ಕೋವಿಡ್ 19: ಪಿಎಂ ಪರಿಹಾರ ನಿಧಿಗೆ ರೂ.7 ಕೋಟಿ ದೇಣಿಗೆ ನೀಡಿದ ಹ್ಯುಂಡೈ

ಕರೋನಾ ವೈರಸ್ ವಿರುದ್ಧ ಹೋರಾಟಕ್ಕೆ ನಿರಂತರವಾಗಿ ಸಹಕಾರ ನೀಡುತ್ತಿರುವ ಹ್ಯುಂಡೈ ಇಂಡಿಯಾ ಕಂಪನಿಯು ಪ್ರಧಾನಿಮಂತ್ರಿಗಳ ಪರಿಹಾರ ನಿಧಿಗೆ ರೂ.7 ಕೋಟಿ ನೆರವು ಒದಗಿಸಿದ್ದು, ಈ ಹಿಂದೆ ತಮಿಳುನಾಡು ಸರ್ಕಾರಕ್ಕೆ ರೂ.5 ಕೋಟಿ ಪರಿಹಾರ ಒದಗಿಸಿತ್ತು.

ಕೋವಿಡ್ 19: ಪಿಎಂ ಪರಿಹಾರ ನಿಧಿಗೆ ರೂ.7 ಕೋಟಿ ದೇಣಿಗೆ ನೀಡಿದ ಹ್ಯುಂಡೈ

ಚೆನ್ನೈ ಬಳಿ ಅತಿ ದೊಡ್ಡಕಾರು ಉತ್ಪಾದನಾ ಘಟಕವನ್ನು ಹೊಂದಿರುವ ಹ್ಯುಂಡೈ ಕಂಪನಿಯು ಪರಿಸ್ಥಿತಿಗೆ ಅನುಗುಣವಾಗಿ ಮೊದಲು ತಮಿಳುನಾಡು ಸರ್ಕಾರಕ್ಕೆ ಧನಸಹಾಯ ಮಾಡಿದ್ದು, ಇದೀಗ ಪ್ರಧಾನಮಂತ್ರಿಗಳ ತುರ್ತು ಪರಿಹಾರ ನಿಧಿಗೂ ದೇಣಿಗೆ ನೀಡಿದೆ. ಇದುವರೆಗೆ ಕರೋನಾ ವೈರಸ್ ವಿರುದ್ದದ ಹೋರಾಟಕ್ಕೆ ಒಟ್ಟು ರೂ.12 ಕೋಟಿ ನೆರವು ನೀಡಿರುವ ಹ್ಯುಂಡೈ ಕಂಪನಿಯು ವೈರಸ್ ಪತ್ತೆಗೆ ಸಹಕಾರಿಯಾಗುವ ಹಲವಾರು ವೈದ್ಯಕೀಯ ಉಪಕರಣಗಳನ್ನು ಸಹ ದೇಣಿಗೆ ನೀಡಿದೆ.

ಕೋವಿಡ್ 19: ಪಿಎಂ ಪರಿಹಾರ ನಿಧಿಗೆ ರೂ.7 ಕೋಟಿ ದೇಣಿಗೆ ನೀಡಿದ ಹ್ಯುಂಡೈ

ಈ ಹಿಂದೆ ಕೊಟ್ಟ ಮಾತಿನಂತೆ ಇದೀಗ ವೈದ್ಯಕೀಯ ಉಪಕರಣಗಳ ತಯಾರಿಕಾ ಕಂಪನಿಗಳ ಜೊತೆಗೂಡಿ ವೆಂಟಿಲೆಟರ್ ಮತ್ತು ಏರ್ ಲಿಕ್ವಿಡ್ ಉತ್ಪಾದನೆ ಚಾಲನೆ ನೀಡಿದ್ದು, ಹೊಸ ವೆಂಟಿಲೆಟರ್‌ಗಳನ್ನು ಶೀಘ್ರದಲ್ಲೇ ಅಗತ್ಯ ವೈದ್ಯಕೀಯ ಸಂಶೋಧನಾ ಸಂಸ್ಥೆಗಳಿಗೆ ರವಾನೆ ಮಾಡಲಿದೆ.

ಕೋವಿಡ್ 19: ಪಿಎಂ ಪರಿಹಾರ ನಿಧಿಗೆ ರೂ.7 ಕೋಟಿ ದೇಣಿಗೆ ನೀಡಿದ ಹ್ಯುಂಡೈ

ಇದಲ್ಲದೇ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಗೆ(ಐಸಿಎಂಆರ್) ಕಳೆದ ವಾರವಷ್ಟೇ 25 ಸಾವಿರ ಅಡ್ವಾನ್ಸ್ ಡಯಾಗ್ನೋಸ್ಟಿಕ್ ಕಿಟ್‌ಗಳನ್ನು ಒದಗಿಸಿದ್ದು, ಇದು ಅತಿ ಕಡಿಮೆ ಅವಧಿಯಲ್ಲಿ ಸೋಂಕಿತರಲ್ಲಿನ ರೋಗ ಪತ್ತೆಗೆ ನೆರವಾಗಲಿದೆ.

