Just In
Don't Miss!
- Movies
ಸುದೀಪ್ 'ಫ್ಯಾಂಟಮ್' ಸಿನಿಮಾದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್?
- News
ಖಾತೆ ಹಂಚಿಕೆ ಅಸಮಾಧಾನ: ಸಚಿವ ಸ್ಥಾನಕ್ಕೆ ಜೆ.ಸಿ. ಮಾಧುಸ್ವಾಮಿ ರಾಜೀನಾಮೆ?
- Lifestyle
ಈ 3 ವಸ್ತುಗಳನ್ನು ಹಾಕಿ ಮಾಡಿದ ಜ್ಯೂಸ್ ಕುಡಿದರೆ ಬೊಜ್ಜು ಕರುಗುತ್ತೆ, ಸೌಂದರ್ಯ ಹೆಚ್ಚುತ್ತೆ
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Sports
ತವರಿಗೆ ಮರಳಿದ ಟೀಮ್ ಇಂಡಿಯಾ: ಮುಂಬೈನಲ್ಲಿ ರಹಾನೆಗೆ ಅದ್ದೂರಿ ಸ್ವಾಗತ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾರತದಲ್ಲಿ ಮಾರಾಟವಾಗುವ ಹ್ಯುಂಡೈ ಐ10 ಕಾರಿಗಿಂತ ವಿದೇಶದಲ್ಲಿ ಮಾರಾಟವಾಗುತ್ತಿರುವ ಮಾದರಿ ಹೆಚ್ಚು ಸೇಫ್
ಗ್ಲೋಬಲ್-ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ ಇಂಡಿಯಾ-ಸ್ಪೆಕ್ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಕೇವಲ 2-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿತ್ತು. ಆದರೆ ಯುರೋಪಿಯನ್ ಹ್ಯುಂಡೈ ಐ10 ಕಾರು ಯುರೋ-ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ 3-ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ.

ಗ್ಲೋಬಲ್-ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ಮತ್ತು ಯುರೋ-ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ನಡುವೆ ಹಲವಾರು ವ್ಯತ್ಯಾಸಗಳಿವೆ. ಆದರೆ ಗ್ಲೋಬಲ್-ಎನ್‌ಸಿಎಪಿ ಗಿಂತಲೂ ಯುರೋ-ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ಹೆಚ್ಚು ಕಠಿಣವಾಗಿರುತ್ತದೆ. ಯುರೋಪಿನ ಹ್ಯುಂಡೈ ಐ10 ಕಾರನ್ನು ಇಂಡಿಯನ್ ಗ್ರ್ಯಾಂಡ್ ಐ10 ನಿಯೋಸ್ ಮಾದರಿಗೆ ಹೋಲಿಸಿದರೆ ಯುರೋ-ಸ್ಪೆಕ್ ಹೆಚ್ಚು ಸುರಕ್ಷಿತವಾಗಿದೆ.

ಯುರೋ-ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನ ನಡೆಸಿಕೊಂಡ ಹ್ಯುಂಡೈ ಐ10 ಕಾರಿನಲ್ಲಿ ಸ್ಟ್ಯಾಂಡರ್ಡ್ ಫ್ರಂಟ್ ಮತ್ತು ಕರ್ಟನ್ ಏರ್‌ಬ್ಯಾಗ್‌ಗಳು, ಸೀಟ್ ಬೆಲ್ಟ್ ಪ್ರಿಟೆನ್ಷನರ್‌ಗಳು ಮತ್ತು ಮುಂಭಾಗ ಮತ್ತು ಹಿಂಭಾಗದ ಪ್ರಯಾಣಿಕರಿಗೆ ಲಿಮಿಟರ್‌ಗಳು, ಆಟೋನೊಮಸ್ ಎಮರ್ಜೆನ್ಸಿ ಬ್ರೇಕಿಂಗ್ (ಎಇಬಿ), ಸ್ಪೀಡ್ ಅಸಿಸ್ಟ್ ಮತ್ತು ಲೇನ್ ಅಸಿಸ್ಟ್ ಸಿಸ್ಟಂ ಅನ್ನು ಒಳಗೊಂಡಿವೆ.
MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಇನ್ನು ಭಾರತದಲ್ಲಿ ಮಾರಾಟವಾಗುತ್ತಿರುವ ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್ ಕಾರಿನಲ್ಲಿ ಸುರಕ್ಷತೆಗಾಗಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್ ಮತ್ತು ಫ್ರಂಟ್ ಸೀಟ್ ಬೆಲ್ಟ್ ಪ್ರಿಟೆನ್ಷನರ್‌ಗಳು ಸೇರಿವೆ.

