ಕಾರು ಮಾರಾಟದಲ್ಲಿ ಮೊದಲ ಬಾರಿಗೆ ಹೊಸ ದಾಖಲೆಗೆ ಕಾರಣವಾದ ಹ್ಯುಂಡೈ

ಕರೋನಾ ವೈರಸ್ ಪರಿಣಾಮ ಆರಂಭ ದಿನಗಳಲ್ಲಿ ಕುಸಿತ ಕಂಡಿದ್ದ ಹೊಸ ವಾಹನಗಳ ಮಾರಾಟವು ತದನಂತರದ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಹ್ಯುಂಡೈ ಕೂಡಾ ಕಾರು ಮಾರಾಟದಲ್ಲಿ ಮೊದಲ ಬಾರಿಗೆ ಹೊಸ ದಾಖಲೆಗೆ ಕಾರಣವಾಗಿದೆ.

ಕಾರು ಮಾರಾಟದಲ್ಲಿ ಮೊದಲ ಬಾರಿಗೆ ಹೊಸ ದಾಖಲೆಗೆ ಕಾರಣವಾದ ಹ್ಯುಂಡೈ

ಲಾಕ್‌ಡೌನ್ ನಂತರ ಏಪ್ರಿಲ್ ಮತ್ತು ಮೇ ತಿಂಗಳಿನ ಹೊಸ ವಾಹನ ಮಾರಾಟದಲ್ಲಿ ಸಾಕಷ್ಟು ಇಳಿಕೆಯಾಗಿದ್ದರಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಆಟೋ ಕಂಪನಿಗಳು ನಂತರದ ದಿನಗಳಲ್ಲಿ ಹಲವಾರು ಆಫರ್‌ಗಳನ್ನು ನೀಡುವ ಮೂಲಕ ವಾಹನ ಮಾರಾಟದಲ್ಲಿ ಹಂತ ಹಂತವಾಗಿ ಚೇತರಿಕೆ ಕಂಡಿದ್ದವು. ಆದರೆ ಎರಡು ತಿಂಗಳ ಅವಧಿಯಲ್ಲಿ ಹೊಸ ವಾಹನಗಳ ಬೇಡಿಕೆಯು ಇದ್ದಕ್ಕಿಂತಕ್ಕೆ ದುಪ್ಪಟ್ಟು ಹೆಚ್ಚಳಗೊಂಡಿದ್ದು, ಅಕ್ಟೋಬರ್ ಅವಧಿಯಲ್ಲಿನ ಹ್ಯುಂಡೈ ಕಾರು ಮಾರಾಟವು ಕಳೆದ ವರ್ಷಕ್ಕಿಂತಲೂ ಶೇ. 13.02 ರಷ್ಟು ಹೆಚ್ಚಳಗೊಂಡಿದೆ.

ಕಾರು ಮಾರಾಟದಲ್ಲಿ ಮೊದಲ ಬಾರಿಗೆ ಹೊಸ ದಾಖಲೆಗೆ ಕಾರಣವಾದ ಹ್ಯುಂಡೈ

ಹೌದು, ಕಳೆದ 2019ರ ಅಕ್ಟೋಬರ್ ಅವಧಿಯಲ್ಲಿನ ಕಾರು ಮಾರಾಟಕ್ಕಿಂತಲೂ ಈ ವರ್ಷದ ಅಕ್ಟೋಬರ್ ಅವಧಿಯಲ್ಲಿ ಶೇ.13.02 ರಷ್ಟು ಬೆಳವಣಿಗೆ ಸಾಧಿಸಿರುವ ಹ್ಯುಂಡೈ ಕಂಪನಿಯು ಒಟ್ಟು 56,605 ಯುನಿಟ್ ಮಾರಾಟ ಮಾಡಿದೆ.

