ಹೊಸ ಬಗೆಯ ಫೀಚರ್'ಗಳನ್ನು ಹೊಂದಲಿವೆ ಹ್ಯುಂಡೈ ಹಾಗೂ ಕಿಯಾ ಕಂಪನಿಯ ಕಾರುಗಳು

ಹ್ಯುಂಡೈ ಮೋಟಾರ್ ಗ್ರೂಪ್, ಗ್ರಾಫಿಕ್ಸ್ ತಯಾರಕ ಕಂಪನಿಯಾದ ಎನ್‌ವೀಡಿಯಾ ಜೊತೆ ಸಹಭಾಗಿತ್ವವನ್ನು ಮಾಡಿಕೊಂಡಿದೆ. ಈ ಸಹಭಾಗಿತ್ವದ ಮೂಲಕ ತನ್ನ ವಾಹನಗಳಲ್ಲಿ ನೀಡಲಾಗುವ ಕನೆಕ್ಟಿವಿಟಿ ಕಾರ್ ಟೆಕ್ನಾಲಜಿಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.

ಹೊಸ ಬಗೆಯ ಫೀಚರ್'ಗಳನ್ನು ಹೊಂದಲಿವೆ ಹ್ಯುಂಡೈ ಹಾಗೂ ಕಿಯಾ ಕಂಪನಿಯ ಕಾರುಗಳು

ಇದರ ಜೊತೆಗೆ ಈ ಸಹಭಾಗಿತ್ವದ ಮೂಲಕ ಎನ್‌ವೀಡಿಯಾ ಡ್ರೈವ್ ಕನೆಕ್ಟೆಡ್ ಕಾರ್ ಪ್ಲಾಟ್‌ಫಾರಂ ಅನ್ನು ಬಿಡುಗಡೆಗೊಳಿಸುವುದಾಗಿ ಹ್ಯುಂಡೈ ಮೋಟಾರ್ ಗ್ರೂಪ್ ಘೋಷಿಸಿದೆ. ಇದನ್ನು 2022ರಿಂದ ಹ್ಯುಂಡೈ, ಕಿಯಾ ಹಾಗೂ ಜೆನೆಸಿಸ್ ಬ್ರಾಂಡ್‌ಗಳ ಅಡಿಯಲ್ಲಿ ಬಳಸಲಾಗುವುದು.

ಹೊಸ ಬಗೆಯ ಫೀಚರ್'ಗಳನ್ನು ಹೊಂದಲಿವೆ ಹ್ಯುಂಡೈ ಹಾಗೂ ಕಿಯಾ ಕಂಪನಿಯ ಕಾರುಗಳು

ಈ ಕಂಪನಿಗಳ ಎಂಟ್ರಿ ಲೆವೆಲ್ ಕಾರುಗಳಿಂದ ಹಿಡಿದು ಪ್ರೀಮಿಯಂ ಕಾರುಗಳವರೆಗೆ ಎಲ್ಲಾ ಮಾದರಿಗಳಲ್ಲಿ ಎನ್‌ವೀಡಿಯಾ ಡ್ರೈವ್‌ನ ಇನ್-ವೆಹಿಕಲ್ ಇನ್ಫೋಟೈನ್‌ಮೆಂಟ್ (ಐವಿಐ) ವ್ಯವಸ್ಥೆಗಳನ್ನು ಅಳವಡಿಸಲಾಗುವುದು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಹೊಸ ಬಗೆಯ ಫೀಚರ್'ಗಳನ್ನು ಹೊಂದಲಿವೆ ಹ್ಯುಂಡೈ ಹಾಗೂ ಕಿಯಾ ಕಂಪನಿಯ ಕಾರುಗಳು

ಆಡಿಯೋ, ವಿಡಿಯೋ, ನ್ಯಾವಿಗೇಷನ್, ಕನೆಕ್ಟಿವಿಟಿ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸೇವೆಗಳನ್ನು ಹ್ಯುಂಡೈ ಮೋಟಾರ್ ಗ್ರೂಪ್‌ನ ಐವಿಐ ವ್ಯವಸ್ಥೆಗಳಿಗೆ ತರಲು ಎನ್‌ವೀಡಿಯಾ ಡ್ರೈವ್‌ನ ಹಾರ್ಡ್‌ವೇರ್ ಹಾಗೂ ಸಾಫ್ಟ್‌ವೇರ್ ಡೆಕ್ ಗಳನ್ನು ಅಳವಡಿಸಲಾಗುವುದು.

