ಸುರಕ್ಷಿತ ಕಾರು ಚಾಲನೆಗಾಗಿ ಜಾಗೃತಿ ಅಭಿಯಾನ ಆರಂಭಿಸಿದ ಹ್ಯುಂಡೈ ಮೋಟಾರ್ಸ್
ದೇಶಾದ್ಯಂತ ವಾಹನಗಳ ಸಂಖ್ಯೆ ಹೆಚ್ಚುತ್ತಿರುವಂತೆ ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳು ಕೂಡಾ ಹೆಚ್ಚಳವಾಗಿದ್ದು, ನಿಯಮ ಉಲ್ಲಂಘನೆ ಪ್ರಕರಣಗಳಿಂದ ಅಪಘಾತಗಳ ಸಂಖ್ಯೆ ಕೂಡಾ ಸಾಕಷ್ಟು ಏರಿಕೆಯಾಗುತ್ತಿದೆ. ಇದಕ್ಕಾಗಿ ಜಾಗೃತಿ ಅಭಿಯಾನ ನಡೆಸುತ್ತಿರುವ ಹ್ಯುಂಡೈ ಕಂಪನಿಯು ಆಸಕ್ತ ಗ್ರಾಹಕರಿಗೆ ಪ್ರಾಯೋಗಿಕವಾಗಿ ತರಬೇತಿ ನೀಡುತ್ತಿದೆ.

ಹ್ಯುಂಡೈ ಕಂಪನಿಯು ವಾಹನ ಚಾಲನೆ ವೇಳೆ ಯಾವೆಲ್ಲಾ ಮುಂಜಾಗ್ರತ ಕ್ರಮ ಕೈಗೊಳ್ಳಬೇಕು ಎಂಬುವುದನ್ನು ತನ್ನ ಆಸಕ್ತ ಗ್ರಾಹಕರಿಗೆ ಪ್ರಾಯೋಗಿಕ ತರಬೇತಿಗಳನ್ನು ನೀಡುತ್ತಿದ್ದು, ರಸ್ತೆ ಸುರಕ್ಷತೆ ಕುರಿತು ಇದೀಗ ನಾಲ್ಕನೇ ವರ್ಷದ ಅಭಿಯಾನಕ್ಕೆ ಚಾಲನೆ ನೀಡಿದೆ. #BeTheBetterGuy ಹೆಸರಿನಲ್ಲಿ ಸುರಕ್ಷಾ ಅಭಿಯಾನ ಕೈಗೊಂಡಿದ್ದು, ಕಾರು ಚಾಲನೆ ಗರಿಷ್ಠ ಸುರಕ್ಷತೆ ಕಾಯ್ದುಕೊಳ್ಳುವ ಬಗ್ಗೆ ಹಲವಾರು ತಂತ್ರಗಳನ್ನು ಹೇಳಿಕೊಡಲಾಗುತ್ತದೆ.

ಸುರಕ್ಷಾ ಅಭಿಯಾನದಲ್ಲಿ ಟ್ರಾಫಿಕ್ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವುದರೊಂದಿಗೆ ಬದಲಾಗುತ್ತಿರುವ ಚಾಲನಾ ವಿಧಾನಗಳ ಮಾಹಿತಿಯನ್ನು ನೀಡಲಿದ್ದು, ಆಸಕ್ತ ಹ್ಯುಂಡೈ ಗ್ರಾಹಕರು ಅಭಿಯಾನದಲ್ಲಿ ಭಾಗಿಯಾಗಬಹುದು.

ಸುರಕ್ಷಿತ ವಾಹನ ಚಾಲನೆಯೊಂದಿಗೆ ಆರೋಗ್ಯ ಸ್ಥಿರತೆ ಮತ್ತು ಕಾರುಗಳಲ್ಲಿ ಪಾಲನೆ ಮಾಡಬೇಕಾದ ಸ್ವಚ್ಚತಾ ಮಾರ್ಗಗಳನ್ನು ಸಹ #BeTheBetterGuy ಅಭಿಯಾನದಲ್ಲಿ ನುರಿತ ಚಾಲಕರ ತಂಡವು ಮಾಹಿತಿ ನೀಡಲಿದ್ದು, ಒಟ್ಟಾರೆಯಾಗಿ ಸ್ವಚ್ಚತೆ ಮತ್ತು ಸುರಕ್ಷಿತ ವಾಹನ ಚಾಲನೆಯನ್ನು ಪ್ರೋತ್ಸಾಹಿಸುವುದೇ ಈ ಅಭಿಯಾನ ಮುಖ್ಯ ಉದ್ದೇಶವಾಗಿದೆ.

