ಗ್ರಾಂಡ್ ಐ10 ನಿಯೋಸ್ ಬೆಲೆಯಲ್ಲಿ ಹೆಚ್ಚಳ ಮಾಡಿದ ಹ್ಯುಂಡೈ

ಲಾಕ್‌ಡೌನ್ ಸಂಕಷ್ಟದಿಂದಾಗಿ ಹೊಸ ಕಾರುಗಳ ಉತ್ಪಾದನಾ ವೆಚ್ಚದಲ್ಲಿ ಸಾಕಷ್ಟು ಏರಿಕೆಯಾಗಿದ್ದು, ಬಹುತೇಕ ಆಟೋ ಕಂಪನಿಗಳು ಹೊಸ ವಾಹನ ಬೆಲೆಯಲ್ಲಿ ಹೆಚ್ಚಳ ಮಾಡಿವೆ. ಹ್ಯುಂಡೈ ಕೂಡಾ ತನ್ನ ಜನಪ್ರಿಯ ಗ್ರಾಂಡ್ ಐ10 ನಿಯೋಸ್ ಕಾರಿನ ಬೆಲೆ ಹೆಚ್ಚಿಸಿದ್ದು, ಹೊಸ ದರ ಪಟ್ಟಿ ಬಿಡುಗಡೆ ಮಾಡಿದೆ.

ಗ್ರಾಂಡ್ ಐ10 ನಿಯೋಸ್ ಬೆಲೆಯಲ್ಲಿ ಹೆಚ್ಚಳ ಮಾಡಿದ ಹ್ಯುಂಡೈ

ಹೊಸ ದರ ಪಟ್ಟಿ ಪ್ರಕಾರ, ಗ್ರಾಂಡ್ ಐ10 ನಿಯೋಸ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.5,06,990 ಬೆಲೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಯು ರೂ. 8,29,459 ಬೆಲೆ ಹೊಂದಿದ್ದು, ಹೊಸ ಕಾರು ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬಂದಿರುವ ಬಿಎಸ್-6 ಎಮಿಷನ್‌ನಂತೆ ಹೊಸ ಎಂಜಿನ್ ಜೋಡಣೆ ನಂತರ ಇದು ಎರಡನೇ ಬಾರಿಗೆ ಹೆಚ್ಚುವರಿ ಬೆಲೆ ಪಡೆದುಕೊಂಡಿದೆ.

ಗ್ರಾಂಡ್ ಐ10 ನಿಯೋಸ್ ಬೆಲೆಯಲ್ಲಿ ಹೆಚ್ಚಳ ಮಾಡಿದ ಹ್ಯುಂಡೈ

ಗ್ರಾಂಡ್ ಐ10 ನಿಯೋಸ್ ಕಾರು ಸದ್ಯ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡಿಸೇಲ್ ಮತ್ತು ಸಿಎನ್‌ಜಿ ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಪರ್ಫಾಮೆನ್ಸ್ ಪ್ರಿಯರಿಗಾಗಿ ಟರ್ಬೋ ಪೆಟ್ರೋಲ್ ಆವೃತ್ತಿಯು ಖರೀದಿಗೆ ಲಭ್ಯವಿದೆ.

ಗ್ರಾಂಡ್ ಐ10 ನಿಯೋಸ್ ಬೆಲೆಯಲ್ಲಿ ಹೆಚ್ಚಳ ಮಾಡಿದ ಹ್ಯುಂಡೈ

ಪೆಟ್ರೋಲ್ ಮಾದರಿಯು 1.2-ಲೀಟರ್ ಎಂಜಿನ್ ಹೊಂದಿದ್ದರೆ ಡೀಸೆಲ್ ಮಾದರಿಯು ಕೂಡಾ 1.2-ಲೀಟರ್ ಎಂಜಿನ್ ಹೊಂದಿದ್ದು, ಪರ್ಫಾಮೆನ್ಸ್ ಪ್ರಿಯರಿಗಾಗಿ ಪರಿಚಯಿಸಲಾಗಿರುವ ಟರ್ಬೋ ಪೆಟ್ರೋಲ್ ಮಾದರಿಯು 1.0-ಲೀಟರ್ ಎಂಜಿನ್‌ನೊಂದಿಗೆ ಅತ್ಯುತ್ತಮ ಕಾರು ಮಾದರಿಯಾಗಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಗ್ರಾಂಡ್ ಐ10 ನಿಯೋಸ್ ಬೆಲೆಯಲ್ಲಿ ಹೆಚ್ಚಳ ಮಾಡಿದ ಹ್ಯುಂಡೈ