ಹೊಸ ಬಗೆಯ ಫೀಚರ್'ಗಳನ್ನು ಹೊಂದಲಿವೆ ಹ್ಯುಂಡೈ ಹಾಗೂ ಕಿಯಾ ಕಂಪನಿಯ ಕಾರುಗಳು

ಈ ಬಗ್ಗೆ ಮಾತನಾಡಿರುವ ಕಂಪನಿಯ ಎನ್‌ವೀಡಿಯಾ ಆಟೋಮೋಟಿವ್‌ನ ಉಪನಿರ್ದೇಶಕರಾದ ಅಲಿ ಘನಿ, ಎನ್‌ವೀಡಿಯಾ ಕಂಪನಿಯು ಗ್ರಾಫಿಕ್ಸ್ ಯೂಸರ್ ಇಂಟರ್ ಫೇಸ್ ಹಾಗೂ ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್‌ ಅನ್ನು ಒಂದು ದಶಕದ ಹಿಂದೆ ಜಾರಿಗೆ ತಂದಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಹೊಸ ಬಗೆಯ ಫೀಚರ್'ಗಳನ್ನು ಹೊಂದಲಿವೆ ಹ್ಯುಂಡೈ ಹಾಗೂ ಕಿಯಾ ಕಂಪನಿಯ ಕಾರುಗಳು

ಈಗ ಈ ವ್ಯವಸ್ಥೆಯನ್ನು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನೊಂದಿಗೆ ಮರುವಿನ್ಯಾಸಗೊಳಿಸುತ್ತಿದ್ದೇವೆ. ಇದು ಗ್ರಾಹಕರನ್ನು ತೃಪ್ತಿಪಡಿಸುವುದರ ಜೊತೆಗೆ, ವಾಹನಗಳಲ್ಲಿ ದೀರ್ಘಕಾಲದವರೆಗೂ ಮುಂದುವರಿಯುತ್ತದೆ. ಜೊತೆಗೆ ಸುರಕ್ಷತೆ ಹಾಗೂ ಮೌಲ್ಯವನ್ನು ಹೆಚ್ಚಿಸಲು ಹ್ಯುಂಡೈ ಮೋಟಾರ್ ಗ್ರೂಪ್‌ಗೆ ಸಹಾಯ ಮಾಡುತ್ತದೆ ಎಂದು ಹೇಳಿದರು.

ಹೊಸ ಬಗೆಯ ಫೀಚರ್'ಗಳನ್ನು ಹೊಂದಲಿವೆ ಹ್ಯುಂಡೈ ಹಾಗೂ ಕಿಯಾ ಕಂಪನಿಯ ಕಾರುಗಳು

ಈ ಸಹಭಾಗಿತ್ವದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹ್ಯುಂಡೈ ಮೋಟಾರ್ ಗ್ರೂಪ್ ಎಲೆಕ್ಟ್ರಾನಿಕ್ಸ್ ತಂತ್ರಜ್ಞಾನದ ಹಿರಿಯ ಉಪಾಧ್ಯಕ್ಷ ಪಾಲ್ ಸೂ, ಹ್ಯುಂಡೈ ಮೋಟಾರ್ ಗ್ರೂಪ್ ನಲ್ಲಿ ಕಾರುಗಳಿಗೆ ದೀರ್ಘಾವಧಿಗೆ ಹೆಚ್ಚಿನ ಮೌಲ್ಯ, ಸುರಕ್ಷತೆ ನೀಡಲು ನಾವು ಬದ್ಧರಾಗಿದ್ದೇವೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಹೊಸ ಬಗೆಯ ಫೀಚರ್'ಗಳನ್ನು ಹೊಂದಲಿವೆ ಹ್ಯುಂಡೈ ಹಾಗೂ ಕಿಯಾ ಕಂಪನಿಯ ಕಾರುಗಳು

