ಲಾಕ್‌ಡೌನ್ ಸಡಿಲಿಕೆ ನಂತರ 5 ಸಾವಿರ ಕಾರುಗಳನ್ನು ರಫ್ತು ಮಾಡಿದ ಹ್ಯುಂಡೈ
ಲಾಕ್‌ಡೌನ್ ಸಡಿಲಿಕೆ ನಂತರ ಹೊಸ ಕಾರುಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ನಿಧಾನವಾಗಿ ಚೇತರಿಕೆ ಕಾಣುತ್ತಿದ್ದು, ಹ್ಯುಂಡೈ ಕಂಪನಿಯು ಲಾಕ್‌ಡೌನ್ ಸಡಿಲಿಕೆ ನಂತರವೇ ಸಾವಿರಾರು ಹೊಸ ಕಾರುಗಳನ್ನು ಮಾರಾಟ ಮಾಡಿದೆ.

ರಫ್ತು ಪ್ರಮಾಣದಲ್ಲೂ ಸ್ಥಿರತೆ ಕಾಯ್ದುಕೊಂಡಿರುವ ಹ್ಯುಂಡೈ ಇಂಡಿಯಾ ಕಂಪನಿಯು ಮೇಡ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ನಿರ್ಮಾಣಗೊಳಿಸಿದ 5 ಸಾವಿರ ಕಾರುಗಳನ್ನು ಮಧ್ಯ ಆಫ್ರಿಕಾ, ಲ್ಯಾಟಿನ್ ಅಮೆರಿಕ, ಏಷಿಯಾ ಫೆಸಿಪಿಕ್ ರಾಷ್ಟ್ರಗಳಿಗೆ ರಫ್ತುಗೊಳಿಸಿದ್ದು, ದೇಶಿಯ ಮಾರುಕಟ್ಟೆಯಲ್ಲೂ ಉತ್ತಮ ಬೇಡಿಕೆ ಪಡೆದುಕೊಂಡಿದೆ. ಸಂಕಷ್ಟ ಸಮಯದಲ್ಲೂ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಹ್ಯುಂಡೈ ಕಂಪನಿಯು ವಿವಿಧ ಆಫರ್‌ಗಳನ್ನು ಘೋಷಣೆ ಮಾಡಿದೆ.

ದೇಶಾದ್ಯಂತ ಲಾಕ್‌ಡೌನ್ ವಿನಾಯ್ತಿ ನಂತರ 806 ಮಾರಾಟ ಮಳಿಗೆಗಳನ್ನು ತೆರೆದಿರುವ ಹ್ಯುಂಡೈ ಕಂಪನಿಯು ಗ್ರಾಹಕರ ಸೆಳೆಯಲು ವಿವಿಧ ಮಾದರಿಯ ಹಲವಾರು ಲೋನ್ ಆಫರ್‌ಗಳನ್ನು ನೀಡುತ್ತಿದ್ದು, ಸಂಕಷ್ಟದ ಸಮಯದಲ್ಲೂ ಗ್ರಾಹಕರಿಗೆ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕದಂತೆ ಇಎಂಐ ಮರುಪಾವತಿಗೆ ಸಹಕರಿಸುತ್ತಿದೆ.

ಕರೋನಾ ವೈರಸ್‌ನಿಂದಾಗಿ ಆಟೋ ಮೊಬೈಲ್ ಸೇರಿದಂತೆ ಎಲ್ಲ ವಲಯದಲ್ಲೂ ಆರ್ಥಿಕ ಸ್ಥಿತಿ ಶೋಚನೀಯ ಸ್ಥಿತಿಗೆ ತಲುಪಿದೆ. ಲಾಕ್‌ಡೌನಿಂದಾಗಿ ಕುಸಿದುಬಿದ್ದಿರುವ ವ್ಯಾಪಾರ ಅಭಿವೃದ್ದಿಯನ್ನು ಸರಿದಾರಿಗೆ ತರುವುದು ಒಂದು ಸವಾಲಾಗಿ ಪರಿಣಿಮಿಸಿದ್ದು, ಹ್ಯುಂಡೈ ಕಂಪನಿಯು ಕೆಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿತ್ತು.