ಕಾರು ಮಾರಾಟದಲ್ಲಿ ಮೊದಲ ಬಾರಿಗೆ ಹೊಸ ದಾಖಲೆಗೆ ಕಾರಣವಾದ ಹ್ಯುಂಡೈ

ಕಳೆದ ವರ್ಷದ ಅಕ್ಟೋಬರ್‌ನಲ್ಲಿ 50,010 ಯುನಿಟ್ ಮಾಡಿದ್ದ ಹ್ಯುಂಡೈ ಕಂಪನಿಯು ಈ ಬಾರಿ ಕರೋನಾ ವೈರಸ್‌ನಿಂದಾಗಿರುವ ಆರ್ಥಿಕ ಸಂಕಷ್ಟದಲ್ಲೂ ಶೇ. 13.02 ರಷ್ಟು ಹೆಚ್ಚುವರಿ ಕಾರು ಮಾರಾಟ ಮಾಡಿದ್ದು, ಹ್ಯುಂಡೈ ನಿರ್ಮಾಣದ ಬಹುತೇಕ ಕಾರುಗಳು ನಿರೀಕ್ಷೆಗೂ ಮೀರಿ ಬೇಡಿಕೆ ಪಡೆದುಕೊಂಡಿವೆ.

ಕಾರು ಮಾರಾಟದಲ್ಲಿ ಮೊದಲ ಬಾರಿಗೆ ಹೊಸ ದಾಖಲೆಗೆ ಕಾರಣವಾದ ಹ್ಯುಂಡೈ

ಮತ್ತೊಂದು ವಿಶೇಷತೆ ಅಂದರೆ ಹ್ಯುಂಡೈ ಕಂಪನಿಯ ಕಾರು ಮಾರಾಟವು ಇದೇ ಮೊದಲ ಬಾರಿಗೆ ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿದ್ದು, ಈ ಹಿಂದೆ 52,000 ಯನಿಟ್ ಮಾರಾಟವೇ ಅತಿ ಹೆಚ್ಚು ಬೇಡಿಕೆಯಾಗಿತ್ತು. ಇದೀಗ ಅಕ್ಟೋಬರ್‌ನಲ್ಲಿ 56,605 ಯನಿಟ್ ಕಾರು ಮಾರಾಟ ಮಾಡುವ ಹೊಸ ನೀರಿಕ್ಷೆ ಹುಟ್ಟುಹಾಕಿದ್ದು, ದೀಪಾವಳಿ ಸಂಭ್ರಮದಲ್ಲಿ ಹ್ಯುಂಡೈ ಕಾರುಗಳ ಬೇಡಿಕೆಯು ಇನ್ನಷ್ಟು ಹೆಚ್ಚಳವಾಗುವ ನೀರಿಕ್ಷೆಗಳಿವೆ.

ಕಾರು ಮಾರಾಟದಲ್ಲಿ ಮೊದಲ ಬಾರಿಗೆ ಹೊಸ ದಾಖಲೆಗೆ ಕಾರಣವಾದ ಹ್ಯುಂಡೈ

ನವೆಂಬರ್ ಅವಧಿಯಲ್ಲಿನ ಕಾರು ಮಾರಾಟ ಸಂಖ್ಯೆಯು ತಿಂಗಳ ಕೊನೆಯಲ್ಲಿ ಪ್ರಕಟವಾಗಲಿದ್ದು, ಹ್ಯುಂಡೈ ಕಾರು ಮಾರಾಟದಲ್ಲಿ ಕ್ರೆಟಾ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯೇ ಅಗ್ರಸ್ಥಾನದಲ್ಲಿದೆ.

ಕಾರು ಮಾರಾಟದಲ್ಲಿ ಮೊದಲ ಬಾರಿಗೆ ಹೊಸ ದಾಖಲೆಗೆ ಕಾರಣವಾದ ಹ್ಯುಂಡೈ

ಕ್ರೆಟಾ ಕಾರು ಮಾದರಿಯು ಕಳೆದ ಅಕ್ಟೋಬರ್ ಬರೋಬ್ಬರಿ 14,023 ಯುನಿಟ್ ಮಾರಾಟಗೊಳ್ಳುವ ಮೂಲಕ ಟಾಪ್ 10 ಕಾರು ಮಾರಾಟದಲ್ಲಿ ಸ್ಥಾನ ಪಡೆದುಕೊಂಡಿದ್ದು, ನ್ಯೂ ಜನರೇಷನ್ ಆವೃತ್ತಿ ನಂತರ ಕ್ರೆಟಾ ಕಾರು ಮಾರಾಟವು ಹಲವು ಹೊಸ ದಾಖಲೆಗಳಿಗೆ ಕಾರಣವಾಗುತ್ತಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಕಾರು ಮಾರಾಟದಲ್ಲಿ ಮೊದಲ ಬಾರಿಗೆ ಹೊಸ ದಾಖಲೆಗೆ ಕಾರಣವಾದ ಹ್ಯುಂಡೈ

