ಹ್ಯುಂಡೈ ಕಾರು ಉತ್ಪಾದನೆ ಪುನಾರಂಭ- ತಿಂಗಳಾಂತ್ಯಕ್ಕೆ 13 ಸಾವಿರ ಕಾರು ಉತ್ಪಾದನೆಯ ಗುರಿ

ಮಾಹಾಮಾರಿ ಕರೋನಾ ವೈರಸ್ ಮಟ್ಟ ಹಾಕುವುದಕ್ಕಾಗಿ ಸದ್ಯ ಮೂರನೇ ಹಂತದ ಲಾಕ್‌ಡೌನ್ ವಿಧಿಸಿರುವ ಕೇಂದ್ರ ಸರ್ಕಾರವು ಆರ್ಥಿಕ ಪುನಶ್ಚೇತನಕ್ಕಾಗಿ ಕೈಗಾರಿಕಾ ವಲಯಕ್ಕೆ ಕೆಲವು ವಿನಾಯ್ತಿಗಳನ್ನು ಘೋಷಿಸಿದ್ದು, ಆಟೋ ಕಂಪನಿಗಳು ಕೂಡಾ ಹೊಸ ಮಾರ್ಗಸೂಚಿ ಅನುಸಾರವಾಗಿ ವಾಹನ ಉತ್ಪಾದನೆಗೆ ಮರುಚಾಲನೆ ನೀಡಿವೆ.

ಬರೋಬ್ಬರಿ 50 ದಿನಗಳ ನಂತರ ಹ್ಯುಂಡೈ ಕಾರು ಉತ್ಪಾದನೆ ಪುನಾರಂಭ

ಹ್ಯುಂಡೈ ಕೂಡಾ ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿ ಪ್ರಕಾರ ಕಾರು ಉತ್ಪಾದನೆಯನ್ನು ಪುನಾರಂಭಿಸಿದ್ದು, ಚೆನ್ನೈ ಹೊರವಲಯದಲ್ಲಿರುವ ಕಾರು ಉತ್ಪಾದನಾ ಘಟಕದಲ್ಲಿ ಗರಿಷ್ಠ ಮಟ್ಟದ ಸುರಕ್ಷಾ ಸೌಲಭ್ಯಗಳೊಂದಿಗೆ ಉತ್ಪಾದನಾ ಪ್ರಕ್ರಿಯೆಗೆ ಮರುಚಾಲನೆ ನೀಡಿದೆ. ಶೇ.33 ರಷ್ಟು ಪ್ರಮಾಣದ ಉದ್ಯೋಗಿಗಳೊಂದಿಗೆ ಉತ್ಪಾದನಾ ಚಟುವಟಿಕೆಗಳನ್ನು ಕೈಗೊಳ್ಳಲಾಗಿದ್ದು, ಉದ್ಯೋಗದ ಸ್ಥಳದಲ್ಲಿ ಸಾಮಾಜಿಕ ಅಂತರದ ಜೊತೆಗೆ ಗುಣಮಟ್ಟದ ಮಾಸ್ಕ್, ಹ್ಯಾಂಡ್ ಸ್ಯಾನಿಟೈಜರ್ ಮತ್ತು ಹ್ಯಾಂಡ್ ಗ್ಲೌಸ್ ಬಳಕೆಯು ಕಡ್ಡಾಯವಾಗಿಸಿದೆ.

ಬರೋಬ್ಬರಿ 50 ದಿನಗಳ ನಂತರ ಹ್ಯುಂಡೈ ಕಾರು ಉತ್ಪಾದನೆ ಪುನಾರಂಭ

ಕಳೆದ ಒಂದೂವರೆ ತಿಂಗಳಿನಿಂದ ಕಾರು ಉತ್ಪಾದನೆ ಮತ್ತು ಮಾರಾಟವನ್ನು ಬಂದ್ ಮಾಡಿದ್ದ ಆಟೋ ಕಂಪನಿಗಳು ಇದೀಗ ಉತ್ಪದನಾ ಪ್ರಕ್ರಿಯೆ ಮರುಚಾಲನೆ ನೀಡಿದ್ದು, ಹ್ಯುಂಡೈ ಈ ತಿಂಗಳಾಂತ್ಯಕ್ಕೆ 13 ಸಾವಿರ ಯುನಿಟ್ ಉತ್ಪಾದನೆಯ ಗುರಿಹೊಂದಿದೆ.

MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

ಬರೋಬ್ಬರಿ 50 ದಿನಗಳ ನಂತರ ಹ್ಯುಂಡೈ ಕಾರು ಉತ್ಪಾದನೆ ಪುನಾರಂಭ

ನ್ಯೂ ಜನರೇಷನ್ ಕ್ರೆಟಾ ಮತ್ತು ಗ್ರ್ಯಾಂಡ್ ಐ10 ನಿಯೋಸ್ ಕಾರು ಉತ್ಪಾದನೆಯ ಮೇಲೆ ಹೆಚ್ಚು ಒತ್ತು ನೀಡುತ್ತಿದ್ದು, ಲಾಕ್‌ಡೌನ್‌ಗೂ ಮುನ್ನ ಬಿಡುಗಡೆಯಾಗಿದ್ದ ಹೊಸ ಕ್ರೆಟಾ ಕಾರು ಇದುವರೆಗೆ ಸುಮಾರು 15 ಸಾವಿರ ಬುಕ್ಕಿಂಗ್ ಪಡೆದುಕೊಂಡಿದೆ.

