ಭಾರತದಲ್ಲಿಯೂ ಬಿಡುಗಡೆಯಾಗಲಿದೆ ಹ್ಯುಂಡೈನ ಸ್ಟಾರ್‌ಎಕ್ಸ್ ಎಂಪಿವಿ

ಹ್ಯುಂಡೈ ಕಂಪನಿಯು ಭಾರತದ ಕಾರು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಂಪನಿಯ ನಂತರ ಎರಡನೇ ಸ್ಥಾನದಲ್ಲಿದೆ. ಹ್ಯುಂಡೈ ಕಂಪನಿಯು ಹೊಸ ಟೆಕ್ನಾಲಜಿ ಹೊಂದಿರುವ ಕಾರುಗಳನ್ನು ಕಾಲ ಕಾಲಕ್ಕೆ ಬಿಡುಗಡೆಗೊಳಿಸುತ್ತಿದೆ.

ಭಾರತದಲ್ಲಿಯೂ ಬಿಡುಗಡೆಯಾಗಲಿದೆ ಹ್ಯುಂಡೈನ ಸ್ಟಾರ್‌ಎಕ್ಸ್ ಎಂಪಿವಿ

ಇತ್ತೀಚಿಗಷ್ಟೇ ಹ್ಯುಂಡೈ ಕಂಪನಿಯು ಕ್ರೆಟಾ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಸಂದರ್ಭದಲ್ಲಿ ಹ್ಯುಂಡೈ ಇಂಡಿಯಾ ಮುಖ್ಯಸ್ಥರು ಭಾರತದಲ್ಲಿ ಪ್ರೀಮಿಯಂ ಎಂವಿವಿ ಮಾದರಿಯನ್ನು ಬಿಡುಗಡೆಗೊಳಿಸುವ ಯೋಜನೆಯ ಬಗ್ಗೆ ಮಾತನಾಡಿದ್ದರು.

ಭಾರತದಲ್ಲಿಯೂ ಬಿಡುಗಡೆಯಾಗಲಿದೆ ಹ್ಯುಂಡೈನ ಸ್ಟಾರ್‌ಎಕ್ಸ್ ಎಂಪಿವಿ

ಈ ಹೊಸ ಮಾದರಿಯ ಎಂಪಿವಿಯು ದೇಶಿಯ ಮಾರುಕಟ್ಟೆಯಲ್ಲಿ ಟೊಯೊಟಾ ಇನೊವಾ ಹಾಗೂ ಕಿಯಾ ಕಾರ್ನಿವಲ್ ಮಾದರಿಗಳಿಗೆ ಪೈಪೋಟಿ ನೀಡಲಿದೆ.

ಭಾರತದಲ್ಲಿಯೂ ಬಿಡುಗಡೆಯಾಗಲಿದೆ ಹ್ಯುಂಡೈನ ಸ್ಟಾರ್‌ಎಕ್ಸ್ ಎಂಪಿವಿ

ಭಾರತದಲ್ಲಿ ಹ್ಯುಂಡೈ ಕಂಪನಿಯು ಬಿಡುಗಡೆಗೊಳಿಸಲಿರುವ ಹೊಸ ಎಂಪಿವಿಯು ಹ್ಯುಂಡೈನ ಸ್ಟಾರ್‌ಎಕ್ಸ್ ಎಂಪಿವಿಯಾಗಿರುವ ನಿರೀಕ್ಷೆಗಳಿವೆ.

ಭಾರತದಲ್ಲಿಯೂ ಬಿಡುಗಡೆಯಾಗಲಿದೆ ಹ್ಯುಂಡೈನ ಸ್ಟಾರ್‌ಎಕ್ಸ್ ಎಂಪಿವಿ

ಹ್ಯುಂಡೈ ಸ್ಟಾರ್‌ಎಕ್ಸ್ ಮಾದರಿಯನ್ನು ಕಿಯಾ ಕಾರ್ನಿವಲ್ ಕಾರಿನ ರೀತಿಯಲ್ಲಿಯೇ ತಯಾರಿಸಲಾಗುವುದು. ಈ ಕಾರಿನ ಗಾತ್ರವು ಕಿಯಾ ಕಾರ್ನಿವಲ್ ಕಾರಿನಂತೆಯೇ ಇರಲಿದೆ.

