ಹೆಚ್‌ಡಿಎಫ್‌ಸಿ ಜೊತೆಗೆ ಹೊಸ ವೆಹಿಕಲ್ ಲೋನ್ ಪರಿಚಯಿಸಿದ ಹ್ಯುಂಡೈ
ಲಾಕ್‌ಡೌನ್ ಸಂಕಷ್ಟದಲ್ಲಿ ಹೊಸ ವಾಹನಗಳ ಖರೀದಿ ಯೋಜನೆಯಿಂದ ಹಿಂದೆ ಸರಿಯುತ್ತಿರುವ ಗ್ರಾಹಕರನ್ನು ಸೆಳೆಯಲು ಮುಂದಾಗಿರುವ ಬಹುತೇಕ ಕಾರು ಕಂಪನಿಯು ವಿವಿಧ ಬ್ಯಾಂಕ್‌ಗಳ ಜೊತೆಗೂಡಿ ಹಲವಾರು ಲೋನ್ ಸೌಲಭ್ಯಗಳನ್ನು ಘೋಷಣೆ ಮಾಡುತ್ತಿವೆ.

ಆಟೋ ಉದ್ಯಮ ಸೇರಿದಂತೆ ಎಲ್ಲಾ ವಲಯದಲ್ಲೂ ಕರೋನಾ ಮಹಾಮಾರಿಯಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದ್ದು, ವ್ಯಾಪಾರ ಅಭಿವೃದ್ದಿಯು ಇದೀಗ ಹೊಸ ಸವಾಲಾಗಿ ಪರಿಣಮಿಸಿದೆ. ಸದ್ಯಕ್ಕೆ ಆಟೋ ಉದ್ಯಮಕ್ಕೆ ಕೆಲವು ವಿನಾಯ್ತಿಗಳನ್ನು ನೀಡಲಾಗಿದ್ದರೂ ಕೂಡಾ ವಾಹನ ಖರೀದಿದಾರರು ಇಲ್ಲದೆ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಇದಕ್ಕಾಗಿಯೇ ಸಂಕಷ್ಟದಲ್ಲಿರುವ ಆಟೋ ಕಂಪನಿಗಳು ಕುಸಿದಿರುವ ಹೊಸ ವಾಹನ ಮಾರಾಟವನ್ನು ಸುಧಾರಿಸಲು ವಿವಿಧ ಮಾದರಿಯ ಲೋನ್ ಆಫರ್‌ಗಳನ್ನು ಘೋಷಿಸುತ್ತಿವೆ.

ಲಾಕ್‌ಡೌನ್‌ನಿಂದ ಬಹುತೇಕ ವಾಣಿಜ್ಯ ಚಟುವಟಿಕೆಗಳು ನೆಲಕಚ್ಚಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಉದ್ಯೋಗದ ಅಭದ್ರತೆ ಇದೀಗ ಅತಿ ದೊಡ್ಡ ಸಮಸ್ಯೆಯಾಗಿ ಕಾಡತೋಡಗಿದೆ. ಹೀಗಿರುವಾಗ ಹೊಸ ವಾಹನಗಳ ಮಾರಾಟವನ್ನು ಸರಿದಾರಿಗೆ ತರಲು ಯತ್ನಿಸುತ್ತಿರುವ ಆಟೋ ಕಂಪನಿಯು ಕೆಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸುತ್ತಿವೆ.

ಹೊಸ ವಾಹನ ಖರೀದಿದಾರರಿಗೆ ಇಎಂಐ ಹೊರೆ ತಗ್ಗಿಸಲು ಅತಿ ಸುಲಭವಾದ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ದೇಶದ 2ನೇ ಅತಿ ದೊಡ್ಡ ಕಾರು ಮಾರಾಟ ಕಂಪನಿ ಹ್ಯುಂಡೈ ಕೂಡಾ ಆಯ್ದ ಕಾರು ಮಾದರಿಗಳ ಮೇಲೆ ವಿಶೇಷ ಲೋನ್ ಆಫರ್ ನೀಡಿದೆ.