ಇನ್ನು ಹ್ಯುಂಡೈ ಕಂಪನಿಯು ವರ್ಷದ ನವೆಂಬರ್ ಅವಧಿಯಲ್ಲಿನ ಕಾರು ಮಾರಾಟಕ್ಕಿಂತಲೂ ಈ ವರ್ಷದ ನವೆಂರ್ ಅವಧಿಯಲ್ಲಿ ಶೇ.9.4 ರಷ್ಟು ಬೆಳವಣಿಗೆ ಸಾಧಿಸಿರುವ ಹ್ಯುಂಡೈ ಕಂಪನಿಯು ಒಟ್ಟು 48,800 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ನವೆಂಬರ್‌ನಲ್ಲಿ 44,600 ಯುನಿಟ್ ಮಾರಾಟ ಮಾಡಿದ್ದ ಹ್ಯುಂಡೈ ಕಂಪನಿಯು ಈ ಬಾರಿ ಕರೋನಾ ವೈರಸ್‌ನಿಂದಾಗಿರುವ ಆರ್ಥಿಕ ಸಂಕಷ್ಟದಲ್ಲೂ ಶೇ.9.4 ರಷ್ಟು ಹೆಚ್ಚುವರಿ ಕಾರು ಮಾರಾಟ ಮಾಡಿದ್ದು, ಹ್ಯುಂಡೈ ನಿರ್ಮಾಣದ ಬಹುತೇಕ ಕಾರುಗಳು ನಿರೀಕ್ಷೆಗೂ ಮೀರಿ ಬೇಡಿಕೆ ಪಡೆದುಕೊಂಡಿವೆ.

ಮತ್ತೊಂದು ವಿಶೇಷತೆ ಅಂದರೆ ಹ್ಯುಂಡೈ ಕಂಪನಿಯ ಕಾರು ಮಾರಾಟವು ಇದೇ ಮೊದಲ ಬಾರಿಗೆ ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿದ್ದು, ಈ ಹಿಂದೆ 52,000 ಯನಿಟ್ ಮಾರಾಟವೇ ಅತಿ ಹೆಚ್ಚು ಬೇಡಿಕೆಯಾಗಿತ್ತು. ಈ ವರ್ಷದ ಅಕ್ಟೋಬರ್‌ನಲ್ಲಿ 56,605 ಯನಿಟ್ ಕಾರು ಮಾರಾಟ ಮಾಡುವ ಹೊಸ ನೀರಿಕ್ಷೆ ಹುಟ್ಟುಹಾಕಿದ್ದು, ದೀಪಾವಳಿ ಸಂಭ್ರಮದಲ್ಲೂ ಹೆಚ್ಚಿನ ಮಟ್ಟದ ಕಾರುಗಳನ್ನು ಮಾರಾಟ ಮಾಡಿದೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಹ್ಯುಂಡೈ ಕಾರು ಮಾರಾಟದಲ್ಲಿ ಕ್ರೆಟಾ ಎಸ್‌ಯುವಿ, ಗ್ರ್ಯಾಂಡ್ ಐ10 ನಿಯೋಸ್ ಮತ್ತು ವೆನ್ಯೂ ಕಾರು ಮಾದರಿಯೇ ಅಗ್ರಸ್ಥಾನದಲ್ಲಿದ್ದು, ಕ್ರೆಟಾ ಕಾರು ಮಾದರಿಯು ಟಾಪ್ 10 ಕಾರು ಮಾರಾಟದಲ್ಲಿ 7 ಸ್ಥಾನವನ್ನು ಕಾಯ್ದಕೊಂಡಿದೆ.

ಹ್ಯುಂಡೈ ಕಂಪನಿಯು ಭಾರತದಲ್ಲಿ ನಿರ್ಮಾಣವಾಗುವ ಬಹುತೇಕ ಕಾರು ಮಾದರಿಗಳನ್ನು ವಿದೇಶಿ ಮಾರುಕಟ್ಟೆಗಳಲ್ಲೂ ಮಾರಾಟ ಮಾಡುತ್ತಿದ್ದು, ಭಾರತದಿಂದ ರಫ್ತು ಸೌಲಭ್ಯವನ್ನು ಪಡೆದುಕೊಂಡಿದೆ.
MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಸದ್ಯ ಭಾರತದಲ್ಲಿ ಕಾರುಗಳ ರಫ್ತುಗಳ ಪ್ರಮಾಣದಲ್ಲಿ ಅಗ್ರಸ್ಧಾನದಲ್ಲಿರುವ ಹ್ಯುಂಡೈ ಕಂಪನಿಯು ವಿವಿಧ ಕಾರು ಮಾದರಿಗಳನ್ನು ಭಾರತದಿಂದಲೇ ಸುಮಾರು 80 ರಾಷ್ಟ್ರಗಳಿಗೆ ರಫ್ತು ಹೊಂದಿದ್ದು, ಒಟ್ಟು 12 ಕಾರು ಮಾದರಿಗಳನ್ನು ಮಾರಾಟ ಮಾಡುತ್ತಿದೆ.


Click it and Unblock the Notifications