂದಿದೆ.

ಹೊಸ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಕಾರಿನ ಇಂಟಿರಿಯರ್‍ನಲ್ಲಿ ಡ್ಯುಯಲ್ ಟೋನ್ ಬ್ಲ್ಯಾಕ್/ಗ್ರೇ ಫಿನಿಶಿಂಗ್ ಅನ್ನು ಹೊಂದಿದೆ. ಇನ್ನೂ ಸೆಂಟ್ರೆಲ್ ಕನ್ಸೋಲ್ ಇನ್ಫೋಟೇನ್‍ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಇದನ್ನು ನಿಯಂತ್ರಿಸಲು ಎರಡು ಬದಿಯಲ್ಲಿ ಬಟನ್‍ಗಳಿವೆ ಅಲ್ಲದೇ ಇದು ಟಚ್‍ಸ್ಕ್ರೀನ್ ಆಗಿದೆ.
MOST READ: ಇತಿಹಾಸದ ಪುಟ ಸೇರಿದ ಫೋಕ್ಸ್‌ವ್ಯಾಗನ್ ಎಮಿಯೊ ಕಾರು

ಈ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಪ್ರಮುಖ್ಯತೆಯನ್ನು ನೀಡಿದೆ. ಇದಕ್ಕಾಗಿ ಕಾರಿನಲ್ಲಿ ಏರ್‍ಬ್ಯಾಗಗಳು, ರಿವರ್ಸ್ ಪಾರ್ಕಿಂಗ್ ಸೆನ್ಸಾರ್‍ಗಳು, ಇಬಿಡಿಯೊಂದಿಗೆ ಎಬಿಎಸ್, ಸೀಟ್ ಬೆಲ್ಟ್ ರಿಮೈಂಡರ್, ಹೈ ಸ್ಪೀಡ್ ಅಲರ್ಟ್ ಮತ್ತು ಎಸ್‌ಒಫಿಕ್ಸ್ ಚೈಲ್ಡ್-ಸೀಟ್ ಮೌಂಟ್‍ಗಳನ್ನು ಒಳಗೊಂಡಿದೆ.

ಹೊಸ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಆಕರ್ಷಕ ಲುಕ್ ಅನ್ನು ಹೊಂದಿದೆ. ಹೊಸ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಕಾರು ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಸ್ವಿಫ್ಟ್, ಟಾಟಾ ಟಿಯಾಗೋ ಮತ್ತು ಫೋರ್ಡ್ ಫಿಗೊ ಕಾರುಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications