ಇನೋವಾ ಕ್ರಿಸ್ಟಾ ಕಾರಿಗೆ ಪೈಪೋಟಿ ನೀಡಲಿದೆ ಹ್ಯುಂಡೈ ನಿರ್ಮಾಣದ ಹೊಸ ಎಂಪಿವಿ
ದೇಶದ ಎರಡನೇ ಅತಿದೊಡ್ಡ ಕಾರು ಉತ್ಪಾದನಾ ಮತ್ತು ಮಾರಾಟ ಕಂಪನಿಯಾಗಿ ಹೊರಹೊಮ್ಮಿರುವ ಹ್ಯುಂಡೈ ಇಂಡಿಯಾ ಕಂಪನಿಯು ಈಗಾಗಲೇ ವಿವಿಧ ಮಾದರಿಯ ಕಾರು ಮಾದರಿಗಳ ಮೂಲಕ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ.

ಕಳೆದ ಕೆಲವು ವರ್ಷಗಳಿಂದ ಹೊಸ ಕಾರುಗಳ ಮಾರಾಟದಲ್ಲಿ ನಿರಂತರವಾಗಿ ಬೆಳವಣಿಗೆ ಸಾಧಿಸುತ್ತಿರುವ ಹ್ಯುಂಡೈ ಇಂಡಿಯಾ ಕಂಪನಿಯು ಮಧ್ಯಮ ಗಾತ್ರದ ಪ್ರೀಮಿಯಂ ಕಾರುಗಳ ಮಾರಾಟದಲ್ಲಿ ಸಾಕಷ್ಟು ಮುನ್ನಡೆ ಸಾಧಿಸಿದ್ದು, ಇದೀಗ ಮಾರುಕಟ್ಟೆ ವಿಸ್ತರಣೆಗಾಗಿ ಮೊದಲ ಬಾರಿಗೆ ಎಂಪಿವಿ ಕಾರುಗಳ ಜೊತೆಗೆ ಐಷಾರಾಮಿ ಸೌಲಭ್ಯಗಳ ಪ್ರೇರಿತ ಫುಲ್‌ಸೈಜ್ ಎಸ್‌ಯುವಿ ಮಾದರಿಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ.

ಮಾರುಕಟ್ಟೆಯಲ್ಲಿ ಸದ್ಯ ಭಾರೀ ಜನಪ್ರಿಯತೆ ಹೊಂದಿರುವ ಟೊಯೊಟಾ ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್ ಕಾರುಗಳಿಗೆ ಪೈಪೋಟಿಯಾಗಿ ಹ್ಯುಂಡೈ ಹೊಸ ಎಂಪಿವಿ ಮತ್ತು ಎಸ್‌ಯುವಿ ಕಾರುಗಳು ಮಾರುಕಟ್ಟೆ ಪ್ರವೇಶಿಸಲಿವೆ.

ಹೊಸ ಕಾರುಗಳ ಬಿಡುಗಡೆ ಕುರಿತಂತೆ ಸುದ್ದಿ ಸಂಸ್ಥೆಯೊಂದರ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿರುವ ಹ್ಯುಂಡೈ ಕಂಪನಿಯು ಪ್ರೀಮಿಯಂ ಮಾದರಿಯ ಎಂಪಿವಿ ಮತ್ತು ಎಸ್‌ಯುವಿ ಕಾರುಗಳ ಬಿಡುಗಡೆಗಾಗಿ ಮಾರುಕಟ್ಟೆ ಅಧ್ಯಯನ ನಡೆಸುತ್ತಿರುವುದಾಗಿ ಹೇಳಿಕೊಂಡಿದೆ.
MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಭಾರತದಲ್ಲಿ ಪ್ರೀಮಿಯಂ ಆವೃತ್ತಿಗಳ ಮಾರಾಟಕ್ಕೆ ಉತ್ತಮ ಮಾರುಕಟ್ಟೆ ಇರುವುದಾಗಿ ಹೇಳಿಕೊಂಡಿರುವ ಹ್ಯುಂಡೈ ಕಂಪನಿಯು ಯುರೋಪ್ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಲ್ಲಿರುವ ಫುಲ್ ಸೈಜ್ 7 ಸೀಟರ್ ಎಸ್‌ಯುವಿ ಮತ್ತು 7 ಸೀಟರ್ ಮಾದರಿಯ ಎಂಪಿವಿ ಕಾರನ್ನು ಪರಿಚಯಿಸುವುದಾಗಿ ಹೇಳಿಕೊಂಡಿದೆ.