ಭಾರತದಲ್ಲಿಯೂ ಬಿಡುಗಡೆಯಾಗಲಿದೆ ಹ್ಯುಂಡೈನ ಸ್ಟಾರ್‌ಎಕ್ಸ್ ಎಂಪಿವಿ

ಹ್ಯುಂಡೈ ಕಂಪನಿಯು ಭಾರತದಲ್ಲಿ ಈ ಹೊಸ ಪ್ರೀಮಿಯಂ ಎಂಪಿವಿಯನ್ನು ಹೊಸ ಹೆಸರಿನಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಜೊತೆಗೆ ಕೆಲವು ಬದಲಾವಣೆಗಳನ್ನು ಮಾಡಲಾಗುವುದು.

ಭಾರತದಲ್ಲಿಯೂ ಬಿಡುಗಡೆಯಾಗಲಿದೆ ಹ್ಯುಂಡೈನ ಸ್ಟಾರ್‌ಎಕ್ಸ್ ಎಂಪಿವಿ

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ನಂತರ, ಈ ಎಂಪಿವಿಯು ಸಹ ಕಿಯಾ ಕಾರ್ನಿವಲ್‌ನಂತೆ ವಿವಿಧ ಸೀಟುಗಳ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಈ ಕಾರಿನ ಮೂರನೇ ತಲೆಮಾರಿನ ಮಾದರಿಯನ್ನು ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ.

ಭಾರತದಲ್ಲಿಯೂ ಬಿಡುಗಡೆಯಾಗಲಿದೆ ಹ್ಯುಂಡೈನ ಸ್ಟಾರ್‌ಎಕ್ಸ್ ಎಂಪಿವಿ

ಹ್ಯುಂಡೈ ಕಂಪನಿಯು ಈ ಹೊಸ ಎಂಪಿವಿಯನ್ನು ಮುಂದಿನ ವರ್ಷದ ಅಂತ್ಯದ ವೇಳೆಗೆ ಭಾರತದಲ್ಲಿ ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ.

ಭಾರತದಲ್ಲಿಯೂ ಬಿಡುಗಡೆಯಾಗಲಿದೆ ಹ್ಯುಂಡೈನ ಸ್ಟಾರ್‌ಎಕ್ಸ್ ಎಂಪಿವಿ

ಈ ಹೊಸ ಎಂಪಿವಿಯಲ್ಲಿ ಕಿಯಾ ಕಾರ್ನಿವಲ್ ಎಂಪಿವಿಯಲ್ಲಿರುವ 2.2 ಲೀಟರಿನ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗುವುದು. ಈ ಎಂಜಿನ್ ಗರಿಷ್ಠ 197 ಬಿಹೆಚ್ ಪಿ ಪವರ್ ಹಾಗೂ 440 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳನ್ನು ನೀಡಲಾಗುವುದು.

ಭಾರತದಲ್ಲಿಯೂ ಬಿಡುಗಡೆಯಾಗಲಿದೆ ಹ್ಯುಂಡೈನ ಸ್ಟಾರ್‌ಎಕ್ಸ್ ಎಂಪಿವಿ

ಕಿಯಾ ಸೆಲ್ಟೋಸ್ ಹಾಗೂ ಹೊಸ ತಲೆಮಾರಿನ ಕ್ರೆಟಾ ಎಸ್ ಯುವಿಯಂತೆ ಈ ಕಾರ್ ಅನ್ನು ಸಹ ಹಲವು ಮಾದರಿಗಳಲ್ಲಿ ಬಿಡುಗಡೆಗೊಳಿಸಲಾಗುವುದು. ಹ್ಯುಂಡೈ ಕಂಪನಿಯ ಈ ಹೊಸ ಎಂಪಿವಿ ಕಾರು ಭಾರತೀಯ ಗ್ರಾಹಕರಲ್ಲಿ ಹೆಚ್ಚಿನ ನಿರೀಕ್ಷೆಯನ್ನು ಹುಟ್ಟು ಹಾಕಿದೆ.

Article Published On: Monday, March 23, 2020, 18:10 [IST]
English summary
Hyundai to launch Starex MPV in India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+