1.0-ಲೀಟರ್ ಟರ್ಬೋ ಎಂಜಿನ್ ಮಾದರಿಯು ಗ್ರಾಂಡ್ ಐ10 ನಿಯೊಸ್ ಪೆಟ್ರೋಲ್ ಮಾದರಿಯಲ್ಲೇ ಹೈ ಎಂಡ್ ಆವೃತ್ತಿಯಾಗಿ ಮಾರಾಟವಾಗುತ್ತಿದ್ದು, ಸಾಮಾನ್ಯ ಗ್ರಾಂಡ್ ಐ10 ಮತ್ತು ಎಲೈಟ್ ಐ20 ನಡುವಿನ ಸ್ಥಾನ ಗಿಟ್ಟಿಸಿಕೊಂಡಿರುವ ಗ್ರಾಂಡ್ ಐ10 ನಿಯೋಸ್ ಆವೃತ್ತಿಯು ಇತರೆ ಹ್ಯಾಚ್‌ಬ್ಯಾಕ್ ಆವೃತ್ತಿಗಳಿಂತಲೂ ವಿಶೇಷ ಎನ್ನಿಸಲಿದೆ.

ಗ್ರಾಂಡ್ ಐ10 ನಿಯೋಸ್ ಬೆಲೆಯಲ್ಲಿ ಹೆಚ್ಚಳ ಮಾಡಿದ ಹ್ಯುಂಡೈ

ಸ್ಪೋರ್ಟ್ಜ್ ಮತ್ತು ಸ್ಪೋರ್ಟ್ಜ್ ಡ್ಯುಯಲ್ ಟೋನ್ ಆವೃತ್ತಿಯಲ್ಲಿ ಪರಿಚಯಿಸಲಾಗಿರುವ ಟರ್ಬೋ ಪೆಟ್ರೋಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದು, ಮುಂಬರುವ ದಿನಗಳಲ್ಲಿ ಹೈ ಎಂಡ್ ಮಾದರಿಯು 7-ಸ್ಪೀಡ್ ಮ್ಯಾನುವಲ್ ಡ್ಯುಯಲ್ ಕ್ಲಚ್‌ ಆಯ್ಕೆಯನ್ನು ಪಡೆದುಕೊಳ್ಳಲಿದೆ.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಗ್ರಾಂಡ್ ಐ10 ನಿಯೋಸ್ ಬೆಲೆಯಲ್ಲಿ ಹೆಚ್ಚಳ ಮಾಡಿದ ಹ್ಯುಂಡೈ

ಗ್ರಾಂಡ್ ಐ10 ನಿಯೋಸ್ ಕಾರು ಎರಾ, ಮ್ಯಾಗ್ನಾ, ಸ್ಪೋರ್ಟ್ಜ್ ಮತ್ತು ಆಸ್ಟಾ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಹಳೆಯ ಗ್ರಾಂಡ್ ಐ10 ಆವೃತ್ತಿಗಿಂತಲೂ ಹೆಚ್ಚು ಸ್ಪೋರ್ಟಿ ಲುಕ್‌ನೊಂದಿಗೆ ಮುಂಭಾಗದ ಗ್ರಿಲ್ ಡಿಸೈನ್ ಹೊಸ ಕಾರಿಗೆ ಹೆಚ್ಚಿನ ಮಟ್ಟದ ಪ್ರೀಮಿಯಂ ಲುಕ್ ಹೊಂದಿದೆ.

More from DriveSpark

Article Published On: Thursday, June 18, 2020, 8:45 [IST]
English summary
Hyundai Grand i10 Nios Gets Price Hike In India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+