ವೈರಸ್ ಭೀತಿ: ಹ್ಯುಂಡೈ ಕಂಪನಿಯ ಆನ್‌ಲೈನ್ ಕಾರು ಮಾರಾಟಕ್ಕೆ ಭಾರೀ ಡಿಮ್ಯಾಂಡ್

ಕರೋನಾ ಮಾಹಾಮಾರಿ ಅಟ್ಟಹಾಸವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಆಟೋ ಉದ್ಯಮದಲ್ಲಿ ಸುರಕ್ಷಿತ ವ್ಯಾಪಾರ-ವಹಿವಾಟು ಇದೀಗ ಹೊಸ ಸವಾಲಾಗಿ ಪರಿಣಮಿಸಿದೆ. ಇದರಿಂದ ಬಹುತೇಕ ಆಟೋ ಕಂಪನಿಗಳು ಆನ್‌ಲೈನ್ ವಹಿವಾಟಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದು, ಗ್ರಾಹಕರು ಕೂಡಾ ವೈರಸ್ ಭಯದಿಂದ ಆನ್‌ಲೈನ್ ಪ್ಲ್ಯಾಟ್‌‌‌ಫಾರ್ಮ್‌ನತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.

ಹ್ಯುಂಡೈ ಕಂಪನಿಯ ಆನ್‌ಲೈನ್ ಮಾರಾಟಕ್ಕೆ ಭಾರೀ ಡಿಮ್ಯಾಂಡ್

ಲಾಕ್‌ಡೌನ್ ವಿನಾಯ್ತಿ ನಂತರ ವಾಹನ ಮಾರಾಟದಲ್ಲಿ ಹಲವು ಹೊಸ ಬದಲಾಣೆಗಳನ್ನು ಪರಿಚಯಿಸಿರುವ ಆಟೋ ಕಂಪನಿಗಳು ಸುರಕ್ಷಿತ ವ್ಯಾಪಾರ-ವಹಿವಾಟು ನಡೆಸುತ್ತಿದ್ದು, ಸಂಕಷ್ಟದ ಪರಿಸ್ಥಿತಿಯಲ್ಲೂ ಹೊಸ ಕಾರುಗಳ ಮಾರಾಟ ಪ್ರಮಾಣದಲ್ಲಿ ತುಸು ಚೇತರಿಕೆ ಕಂಡುಬರುತ್ತಿದೆ. ಕಾರು ಮಾರಾಟದಲ್ಲಿ ಎರಡನೇ ಅತಿದೊಡ್ಡ ಕಂಪನಿಯಾಗಿ ಹೊರಹೊಮ್ಮಿರುವ ಹ್ಯುಂಡೈ ಕೂಡಾ ಇದೀಗ ಇದೀಗ ಕಾರುಗಳ ಮಾರಾಟದಲ್ಲಿ ಗಮನಸೆಳೆಯುತ್ತಿದ್ದು, ಮೇ 4 ರಿಂದ ಇದುವರೆಗೆ ಸುಮಾರು 15 ಸಾವಿರ ಬುಕ್ಕಿಂಗ್‌ಗಳನ್ನು ಕ್ಲಿಕ್ ಟು ಬೈ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮೂಲಕ ಪಡೆದುಕೊಂಡಿದೆ.

ಹ್ಯುಂಡೈ ಕಂಪನಿಯ ಆನ್‌ಲೈನ್ ಮಾರಾಟಕ್ಕೆ ಭಾರೀ ಡಿಮ್ಯಾಂಡ್

ವೈರಸ್ ಪರಿಣಾಮದಿಂದಾಗಿ ಆಟೋ ಉದ್ಯಮವು ಲಾಕ್‌ಡೌನ್ ವಿನಾಯ್ತಿ ನಂತರವು ಭಾರೀ ಪ್ರಮಾಣದ ನಷ್ಟ ಅನುಭವಿಸುತ್ತಿದ್ದು, ಹೊಸ ವಾಹನಗಳ ಮಾರಾಟ ಮಂದಗತಿಯಲ್ಲಿ ಸಾಗಿದೆ.

ಹ್ಯುಂಡೈ ಕಂಪನಿಯ ಆನ್‌ಲೈನ್ ಮಾರಾಟಕ್ಕೆ ಭಾರೀ ಡಿಮ್ಯಾಂಡ್

ಹೀಗಿರುವಾಗ ಮೊದಲ ಬಾರಿಗೆ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಹ್ಯುಂಡೈ ಕಂಪನಿಯು ಮಾರುತಿ ಸುಜುಕಿ ಕಾರುಗಳನ್ನು ಹಿಂದಿಕ್ಕಿ ಟಾಪ್ 10 ಕಾರು ಮಾರಾಟದಲ್ಲಿ ಮೊದಲ ಸ್ಥಾನಕ್ಕೇರಿದ್ದು, ಕ್ರೆಟಾ ಮಾದರಿಯು ಬಹುಬೇಡಿಕೆಯ ಕಾರು ಮಾದರಿಯಾಗಿ ಹೊರಹೊಮ್ಮಿದೆ.