ಜೊತೆಗೆ ಹೆಚ್‌ಡಿಎಫ್‌ಸಿ ಬ್ಯಾಂಕ್ ಜೊತೆಗೂಡಿ ಶೇ.100 ಆನ್‌ರೋಡ್ ಲೋನ್‌ಗಳನ್ನು ಪರಿಚಯಿಸುತ್ತಿದ್ದು, ಮರುಪಾವತಿಗೂ ಅನುಕೂರವಾಗುವಂತೆ ವಿವಿಧ ಮಾದರಿಯ ಇಎಂಐ ಆಯ್ಕೆಗಳನ್ನು ಪರಿಚಯಿಸುತ್ತಿರುವುದು ಗ್ರಾಹಕರ ಆಕರ್ಷಣೆ ಕಾರಣವಾಗಿದೆ.
MOST READ: ಲಾಕ್‌ಡೌನ್ ಸಂಕಷ್ಟ: ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಉದ್ಯಮ ಆರಂಭಿಸಿದ ಫೋಕ್ಸ್‌ವ್ಯಾಗನ್

ಇನ್ನು ಲಾಕ್‌ಡೌನ್ ವಿನಾಯ್ತಿ ನಂತರ ವಾಹನ ಮಾರಾಟದಲ್ಲಿ ಹಲವು ಹೊಸ ಬದಲಾಣೆಗಳನ್ನು ಪರಿಚಯಿಸಿರುವ ಆಟೋ ಕಂಪನಿಗಳು ಸುರಕ್ಷಿತ ವ್ಯಾಪಾರ-ವಹಿವಾಟು ನಡೆಸುತ್ತಿದ್ದು, ಸಂಕಷ್ಟದ ಪರಿಸ್ಥಿತಿಯಲ್ಲೂ ಹೊಸ ಕಾರುಗಳ ಮಾರಾಟ ಪ್ರಮಾಣದಲ್ಲಿ ತುಸು ಚೇತರಿಕೆ ಕಂಡುಬರುತ್ತಿದೆ.

ಹ್ಯುಂಡೈ ಕಂಪನಿಯು ಹೊಸದಾಗಿ ಕಾರು ಖರೀದಿಗಾಗಿ ಪರಿಚಯಿಸಲಾಗಿರುವ ಕ್ಲಿಕ್ ಟು ಬೈ ಎನ್ನುವ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಭಾರೀ ಬದಲಾವಣೆಗೆ ಕಾರಣವಾಗುತ್ತಿದ್ದು, ಹೊಸ ಫ್ಲ್ಯಾಟ್‌ಫಾರ್ಮ್ ಮೂಲಕವೇ ಹ್ಯುಂಡೈ ಕಂಪನಿಯು ಸುಮಾರು 20 ಸಾವಿರ ಬುಕ್ಕಿಂಗ್ ಪಡೆದುಕೊಂಡಿದೆ.
MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಇದೀಗ ಹೆಚ್‌ಡಿಎಫ್‌ಸಿ ಜೊತೆಗೂಡಿ ಪರಿಚಯಿಸಲಾಗಿರುವ ಹೊಸ ಲೋನ್ ಆಫರ್‌ಗಳು ಕಾರು ಮಾರಾಟ ಸುಧಾರಿಸಲು ಮತ್ತಷ್ಟು ಸಹಕಾರಿಯಾಗಿದ್ದು, ಜೂನ್ ಅವಧಿಯಲ್ಲಿ ಹ್ಯುಂಡೈ ಕಂಪನಿಯು ವಿವಿಧ ಮಾದರಿಯ ಆಫರ್‌ಗಳನ್ನು ಘೋಷಣೆ ಕೂಡಾ ಮಾಡಿದೆ.


Click it and Unblock the Notifications