ಹ್ಯುಂಡೈ ಕಾರು ಮಾರಾಟದಲ್ಲಿ ಎರಡನೇ ಸ್ಥಾನದಲ್ಲಿರುವ ಗ್ರಾಂಡ್ ಐ10 ನಿಯೊಸ್ ಕಾರು ಮಾದರಿಯು ಅಕ್ಟೋಬರ್‌ನಲ್ಲಿ ಒಟ್ಟು 14,002 ಯನಿಟ್ ಮಾರಾಟಗೊಂಡಿದ್ದು, ವೆನ್ಯೂ ಸಬ್ ಫೋರ್ ಮೀಟರ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯು 8,828 ಮಾರಾಟಗೊಂಡಿದೆ.

ಕಾರು ಮಾರಾಟದಲ್ಲಿ ಮೊದಲ ಬಾರಿಗೆ ಹೊಸ ದಾಖಲೆಗೆ ಕಾರಣವಾದ ಹ್ಯುಂಡೈ

ಮೂರನೇ ಸ್ಥಾನದಲ್ಲಿರುವ ಐ20 ಕಾರು ಮಾದರಿಯು 8,399 ಯನಿಟ್ ಮಾರಾಟಗೊಂಡಿದ್ದು, ಐ20 ಕಾರಿನಲ್ಲಿ ಸದ್ಯ ನ್ಯೂ ಜನರೇಷನ್ ಮಾದರಿಯನ್ನು ಪರಿಚಯಿಸಲಾಗಿದೆ. ಬಿಎಸ್ 6 ಜಾರಿ ನಂತರ ಪೆಟ್ರೋಲ್ ವರ್ಷನ್‌ನಲ್ಲಿ ಮಾತ್ರ ಮಾರಾಟವಾಗುತ್ತಿದ್ದ ಐ20 ಕಾರು ಇದೀಗ ಪೆಟ್ರೋಲ್, ಟರ್ಬೋ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಕಾರು ಮಾರಾಟದಲ್ಲಿ ಮೊದಲ ಬಾರಿಗೆ ಹೊಸ ದಾಖಲೆಗೆ ಕಾರಣವಾದ ಹ್ಯುಂಡೈ

ಇನ್ನು ಹ್ಯುಂಡೈ ನಿರ್ಮಾಣದ ಇನ್ನುಳಿದ ಕಾರು ಮಾದರಿಗಳಾದ ಔರಾ ಕಂಪ್ಯಾಕ್ಟ್ ಸೆಡಾನ್ ಮಾದರಿಯು 5,677 ಯುನಿಟ್, ಸ್ಯಾಂಟ್ರೋ ಕಾರು ಮಾದರಿಯು 3,463 ಯನಿಟ್, ವೆರ್ನಾ ಸೆಡಾನ್ ಮಾದರಿಯು 2,166 ಯನಿಟ್, ಟ್ಯೂಸಾನ್ ಎಸ್‌ಯುವಿ ಮಾದರಿಯು 87 ಯುನಿಟ್, ಎಲಾಂಟ್ರಾ ಐಷಾರಾಮಿ ಸೆಡಾನ್ ಮಾದರಿಯು 46 ಯನಿಟ್ ಮತ್ತು ಎಲೆಕ್ಟ್ರಿಕ್ ಕಾರು ಮಾದರಿಯಾದ ಕೊನಾ ಎಸ್‌ಯುವಿ ಕಾರು ಮಾದರಿಯು 13 ಯನಿಟ್ ಮಾರಾಟಗೊಂಡಿದೆ.

More from DriveSpark

Article Published On: Monday, November 16, 2020, 11:36 [IST]
English summary
Hyundai October 2020 Sales Analysis. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+