ಕಾರುಗಳಲ್ಲಿ ತಾಂತ್ರಿಕ ದೋಷ - ರಿಕಾಲ್ ಮಾಡುತ್ತಿದೆ ಹ್ಯುಂಡೈ

ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಂಪನಿಯು ನಂಬರ್ 1 ಸ್ಥಾನದಲ್ಲಿದ್ದರೆ, ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಕಂಪನಿಯು ಎರಡನೇ ಸ್ಥಾನದಲ್ಲಿದೆ. ಹೊಸ ಹೊಸ ಫೀಚರ್‍‍ಗಳನ್ನು, ಟೆಕ್ನಾಲಜಿಗಳನ್ನು ತನ್ನ ಸರಣಿಯ ಕಾರುಗಳಲ್ಲಿ ನೀಡುವುದರಲ್ಲಿ ಹ್ಯುಂಡೈ ಕಂಪನಿಯು ಸದಾ ಮುಂದು.

ಕಾರುಗಳಲ್ಲಿ ತಾಂತ್ರಿಕ ದೋಷ - ರಿಕಾಲ್ ಮಾಡುತ್ತಿದೆ ಹ್ಯುಂಡೈ

ಹ್ಯುಂಡೈ ಕಂಪನಿಯು ಭಾರತದಲ್ಲಿ ಮಾತ್ರವಲ್ಲದೇ ಅಮೇರಿಕಾದಲ್ಲಿಯೂ ಕಾರುಗಳನ್ನು ಮಾರಾಟ ಮಾಡುತ್ತಿದೆ. ಈಗ ಅಮೇರಿಕಾದಲ್ಲಿರುವ ತನ್ನ ಸರಣಿಯ ಸುಮಾರು 4,30,000 ಚಿಕ್ಕ ಕಾರುಗಳನ್ನು ರಿಕಾಲ್ ಮಾಡುತ್ತಿದೆ. ಈ ಕಾರುಗಳಲ್ಲಿರುವ ಆ್ಯಂಟಿ ಲಾಕ್ ಬ್ರೇಕ್ ಕಂಪ್ಯೂಟರ್‍‍ಗಳಿಗೆ ನೀರು ನುಗ್ಗಿ ಎಲೆಕ್ಟ್ರಿಕ್ ಶಾರ್ಟ್ ಆಗಿ, ಎಂಜಿನ್‍‍ನಲ್ಲಿ ಬೆಂಕಿಯುಂಟಾಗುವ ಸಾಧ್ಯತೆಗಳಿರುವ ಕಾರಣಕ್ಕೆ ಈ ಕಾರುಗಳನ್ನು ಹ್ಯುಂಡೈ ಕಂಪನಿಯು ರಿಕಾಲ್ ಮಾಡುತ್ತಿದೆ.

ಕಾರುಗಳಲ್ಲಿ ತಾಂತ್ರಿಕ ದೋಷ - ರಿಕಾಲ್ ಮಾಡುತ್ತಿದೆ ಹ್ಯುಂಡೈ

ಹುಂಡೈ ಹಾಗೂ ಅದರ ಅಂಗ ಸಂಸ್ಥೆಯಾದ ಕಿಯಾ ಕಳೆದ ಕೆಲವು ವರ್ಷಗಳಲ್ಲಿ ಎಂಜಿನ್‍‍ನಲ್ಲಿ ಬೆಂಕಿಯುಂಟಾಗುವ ಕಾರಣಕ್ಕೆ ಹಲವಾರು ಬಾರಿ ಕಾರುಗಳನ್ನು ರಿಕಾಲ್ ಮಾಡಿವೆ. ಈ ಸಮಸ್ಯೆಯು ಅಮೇರಿಕಾದ ನ್ಯಾಷನಲ್ ಹೈವೇ ಟ್ರಾಫಿಕ್ ಸೇಫ್ಟಿ ಅಡ್ಮಿನಿಸ್ಟ್ರೇಷನ್ (ಎನ್‍‍ಹೆಚ್‍‍ಟಿ‍ಎಸ್‍ಎ) ಸಂಸ್ಥೆ ನಡೆಸಿದ ತನಿಖೆಯಲ್ಲಿ ಕಂಡು ಬಂದಿದೆ.

ಕಾರುಗಳಲ್ಲಿ ತಾಂತ್ರಿಕ ದೋಷ - ರಿಕಾಲ್ ಮಾಡುತ್ತಿದೆ ಹ್ಯುಂಡೈ

2006 - 2011ರವರೆಗಿನ ಎಲಾಂಟ್ರಾ ಹಾಗೂ 2007 - 2011ರವರೆಗಿನ ಎಲಾಂಟ್ರಾ ಟೂರಿಂಗ್ ಕಾರುಗಳನ್ನು ರಿಕಾಲ್ ಮಾಡಲಾಗುತ್ತಿದೆ. ಎಲೆಕ್ಟ್ರಿಕ್ ಶಾರ್ಟ್ ಕಾರುಗಳನ್ನು ಆಫ್ ಮಾಡಿದ್ದರೂ ಸಹ ಸಂಭವಿಸುತ್ತದೆ ಎಂದು ಹ್ಯುಂಡೈ ಕಂಪನಿ ಹೇಳಿದೆ.