ಆಕರ್ಷಕ ಇಎಂಐ ಮರುಪಾವತಿ, ಸಾಲ ಮರುಪಾವತಿಗಾಗಿ ಧೀರ್ಘಾವಧಿಯ ಸಾಲ, ಕಡಿಮೆ ಬಡ್ಡಿದರದ ಸಾಲ, ಫ್ಲೆಕ್ಸಿ ಲೋನ್, ಬಲೂನ್ ಸ್ಕೀಮ್ ಸೇರಿದಂತೆ ವಿವಿಧ ಮಾದರಿಯ ಆಫರ್‌ಗಳನ್ನು ನೀಡಲಾಗುತ್ತಿದ್ದು, ಆಯ್ದ ಕಾರುಗಳ ಖರೀದಿ ಮೇಲೆ ಮೊದಲ ವರ್ಷದ ಮೂರು ತಿಂಗಳು ಇಎಂಐ ಮರುಪಾವತಿಗೆ ಸಹಕರಿಸುವ ಯೋಜನೆಯನ್ನು ಸಹ ಹ್ಯುಂಡೈ ಆಫರ್ ಮಾಡುತ್ತಿದೆ.

ಹೀಗಾಗಿ ಕಾರು ಮಾರಾಟದಲ್ಲಿ ನಿಧಾನವಾಗಿ ಚೇತರಿಕೆ ಕಾಣುತ್ತಿದ್ದು, ಹ್ಯುಂಡೈ ಕಂಪನಿಯ ಪ್ರಮುಖ ಕಾರು ಮಾದರಿಗಳಾದ ಗ್ರ್ಯಾಂಡ್ ಐ10 ಮತ್ತು ನ್ಯೂ ಜನರೇಷನ್ ಕ್ರೆಟಾ ಕಾರುಗಳಿಗಾಗಿ ಹೆಚ್ಚು ಬೇಡಿಕೆ ಕಂಡುಬಂದಿದೆ

ಕಳೆದ ಮಾರ್ಚ್ 16ರಂದು ಬಿಡುಗಡೆಗೊಂಡಿದ್ದ ನ್ಯೂ ಜನರೇಷನ್ ಕ್ರೆಟಾ ಕಾರು ಇದುವರೆಗೆ ಸುಮಾರು 15 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡಿದ್ದು, ದುಬಾರಿ ಬೆಲೆ ನಡುವೆಯೂ ಹೊಸ ಕಾರು ಮಾರಾಟವು ಹ್ಯುಂಡೈ ಕಂಪನಿಗೆ ಭಾರೀ ಲಾಭಾಂಶ ತಂದುಕೊಡುವ ನೀರಿಕ್ಷೆಯಿದೆ.

ಗ್ರ್ಯಾಂಡ್ ಐ10, ಕ್ರೆಟಾ, ಮತ್ತು ವೆನ್ಯೂ ಕಾರುಗಳನ್ನು ಹೊರತುಪಡಿಸಿ ಇನ್ನುಳಿದ ಕಾರುಗಳ ಮಾರಾಟವು ಹ್ಯುಂಡೈ ಕಂಪನಿಗೆ ನೀರಿಕ್ಷಿತ ಮಟ್ಟದ ಲಾಭಾಂಶ ತಂದುಕೊಡದಿದ್ದರೂ ಬ್ರಾಂಡ್ ಮೌಲ್ಯ ಹೆಚ್ಚಿಸುವಲ್ಲಿ ಸಹಕಾರಿಯಾಗಿದ್ದು, ಹೊಸ ಲೋನ್ ಆಫರ್‌ಗಳು ಸದ್ಯ ಕಾರು ಮಾರಾಟ ಚೇತರಿಕೆಗೆ ಸಾಕಷ್ಟು ಸಹಕಾರಿಯಾಗಿದೆ ಎನ್ನಬಹುದು.


Click it and Unblock the Notifications