MOST READ: ವೈದ್ಯರ ನೆರವಿಗೆ ಬರಲಿದೆ ಮಹೀಂದ್ರಾ ನಿರ್ಮಾಣದ ವಿಶೇಷ ಏರೋಸೊಲ್ ಬಾಕ್ಸ್

ಕೋವಿಡ್ 19: ಪಿಎಂ ಪರಿಹಾರ ನಿಧಿಗೆ ರೂ.7 ಕೋಟಿ ದೇಣಿಗೆ ನೀಡಿದ ಹ್ಯುಂಡೈ

ಇನ್ನು ವೈರಸ್ ಅಟ್ಟಹಾಸ ಹೆಚ್ಚಾಗುತ್ತಿದ್ದಂತೆ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಲಾಕ್ ಡೌನ್ ವಿಧಿಸಲಾಗಿದ್ದು, ಎಲ್ಲಾ ರೀತಿಯ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಂಡಿವೆ. ಈ ಹಿನ್ನಲೆಯಲ್ಲಿ ಭಾರತ ಸೇರಿ ವಿಶ್ವದ ಹಲವು ರಾಷ್ಟ್ರಗಳ ಆರ್ಥಿಕ ಪರಿಸ್ಥಿತಿ ಶೋಚನೀಯ ಸ್ಥಿತಿ ತಲುಪಿದೆ.

ಕೋವಿಡ್ 19: ಪಿಎಂ ಪರಿಹಾರ ನಿಧಿಗೆ ರೂ.7 ಕೋಟಿ ದೇಣಿಗೆ ನೀಡಿದ ಹ್ಯುಂಡೈ

ಇದರಿಂದ ಕರೋನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ಆರಂಭಿಸಲಾಗಿರುವ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಈಗಾಗಲೇ ಭಾರೀ ಪ್ರಮಾಣದ ನೆರವು ಹರಿದು ಬಂದಿದ್ದು, ಉದ್ಯಮಿಗಳು, ಚಿತ್ರ ನಟರು, ಸರ್ಕಾರಿ ಅಧಿಕಾರಿಗಳು ಮತ್ತು ಜನಸಾಮಾನ್ಯರು ಸಹ ತಮ್ಮ ಕೈಲಾದಷ್ಟು ದೇಣಿಗೆ ನೀಡಿ ಕರೋನಾ ವಿರುದ್ಧ ಸರ್ಕಾರದ ಹೋರಾಟಕ್ಕೆ ಶಕ್ತಿ ತುಂಬಿದ್ದಾರೆ.

MOST READ: ಕರೋನಾ ಕಾರಣಕ್ಕೆ ಕಾರಿನಲ್ಲೇ ತಂಗುತ್ತಿರುವ ವೈದ್ಯ..!

ಕೋವಿಡ್ 19: ಪಿಎಂ ಪರಿಹಾರ ನಿಧಿಗೆ ರೂ.7 ಕೋಟಿ ದೇಣಿಗೆ ನೀಡಿದ ಹ್ಯುಂಡೈ

ಅದರಲ್ಲೂ ಆಟೋ ಉತ್ಪಾದನಾ ಕಂಪನಿಗಳು ಕರೋನಾ ವಿರುದ್ದ ಹೋರಾಟಕ್ಕಾಗಿ ಸಂಕಷ್ಟದ ಸಮಯದಲ್ಲೂ ಸರ್ಕಾರದ ಜೊತೆ ನಿಂತಿರುವುದಲ್ಲದೆ ವೈದ್ಯಕೀಯ ಉಪಕರಣಗಳ ತಯಾರಿಕೆಗೆ ಚಾಲನೆ ನೀಡಿವೆ.

ಕೋವಿಡ್ 19: ಪಿಎಂ ಪರಿಹಾರ ನಿಧಿಗೆ ರೂ.7 ಕೋಟಿ ದೇಣಿಗೆ ನೀಡಿದ ಹ್ಯುಂಡೈ

ಆರೋಗ್ಯ ಕೇಂದ್ರಗಳಿಗೆ ಅಗತ್ಯವಿರುವ ಟೆಸ್ಟಿಂಗ್ ಕಿಟ್, ವೆಂಟಿಲೆಟರ್ ಮತ್ತು ಐಸಿಯು ಯುನಿಟ್‌ಗೆ ಅಗತ್ಯವಿರುವ ಸೌಲಭ್ಯಗಳನ್ನು ನೀಡುವುದಾಗಿ ಘೋಷಣೆ ಮಾಡಿದ್ದು, ಆರೋಗ್ಯ ಇಲಾಖೆಯ ಬೇಡಿಕೆಗಳನ್ನು ಪೂರೈಸಲು ಸಿದ್ದವಾಗುತ್ತಿವೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಕೋವಿಡ್ 19: ಪಿಎಂ ಪರಿಹಾರ ನಿಧಿಗೆ ರೂ.7 ಕೋಟಿ ದೇಣಿಗೆ ನೀಡಿದ ಹ್ಯುಂಡೈ