ಬರೋಬ್ಬರಿ 50 ದಿನಗಳ ನಂತರ ಹ್ಯುಂಡೈ ಕಾರು ಉತ್ಪಾದನೆ ಪುನಾರಂಭ

ಹೀಗಾಗಿ ಬೇಡಿಕೆ ಹೆಚ್ಚಿರುವ ಕಾರುಗಳ ಮಾರಾಟದ ಮೇಲೆ ಹೆಚ್ಚು ಗಮನಹರಿಸಲಾಗಿದ್ದು, ಇನ್ನುಳಿದ ಕಾರುಗಳ ಬೇಡಿಕೆಗೆ ಇದ್ದರೂ ಸಹ ಗ್ರಾಹಕರು ಆರ್ಥಿಕ ಪರಿಸ್ಥಿತಿಯ ಆಧಾರದ ವಾಹನ ಖರೀದಿಯ ಯೋಜನೆಯಲ್ಲಿರುವುದು ಆಟೋ ಕಂಪನಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

MOST READ: ಕರೋನಾ ಸಂಕಷ್ಟ: ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ

ಬರೋಬ್ಬರಿ 50 ದಿನಗಳ ನಂತರ ಹ್ಯುಂಡೈ ಕಾರು ಉತ್ಪಾದನೆ ಪುನಾರಂಭ

ಕ್ರೆಟಾ ಮತ್ತು ಗ್ರಾಂಡ್ ಐ10 ನಿಯೋಸ್ ಹೊರತುಪಡಿಸಿ ಇನ್ನುಳಿದ ಕಾರುಗಳ ಖರೀದಿಗೆ ಸಲ್ಲಿಕೆಯಾಗಿದ್ದ ಬುಕ್ಕಿಂಗ್ ಪ್ರಮಾಣದಲ್ಲಿ ಇದೀಗ ಗಣನೀಯ ಪ್ರಮಾಣದಲ್ಲಿ ಗ್ರಾಹಕರು ಬುಕ್ಕಿಂಗ್ ವಾಪಸ್ ಪಡೆದುಕೊಳ್ಳುತ್ತಿದ್ದು, ಈ ಹಿನ್ನಲೆ ಬೇಡಿಕೆ ಹೆಚ್ಚಿರುವ ಕಾರುಗಳ ಮಾರಾಟಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

ಬರೋಬ್ಬರಿ 50 ದಿನಗಳ ನಂತರ ಹ್ಯುಂಡೈ ಕಾರು ಉತ್ಪಾದನೆ ಪುನಾರಂಭ

ಇನ್ನು ಹ್ಯುಂಡೈ ಕಂಪನಿಯು ಕೇಂದ್ರ ಸರ್ಕಾರದ ಹೊಸ ಸುರಕ್ಷಾ ಮಾರ್ಗಸೂಚಿ ಅನುಸಾರವೇ ಕಾರು ಉತ್ಪಾದನಾ ಪ್ರಕ್ರಿಯೆಗೆ ಚಾಲನೆ ನೀಡಿರುವುದಲ್ಲದೆ ಮಾರಾಟ ಮಳಿಗೆಗಳನ್ನು ಪುನಾರಂಭಿದ್ದು, ಉದ್ಯೋಗದ ಸ್ಥಳದಲ್ಲಿ ಗರಿಷ್ಠ ಸುರಕ್ಷಾ ಕ್ರಮಗಳನ್ನು ಜಾರಿಗೊಳಿಸಿದೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಬರೋಬ್ಬರಿ 50 ದಿನಗಳ ನಂತರ ಹ್ಯುಂಡೈ ಕಾರು ಉತ್ಪಾದನೆ ಪುನಾರಂಭ

ದೇಶಾದ್ಯಂತ 225 ಮಾರಾಟ ಮಳಿಗೆಗಳನ್ನು ತೆರಿದಿರುವ ಹ್ಯುಂಡೈ ಕಂಪನಿಯು ಗ್ರಾಹಕರ ಸೆಳೆಯಲು ವಿವಿಧ ಮಾದರಿಯ ಹಲವು ಆಫರ್‌ಗಳನ್ನು ನೀಡುತ್ತಿದ್ದು, ಸಂಕಷ್ಟದ ಸಮಯದಲ್ಲೂ ಗ್ರಾಹಕರಿ ಆರ್ಥಿಕ ಸಹಕಾರಿಯಾಗುವ ಯೋಜನೆಗಳನ್ನು ಘೋಷಣೆ ಮಾಡಿದೆ.

Most Read Articles

Kannada
English summary
Hyundai India Resumes Production At Its Chennai Plant: Aims At Manufacturing 13,000 Units This Month. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X