ಹ್ಯುಂಡೈ ಕಂಪನಿಯ ಆನ್‌ಲೈನ್ ಮಾರಾಟಕ್ಕೆ ಭಾರೀ ಡಿಮ್ಯಾಂಡ್

ಕಾರು ಮಾರಾಟ ಮತ್ತು ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿರುವ ಮಾರುತಿ ಸುಜುಕಿ ಕಂಪನಿಯು ಟಾಪ್ 10 ಕಾರು ಮಾರಾಟದಲ್ಲಿ ಒಟ್ಟು 7 ಕಾರುಗಳನ್ನು ಹೊಂದಿದ್ದು, ಹ್ಯುಂಡೈ ನಿರ್ಮಾಣದ ಎರಡು ಕಾರು ಮತ್ತು ಕಿಯಾ ಒಂದು ಕಾರು ಟಾಪ್ ಹತ್ತರ ಸ್ಥಾನದಲ್ಲಿವೆ. ಇದರಲ್ಲಿ ಮೊದಲ ಬಾರಿಗೆ ಆರು ಮತ್ತು ಏಳನೇ ಸ್ಥಾನದಲ್ಲಿರುತ್ತಿದ್ದ ಕ್ರೆಟಾ ಕಾರು ಇದೇ ಮೊದಲ ಬಾರಿಗೆ ಮೊದಲ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದು, ಮೇ ಅವಧಿಯಲ್ಲಿ 3,212 ಯುನಿಟ್ ಮಾರಾಟಗೊಂಡಿದೆ.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಹ್ಯುಂಡೈ ಕಂಪನಿಯ ಆನ್‌ಲೈನ್ ಮಾರಾಟಕ್ಕೆ ಭಾರೀ ಡಿಮ್ಯಾಂಡ್

ಹ್ಯುಂಡೈ ಕಂಪನಿಯು ಸದ್ಯ ಕಾರು ಮಾರಾಟದಲ್ಲಿ ಎರಡನೇ ಸ್ಥಾನದಲ್ಲಿದ್ದರೂ ಮೇ ಅವಧಿಯ ಟಾಪ್ 10 ಕಾರು ಮಾರಾಟದಲ್ಲಿ ಮಾತ್ರ ಮೊದಲ ಸ್ಥಾನದಲ್ಲಿದ್ದು, ಮೇ 4ರಂದು ಘೋಷಣೆಯಾದ ಲಾಕ್‌ಡೌನ್ ವಿನಾಯ್ತಿ ನಂತರ ಮೇ 31ರ ತನಕ ಬರೋಬ್ಬರಿ 12,583 ಕಾರುಗಳನ್ನು ಮಾರಾಟ ಮಾಡಿದೆ.

ಹ್ಯುಂಡೈ ಕಂಪನಿಯ ಆನ್‌ಲೈನ್ ಮಾರಾಟಕ್ಕೆ ಭಾರೀ ಡಿಮ್ಯಾಂಡ್

ಇದರಲ್ಲಿ ದೇಶಿಯ ಮಾರುಕಟ್ಟೆಯಲ್ಲಿ 6,883 ಯುನಿಟ್ ಮಾರಾಟ ಮಾಡಿದ್ದಲ್ಲಿ 5,700 ಯುನಿಟ್ ರಫ್ತುಗೊಳಿಸಿದೆ. ಒಟ್ಟು ಕಾರುಗಳ ಮಾರಾಟದಲ್ಲಿ ನ್ಯೂ ಜನರೇಷನ್ ಕ್ರೆಟಾ ಮಾತ್ರ 3,212 ಯುನಿಟ್ ಮಾರಾಟದೊಂದಿಗೆ ನಂ.1 ಕಾರು ಮಾದರಿಯಾಗಿ ಹೊರಹೊಮ್ಮಿದ್ದು, ಮಾರ್ಚ್ 16ರಂದು ಬಿಡುಗಡೆಯ ನಂತರ ಇದುವರೆಗೆ ಸುಮಾರು 16 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡಿದೆ.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಹ್ಯುಂಡೈ ಕಂಪನಿಯ ಆನ್‌ಲೈನ್ ಮಾರಾಟಕ್ಕೆ ಭಾರೀ ಡಿಮ್ಯಾಂಡ್

ಇದರಲ್ಲಿ ಬರೋಬ್ಬರಿ 15 ಸಾವಿರ ಬುಕ್ಕಿಂಗ್‌ಗಳು ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮೂಲಕವೇ ದಾಖಲಾಗಿದ್ದು, ಸೋಂಕು ಭೀತಿಯಿಂದಾಗಿ ಸುರಕ್ಷಿತ ಕಾರು ಖರೀದಿಗೆ ಒತ್ತು ನೀಡುತ್ತಿರುವ ಉತ್ತಮ ಬೆಳವಣಿಯಾಗಿದೆ.

Article Published On: Thursday, June 4, 2020, 16:10 [IST]
English summary
Hyundai has recieved over 15,000 registrations in two months through click to buy online platform. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+