ಇದರ ಜೊತೆಗೆ ಗ್ರಾಮೀಣ ಭಾಗದಲ್ಲಿನ ಆರೋಗ್ಯ ಸೌಕರ್ಯ ಮತ್ತು ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕಾಗಿ ವಿಶೇಷ ಆದ್ಯತೆ ನೀಡುವುದಾಗಿ ಹೇಳಿಕೊಂಡಿರುವ ಆಟೋ ಕಂಪನಿಗಳು ಪರಿಸರ ಮತ್ತು ಆರೋಗ್ಯ ಕಾಳಜಿಗೆ ವಿಶೇಷ ಆಸಕ್ತಿ ವಹಿಸಿದ್ದು, ಶೀಘ್ರದಲ್ಲೇ ವೈದ್ಯಕೀಯ ಉಪಕರಣಗಳನ್ನು ಸರಬರಾಜು ಮಾಡುವುದಾಗಿ ಘೋಷಣೆ ಮಾಡಿವೆ.

ಕೋವಿಡ್ 19: ಪಿಎಂ ಪರಿಹಾರ ನಿಧಿಗೆ ರೂ.7 ಕೋಟಿ ದೇಣಿಗೆ ನೀಡಿದ ಹ್ಯುಂಡೈ

ಇನ್ನು ಚೀನಾದಿಂದ ಶುರುವಾದ ಕರೋನಾ ವೈರಸ್ ದಾಳಿಯು ಇದೀಗ ಇಡೀ ವಿಶ್ವವನ್ನೇ ವ್ಯಾಪಿಸಿದ್ದು, ಇದುವರೆಗೆ 24 ಲಕ್ಷ ಜನರಲ್ಲಿ ಸೋಂಕು ಕಾಣಿಸಿಕೊಂಡಿರುವುದಲ್ಲದೆ 1.70 ಲಕ್ಷ ಜನ ಪ್ರಾಣಕಳೆದುಕೊಂಡಿದ್ದಾರೆ. ಸೋಂಕಿತರಲ್ಲಿ ಇದುವರೆಗೆ ಸುಮಾರು 6.52 ಲಕ್ಷ ಜನ ಗುಣಮುಖರಾಗಿದ್ದು, ಶೇ.3 ರಷ್ಟು ಸೋಂಕು ಪಿಡಿತರ ಸ್ಥಿತಿ ಶೋಚನೀಯವಾಗಿದೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕಾಗಿ ರೂ.100 ಕೋಟಿ ದೇಣಿಗೆ ನೀಡಿದ ಬಜಾಜ್ ಗ್ರೂಪ್

ಕೋವಿಡ್ 19: ಪಿಎಂ ಪರಿಹಾರ ನಿಧಿಗೆ ರೂ.7 ಕೋಟಿ ದೇಣಿಗೆ ನೀಡಿದ ಹ್ಯುಂಡೈ

ಹೀಗಾಗೀ ವೈರಸ್ ತಡೆಗಾಗಿ ಈಗಾಗಲೇ ವಿಶ್ವದ ಎಲ್ಲಾ ರಾಷ್ಟ್ರಗಳು ಒಗ್ಗಟ್ಟಿನಿಂದ ಹೋರಾಟ ನಡೆಸುತ್ತಿದ್ದು, ವೈದ್ಯಕೀಯ ಉಪಕರಣಗಳ ಕೊರತೆಯು ಸೋಂಕಿತರ ಸಾವಿನ ಪ್ರಮಾಣ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

ಕೋವಿಡ್ 19: ಪಿಎಂ ಪರಿಹಾರ ನಿಧಿಗೆ ರೂ.7 ಕೋಟಿ ದೇಣಿಗೆ ನೀಡಿದ ಹ್ಯುಂಡೈ

ಈ ಹಿನ್ನಲೆಯಲ್ಲಿ ಸದ್ಯ ವಾಹನಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿರುವ ಆಟೋ ಉತ್ಪಾದನಾ ಘಟಕಗಳಲ್ಲೇ ಅಗತ್ಯ ವೈದಕೀಯ ಉಪಕರಣಗಳ ಉತ್ಪಾದನೆಗೆ ನಿರ್ಧರಿಸಲಾಗಿದ್ದು, ವೆಂಟಿಲೆಟರ್, ಮಾಸ್ಕ್‌, ಟೆಸ್ಟಿಂಗ್ ಕಿಟ್ ಉತ್ಪಾದನೆಗೆ ಪ್ರಮುಖ ಕಾರು ಕಂಪನಿಗಳು ಒಪ್ಪಿಗೆ ಸೂಚಿಸಿವೆ.

More from DriveSpark

Article Published On: Tuesday, April 21, 2020, 10:54 [IST]
English summary
Hyundai donates Rs 7 crore to PM Cares Fund. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+