ಕಾರುಗಳಲ್ಲಿ ತಾಂತ್ರಿಕ ದೋಷ - ರಿಕಾಲ್ ಮಾಡುತ್ತಿದೆ ಹ್ಯುಂಡೈ

ಕಾರಿನಲ್ಲಿ ಉಂಟಾಗುವ ಬೆಂಕಿಯ ಪ್ರಮಾಣ ಕಡಿಮೆಯಿರುವ ಕಾರಣಕ್ಕೆ ಕಾರುಗಳನ್ನು ರಸ್ತೆಯಲ್ಲಿ ಪಾರ್ಕ್ ಮಾಡುವ ಅವಶ್ಯಕತೆಯಿಲ್ಲವೆಂದು ಹ್ಯುಂಡೈ ಕಂಪನಿಯು ತಿಳಿಸಿದೆ. ಅಮೇರಿಕಾ ಸರ್ಕಾರಕ್ಕೆ ಸಲ್ಲಿಸಿರುವ ದಾಖಲೆಯಲ್ಲಿ ಹ್ಯುಂಡೈ ಕಂಪನಿಯು ಹ್ಯುಂಡೈ ಕಾರುಗಳಲ್ಲಿ ಬೆಂಕಿ ಸಂಭವಿಸಿರುವ ಮೂರು ಪ್ರಕರಣಗಳಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲವೆಂದು ತಿಳಿಸಿದೆ.

ಕಾರುಗಳಲ್ಲಿ ತಾಂತ್ರಿಕ ದೋಷ - ರಿಕಾಲ್ ಮಾಡುತ್ತಿದೆ ಹ್ಯುಂಡೈ

ರಿಕಾಲ್ ಮಾಡಲಾಗುವ ಈ ಕಾರುಗಳಲ್ಲಿರುವ ಮುಖ್ಯವಾದ ಎಲೆಕ್ಟ್ರಿಕಲ್ ಜಂಕ್ಷನ್ ಬಾಕ್ಸ್ ಗಳಲ್ಲಿ ಡೀಲರ್‍‍ಗಳು ರಿಲೇಯನ್ನು ಅಳವಡಿಸಲಿದ್ದಾರೆ. ಇದರಿಂದಾಗಿ ಕಾರುಗಳಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗುವುದು ತಪ್ಪುತ್ತದೆ ಎಂದು ಹ್ಯುಂಡೈ ಕಂಪನಿಯು ಹೇಳಿದೆ.

ಕಾರುಗಳಲ್ಲಿ ತಾಂತ್ರಿಕ ದೋಷ - ರಿಕಾಲ್ ಮಾಡುತ್ತಿದೆ ಹ್ಯುಂಡೈ

ಈ ಕಾರುಗಳನ್ನು ಏಪ್ರಿಲ್ 3ರಿಂದ ರಿಕಾಲ್ ಮಾಡಲಾಗುವುದು. ಹ್ಯುಂಡೈ ಹಾಗೂ ಕಿಯಾ ಕಾರುಗಳ ವಿರುದ್ಧ ಹಲವಾರು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಕಳೆದ ವರ್ಷದ ಏಪ್ರಿಲ್‍‍ನಲ್ಲಿ ಎನ್‍‍ಹೆಚ್‍‍ಟಿ‍ಎಸ್‍ಎ ತನಿಖೆಯನ್ನು ಕೈಗೊಂಡಿತ್ತು.

ಕಾರುಗಳಲ್ಲಿ ತಾಂತ್ರಿಕ ದೋಷ - ರಿಕಾಲ್ ಮಾಡುತ್ತಿದೆ ಹ್ಯುಂಡೈ

ತನಿಖೆಯಲ್ಲಿ ಸುಮಾರು 30 ಲಕ್ಷ ವಾಹನಗಳಲ್ಲಿ ಅಪಘಾತಕ್ಕೀಡಾಗದ ಬೆಂಕಿ ಕಂಡು ಬಂದಿತ್ತು. 2011ರಿಂದ 2014ರವರೆಗಿನ ಹ್ಯುಂಡೈ ಸೊನಾಟಾ ಹಾಗೂ ಸಾಂಟಾ ಎಫ್‍ಇ, 2011ರಿಂದ 2014ರವರೆಗಿನ ಕಿಯಾ ಆಪ್ಟಿಮಾ ಹಾಗೂ ಸೊರೆಂಟೊ, 2010ರಿಂದ 2015ರವರೆಗಿನ ಕಿಯಾ ಸೋಲ್ ಕಾರುಗಳನ್ನು ತನಿಖೆಗೆ ಒಳಪಡಿಸಲಾಗಿತ್ತು.

ಕಾರುಗಳಲ್ಲಿ ತಾಂತ್ರಿಕ ದೋಷ - ರಿಕಾಲ್ ಮಾಡುತ್ತಿದೆ ಹ್ಯುಂಡೈ

ದೂರುಗಳು ಗ್ರಾಹಕರಿಂದ ಹಾಗೂ ಕಂಪನಿ ನೀಡಿದ್ದ ಡೇಟಾದಿಂದ ಸಂಗ್ರಹಿಸಲಾಗಿತ್ತು. ಈಗ ಕಾರುಗಳನ್ನು ರಿಕಾಲ್ ಮಾಡುತ್ತಿರುವುದಕ್ಕೆ ಹಾಗೂ ಹಿಂದೆ ರಿಕಾಲ್ ಮಾಡಿರುವುದಕ್ಕೆ ಯಾವುದೇ ಸಂಬಂಧವಿಲ್ಲವೆಂದು ಹ್ಯುಂಡೈ ಕಂಪನಿಯ ವಕ್ತಾರರು ತಿಳಿಸಿದ್ದಾರೆ.

Most Read Articles

Kannada
English summary
Hyundai recalls cars causing engine fires. Read in Kannada.
Story first published: Saturday, February 8, 2020, 10:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X