ಇವುಗಳು ಸ್ಕೇಲೆಬಲ್ ಆಗಿದ್ದು ಇಂಧನ ದಕ್ಷತೆಯ ಜೊತೆಗೆ ನಮ್ಮ ಮುಂದಿನ ಪೀಳಿಗೆಯ ಸಾಫ್ಟ್‌ವೇರ್ ವಾಹನಗಳನ್ನು ಬೆಂಬಲಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಎನ್‌ವೀಡಿಯಾ ಡ್ರೈವ್ ಪ್ಲಾಟ್‌ಫಾರ್ಮ್ ಸಾಬೀತುಪಡಿಸುತ್ತದೆ ಎಂದು ಹೇಳಿದರು.

ಹೊಸ ಬಗೆಯ ಫೀಚರ್'ಗಳನ್ನು ಹೊಂದಲಿವೆ ಹ್ಯುಂಡೈ ಹಾಗೂ ಕಿಯಾ ಕಂಪನಿಯ ಕಾರುಗಳು

ಎನ್‌ವೀಡಿಯಾದೊಂದಿಗಿನ ಹ್ಯುಂಡೈನ ಸಹಭಾಗಿತ್ವವು ಮುಂದಿನ ಕನೆಕ್ಟೆಡ್ ಕಾರ್ ಆಪರೇಟಿಂಗ್ ಸಿಸ್ಟಂ (ಸಿಸಿಒಎಸ್) ಅಭಿವೃದ್ಧಿಗೆ ಅಡಿಪಾಯವನ್ನು ಹಾಕುತ್ತದೆ. ಹೊಸ ಸಿಸಿಓಎಸ್ ಎನ್‌ವೀಡಿಯಾದ ಇತ್ತೀಚಿನ ಪೀಳಿಗೆಯ ಗ್ರಾಫಿಕ್ಸ್ ಪ್ರೊಸೆಸರ್ ಘಟಕಗಳ (ಜಿಪಿಯು) ಸಹಾಯದಿಂದ ಉನ್ನತ-ಕಾರ್ಯಕ್ಷಮತೆಯ ಕಂಪ್ಯೂಟರ್ ಕಾರ್ಯಾಚರಣೆಗಳನ್ನು ನಡೆಸುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಹೊಸ ಬಗೆಯ ಫೀಚರ್'ಗಳನ್ನು ಹೊಂದಲಿವೆ ಹ್ಯುಂಡೈ ಹಾಗೂ ಕಿಯಾ ಕಂಪನಿಯ ಕಾರುಗಳು

ಹೊಸ ಸಿಸಿಓಎಸ್ ಕಾರು ಆನ್‌ಲೈನ್‌ನಲ್ಲಿಲ್ಲದಿದ್ದರೂ ಸಹ ಇನ್ಫೋಟೇನ್‌ಮೆಂಟ್ ಸಿಸ್ಟಂನಲ್ಲಿ ನಿರಂತರ ಸೇವೆಗಳನ್ನು ಒದಗಿಸುತ್ತದೆ. ವಾಹನದ ಪರಿಸರದೊಂದಿಗೆ ಬಾಹ್ಯ ಸಾಧನಗಳಲ್ಲಿ ಬಳಕೆದಾರರ ಅನುಭವವನ್ನು ಮತ್ತಷ್ಟು ಹೆಚ್ಚಿಸಲು, ವಾಹನವು ಸುತ್ತಮುತ್ತಲಿನ ಮೂಲಸೌಕರ್ಯ ಹಾಗೂ ಸ್ಮಾರ್ಟ್ ಸಾಧನಗಳೊಂದಿಗೆ ಸಂಯೋಜನೆಗೊಳ್ಳುತ್ತದೆ.

Most Read Articles

Kannada
English summary
Hyundai Kia Company cars to have new features. Read in Kannada.
Story first published: Friday, November 13, 2020, 12:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X