ಗ್ಲೋಬಲ್-ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ, ಇಂಡಿಯಾ-ಸ್ಪೆಕ್ ನಿಯೋಸ್ ರಚನೆಯ ಅತ್ಯತ್ತಮವಾಗಿ ಇಲ್ಲ ಎಂದು ಹೇಳಿದೆ. ಆದರೆ ಯುರೋ-ಎನ್‌ಸಿಎಪಿ ಟೆಸ್ಟ್ ನಲ್ಲಿ ಯುರೋಪ್-ಸ್ಪೆಕ್ ಮಾದರಿಯ ರಚನೆಯು ಉತ್ತಮವಾಗಿದೆ ಎಂಬ ಪಲಿತಾಂಶ ಲಭಿಸಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಗ್ಲೋಬಲ್ ಎನ್‌ಸಿಎಪಿ ನಡೆಸಿದ ಕ್ರ್ಯಾಶ್ ಟೆಸ್ಟ್‌ನಲ್ಲಿ ಗ್ರ್ಯಾಂಡ್ ಐ10 ನಿಯೋಸ್ ವಯಸ್ಕರ ಮತ್ತು ಮಕ್ಕಳ ರಕ್ಷಣೆಗೆ ಎರಡು-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ. ಕ್ರ್ಯಾಶ್ ಟೆಸ್ಟ್ ಫಲಿತಾಂಶಗಳ ಪ್ರಕಾರ, ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ವಯಸ್ಕರ ರಕ್ಷಣೆಗಾಗಿ 17 ಪಾಯಿಂಟ್‌ಗಳಲ್ಲಿ 7.05 ಅಂಕಗಳನ್ನು ಗಳಿಸಿದೆ. ಇನ್ನು ಈ ಹ್ಯಾಚ್‌ಬ್ಯಾಕ್ ಮಕ್ಕಳ ರಕ್ಷಣೆಗಾಗಿ 49 ಪಾಯಿಂಟ್‌ಗಳಲ್ಲಿ 15 ಅನ್ನು ಪಡೆದುಕೊಂಡಿದೆ.

ಯುರೋ-ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ ವಯಸ್ಕರ ರಕ್ಷಣೆಗಾಗಿ ಶೇ.69, ಮಕ್ಕಳ ರಕ್ಷಣೆಗಾಗಿ ಶೇ.75, ಪಾದಚಾರಿ ಸುರಕ್ಷತೆಯಲ್ಲಿ ಶೇ.52 ಮತ್ತು ಸುರಕ್ಷತಾ ಅಸಿಸ್ಟ್ ಗಾಗಿ ಶೇ.59 ರಷ್ಟು ಅಂಕಗಳನ್ನು ಗಳಿಸಿದೆ.
MOST READ: ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್
ಯುರೋಪ್-ಸ್ಪೆಕ್ ಹ್ಯುಂಡೈ ಐ10 ಕಾರಿನಲ್ಲಿ 1.0-ಲೀಟರ್ ಮತ್ತು 1.2-ಲೀಟರ್ ಪೆಟ್ರೋಲ್ ಎಂಜಿನ್ ಗಳನ್ನು ಒಳಗೊಂಡಿದೆ.ಯುರೋ-ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ ಹೆಚ್ಚಿನ ರೀತಿಯ ಟೆಸ್ಟ್ ಗಳಿಗೆ ಒಳಪಡಿಸುತ್ತದೆ. ಆದರೂ ಯುರೊ-ಸ್ಪೇಕ್ ಹ್ಯುಂಡೈ ಐ10 3 ಸ್ಟಾರ್ ಪಡೆದುಕೊಂಡಿದೆ.

ಆದರೆ ಭಾರತದಲ್ಲಿ ಮಾರಾಟವಾಗುತ್ತಿರುವ ಹ್ಯುಂಡೈ ಐ10 ಗ್ಲೋಬಲ್-ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ನಲ್ಲಿ ಕೇವಲ 2-ಸ್ಟಾರ್ ಸುರಕ್ಷತಾ ರೇಟಿಂಗ್ ಮಾತ್ರ ಪಡೆದಿದೆ. ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಹ್ಯಾಚ್‌ಬ್ಯಾಕ್ ಗಳ ಒಂದಾಗಿದೆ. ಇದು ಭಾರತೀಯ ಮಾರುಕಟ್ಟೆಯಲ್ಲಿ ಕೊರಿಯನ್ ಕಾರು ತಯಾರಕರಿಗೆ ಮಾರಾಟದಲ್ಲಿ ಉತ್ತಮ ಕೊಡುಗೆಯನ್ನು ನೀಡುತ್ತಿದೆ.