ದುಬಾರಿ ಬೆಲೆಯೊಂದಿಗೆ ಬಿಡುಗಡೆಯಾಗಲಿದೆ ಹ್ಯುಂಡೈ ಐ10 ಎನ್ ಲೈನ್ ಕಾರು

ದಕ್ಷಿಣ ಕೊರಿಯಾದ ಹ್ಯುಂಡೈ ಮೋಟಾರ್ಸ್ ಕಂಪನಿಯು ತನ್ನ ಜನಪ್ರಿಯ ಹ್ಯಾಚ್‌ಬ್ಯಾಕ್ ಕಾರು ಮಾದರಿಯಾದ ಗ್ರಾಂಡ್ ಐ10 ಆವೃತ್ತಿಯಲ್ಲಿ ಐ10 ಎನ್ ಲೈನ್ ಪರ್ಫಾಮೆನ್ಸ್ ಮಾದರಿಯನ್ನು ಅನಾವರಣಗೊಳಿಸಿ ಬಿಡುಗಡೆ ಸಿದ್ದವಾಗಿದ್ದು, ಹೊಸ ಕಾರು ಸದ್ಯ ಮಾರುಕಟ್ಟೆಯಲ್ಲಿರುವ ಸಾಮಾನ್ಯ ಗ್ರಾಂಡ್ ಐ10 ಮಾದರಿಗಿಂತಲೂ ದುಬಾರಿ ಬೆಲೆಯೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ.

ದುಬಾರಿ ಬೆಲೆಯೊಂದಿಗೆ ಬಿಡುಗಡೆಯಾಗಲಿದೆ ಹ್ಯುಂಡೈ ಐ10 ಎನ್ ಲೈನ್ ಕಾರು

ಭಾರತವನ್ನು ಹೊರತುಪಡಿಸಿ ಯರೋಪಿನ ಪ್ರಮುಖ ಮಾರುಕಟ್ಟೆಗಳಿಗಾಗಿ ಅನಾವರಣಗೊಂಡಿರುವ ಐ10 ಎನ್ ಲೈನ್ ಕಾರು ಮಾದರಿಯ ಹಲವಾರು ಐಷಾರಾಮಿ ಫೀಚರ್ಸ್‌ಗೊಂದಿಗೆ ಅನಾವರಣಗೊಂಡಿದ್ದು, ಹೊಸ ಕಾರು ಮೊದಲಿಗೆ ಜರ್ಮನಿಯಲ್ಲಿ ಬಿಡುಗಡೆಯಾಗಲಿದೆ. ಹೊಸ ಐ10 ಎನ್ ಲೈನ್ ಕಾರು ಟರ್ಕಿಯಲ್ಲಿರುವ ಹ್ಯುಂಡೈ ಎರಡನೇ ಅತಿ ದೊಡ್ಡ ಕಾರು ಉತ್ಪಾದನಾ ಘಟಕದಲ್ಲಿ ನಿರ್ಮಾಣಗೊಂಡಿದ್ದು, ಸಾಮಾನ್ಯ ಕಾರು ಮಾದರಿಗಿಂತ ಹೊಸ ಕಾರು ಹಲವಾರು ಹೊಸ ಬದಲಾವಣೆಗಳೊಂದಿಗೆ ಅಭಿವೃದ್ದಿಯಾಗಿದೆ.

ದುಬಾರಿ ಬೆಲೆಯೊಂದಿಗೆ ಬಿಡುಗಡೆಯಾಗಲಿದೆ ಹ್ಯುಂಡೈ ಐ10 ಎನ್ ಲೈನ್ ಕಾರು

ಐ10 ಎನ್ ಲೈನ್ ಕಾರು ಮಾದರಿಯನ್ನು ಪರ್ಫಾಮೆನ್ಸ್ ಪ್ರಿಯರಿಗಾಗಿಯೇ ವಿಶೇಷವಾಗಿ ಅಭಿವೃದ್ದಿಗೊಳಿಸಿದ್ದು, ರೆಡ್ ಆಕ್ಸೆಂಟ್, ಸಿಂಗಲ್ ಪೀಸ್ ಸ್ಪೋರ್ಟಿ ಗ್ರಿಲ್ ಜೊತೆ ಎನ್ ಲೈನ್ ಲೊಗೊ, ಟ್ರೈ-ಬಾರ್ ಎಲ್ಇಡಿ ಡಿಆರ್‌ಎಲ್ಎಸ್ ಮತ್ತು ಬಲಿಷ್ಠವಾಗಿರುವ ಫ್ರಂಟ್ ಬಂಪರ್ ಆಯ್ಕೆ ಹೊಂದಿದೆ.

ದುಬಾರಿ ಬೆಲೆಯೊಂದಿಗೆ ಬಿಡುಗಡೆಯಾಗಲಿದೆ ಹ್ಯುಂಡೈ ಐ10 ಎನ್ ಲೈನ್ ಕಾರು

ಜೊತೆಗೆ ಹೊಸ ಕಾರಿನಲ್ಲಿ ರೆಡ್ ಆಕ್ಸೆಂಟ್ ಹೊಂದಿರುವ 16-ಇಂಚಿನ ಸ್ಪೋರ್ಟಿ ಅಲಾಯ್ ವೀಲ್ಹ್, ಟ್ವಿನ್-ಟಿಪ್ ಎಕ್ಸಾಸ್ಟ್, ಕಾರಿನ ಒಳಭಾಗದಲ್ಲಿ ಎನ್ ಲೈನ್ ಬ್ಯಾಡ್ಜ್, ಮೆಟಲ್ ಪೆಡಲ್ಸ್, ರೆಡ್ ಕಾಟ್ರಾಸ್ಟ್ ಸ್ಟಿಚ್, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್ ಮತ್ತು ಫಾಗ್‌ಲ್ಯಾಂಪ್, ಎಲ್ಇಡಿ ಟೈಲ್ ಲೈಟ್, ಎಲ್ಇಡಿ ಡಿಆರ್‌ಎಲ್ಎಸ್ ಹೊಂದಿದೆ.