ಹೊಸ ಕಾರುಗಳನ್ನು 2021-22 ಹಣಕಾಸು ವರ್ಷದ ಅವಧಿಯೊಳಗೆ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿರುವ ಹ್ಯುಂಡೈ ಕಂಪನಿಯು ಬಿಡುಗಡೆಗೂ ಎಂಜಿನ್ ಆಯ್ಕೆ ಮತ್ತು ಬೆಲೆ ವಿಚಾರದಲ್ಲಿ ಮಾರುಕಟ್ಟೆ ಅಧ್ಯಯನವನ್ನು ಪರಿಣಿಸಿ ಮಹತ್ವದ ನಿರ್ಧಾರ ಕೈಗೊಳ್ಳಲಿದೆ.
MOST READ: ಲಾಕ್‌ಡೌನ್ ಸಂಕಷ್ಟ- ಆಟೋ ಚಾಲಕರ ಬ್ಯಾಂಕ್ ಖಾತೆ ಸೇರಿದ ರೂ.5 ಸಾವಿರ ಪರಿಹಾರ..

ಹೊಸ ಕಾರುಗಳು ಮೇಲೆ ಹೇಳಿದಂತೆ ಐಷಾರಾಮಿ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಲಿದ್ದು, ಬೆಲೆ ವಿಚಾರದಲ್ಲೂ ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಆಕರ್ಷಕವಾಗಿರಲಿವೆ.

7 ಸೀಟರ್ ಸೀಟರ್ ಫುಲ್ ಸೈಜ್ ಎಸ್‌ಯುವಿ ಮಾದರಿಯು ಟೊಯೊಟಾ ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್ ಕಾರುಗಳಿಗೆ ಪೈಪೋಟಿ ನೀಡಲಿದ್ದರೆ ಎಂಪಿವಿ ಕಾರು ಟೊಯೊಟಾ ಇನೋವಾ ಕ್ರಿಸ್ಟಾ ಮತ್ತು ಮಾರುತಿ ಸುಜುಕಿ ಎರ್ಟಿಗಾ ಕಾರಿನ ಮಧ್ಯದ ಸ್ಥಾನದಲ್ಲಿ ಮಾರಾಟಗೊಳ್ಳಲಿದೆ.
MOST READ: ಕರೋನಾ ಕಾರಣಕ್ಕೆ ಕಾರಿನಲ್ಲೇ ತಂಗುತ್ತಿರುವ ವೈದ್ಯ..!

ಮಾರುತಿ ಎರ್ಟಿಗಾ ಮತ್ತು ಟೊಯೊಟಾ ಇನೋವಾ ಕ್ರಿಸ್ಟಾ ನಡುವಿನ ಸ್ಥಾನದಲ್ಲಿ ಉತ್ತಮ ಫೀಚರ್ಸ್ ಹೊಂದಿರುವ ಯಾವುದೇ ಕಾರುಗಳಿಲ್ಲದಿರುವುದನ್ನು ಅರಿತಿರುವ ಹ್ಯುಂಡೈ ಕಂಪನಿಯು ಹೊಸ ಕಾರನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರಿನ ಯಾವುದೇ ತಾಂತ್ರಿಕ ಅಂಶಗಳನ್ನು ಬಿಟ್ಟುಕೊಟ್ಟಿಲ್ಲ.

2012ರಲ್ಲಿ ಅನಾವರಣಗೊಳಿಸಲಾಗಿದ್ದ ಹೆಕ್ಸಾ ಸ್ಪೆಸ್ ಮಾದರಿಯಲ್ಲೇ ಹೊಸ ಎಂಪಿವಿ ಕಾರನ್ನು ಅಭಿವೃದ್ದಿಗೊಳಿಸುವ ಸಾಧ್ಯತೆಗಳಿದ್ದು, 2.0-ಲೀಟರ್ ಡೀಸೆಲ್ ಎಂಜಿನ್ ಜೊತೆಗೆ ಗ್ರಾಹಕರ ಬೇಡಿಕೆಯೆಂತೆ ಆಟೋಮ್ಯಾಟಿಕ್ ಮತ್ತು ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಗಳನ್ನು ನೀಡಲಿದೆ.
MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕೆ ಭಾರೀ ಪ್ರಮಾಣದ ದೇಣಿಗೆ ನೀಡಿದ ಟಿವಿಎಸ್ ಮೋಟಾರ್

ಹೊಸ ಎಂಪಿವಿ ಕಾರು 2021-22ರ ಹಣಕಾಸು ವರ್ಷದಲ್ಲಿ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದ್ದು, ಭಾರತೀಯ ಗ್ರಾಹಕರ ಬೇಡಿಕೆಯೆಂತೆ ಪ್ರೀಮಿಯಂ ಫೀಚರ್ಸ್‌ಗಳ ಜೊತೆ ಬೆಲೆ ಕೂಡಾ ಆಕರ್ಷಕವಾಗಿರಲಿದೆ. ಮಾಹಿತಿಗಳ ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.12 ಲಕ್ಷದಿಂದ ರೂ.15 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.


Click it and Unblock the Notifications