ದುಬಾರಿ ಬೆಲೆಯೊಂದಿಗೆ ಬಿಡುಗಡೆಯಾಗಲಿದೆ ಹ್ಯುಂಡೈ ಐ10 ಎನ್ ಲೈನ್ ಕಾರು

ಇದಲ್ಲದೇ ಐಷಾರಾಮಿ ಫೀಚರ್ಸ್‌ಗಳಾದ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ವೈರ್‌ಲೆಸ್ ಮೊಬೈಲ್ ಚಾರ್ಜಿಂಗ್, 8-ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, 33 ಫೀಚರ್ಸ್‌ಗಳನ್ನು ಒಳಗೊಂಡ ಬ್ಲೂ ಲಿಂಕ್ ಟೆಕ್ನಾಲಜಿ ಸೌಲಭ್ಯದ ಜೊತೆಗೆ ಹೆಚ್ಚುವರಿ ಪ್ಯಾಕೇಜ್ ಪಡೆದಕೊಳ್ಳಬಹುದಾಗಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ದುಬಾರಿ ಬೆಲೆಯೊಂದಿಗೆ ಬಿಡುಗಡೆಯಾಗಲಿದೆ ಹ್ಯುಂಡೈ ಐ10 ಎನ್ ಲೈನ್ ಕಾರು

ಹೊಸ ಕಾರಿನಲ್ಲಿ 100-ಬಿಎಚ್‌ಪಿ, 172-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲ 1.0-ಲೀಟರ್ ಟಿ-ಜಿಡಿಐ ಟರ್ಬೋಚಾರ್ಜ್ಡ್ ತ್ರಿ-ಸಿಲಿಂಡರ್ ಎಂಜಿನ್ ನೀಡಲಾಗಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬೈಕ್ ಹೊಂದಿದೆ.

ದುಬಾರಿ ಬೆಲೆಯೊಂದಿಗೆ ಬಿಡುಗಡೆಯಾಗಲಿದೆ ಹ್ಯುಂಡೈ ಐ10 ಎನ್ ಲೈನ್ ಕಾರು

ಈ ಮೂಲಕ ಸಾಮಾನ್ಯ ಗ್ರಾಂಡ್ ಐ10 ನಿಯೋಸ್ ಸ್ಪೋರ್ಟ್ ಕಾರಿಗಿಂತಲೂ ಹೆಚ್ಚು ಐಷಾರಾಮಿ ಫೀಚರ್ಸ್ ಒಳಗೊಂಡಿರುವ ಐ10 ಎನ್ ಲೈನ್ ಕಾರು ಯುರೋಪ್ ಮಾರುಕಟ್ಟೆಗಳಲ್ಲಿ ಆರಂಭಿಕವಾಗಿ 16,000 ಯುರೋ ಹೊಂದಿರಲಿದ್ದು, ಇದು ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಸುಮಾರು ರೂ.15.17 ಲಕ್ಷ ಆರಂಭಿಕ ಬೆಲೆ ಹೊಂದಿರಲಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ದುಬಾರಿ ಬೆಲೆಯೊಂದಿಗೆ ಬಿಡುಗಡೆಯಾಗಲಿದೆ ಹ್ಯುಂಡೈ ಐ10 ಎನ್ ಲೈನ್ ಕಾರು

ಆದರೆ ಭಾರತದಲ್ಲಿ ಮಾರಾಟವಾಗುತ್ತಿರುವ ಗ್ರಾಂಡ್ ಐ10 ನಿಯೋಸ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.5,06,990 ಬೆಲೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಯು ರೂ. 8,29,459 ಬೆಲೆ ಹೊಂದಿದೆ. ಆದರೆ ವಿದೇಶಿ ಮಾರುಕಟ್ಟೆಯಲ್ಲಿರುವ ಬಹುತೇಕ ಕಾರು ಮಾದರಿಗಳು ಗುಣಮಟ್ಟದ ಸೌಲಭ್ಯಗಳೊಂದಿಗೆ ಲಭ್ಯವಿರಲಿದ್ದರೆ ಭಾರತದಲ್ಲಿ ಮಾರಾಟವಾಗುವ ಕಾರುಗಳ ಬೆಲೆ ತಗ್ಗಿಸುವುದಕ್ಕಾಗಿ ಪ್ರೀಮಿಯಂ ಫೀಚರ್ಸ್‌ಗಳ ಬದಲಾಗಿ ಸಾಮಾನ್ಯ ಸೌಲಭ್ಯಗಳನ್ನು ಜೋಡಿಸಲಾಗುತ್ತದೆ.

Most Read Articles

Kannada
English summary
Hyundai Revealed Prices Of 2020 i10 N-Line Before Launch. Read in Kannada.
Story first published: Saturday, July 11, 2020, 15:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X